ಶಬ್ದಗಾರುಡಿಗ ಬೇಂದ್ರೆಯವರ ಮೂರು-ಮೂರೇ ಸಾಲುಗಳು

5

ಬದುಕಿನಲ್ಲಿ ಬೆಂದರೆ ಬೇಂದ್ರೆಯಾಗುತ್ತಾನಂತೆ! ಹಾಗೆ ಬದುಕಿನುದ್ದಕ್ಕೂ ಬೇಯುತ್ತಲೇ ಇದ್ದ ಬೇಂದ್ರೆಯವರನ್ನು ವಿಶೇಷ ಕವಿಯಾಗಿ ಕನ್ನಡ ಎಂ.ಎ. ಮಾಡುವಾಗ ಓದಬೇಕಾಯಿತು. ಆಗಿನ ನನ್ನ ದರದೃಷ್ಟವೆಂದರೆ ಬೇಂದ್ರೆಯವರ ಯಾವುದೇ ಸಾಹಿತ್ಯಕೃತಿ ಮರುಮುದ್ರಣವಾಗಿರಲಿಲ್ಲ. ಹಳೆಯ ಪ್ರತಿಗಳು ಸಿಗುತ್ತಿರಲಿಲ್ಲ. ಆದ್ದರಿಂದ ವಿಧಿಯಿಲ್ಲದೆ, ವಿ.ವಿ.ಯವರು ಪೂರೈಕೆ ಮಾಡಿದ್ದ ಪಾಠಗಳಲ್ಲಷ್ಟೇ ಬೇಂದ್ರೆಯವರನ್ನು ಓದಬೇಕಾಯಿತು. ಹಾಗಾಗಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೇನೋ! ಏಕೆಂದರೆ ಬೇಂದ್ರೆಯವರ ಸಾಹಿತ್ಯವನ್ನು ಮೂಲದಲ್ಲೇ ಓದಬೇಕು ಎಂಬ ‘ಹೆಬ್ಬಯಕೆ’ ನನ್ನಲ್ಲಿ ಆಗಿನಿಂದಲೂ ಮೂಡಿಬಿಟ್ಟಿತು. ಅವರ ಸಮಗ್ರ ಕಾವ್ಯವನ್ನು ಸೇರಿಸಿ ‘ಔದುಂಬರ ಗಾಥೆ’ ಎಂಬ ಹೆಸರಿನಲ್ಲಿ ಆರು ಸಂಪುಟಗಳು ಪ್ರಕಟವಾದಾಗ ನನ್ನ ಆಸೆ ಈಡೇರುವ ಕಾಲ ಬಂದಿತೆಂದು ಸಂತೋಷವಾಯಿತು. ಹೀಗೆ ನಮ್ಮ ಗ್ರಂಥಾಲಯಕ್ಕೆ ಬಂದ ಆರು ಸಂಪುಟಗಳನ್ನು ನನ್ನ ಸುಪರ್ದಿನಲ್ಲಿಯೇ ಇಟ್ಟುಕೊಂಡು ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಮೊನ್ನೆ ಬಿ.ಎ. ಹುಡುಗರಿಗೆ ಬೇಂದ್ರೆಯವರ ಬಗ್ಗೆ ಅಸೈನ್‌ಮೆಂಟ್ ಕೊಟ್ಟಿದ್ದರೆಂದು ಕಾಣುತ್ತದೆ. ಇದ್ದಕ್ಕಿದ್ದಂತೆ ಆ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಯಿತು. ಅವರೆಲ್ಲಾ ಬರೆದುಕೊಂವೋ ಕ್ಸೆರಾಕ್ಸ್ ಮಾಡಿಸಿಕೊಂಡೋ ಹೋದ ನಂತರ ಆರು ಸಂಪುಟಗಳೂ ನನ್ನ ಟೇಬಲ್ಲಿನ ಮೇಲೆ ಬಿದ್ದಿದ್ದವು. ನಾನು ಅವುಗಳ ಮೇಲೆ ನೆನ್ನೆಯಿಂದ ಕಣ್ಣಾಡಿಸುತ್ತಲೇ ಇದ್ದೆ. ಆಗ ಈ ಮೂರು ಮೂರು ಸಾಲಿನ ಪುಟ್ಟ ಪುಟ್ಟ ಪದ್ಯಗಳು ನನ್ನ ಗಮನ ಸೆಳೆದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಎನ್ನಿಸಿ ಇಲ್ಲಿ ಬ್ಲಾಗಿಗೇರಿಸಿದ್ದೇನೆ. ಓದಿ ಬೇಂದ್ರೆಯವರ ಕಾವ್ಯಾಮೃತದ ಕೆಲವು ಹನಿಗಳನ್ನು. ಇದು ಅವರ ಹೆಚ್ಚಿನ ಸಾಹಿತ್ಯವನ್ನು ಓದುವಂತೆ ನಿಮ್ಮಲ್ಲಿ ಪ್ರೇರೇಪಿಸಿದರೆ ನಾನು ಧನ್ಯ.

