ಬಿಬಿಎಂಪಿ: ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ ಬಗ್ಗೆ ಎರೆಡು ಮಾತು

4.875

ಎಲ್ಲರಿಗು ನಮಸ್ಕಾರ,
ಇನ್ನೇನು ಬಿಬಿಎಂಪಿ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಎಲ್ಲಾ ಪಕ್ಷದ ಅಭ್ಯರ್ಥಿಗಳು ನಿಮ್ಮ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಓಟು ನೀಡಿ ಅಂತ ಕೇಳಿರುತ್ತಾರೆ (ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ಪಕ್ಷಗಳು). ಆದರೆ ಈ ಬಾರಿಯ ವಿಶೇಷತೆ ಅಂದರೆ ಕಳೆದ ಒಂದು ದಶಕಗಳಿಂದ ಕನ್ನಡ-ಕನ್ನಡಿಗ-ಕರ್ನಾಟಕದ ಪರವಾಗಿ ದನಿ ಎತ್ತುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ತನ್ನ ಅಭ್ಯರ್ಥಿಗಳನ್ನು ಬಿಬಿಎಂಪಿ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಹೊಸ ಇತಿಹಾಸ ಬರೆದಿದೆ.

ಯಾರು ಏನೇ ಹೇಳಲಿ, ಕರವೇ ಈ ನಾಡಿನ ಎಲ್ಲಾ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಿದೆ. ಅದು ಗಡಿ, ನೆಲ, ಜಲ, ಭಾಷೆ ಯಾವುದೇ ಇರಲಿ ಕನ್ನಡಿಗರಿಗೆ ಅನ್ಯಾಯವಾದಗ ಕರವೇ ಮುಂಚೂಣಿಯಲ್ಲಿ ನಿಂತು ತನ್ನ ಕೆಲಸ ಮಾಡಿದೆ. ರಾಜ್ಯ ಸರಕಾರದಿಂದ ಆದ ಅನ್ಯಾಯವಿರಬಹುದು ಅಥವಾ ರಾಜ್ಯದೆಡೆಗಿನ ಕೇಂದ್ರದ ಮಲತಾಯಿ ಧೋರಣೆ ಇರಬಹುದು, ಹೋರಾಟದ ಮೂಲಕ ಆದ ಅನ್ಯಾಯ ಸರಿಪಡೆಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಹಿನ್ನೆಲೆಯಿಂದ ಬಂದಿರುವ ಕರವೇ ಬಿಬಿಎಂಪಿ ಚುನಾವಣೆಯಲ್ಲಿ ಸುಮಾರು ೨೦ ಕಡೆಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿದೆ.

ಎಲ್ಲಾ ಪಕ್ಷಗಳು ಬಿಬಿಎಂಪಿ ಚುನಾವಣೆಗಾಗಿ ತಮ್ಮ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದವು. ಅಭಿವೃದ್ಧಿಗಿಂತ ಗಿಮಿಕ್ ಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ ಅಂತ ಅನ್ನಿಸಿತು, ಮೂಲಭೂತ ಸೌಕರ್ಯಕ್ಕಿಂತ ಬೇಡವಾಗಿರುವ ಕೆಲವು ಅಂಶಗಳಿಗೆ ಒತ್ತು ನೀಡಲಾಗಿರುವುದು ಕಂಡುಬಂತು. ಕುತೂಹಲಕ್ಕೆ ನಾನು ಕರವೇ ಬೆಂಬಲಿತ ಅಭ್ಯರ್ಥಿಗಳ ಚುನಾವಣೆ ಪ್ರಣಾಳಿಕೆ ಏನಾದರು ಸಿಗುತ್ತ ಅಂತ ಕರ್ನಾಟಕ ರಕ್ಷಣಾ ವೇದಿಕೆಯ ತಾಣಕ್ಕೆ ಹೋದರೆ ಅಲ್ಲಿ ನನಗೆ ಪ್ರಣಾಳಿಕೆ ಸಿಕ್ತು. ಅಲ್ಲಿ ನನಗೆ ಪ್ರಮುಖವಾಗಿ ಕಂಡ ಹಾಗು ಇಷ್ಟವಾದ ಎರೆಡು ಅಂಶಗಳೆಂದರೆ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ಹಾಗು ಬೆಂಗಳೂರಿನಲ್ಲಿ ಕನ್ನಡದ ವಾತಾವರಣ ನಿರ್ಮಿಸುವುದು (ಇದರಲ್ಲಿ ಆಡಳಿತ, ಗ್ರಾಹಕ ಸೇವೆಯಂತಹ ವಿಷಯಗಳು ಸೇರಿವೆ).

