ಋಷಿ ಪಂಚಮಿ -- ಯಾಕ, ಏನು, ಎಂತ -- ಇವತ್ತೇನಾಗೇದ

0

ಈ ಋಷಿ ಪಂಚಮಿ ಅನ್ನು ಹಬ್ಬ ಅತವಾ ಪದ್ದತಿ ಎಷ್ಟು ಮಂದಿಗೆ ಗೊತ್ತದ ಅಂತ ಗೊತ್ತಿಲ್ಲ. ಅದಕ್ಕೆ ಸುಮ್ಮ ರಿಸ್ಕ ಬ್ಯಾಡಂತ ಹೇಳಿ ಲೈಟಾಗಿ ಇದರ ಬಗ್ಗೆ ಬರಿಲಿಕತ್ತೀನಿ.

ಇದು ನನಗ ತಿಳಿದ ಮಟ್ಟಿಗೆ ನಮ್ಮ ಸಮುದಾಯ ಬಿಟ್ಟು ಬ್ಯಾರೆ ಹೊರಗೆಲ್ಲಿ ಆಚರಿಸು ಹಂಗೇನು ಕಾಣುದಿಲ್ಲ. ಇದು ಬಹುತೇಕ ಹೆಂಗಸರ ಹಬ್ಬ. ಗಂಡಸರಿಗೆ ಇದಕ್ಕ ಬೇಕಾದ ಸಾಮಾನುಗಳನ್ನ ಅಂಗಡಿಯಿಂದ ತಂಡು ಕೊಡುದು ಬಿಟ್ರ ಜಾಸ್ತಿ ಎನ್ ಕೆಲಸ ಇರುದಿಲ್ಲ. ಇದನ್ನ ಭಾದ್ರಪದ ಶುಕ್ಲ ಪಂತಮಿ, ಅಂದ್ರ ಗಣೇಶ ಚತುರ್ತಿ ಮರುದಿನ ಮಾಡತಾರ. ಇದ್ದು ಹಬ್ಬ ಅನುದರಕಿಂತ ಒಂದು ರೀತಿ ವೃತ ಅಂತ ಹೇಳಬಹುದು. ಇವತ್ತಿನ ದಿನ ಏನಪಾ ಅಂದ್ರ ಹೆಂಗಸರು ನಮ್ಮ ಸಂಸ್ಕೃಕಿಯ ಮಹಾ ಋಷಿಗಳಾದ ಸಪ್ತ ಋಷಿಗಳ ಧ್ಯಾನ ಮಾಡಬೇಕು, ಆ ಋಷಿಗಳಂತೆ ಎಷ್ಟು ಆಗತದ ಅಷ್ಟು ವೈರಾಗ್ಯದ ಜೀವನ ನಡಸಬೇಕು ಅಂತ ಅದ. ಮಜಾ ಏನಂದ್ರ ಇದು ಒಂದು ದಿನದ ಹಬ್ಬ ಅಲ್ಲ. ಒಂತರಾ ವರ್ಷ ಪೂರ್ತಿ ಬರುವ ರಿಕರಿಂಗ ಡೆಪಾಸಿಟ್ ಇದ್ದಂಗ. ಅಷ್ಟೇ ಅಲ್ಲ ಇದನ್ನ ೮ ವರ್ಷ ಮಾಡಬೇಕು. ಇದಕ್ಕಿಂತ ಭಾರಿ ಏನಂದ್ರ ಈ ವೃತಾ ಸುಮ್ಮ ಹಂಗೇ ಮಾಡಲಿಕ್ಕೆ ಬರುದಿಲ್ಲ. ಮದಲ ಈ ವೃತ ಹಿಡಿತೀನಿ ಅಂತ ಸಂಕಲ್ಪದ ಜೂಡಿ ಒಂದು ಕಾರ್ಯಕ್ರಮ ಇರ್ತದ. ಈ ವೃತ ೮ ವರ್ಷ ಮಾಡಿದ ಮ್ಯಾಲೆ ಅಂತ್ರು ಇನ್ನು ದೊಡ್ಡ ಕಾರ್ಯಕ್ರಮ ಇರ್ತದ. ಆ ಪೂರ್ತಿ ಪದ್ದತಿ ಮತ್ತ ಆಮ್ಯಾಲೆ ಬರೀತಿನಿ.