1

ರಸವೆ ಜನನ

ವಿರಸ ಮರಣ

ಸಮರಸವೇ ಜೀವನ

2

ಒಂದೇ ಒಂದು ರಾಡಿ

ಬರಿದು ಓರಂದ ಇರದು ಮಕರಂದ

ರಸವು ಹುಡಿಯ ಜೋಡಿ

3

ಆತನು!

ನೂಲು ನೂತನು

ಯಾವಾತನು

4
ಆ ಮೈ ಕತ್ತಲು ನಾಮ

ಈ ಮೈ ಬೆಳಕು ರೂಪ

ದೇಹರೂಪ

5

ಬೆಣ್ಣೆಯೊಳಗ ಬಟ್ಟು ಅದ್ದಿ ಮೂಗಿಗೆ

ಹಚ್ಚಿಗೊಂಬಾವ್ರು ಬಹದ್ದೂರ ಜನಾ!

ಇದು ಮಾತಿನ ಪವಾಡಲ್ಲ, ಮುಖವಾಡ

6

ದಶಕಂಠಗಿಲ್ಲ ಆರಾಮ.

ಸಂಹಾರ ವಿಶ್ರಾಮ,

ಜಯದ ವಿಜಯದ್ವಾರ- ಜಯ ವಿಜಯ ಆಕಾರ

7

ಸಾಗು ಮಾಗು ಗುರುಪಾದ

ಸೇವಕ ನಾಗು ಹಾಗೂ ಹೀಗೂ

ಮಂಗಾಟ ನಿಲ್ಲಿಸು ಹನುಮಂತನಾಗು

8

ಕತ್ತಿಗೆ ಹಾಕೋದಿಲ್ಲ ನತ್ತು

ಮೂಗಿಗೆ ಇರೋದಿಲ್ಲ ಮುತ್ತು

ಹರಕು ಮುರುಕ ಕಳ್ಳಗತ್ತು

9

ಆರು ಏಳು ಎಂಟು

ಹೊರಗೊಂದು ಒಳಗೊಂದು

೨೮ ಉಂಟು ಹಾಂಗೂ ಹೀಂಗೂ

10

ನಾನೆಲ್ಲಿ ಹೋಗಿದ್ದೆ?

