ಹಿಂದೂ ಸಂಸ್ಕೃತಿಯಲ್ಲಿ ಮಣ್ಣಿಗಿರುವ ಮಹತ್ವ

0

ನಾ ಗಣೇಶ ಚತುರ್ತಿಗೆ ಊರಿಗೆ ಹೋದಾಗ ಅಮ್ಮಾ ಜೂಡಿ ಮಾತಾಡ್ಕೋತ ಕುತ್ತಾಗ ಅಮ್ಮಾ ಈ ಮಾತು ಹೇಳಿದ್ಲು. ನಮ್ಮ ಹಿಂದೂ ಪದ್ದತಿಗಳ ವಳಗ ಮಣ್ಮಿಗೆ ಭಾಳ ಮಹತ್ವ ಕೊಡತಾರ. ಇದಕ್ಕ ಆಧಾರ ಎನಂದ್ರ -

೧. ಮಣ್ಣೆತ್ತಿನ ಅಮವಾಸಿಗೆ ಮಣ್ಣಿನ ಎತ್ತು ಮಾಡ್ತೀವಿ.
೨. ಗಣಪತಿ ಹಬ್ಬಕ್ಕ ಮಣ್ಣಿನ ಗಣಪತಿ ಮೂರ್ತಿ ಇಡತೀವಿ.
೩. ದಿನಾ ಸಂಧ್ಯಾವಂದನೆ ಮಾಡುಮುಂದ ನಾವು ಗೋಪಿಚಂದನ ಎನ ಹಚಗೋತೀವಿ, ಅದು ಮಣ್ಣಿಂದು.
೪. ನಮ್ಮ ಮನ್ಯಾಗ ಗೌರಿ ಕೂಡಸ್ತಾರಲಾ, ಅದು ಸುದೇಕ್ ಮಣ್ಣಿಂದು ಮಾಡಬೇಕು ಅಂತ ಅದ.
೫. ಯಾವುದೇ ಹೋಮ, ಯಜ್ಞ ನಡದ್ರ ಅಲ್ಯೂ ಮಣ್ಣು ಬೇಕಾಗ್ತದ.
೬. ಉತ್ತರ ಕರ್ನಾಟಕದ ಕಡೆ ಗುಳ್ಳವ್ವ ಅಂತ ಮಾಡತೀವಿ, ಅದು ಸುದೇಕ್ ಮಣ್ಣಿಂದೇ ಮಾಡತಾರ.

ಹಿಂಗೆ ಹೇಳ್ಕೋತ ಹೋದ್ರ ಇನಾ ಭಾಳ ಸಿಗತಿರಬಹುದು. ಸಿಗತಿರಬಹುದೇನು, ಸಿಕ್ಕೇ ಸಿಗತಾವ. ವಟ್ಟ ಮಣ್ಣಿಗೆ ಮಹತ್ವ ಅದ ಅಂತ ಆತು. ಇಲ್ಲಿ ಮಣ್ಣ ಅಂದ್ರ ಬರೀ ಮಣ್ಣು ಅಂತ ಅಲ್ಲಾ, ಭೂತಾಯಿ ಅಂತ ಲೆಕ್ಕಾ. ನಾವು ಸದಾಕಾಲ ಭೂತಾಯಿಯನ್ನ ಪೂಜಸ್ತೀವಿ ಅಂತ. ಇದು ಯಾಕ ಇರಬಹುದಪಾ ಅಂತ ನಾನು ವಿಚಾರ ಮಾಡಿದೆ. ನನಗ ತಿಳಿದ ಮಟ್ಟಿಗೆ, ನಾವು ಮೂಲತಃ ಬೇಸಾಯ ಮಾಡುವ ಜನಾಂಗ. ಅಂದ್ರ ವಕ್ಕಲತನಾನೇ ನಮ್ಮ ಮುಖ್ಯ ಉದ್ಯೋಗ. ಹಿಂಗಿದ್ದಾಗ ಭೂತಾಯಿಗೆ ಅತಿ ಹೆಚ್ಚು ಪ್ರಮಾಣದಾಗ ಆದರ, ಮರ್ಯಾದೆ ಮತ್ತ ಪೂಜಾ ಇರೂದು ಸಹಜ ಅನಸ್ತದ. ಅದಕ್ಕೆ ಈಗೆಲ್ಲಾ ಮಂದೀ ಕಟಗಿ ಗೌರಿ, ಬೆಳ್ಲಿ ಗಣಪ್ಪ ಹಿಂಗೇನರೆ ಕೂಡ್ಸೀದ್ರ, ಹಂಗ ಮಾಡಬ್ಯಾಡ್ರಿ, ಮಣ್ಣಿಂದೇ ಕೂಡಸ್ರಿ ಅಂತ ಹೇಳುದು.

ನಮ್ಮಂತವರೆಲ್ಲಾ ಯಾಕ, ಮಣ್ಣಿಂದೇ ಯಾಕ? ಅಂತ ಪ್ರಶ್ನೆ ಹಾಕತೀವಿ. ಹೇಳಿದವರಿಗೆ ಉತ್ತರಾ ಗೊತ್ತಿಲ್ಲಂದ್ರ ಆತ್ ನಡೀ. ನೀಮಗ ಎನೂ ಗೊತ್ತಿಲ್ಲ. ಬರೇ ಮೂಢ ನಂಬಿಕೆ ನಿಮ್ದೆಲ್ಲಾ ಅಂತ ದಬಾಯ್ಸಿ, ಜೋರ್ ಮಾಡಿಬಿಡ್ತೀವಿ. ಅವರು ಮುಂದ ಎನ್ ಹೇಳುದಂತ ಸುಮ್ಮ ಆಗ್ತಾರ. ನಾನು ಹಿಂಗೇ ಮಾಡತಿದ್ದೆ. ಆದ್ರ ಇದರಿಂದ ನಮಗೆ ಲುಗಸಾನ ಅದ. ಅವರು ಹೇಳುದರವಳಗ ಏನರೇ ಛೊಲೋ ಇತ್ತಂದ್ರ ಅದೆಲ್ಲಾ ನಾವು ಕಳಕೋತೀವಿ. ಅದಕ್ಕೆ ನಾನು ವಿಚಾರ ಮಾಡಿ ಇನ್ನ ಮ್ಯಾಲಿಂದ ನನಗ ಎನು ಪ್ರಶ್ನೆ ಬರ್ತದ ಅದಕ್ಕ ಉತ್ತರ ನಾನೇ ದುಡಕಬೇಕು. ನಾ ಎಷ್ಚು ಹುಡಕೀದ್ರು ಸಿಗಲಿಲ್ಲ ಅಂದ್ರ ಅದನ್ನ ಮೂಢನಂಬಿಕೆ ಅಂತ ತಿಳ್ಕೋತೀನಿ. ನೋಡುಣು ಎಲ್ಲಿತನ ಜಗ್ಗತದ ಈ ಗಾಡಿ.

ಜೈ ಶ್ರೀ ಯಲಗೂರೇಶ ಪ್ರಸನ್ನ.
ಹರಿ ಓಂ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಣ್ಣಿಗಿರುವ ಮಹತ್ವ ತಿಳಿಸಿದ್ದಕ್ಕೆ ಧನ್ಯವಾದಗಳು. ಆದರೆ ಇಂದೇನಾಗಿದೆ ನೋಡಿ. ನಗರಗಳಲ್ಲಿ, ಮಣ್ಣು ಒಂಚೂರೂ ಕಣ್ಣಿಗೆ ಬೀಳದಂತೆ ಭೂಮಿಯನ್ನು ಟಾರು, ಸಿಮೆಂಟು ಇತ್ಯಾದಿಗಳಿಂದ ’ಸೀಲ್’ ಮಾಡಿಕುಳಿತಿದ್ದೇವೆ. ಕೆಲದಿನದ ಹಿಂದೆ ಮನೆಯ ಹೂಗಿಡಗಳಿಗಾಗಿ ಮಣ್ಣನ್ನು ಹುಡುಕಿಕೊಂಡು ಲಾಲ್ ಭಾಗ್ ಗೆ ಹೋಗಿ ಒಂದು ಮೂಟೆ ಮಣ್ಣನ್ನು ಖರೀದಿಸಿ ತಂದಿದ್ದಾಯಿತು. ಬಹಳ ದುಃಖವಾಯಿತು ಆಗ. ಮಣ್ಣು, ನೀರು ಇವುಗಳನ್ನು ಖರೀದಿಸುವ ಪರಿಸ್ಥಿತಿ ಬಂದಾಗಿದೆ. ಇನ್ನು ಗಾಳಿಯನ್ನು ಎಂದು ಖರೀದಿಸುವ ಕಾಲ ಬರಬಹುದು ಎನಿಸುತ್ತಿದೆ. ಒಂದು ಕಾಲದಲ್ಲಿ ಆಹಾರ ಪದಾರ್ಥಗಳನ್ನೂ ಮಾರುತ್ತಿರಲಿಲ್ಲವಂತೆ ಈ ದೇಶದಲ್ಲಿ. ಈಗ ಹೇಗಿದೆ ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ನೂರಕ್ಕ ನೂರು ಖರೇ. ನನಗೂ ಮೊದಲ ಬೆಂಗಳೂರಿಗೆ ಬಂದಾಗ ಏನು ಜಾಗಾಅಪಾ ಇದು ಅಂತ ಅನಸ್ತು. ಆದ್ರ ಈಗ ೨ ವರ್ಷ ಆದಮ್ಯಾಲೆ ಸಾಕಪಾ ಇದು ಅನಿಸಿ ಬಿಟ್ಟದ. ಅದ್ರ ಇಷ್ಟು ಮಂದಿ ಹೊಟ್ಟಿಗೆ ಊಟ ಹಾಕು ಊರು ಇದೇ. ಒಂದು ಬಂದ್ರ ಇನ್ನೊಂದು ಹೋಗತದ ಅಂತಾರಲಾ, ಹಂಗಾತಿದು. ಈ ಮಾಡರ್ನ ಜಗತ್ತು ಮತ್ತು ನಮ್ಮ ರೈತ ಜಗತ್ತಿನ ನಡು ಒಂದು ಬರೊಬ್ಬರ ಬ್ಯಾಲೆನ್ಸ್ ಆದಷ್ಟು ಜಲ್ದಿ ಸಿಗಲಿ ಅಂತ ಅನ್ಕೋಳೂಣು.