ನಿನ್ನೆ ನನಗೆ ಕರವೇಯಿಂದ ಬಂದ ಮಿಂಚೆಯನ್ನ ಅವರ ಅನುಮತಿಯೊಂದಿಗೆ ಇಲ್ಲಿ ಹಾಕುತ್ತಿದ್ದೇನೆ
ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತ ಅಭ್ಯರ್ಥಿಗಳ ಚುನಾವಣಾ ಪ್ರಣಾಳಿಕೆ
ಕನ್ನಡದ ಬಂಧುಗಳೇ,

ಕಳೆದ ಹತ್ತು ವರ್ಷಗಳಿಂದ ಕನ್ನಡ-ಕನ್ನಡಿಗ-ಕರ್ನಾಟಕದ ಪರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯು ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ  ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿತರಾದ ಈ ಅಭ್ಯರ್ಥಿಗಳು ಮಹಾನಗರ ಪಾಲಿಕೆಯಲ್ಲಿ
ಮಾಡಲಿರುವುದೇನು? ನಮ್ಮ ಪ್ರಣಾಳಿಕೆ ಏನು? ಎಂಬುದನ್ನು ಈ ಕೆಳಗಿನ ಕೊಂಡಿಯಲ್ಲಿ ಓದಿರಿ. ಕನ್ನಡಪರ ಅಭ್ಯರ್ಥಿಗಳಿಗೆ ಮತ ನೀಡಿ. ನಮ್ಮನ್ನು ಹರಸಿ.
 http://www.karnatakarakshanavedike.org/modes/view/127/krv-bembalita-abhy...
 
ಮೇಲಿನ ಕೊಂಡಿಯನ್ನು ತೆರೆದರೆ ಕೆಳಗಿನ ಸಾಲುಗಳು ಕಾಣಿಸುತ್ತವೆ.....

ಕರ್ನಾಟಕವನ್ನು ಕಳೆದ ಅರವತ್ತು ವರ್ಷಗಳಿಂದ ಆಳಿದ್ದು ರಾಷ್ಟ್ರೀಯ ಪಕ್ಷಗಳು. ಹರಿದು ಹಂಚಿಹೋಗಿದ್ದ ನಮ್ಮ ನಾಡು ಒಂದಾದಾಗ ಇದ್ದ ಎಲ್ಲಾ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ ಎಂಬುದು ಇವುಗಳ ಕಾರ್ಯವೈಖರಿಗೆ ಸಾಕ್ಷಿ. ಗಡಿ ಸಮಸ್ಯೆ, ನದಿ ನೀರು ಹಂಚಿಕೆ ಸಮಸ್ಯೆಯಂತಹ ತಗಾದೆಗಳು ಇಂದಿಗೂ ಜೀವಂತ. ಕೇಂದ್ರಸರ್ಕಾರಕ್ಕೆ ಹರಿದು ಹೋಗುವ ತೆರಿಗೆ ಹಣದ ಪ್ರಮಾಣ ಅಪಾರವಾಗಿದ್ದರೂ... ನಮ್ಮ ನಾಡಿಗೆ ಬಂದ ಯೋಜನೆಗಳು, ರಸ್ತೆ, ರೈಲು ಮಾರ್ಗಗಳು, ನೆರೆ-ಬರ ಪರಿಹಾರಗಳು ಎಲ್ಲವೂ ನಗಣ್ಯ. ಕೃಷ್ಣಾ ಕಾವೇರಿ ಮಹದಾಯಿ ನದಿನೀರು ಹಂಚಿಕೆಯಿರಲಿ, ಬೆಳಗಾವಿ, ಕಾಸರಗೋಡು, ಹೊಗೆನಕಲ್ ಗಡಿ ತಕರಾರುಗಳಿರಲಿ, ರೈಲ್ವೇ ಯೋಜನೆಗಳಿರಲಿ, ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಯಾಗಲೀ ಯಾವುದೂ ಕೂಡಾ ಸರಳವಾಗಿ ದಕ್ಕಿಸಿಕೊಡಲಾಗದ ಕೈಲಾಗದತನ ಇವುಗಳದ್ದು. ನಾಡಿನ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಿದ ಒಂದು ನಿದರ್ಶನವೂ ನಮ್ಮ ಮುಂದಿಲ್ಲ. ಕನ್ನಡನುಡಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗಳಿಸಿಕೊಡುವಾಗಲಾಗಲೀ, ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ವಿರುದ್ಧವಾಗಲೀ ದನಿಯೆತ್ತಿ ಹೋರಾಡಿದ್ದು ಈ ಯಾವ ರಾಜಕೀಯ ಪಕ್ಷಗಳೂ ಅಲ್ಲ, ಬದಲಾಗಿ ನಾಡಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ. ಈ ನಾಡಿನ ಹಿತ ಕಾಪಾಡುವ, ನಾಡನ್ನು ಏಳಿಗೆಯ ದಾರಿಯತ್ತ ಒಯ್ಯುವ ಬದ್ಧತೆ ಇರುವುದು ಕನ್ನಡ ಕನ್ನಡಿಗ ಕರ್ನಾಟಕಗಳನ್ನು ಕೇಂದ್ರವಾಗಿಟ್ಟುಕೊಂಡ ಸಿದ್ಧಾಂತ ಹೊಂದಿರುವ ರಾಜಕೀಯ ಪಕ್ಷಕ್ಕೆ ಮಾತ್ರವೇ. ಕರ್ನಾಟಕದಲ್ಲಿ ಈ ಕೊರತೆಯನ್ನು ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯು ಮುಂದಾಗಿದೆ. ಹಾಗಾಗಿ ಕರ್ನಾಟಕದ ಏಳಿಗೆ, ಕನ್ನಡದ ಸಾರ್ವಭೌಮತ್ವ ಸ್ಥಾಪನೆಗೆ ಪೂರಕವಾದ ಕಾರ್ಯಸೂಚಿಗಳೇ ನಮ್ಮ ಪ್ರಣಾಳಿಕೆ. ನಿಮ್ಮೆಲ್ಲರ ಬೆಂಬಲದಿಂದ ಈ ಗುರಿ ಈಡೇರಿಕೆಯತ್ತ ನಮ್ಮ ನಡೆ.

