ಇದೊಂತರಾ ಜಾಹೀರಾತು ಕಣ್ರೀ....

5

ನಲ್ಮೆಯ ಸಂಪದಿಗರೇ,,,, ನಮಸ್ಕಾರ .. ಹೇಗಿದ್ದೀರಿ? ಹ್ಮ್ಮ್ ....ಸುಮಾರು ದಿನಗಳ ನಂತರ ಮತ್ತೆ ಸಂಪದದಲ್ಲಿ ಬರೆಯುವ ಭಾಗ್ಯ ಸಿಕ್ಕಿದೆ ! ಬರುವ ಹೊತ್ತಿಗೆ ಹಲವಾರು ಹೊಸಬರು ಸಂಪದಿಗರಾಗಿದ್ದಾರೆ. ಅವರಿಗೆಲ್ಲಾ ಹಾಯ್ ಅಂತ ಹೇಳ್ತಾ ವಿಷಯಕ್ಕೆ ಬರ್ತೇನೆ. ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರತಿದಿನ ಬೆಳಗ್ಗೆ ೬.೪೫ ಕ್ಕೆ ಪ್ರಸಾರವಾಗುತ್ತಿದ್ದ ವಚನಾಮೃತ ಕಾರ್ಯಕ್ರಮದಲ್ಲಿ ಇದೀಗ ನನ್ನ ಗುರುಗಳಾದ ಡಾ|| ಪ್ರದೀಪ ಕುಮಾರ ಹೆಬ್ರಿಯವರು ಹಾಗೂ ಮಂಡ್ಯದ ಗಮಕಿ ಶ್ರೀ ಸಿ.ಪಿ.ವಿದ್ಯಾಶಂಕರ್ ರವರು ಬಸವ ವಚನಗಳನ್ನ ಗಮಕ ವ್ಯಾಖ್ಯಾನ ರೂಪದಲ್ಲಿ ನೀಡುತ್ತಿದ್ದಾರೆ. ಇದು ಪ್ರಪ್ರಥಮ ಬಾರಿಗೆ ವಚನಾಮೃತದಲ್ಲಾದ ಮಹತ್ತರ ಬದಲಾವಣೆ. ಈಗಾಗಲೇ ಯುಗಾವತಾರಿ ಶ್ರೀ ಬಸವ ದರ್ಶನ ಕಾವ್ಯದ ಮೂಲಕ ನಾಡಿನೆಲ್ಲೆಡೆ ಪರಿಚಿತರಾಗಿರುವ ಹೆಬ್ರಿಯವರ ವಾಗ್ವೈಖರಿಗೆ ಬಸವ ಸಮಿತಿ ಮನಸೋತು ಅವರಿಗೆ ಸುಮಾರು ನೂರು ಕಂತುಗಳ ಈ ಕಾರ್ಯಕ್ರಮವನ್ನ ಒಪ್ಪಿಸಿದೆ. ಕಳೆದ ಇಪ್ಪತ್ತು ವರುಷಗಳಿಂದ ಮಾಡಿದ ಬಸವ ಧ್ಯಾನ ಗುರುಗಳ ಬಾಯಲ್ಲೀಗ ವ್ಯಾಖ್ಯಾನವಾಗಿ ಹೊರಹೊಮ್ಮಲಿದೆ. ವಚನಾಮೃತದಲ್ಲಿ ಹೊಸತನ್ನು ತರುವ ಉದ್ದೇಶದಿಂದ ಪ್ರತಿದಿನ ಬಸವ ವಚನಗಳನ್ನ ಗಮಕ ಶೈಲಿಯಲ್ಲಿ ನೀಡಲಾಗುತ್ತಿದೆ. ಅದೀಗ ಬಸವಾಮೃತ. ಈ ವಚನ ವೈಭವವನ್ನ ನೀವೂ ಸವಿದು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ತಿಳಿಸ್ತೀರಾ ಅಲ್ವಾ ?


ಡಾ|| ಪ್ರದೀಪ ಕುಮಾರ ಹೆಬ್ರಿಯವರ ಮೊಬೈಲ್ ಸಂಖ್ಯೆ : ೯೮೪೪೦೧೮೪೫೭

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭವಾನೀ ಲೋಕೇಶ್, ಈ ಬಗ್ಗೆ ನಿಮ್ಮ ಗುರುಗಳ ಮಗಳು ಈಗಾಗಲೇ ಸಂಪದದಲ್ಲಿ ಪ್ರಕಟಿಸಿದ್ದಾರೆ. http://sampada.net/b... ನಾನು ನೋಡಲು (ಮತ್ತು ಕೇಳಲು) ಆರಂಭಿಸಿ ಆಗಿದೆ. ಗುರುಗಳ ಜಂಗಮ ದೂರವಾಣಿ ಸಂಖ್ಯೆ ನೀಡಿದ್ದಕ್ಕೆ ಧನ್ಯವಾದಗಳು. - ಆಸು ಹೆಗ್ಡೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.