ಇದರ ಜೂಡಿ ನೀವು ಇಷ್ಟು ಶ್ರಮ ತೊಗೊಂಡು ಹಚ್ಚಿದ ಗಿಡ ಛೊಲೋ ಬೆಳಿಲಿ ಅಂತ ಆಶಸ್ತೀನಿ. :-)

-- ಹರಿ ಓಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ ಐತಿ, ಮತ್ತ, ಚಲು ಐತಿ, ನೀವ್ ಹೇಳುದ್.. ರೈತರಿಗೇ ಗೊತ್ತ್ ಮಣ್ಣಿನ ಬೆಲಿ ಏನ್ ಅಂತ್... ಮೊನ್ನೆ ಗಣಪತಿ ಏನ್ symbolize ಮಾಡ್ತಾನ್ ಅಂತ್ ತಿಳಿದು ಮನಗಂಡ ನಲಿವ್ ಆತ್....
:[:-)]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದು ವಿಷಯ ಗೊತ್ತೆ. ಭೂಸ್ಪರ್ಷವಾಗದ ನೀರು (ಮಣ್ಣು ತಾಗದ ನೀರು) ಕುಡಿಯಲು ಪೂಜೆಗೆ ತಕ್ಕುದ್ದಲ್ಲ. ಭಟ್ಟಿಯಿೞಿಸಿದ ನೀರು ನಿಮಗೆ ಗೊತ್ತಿರುವಂತೆ ಯಾವುದೇ ಖನಿಜವನ್ನು ಒಳಗೊಂಡಿರದುದಱಿಂದ ಕುಡಿದರೂ ದೇಹಕ್ಕೆ ಪ್ರಯೋಜನವಿಲ್ಲ. ಇದನ್ನು ಮನಗಂಡ ನಮ್ಮ ಹಿರಿಯರು ನೆಲಕ್ಕೆ ತಾಗಿದ ನೀರಷ್ಟೆ ಬೞಸಲು ತಕ್ಕುದೆಂದು ನಿರ್ಧರಿಸಿದುದು. ಈಗ ಪರಿಷ್ಕರಿಸಿದ ನೀರಿಗೆ ಖನಿಜಾಂಶಗಳನ್ನು ಬೞಸಲು ಆ ಖನಿಜಾಂಶಗಳನ್ನು ನೆಲದಿಂದಲೇ ಪಡೆಯಬೇಕಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಟರೆಸ್ಟಿಂಗ್... ನನಗ ಇದರ ಹಿಂದಿದ್ದ ವೈಜ್ಞಾನಿಕ ವಿಚಾರ ಗೊತ್ತಿತ್ತು, ಆದ್ರ ಪೂಜಾ ವಿಚಾರ ಏನ್ ಹೇಳೀರಿ, ಅದು ಗೊತ್ತಿರಲಿಲ್ಲ. ಒಳ್ಳೇದು.

-- ಹರಿ ಓಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.