ಇದರ ಬಗ್ಗೆ ಇನ್ನು ಹೇಳಬೇಕಂದ್ರ ಯರು ಆ ವೃತ ಮಾಡಲಿಕ್ಕೆ ಚಾಲು ಮಾಡತಾರ ಅವರು ಸ್ವಲ್ಪ ವೈರಾಗ್ಯದ ಜಿವನ ನಡಸ್ಬೇಕಂತದ. ಬಹುತೇಕ ಅದಕ್ಕೇ ಇದನ್ನ ಬರಿ ಹಿರಿಯರು ಅಷ್ಟಿ ಮಾಡತಾರ. ೮ ವರ್ಷ ಅಗದು ಸಾದಾ ಜೀವನಾ ನಡಸುದೇನು ಸರಳ ಇಲ್ಲಾ. ಇದನ್ನ ಯಾರು ಮಾಡತಾರ ಅವರು ಆ ೮ ವರ್ಷ ಭಾದ್ರಪದ ಶುಕ್ಲ ಪಂತಮಿ ದಿನ ಅಂತ್ರು ಬಿಳಿ ಸೀರಿ ಉಟಗೋಬೇಕು. ಅವತ್ತ ಮತ್ತ ಉಳದ ದಿನ ಸುದೇಕ್ ಮಡಿ ಅಡಗಿ ಅಷ್ಟೇ ಉಚ ಮಾಡಬೇಕು, ಅದು ಇದು ಆಗಾಗ ತಿನ್ಲಿಕ್ಕೆ ಬರುದಿಲ್ಲ. ಇವೆಲ್ಲಾ ಏನಪಾ ಅಂದ್ರ ವಟ್ಟ ಮದಲೇ ಹೇಳಿದಂಗ ವೈರಾಗ್ಯದಿಂದ ಇದ್ದಿವಿ ಅನ್ನುದರ ಸೈನ್ಸ್ (signs). ಆದ್ರ ಈಗಿನ ಕಾಲ ಏನ ಆಗೇದ ನೋಡ್ರಿ. ಬಿಳಿ ಸೀರಿ ಹಾಕೋಬೇಕಂತ ಋಷಿ ಪಂಚಮಿ ಹಿಂದಿನ ದಿನಾ ಮಂದಿ ಅರವಿ ಅಂಗಡಿಗೆ ಹೋಗಿ ಡಿಸೈನರ್ ಬಿಳಿ ಸೀರಿ ಹುಡುಕಿ ತೋಗೊಂಡು ಬರುದಂತ. ಮನಿಗೆ ಬಂದು ಉಳದವರ ಜೂಡಿ ಆ ಸೀರಿ ಅಂಚ ಹೆಂಗದ, ಜರಿ ಹೆಂಗದ, ಶರಗ ಹೆಂಗದ ಹಿಂತಾದ ಮಾತಾಡಕೋತ್ ಕೂಡುದಂತ. ಋಷಿಗಳನ್ನ ನೆನಸ್ಕೋರಿ ಅಂದ್ರ ಇಲ್ಲ, ಸೀರಿ ಬಗ್ಗೆ ಚರ್ಚೆ. ವಷರ್ದ ಆ ವಂಚಮಿ ಒಂದು ದಿನ ಉಪವಾಸ ಮಾಡಿದ್ರ ಆತು, ಮರದಿವಸದಿಂದ ಮತ್ತ ಎಲ್ಲಾ ಕಟಿಲಿಕ್ಕೆ ಶುರುನೇ. ಅದು ತಿನ್ನು, ಇದು ತಿನ್ನು ಎಲ್ಲಾ ತಿನ್ನುದೇ. ವೈರಾಗ್ಯ ಅನ್ನುದು ಹೋಗೇಬಿಡ್ತದ. ಆ ಋಷಿಗಳು ನೆನಪು ಬರುದು ಮುಂದಿನ ವರ್ಷ ಪಂಚಮಿಗೇ. ಇಲ್ಲಾ ಚಥುರ್ತಿಗೇ ನೆನಪ ಬರ್ತಾರ, ಮತ್ತ ಹೊಸ ಬಿಳಿ ಸೀರಿ ತರಬೇಕಲಾ.

ಹಿಂಗಾಗಿ ವಟ್ಟ ನಮ್ಮ ಪದ್ದತಿಗಳ ಹಿಂದಿದ್ದ ಕಾರಣಗಳನ್ನ ಕಳಕೋಳಿಕತ್ತೀವಿ. ಇದರಿಂದಾಗಿ ನನ್ನಂತವರು ಕಾರಣ ಕೇಳಿದಾಗ ಏನು ಸಿಗಲಾರದಕ್ಕ ಈ ಪದ್ದತಿ ಮೂಢ ನಂಬಿಕೆ ಮಾಡಿಬಿಡ್ತೀವಿ.
ಎಲ್ಲಾರು ಹಿಂಗ ಮಾಡತಾರಂತ ಹೇಳುದಿಲ್ಲ. ರಗಡ ಮಂದಿ ಅಗಕಿ ಪಕ್ಕಾ ನಿಷ್ಠೆಯಿಂದ ಮಾಡತಾರ. ಆದ್ರ ಭಾಳಷ್ಟು ನಾ ಹೇಳಿದಂಗೂ ಮಾಡತಾರ.

ನಾ ಮುಂಚೆ ಹೇಳಿದಂಗ ಈ ಋಷಿ ಪಂಚಮಿ ಬಗ್ಗೆ ವಿಸ್ತಾರವಾಗಿ ಬರೀತಿನಿ, ಎಷ್ಟು ಆಗತದ ಪದ್ದತಿಯ ಮಹತ್ವ ಸುದೇಕ್ ಹುಡುಕಿ ಬರೀತಿನಿ. ಅಲ್ಲಿತನಕ,

ಜೈ ಶ್ರೀ ಯಲಗೂರೇಶ ಪ್ರಸನ್ನ.
ಹರಿ ಓಂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.