ಕನಕದಾಸರ ಕೀರ್ತನೆಗಳು ಮತ್ತು ಅದರ ತಾತ್ಪರ್ಯ ಇಂದಿಗೂ ಪ್ರಸ್ತುತ

3.4375

ಕನಕದಾಸರು ಇಂದಿನವರಲ್ಲ. ಅವರು ವಿಜಯನಗರ ಸಾಮ್ರಾಜ್ಯದ ಪತನವನ್ನು ಕಂಡವರು. ಸ್ವತಹ ಅಧಿಕಾರಿಯಾಗಿ, ಪಾಳೆಯಗಾರರಾಗಿ ಧನಸಂಪತ್ತು ಗಳಿಸಿ ಅನುಭವಿಸಿದವರು, ವೈರಾಗ್ಯಬಂದು ಎಲ್ಲವನ್ನು ತ್ಯಜಿಸಿ ತಿಮ್ಮಪ್ಪ ಕನಕನಾಯಕರಾಗಿದ್ದವರು, ಹರಿದಾಸರಾಗಿ, ಕನಕದಾಸರಾದರು. ಅಂದಿನಿಂದ ತಮ್ಮ ಉಳಿದ ಜೀವಿತಕಾಲದಲ್ಲಿ ಹಲವಾರು ದೇವರಕೀರ್ತನೆ, ಸಂಭಾಷಣೆ ರೂಪದ ರಾಮಧ್ಯಾನ ಚರಿತೆ, ನಳದಮಯಂತಿಯವರ ಪ್ರೇಮಕಥನ, ಹರಿಭಕ್ತಿಸಾರ ಮುಂತಾದ ಕಾವ್ಯಗಳನ್ನು ರಚಿಸಿದವರು. ಇವುಗಳಲ್ಲೆಲ್ಲಾ ಕಾಣುವುದು ಭಕ್ತಿ, ವೈರಾಗ್ಯ ಮತ್ತು ವಿನಯಶೀಲತೆ. ಕನಕರ ಮುಂಡಿಗೆಗಳೆಂದು ಇವುಗಳಿಗೆ ಹೇಳುತ್ತಾರೆ. ಇವುಗಳನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ನಮ್ಮ ಬುದ್ಧಿಶಕ್ತಿಗೆ, ತಿಳುವಿಕೆಗೆ ಸವಾಲೊಡ್ಡುತ್ತವೆ. ಮಾತ್ರವಲ್ಲ ಅದರಲ್ಲಿರುವ ಸಾರವು ಇವತ್ತಿನ ಜನರ ಜೀವನ ಶೈಲಿಗೆ ಪೂರಕವಾಗಿದೆ ಎಂದು ಹೇಳುತ್ತಾರೆ ಕನಕದಾಸರ ಕೀರ್ತನೆಗಳ ಸಂಪಾದಕ-ಹೊ.ರಾ. ಸತ್ಯನಾರಾಯಣ ರಾವ್.

ಅಹುದಾದರಹುದೆನ್ನಿ, ಅಲ್ಲವಾದರಲ್ಲವೆನ್ನಿ.
---------
ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ
ಬಹುಜನರುನೆಲೆ ತಿಳಿದು ಪೇಳಿ ಮತ್ತಿದನು.

ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು
ಭಾವವಿಲ್ಲದ ಭಕುತಿ ಅದು ಕುಹಕ ಯುಕುತಿ
ಹೇವವಿಲ್ಲದ ಹೆಣ್ಣು ಗಜುಗ ಬೆಳೆದಾ ಕಣ್ಣು
ಸೇವೆಯರಿಯದ ಧಣಿಯು ಕಲ್ಲಿನಾ ಖಣಿಯು.

ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು
ನಿರ್ಮಲಿಲ್ಲದ ಮನಸು ಅದು ಕಜ್ಜಿ ತಿನಿಸು
ಕರ್ಮವಿಲ್ಲದ ಗಂಡು ಕರಿಯ ಓನಕೆಯ ತುಂಡು
ಮರ್ಮವಿಲ್ಲದ ಮಾತು ಒಡಕು ಮಡಕೆಯ ತೂತು.

................................... (ಇದನ್ನು ನಾನು ಒಪ್ಪಲ್ಲಾ ಅದಕ್ಕೆ ಹಾಕಿಲ್ಲಾ!)
ಸೌಖ್ಯವಿಲ್ಲದ ಕೂಟ ಅದು ಕಾಳಕೂಟ
ಒಕ್ಕಲಿಲ್ಲದ ಊರು ಕೊಳೆತು ನಾರುವ ನೀರು
ಸೊಕ್ಕಿ ನಡೆಯುವ ಭೃತ್ಯ ಅವ ಕ್ರೂರಕೃತ್ಯ

ಕಂಡುಕರೆಯದ ನೆಂಟ ಮೊನೆ ಕೆಟ್ಟಿಹ ಕಂಟ
ಉಂಡು ನಗದಿಹ ಮೋರೆ ಅದು ಕಹಿಯ ಸೋರೆ
ದಂಡಿಗಂಜುವ ಬಂಟ ಒಡಕು ಹರವಿಯ ಕಂಠ
ಗಂಡುಗಂಜದ ನಾರಿ ಅವಳೆ ಹೆಮ್ಮಾರಿ.

ಬಿಟ್ಟು ನಡೆಯುವ ಗೆಣೆಯು ಹರಕು ತೊಗಲಿನ ಮಿಣಿಯು
ಕೊಟ್ಟು ಕೇಳುವ ದಾತ ಅವ ಹೀನಜಾತ
ಸೃಷ್ಟಿಯೊಳು ಕಾಗಿನೆಲೆಯಾದಿ ಕೇಶವನಂಘ್ರಿ
ಮುಟ್ಟಿ ಭಜಿಸದ ನರನು ಅವನು ಕಾಡುಮರನು.

ಇನ್ನೂ ಇಂತವು ಹಲವಿವೆ. ಅದನ್ನು ಇನ್ನೊಮ್ಮೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.4 (32 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಹುದಹುದು.
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೆಂಕಟರಾಯರೆ,

ಈ ಬರಹವನ್ನು ಹರಿದಾಸ ಸಂಪದಕ್ಕೂ ಪೋಸ್ಟ್ ಮಾಡುವಿರಾ?

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೊಪ್ಪಲ್ಲ ಎಂಬ ಕಾರಣಕ್ಕೆ ಇತರರ ಕೃತಿಗೆ censor ಹಾಕುವುದು ತಪ್ಪು. ಅದನ್ನು ತೋಱಿಸಿ ಆಮೇಲೆ ನಾನದನ್ನು ಒಪ್ಪೋಲ್ಲ ಎನ್ನಬಹುದಿತ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಕಂದರೇ,

ನಾನು ಒಪ್ಪಲ್ಲ ಎಂಬ ಸಾಲು ಹೀಗಿದೆ - ಮಕ್ಕಳಿಲ್ಲದ ತಾಯಿ ಕೊಳೆತ ತೆಂಗಿನಕಾಯಿ.
ಇದನ್ನು ನೀವು ಒಪ್ಪುವಿರಾದರೆ ನನ್ನ ಆಕ್ಷೇಪ ಏನು ಇಲ್ಲಾ. ಆದರೆ ಮಕ್ಕಳಿಲ್ಲದ ತಾಯಿಯವರ ಮನಸ್ಸಿಗೆ ಆಗುವ ನೋವನ್ನು ಗಣನೆಗೆ ತೆಗೆದುಕೊಂಡು ಹಾಕಿರಲಿಲ್ಲಾ. ಈಗಲೂ ನೀವು ಹೇಳಿದ್ದಕ್ಕೆ ಹಾಕಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶರಣು ವೆಂಕಟ್ರಾಯರಿಗೆ,
ಮೊದಲು ನನಗೂ ಕನ್ನಡ ಕಂದರ ಹಾಗೆ ಅನ್ನಿಸಿತ್ತು. ಈಗ ತೆಗೆದು ಹಾಕಿದ ಸಾಲು ಯಾವದೆಂದು ಗೊತ್ತಾದ ಮೇಲೆ, ನೀವು ಮಾಡಿದ್ದೇ ಸರಿ ಎನ್ನಿಸಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸರೇ,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಕ್ಕೆ ಕನ್ನಡ ಕಂದರ ಪ್ರತಿಕ್ರಿಯೆ ಮಾತ್ರ ಬಂದಿಲ್ಲಾ. ಈ ಮಾತು ಕನಕದಾಸರ ಕಾಲದಲ್ಲಿ ಸರಿಯಾಗಿತ್ತೇನೋ? ಆದರೆ ಈಗಿನ ಕಾಲಕ್ಕೆ ಅದು ಸರಿ ಅಲ್ಲ ಎಂದು ನನ್ನ ಅಭಿಪ್ರಾಯ. ಯಾಕೆಂದರೆ ಮಕ್ಕಳಾಗದೆ ಇರಲು ತಂದೆಯೂ (ತಾಯಿಯ ಗಂಡ) ಕಾರಣನಾಗಿರಬಹುದಲ್ಲಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಥ ಸಾಲುಗಳು ಎಷ್ಟೋ ಅನೇಕ ಕೃತಿಗಳಲ್ಲಿ ಇವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಥ ಸಾಲುಗಳು ಎಷ್ಟೋ ಅನೇಕ ದಾಸರ ಮತ್ತಿತರ ಕೃತಿಗಳಲ್ಲಿ ಇರುತ್ತವೆ. ಅವುಗಳನ್ನು ಕಾಲಕ್ಕೆ ತಕ್ಕಂತೆ ಬದಲಿಸಿಕೊಳ್ಳುವುದು ಸರಿ ಅಂತ ಅನ್ನಿಸುತ್ತದೆ . ಆದರೆ ಮೂಲವನ್ನೂ ಉಳಿಸಿಕೊಳ್ಳಬೇಕು. ವೆಂಕಟರಾಯರೆ , ಈ ಕೃತಿಯನ್ನು ಹರಿದಾಸ ಸಂಪದಕ್ಕೆ ಸೇರಿಸುವಾಗ ನೀವು ಟೈಪಿಸಿದ್ದನ್ನು ಬಳಸಿಕೊಂದಿದ್ದೀನಿ . ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ http://haridasa.samp... ವಿಳಾಸದಲ್ಲಿ ಅದನ್ನು ನೋಡಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.