ಹೀಗೆ ಇನ್ನು ಅನೇಕ ವಿಚಾರಗಳನ್ನು ಕರವೇ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.........
ದಯವಿಟ್ಟು ಒಮ್ಮೆ ಓದಿ, ನಿಮ್ಮ ಅಭಿಪ್ರಾಯ ತಿಳಿಸಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.9 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನೀರು ಎಷ್ಟು ತಣ್ಣಗಿದೆ, ಎಷ್ಟು ಬೆಚ್ಚಗಿದೆ ಎಂದು ಈ ಪರಿಯಾಗಿ ನೋಡುವುದೇಕೆ ಮಹಾನಗರಪಾಲಿಕೆಯ ಎಲ್ಲಾ ಕ್ಷೇತ್ರಗಳಲ್ಲಿ ಕ.ರ.ವೇ. ಸ್ಪರ್ಧಿಸುತ್ತಿಲ್ಲ ಅದೇಕೆ ಇಪ್ಪತ್ತರಲ್ಲಿ ಜಯಿಸುವ ಸ್ಥಾನಗಳೆಷ್ಟೊ ಆ ದೇವರೇ ಬಲ್ಲರು ನಗರ ಪಾಲಿಕೆಯ ಒಳಗೆ ಆ ಮಂದಿ ಅದೇನ ಮಾಡಬಲ್ಲರು? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಿಕೆಯ ಎಲ್ಲ ಸ್ಥಾನಕ್ಕೆ ಸ್ಪರ್ಧಿಸಲು ಸಂಪನ್ಮೂಲದ ಕೊರತೆ ಎಂದು ನಾರಾಯಣ ಗೌಡರು ಟಿ.ವಿ ಸಂದರ್ಶನದಲ್ಲಿ ಹೇಳಿದ್ದನ್ನು ಕೇಳಿದ್ದೇನೆ. ನಗರ ಪಾಲಿಕೆಯಲ್ಲಿ ಆಯ್ಕೆಯಾದರೆ ಏನು ಮಾಡಬಲ್ಲರು ಎಂಬುದನ್ನೇ ಅವರ ಪ್ರಣಾಳಿಕೆಯಲ್ಲಿ ಹೇಳಿರುವುದು. ಅದನ್ನು ಓದದೇ ಹೀಗೆ ಪ್ರಶ್ನೆ ಮಾಡಿದೊಡೆಂತಯ್ಯ ...ಮೆಚ್ಚನಾ ನಮ್ಮ ಚನ್ನಮಲ್ಲಿಕಾರ್ಜುನಾ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಸಾಧಿಸಲು ಬಹುಮತ ಬೇಕು ಪಾಲಿಕೆಯಲ್ಲಿ ೨೦ ಜನ ಸ್ಪರ್ಧಿಸಿದರೆ ಎಷ್ಟು ಜನ ತಲೆ ಎತ್ತಿಯಾರು ಅಲ್ಲಿ ಕೊನೆಯಲ್ಲಿ ಸಂಪನ್ಮೂಲದ ಕೊರತೆ ಇದ್ದಿದ್ದರೆ ಕನ್ನಡಿಗರು ತುಂಬಿಸಬಹುದಿತ್ತು ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಸಂಪನ್ಮೂಲದ ಕೊರತೆ ಹೇಳಿ ಏನಿತ್ತು ಹಣ ಇಲ್ಲದೆ ಚುನಾವಣೆ ಗೆಲಲೂಬಹುದು ಆದರೆ ಅದಕ್ಕೆ ಪ್ರಯತ್ನ ಬೇಕು ಹಣಮಾಡುವವರಂತೆ ಜನರ ಕಣ್ಣಿಗೆ ಕಂಡರೆ ನಾನೇನು ಮಾಡಬೇಕು ನಾರಾಯಣನ ಮರೆತು ಚನ್ನಮಲ್ಲಿಕಾರ್ಜುನನ ನೆನೆಯುತ್ತಿರುವೆರೇಕೆ ಅಂದಿಗೂ ಇಂದಿಗೂ ಎಂದಿಗೂ ನಾರಾಯಣನೇ ಎಂಬುದ ಮರೆತಿರೇಕೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀರಿಗಾಗಿ ನಾಡಿಗಾಗಿ ಹೋರಾಡಿದ ನಮ್ಮ ಜನಕೆ ಇಲ್ಲ ನೀರು ಬೆಚ್ಚಗೋತಣ್ಣಗೊ ಅರಿಯುವ ಬಯಕೆ ನೀರಿಗಿಳಿದು ಈಜರಿತ ಜನ ನಾಡುಗಡಿನುಡಿ ಮರೆತಿಹರಲ್ಲ ಹಣಸುರಿದು ಮತಪಡೆವ ಕಲೆಯ ಇವರು ಬಳಸಿಹರಲ್ಲ! ಇದು ಬರಿಯೆ ರಾಜಕೀಯಕೆ ದುಮುಕುವ ಹುಚ್ಚು ಚಪಲವಲ್ಲ ಕೇಸರಿಧಣಿಗಳ ಮಧ್ಯೆ ಕನ್ನಡಕೆ ದುಡಿಯುವ ಕೈಗಳು ಬೇಕಲ್ಲ! ಯಾವುದು ನಮ್ಮ ಭಾಷೆ ಎ೦ಬ ಸ೦ಶಯದಲ್ಲಿರುವೆ ಏಕೆ ನಮ್ಮ ಕೀಳರಿಮೆ, ಕಡೆಗಣನೆ ತಾನೆ ಕಾರಣ ಈ ಸ೦ಶಯಕೆ ಕೇಸರಿ ಕೈಗಾಗಿ ಅರಸಿನ ಕು೦ಕುಮಕೆ ಕೈ ಕೊಡದಿರಿ ತನ್ನತನ ಮರೆತು ಹು೦ಬ ರಾಷ್ಟ್ರವಾದಿ ಆಗದಿರಿ ಪ್ರತಿರಾಜ್ಯ ಉಳಿದುಬೆಳೆದರೇ ಭಾರತದೇಳಿಗೆ ಇದು ಸತ್ಯ ಇದನರಿತು ಉಳಿಸಿ ಬೆಳೆಸುವ ನಾವು ಕನ್ನಡವ ನಿತ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಆಶಯ ಏನು ಅನ್ನುವುದನ್ನು ವಿನಾಯಕರಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಗೊತ್ತುಪಡಿಸಿದ್ದೇನೆ. ಕರವೇ ಅಧಿಕಾರಕ್ಕೆ ಬರಬೇಕು ಎನ್ನುವ ಆಶಯ ಇರುವಾಗ ಎಲ್ಲಾ ಸ್ಥಾನಗಳಿಗೆ ಸ್ಪರ್ಧಿಸದೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದಾರೆ. ವಾಮಪಂಥೀಯರಿಗೂ ಇವರಿಗೂ ವ್ಯತ್ಯಾಸ ಏನು ಉಳಿಯಿತು? ಮೂರು ವರುಷ ಮುಂದೂಡಲ್ಪಟ್ಟ ಚುನಾವಣೆ ಇದು. ಸಾಕಷ್ಟು ಸಮಯಾವಕಾಶ ಇತ್ತು. ಆ ನಿಟ್ಟಿನಲ್ಲಿ ಪ್ರಯತ್ನ ಏಕೆ ಮಾಡಿಲ್ಲ. ನಾನು ಕರವೇ ವಿರೋಧಿ ಎಂದಾಗಲೀ, ಕನ್ನಡ ನಿರಭಿಮಾನಿಯೆಂದಾಗಲೀ ಹಣೆಪಟ್ಟಿ ಕಟ್ಟಿದರೆ ನಾನೇನೂ ಮಾಡಲಾಗದು. ಅದು ಜನರ ಅರಿವಿಗೆ ಬಿಟ್ಟಿದ್ದು. ನಾನು ಯಾವುದನ್ನಾಗಲೀ ತರಾತುರಿಯಲ್ಲಿ ಬರೆಯುವುದಿಲ್ಲ. ಸಾಕಷ್ಟು ಯೋಚನೆ ಮಾಡಿ ಬರೆಯುತ್ತೇನೆ. ಬೇಗನೇ ಬರೆಯುತ್ತೇನೆ ಅಂದ ಮಾತ್ರಕ್ಕೆ ಯೋಚಿಸದೇ ಅಲ್ಲ. ಪೂರ್ವಗ್ರಹ ಪೀಡಿತನೂ ಅಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾವು ಮೂರು ವರ್ಷದ ಹಿಂದೇ ಯಾಕೆ ಈ ಸಲಹೆ ಕೊಡಲಿಲ್ಲ. ಹೇಗೂ ಸಮಯವಿತ್ತು, ಬುದ್ದಿಯಿತ್ತು, ಕಾಳಜಿ ಇತ್ತು. ಈಗ ಮಾತಾಡಲು ಶುರುಮಾಡಿ ಅನುಮಾನ ಮೂಡಿಸಿದ್ದೀರಿ. ನಿಮ್ಮ ಆಶಯ ಕ.ರ.ವೇ ಅಧಿಕಾರಕ್ಕೆ ಬರುವುದೇ ಆಗಿದ್ದರೆ ಆ ಬಗ್ಗೆ ನಿಮ್ಮ ಸಲಹೆ ಪಡೆದು ಸರಿಯಾದ ತಯಾರಿ ನೆಡೆಸಿ ಅಧಿಕಾರ ಹಿಡಿಯಬಹುದಿತ್ತು. ಅಥವಾ ತಾವೇ ಆಸಕ್ತಿ ವಹಿಸಿ ಉಸ್ತುವಾರಿ ಕೂಡ ತೆಗೆದುಕೊಂಡು ಅಧಿಕಾರ ದೊರಕಿಸಿಕೊಡಬಹುದಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಸಂಪದಿಗರಲ್ಲೂ ನನ್ನ ಮನವಿ, ದಯವಿಟ್ಟು ನಿಮ್ಮ ವಾದವನ್ನು ಬೇರೆಡೆಗೆ ಹಾಯಿಸದೆ ವಿಷಯ ನಿಷ್ಟವಾಗಿ ಇಟ್ಟುಕೊಂಡರೆ ಒಂದಷ್ಟು ಒಳ್ಳೆಯ ಚರ್ಚೆಯನ್ನು ನಾವುಗಳು ಇಲ್ಲಿ ಕಾಣಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ ರ ವೇ ಯಾ ಎಲ್ಲಾ ಅಭ್ಯರ್ಥಿಗಳು ಗೆಲ್ಲಲಿ ಬೆಂಗಳೊರಿಗೆ ಒಳ್ಳೆದಿನಗಳು ಬರಲಿ ಎನ್ನುವುದು ನನ್ನ ಆಶಯ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.