ನಿಮ್ಮ ಹೃದಯದೊಳಗಿದ್ದೆ

ವಿವೇಕ ಅಂತ ಹೊರಗ ಬಂದೆ

11

ಯಾವುದರ ಬೋಧ ಇಲ್ಲವೋ

ಅದರ ಶೋಧವು

ಸಫಲವೆನಿಸಲಾರದು

12

ಕಿಲಿಕಿಲಿ ಹಕ್ಕಿಯ

ಕಲಕಲರವದಲಿ

ಧ್ವನಿಸುವ ಬಗೆಯಾಕೆ

13
ಅಂಚೆ ಏರಿ ನೀರಿನಾಕೆ

ಗಾಳಿಯಲ್ಲಿ ಸುಳಿದಳೋ

ಬೆಳಕಿನಲ್ಲಿ ಬೆಳೆದಳು

14

ಕಾಮದೊಳಗೆ ಹೊತ್ತಿದೆ ಪ್ರೇಮಾ

ಅದಕ್ಕಾವ ನೇಮಾ ಗೀಮಾ

ಅದು ಬಾಳೋ ಸೀಮಾ ನಿತ್ಯಾನಂದ ಧಾಮಾ

15

ಬೀರ ನೆತ್ತರ ಸವಿದು

ಸುರುಚಿ ಸುಮಧುರವೆಂದೆ

ನಿನ್ನ ಹನಿಯೇ ಬೇರೆ ತಣಿವಿನರಸ

16

ಉಂಡು ನೈವೇದ್ಯದ ಮುದ್ದೀ

ಬ್ರಹ್ಮಚೈತನ್ಯರ ಶುದ್ಧಿ

ಹಂಚ್ಯಾಡು ಶ್ರೀರಾಮ ಋದ್ಧೀ

17

ಇದು ಬುದ್ಧನ ಅವತಾರ

ಜೀವನದುದ್ಧಾರ

ಶೂನ್ಯದ ಹೊಲದಲಿ ಬೆಳೆಯುವ ಆತ್ಮದಶೃಂಗಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಕೇವಲ ಮೂರು ಸಾಲುಗಳಲ್ಲಿ ಅಗಾಧ ಅರ್ಥವನ್ನು ತು೦ಬುವ೦ಥ ಶಕ್ತಿ ಕೇವಲ ಬೇ೦ದ್ರೆಯವರಿಗೆ ಮಾತ್ರ ಸಾಧ್ಯ ಈ ಮೂರು ಸಾಲುಗಳು ಅಗಿದು ಅರ್ಥಮಾಡಿಕೊಳ್ಳಬೇಕಿದೆ.ಇದೇ ರೀತಿ ಬೇ೦ದ್ರೆಯವರ ಚಮತ್ಕಾರಿ ಚತುರೋಕ್ತಿಗಳಿವೆ ಇಡೀ ಕವನದ ಭಾವವನ್ನು ಮೊದಲನೇ ಸಾಲಿನಲ್ಲಿ ತಿಳಿಸಿ ನ೦ತರ ಎರಡು ಮೂರು ನಾಲನೇಯ ಸಾಲಿನಲ್ಲಿ ಅದನ್ನು ವಿಸ್ತಾರಗೊಳಿಸುತ್ತಾ ಹೋಗುತ್ತಾರೆ ಚತುರ್+ಉಕ್ತಿ ,ಅಥವ ಚತುರ ಉಕ್ತಿ ಎತಲೂ ಕರೆಯಬಹುದು ಮೂರು ಸಾಲಿನ ಕವನಗಳಲ್ಲಿ ಹುಟ್ಟುವಿಕೆಯ ಮೊದಲು ಕತ್ತಲು ನ೦ತರ ಬೆಳಕು ಅದೇ, ದೇಹವೇ? ಸಾಮರಸ್ಯವೊ೦ದೇ ಜೀವನದುದ್ಧಾರಮಾರ್ಗ ಮನಃಚಾ೦ಚಲ್ಯವನ್ನು ನಿಲ್ಲಿಸು ಗುರುವಿನ ಗುಲಾಮನಾಗು ಅದ್ವೈತವನ್ನು ಪಡೆ ವಿವೇಕವೆ೦ಬುದು ಹೊರಗಿನದಲ್ಲ ಒಳಗಿನದೇ ವಸ್ತುವಿನರಿವಿಲ್ಲದೆ ಬರಿಯ ಶೋಧ ನಿಶ್ಪ್ರಯೋಜಕ ಹೀಗೇ ಮೇಲ್ನೋಟಕ್ಕೆ ಕೆಲವೊ೦ದನ್ನು ಅರ್ಥೈಸಿಕೊಳ್ಳಬಹುದೆ .ಆದರೆ ಗೂಡಾರ್ಥ? ಚತುರೋಕ್ತಿಗಳ ಬಗೆಯೂ ಬರೆಯಿರಿ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.