ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈಗೆ ಕೋಳ ಬೀಳುವುದು!

5

ನಮಸ್ಕಾರ ಸ್ನೇಹಿತರೆ,

ನಿಜಕ್ಕೂ ನಾವುಗಳು ಕರ್ನಾಟಕದಲ್ಲಿ ಬಾಳುತ್ತಿದ್ದೇವೆ ಅನ್ನೋ ನಂಬಿಕೆಯನ್ನೇ ಬುಡಮೇಲು ಮಾಡುವಂತಹ ವರದಿ ಇಂದಿನ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಕನ್ನಡಪರವಾದ, ನಾಡಪರವಾದ ಹೋರಾಟಗಳನ್ನು ಮಾಡಿರುವ ನಾಡಿನ ಪ್ರಮುಖ ಕನ್ನಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆಯ ಮೇಲೆ ಹಾಕಿರುವ ಮೊಕದ್ದಮೆಗಳನ್ನು ಸರಕಾರ ವಾಪಸ್ಸು ಪಡೆಯಲು ಹಿಂದೇಟು ಹಾಕುತ್ತಿದೆ. ಇದೇ ಸಮಯದಲ್ಲಿ ಕೋಮು ಗಲಭೆಗೆ ಕಾರಣವಾದ ಅನೇಕ ಮೊಕದ್ದಮೆಗಳನ್ನು ಹಿಂಪದೆದುಕೊಂಡಿದೆ.

ಸರಕಾರ ಬಂದಾಗಿನಿಂದ ನಮ್ಮದು ಕನ್ನಡ ಪರ ಸರಕಾರ ನಾಡಿಗೆ, ನಾಡಿಗರಿಗೆ, ಗಡಿಯ ವಿಷಯದಲ್ಲಿ, ಭಾಷೆಯ ವಿಷಯದಲ್ಲಿ ಎಂದಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಹೇಳುತ್ತಾ ಬಂದಿದೆ. ಆದರೆ ಸರಕಾರ ಅನುಸರಿಸುತ್ತಿರುವುದು ಮಾತ್ರ ಇಬ್ಬಂದಿಯ ನೀತಿ. ತನ್ನದು ಕನ್ನಡ ಪರ ಸರಕಾರ ಎಂದು ಹೇಳುವ ಸರಕಾರ ಇನ್ನೊಂದೆಡೆ ನಾಡಿಗಾಗಿ, ಭಾಷೆಗಾಗಿ, ನಾಡಿಗರಿಗಾಗಿ ಹೋರಾಟ ಮಾಡಿರುವ ಹಾಗು ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯಂತಹ ಕನ್ನಡಪರ ಸಂಘಟನೆಯ ಮೇಲೆ ಇದುವರೆಗೂ ಸರಕಾರ ಹಾಕಿರುವ ಕೇಸುಗಳು ೨೦೦೦ಕ್ಕು ಹೆಚ್ಚು.

ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಕಂಟಕವಾಗಿ ಇದ್ದ ಎಂಇಎಸ ನಂತಹ ಪುಂಡ ಸಂಘಟನೆಯನ್ನು ಹತ್ತಿಕ್ಕಿ ಅಲ್ಲಿ ಕನ್ನಡಿಗರನ್ನು ಮತ್ತೆ ತಂದು ಕೂಡಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ, ಕಾವೇರಿ ಐತೀರ್ಪು ಕರ್ನಾಟಕದ ವಿರುದ್ಧ ಹೊರಬಿದ್ದಾಗ ಇಡಿ ಕರ್ನಾಟಕಾದ್ಯಂತ ಹೋರಾಟ, ಪ್ರತಿಭಟನೆಗಳನ್ನು ಮಾಡಿದ ಕರವೇ ಕಾವೇರಿ ಐತೀರ್ಪು ಕೇಂದ್ರದ ಗೆಜೆಟ್ ನಲ್ಲಿ ಪ್ರಕಟವಾಗಂತೆ ಮಾಡಿತು. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನಕ್ಕೆ ಆಗ್ರಹಿಸಿ ಸತತವಾಗಿ ೩ ವರ್ಷ ಹೋರಾಟ ಮಾಡಿದ ಕರವೇ ಕೊನೆಗೂ ಶಾಸ್ತ್ರೀಯ ಭಾಷೆ ಸಿಗುವಂತೆ ಮಾಡಿತು. ಮಹದಾಯಿ ನದಿ ನೀರು ಹಂಚಿಕೆ ವಿವಾದ, ರೈಲ್ವೆ ಉದ್ಯೋಗದಲ್ಲಿ ಕನ್ನಡಿಗರಿಗೆ ಅನ್ಯಾಯ, ಚಿತ್ರಾವತಿ ಆಣೆಕಟ್ಟು ಹೋರಾಟ, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ಮಾಡಿದ್ದು, ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಆಗ್ರಹಿಸಿ ಹೋರಾಟ, ಹೀಗೆ ಕರ್ನಾಟಕ ರಕ್ಷಣಾ ವೇದಿಕೆ ನೂರಾರು ನಾಡಪರವಾದ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.

ಇಷ್ಟೆಲ್ಲಾ ನಾಡಪರವಾದ ಹೋರಾಟಗಳನ್ನು ಮಾಡಿದ್ದರು ಸಹ, ಸರಕಾರ ತನ್ನ ಇಬ್ಬಂದಿ ತನದಿಂದಾಗಿ ದೊಂಬಿ, ಕಳ್ಳತನದಂತಹ ಮೊಕದ್ದಮೆಗಳನ್ನು ಹಾಕಿ ಕನ್ನಡ ಸಂಘಟನೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಇಂತಹ ಸರಕಾರದ ನೀತಿಯನ್ನು ನಾವೆಲ್ಲಾ ಪ್ರತಿಭಟಿಸೋಣ....
ಕೆಳಗಿನ ಕೊಂಡಿಯಲ್ಲಿ ಇದರ ಪತ್ರಿಕಾ ವರದಿಯನ್ನು ನೋಡಿ:

http://i941.photobucket.com/albums/ad255/hiranyaaksha/KRVmelecase.jpg

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮುಂದಿನ ಚುನಾವಣೆಯಲ್ಲಿ ಕನ್ನಡಕ್ಕಾಗಿ ಒಂದು ಪಕ್ಷದ ಇದ್ರೆ ಚೆನ್ನಾಗಿರುತ್ತೆ ಅನ್ನಿಸ್ತದ :( .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.