ರಂಗಪಂಚಮಿ.....

0

ಮಂಡ್ಯದ ವಿವೇಕಾನಂದ ರಂಗಮಂದಿರದಲ್ಲಿ ರಂಗಪಂಚಮಿ .... ನಾಟಕ ಪ್ರದರ್ಶನ ನಡೀತಾ ಇದೆ. ಕಳೆದ ನಾಲ್ಕು ದಿನಗಳಿಂದ ರಂಗಾಸಕ್ತರಿಗೆ ಭರ್ಜರಿ ಔತಣ... ಮಂಡ್ಯದ ಜನದನಿ ಸಂಸ್ಥೆಯವರ ’ಘಾಷಿರಾಂ ಕೊತ್ವಾಲ್’ ಅಂತೂ ಜನರ ಮನ ಸೂರೆಗೊಂಡಿತು.ಬೆಂಗಳೂರಿನ ಕ್ರಿಯೇಟಿವ್ ಥಿಯೇಟರ್ ನವರು”ಹೀಗಾದ್ರೆ ಹೇಗೆ ’ಅನ್ನೋ ಹಾಸ್ಯಭರಿತ ನಾಟಕವನ್ನು ಅಭಿನಯಿಸಿದರು. ಶ್ರೀಮತಿ ಲಕ್ಷ್ಮೀ ಚಂದ್ರಶೇಖರ ರವರ ಅಮೋಘ ಅಭಿನಯ, ಕಿರುತೆರೆ ನಟ ಸುಂದರ್ ರವರ ನೈಜ ಅಬಿನಯ ನಾಟಕಕ್ಕೆ ಕಳೆಕಟ್ಟಿತ್ತು.
ಮೊನ್ನೆ ಬೆನಕ ತಂಡ ಬೆಂಗಳೂರು ಇವರಿಂದ ಬಿ.ಆರ್. ಲಕ್ಷ್ಮಣ್ ರಾವ್ ಅವರ ’ನಂಗ್ಯಾಕೋ ಡೌಟು” ನಾಟಕ ಪ್ರದರ್ಶಿತವಾಯ್ತು. ಕಿರುತೆರೆಯ ಅನೇಕ ಕಲಾವಿದರು ಅಭಿನಯಿಸಿದ್ದರು.
ನೆನ್ನೆ ಮಂಡ್ಯದ ಜನದನಿ ತಂಡ ’ಸುಲ್ತಾನ್ ಟಿಪ್ಪು’ ಎಂಬ ಐತಿಹಾಸಿಕ ನಾಟಕವನ್ನ ಪ್ರದರ್ಶನ ಮಾಡಿದರು. ಮಿಂಚು ಧಾರಾವಾಹಿಯ ಜಗದೀಶ್ ದಾಸ್ ..ಖ್ಯಾತಿಯ ಮಂಡ್ಯದ ರಂಗನಟ ರವಿಪ್ರಸಾದ್ ಟಿಪ್ಪು ಪಾತ್ರಕ್ಕೆ ಹೇಳಿಮಾಡಿಸಿದಂತಿದ್ದರು. ಇವತ್ತು ಮತ್ತೆ ’ಘಾಷಿರಾಂ ಕೊತ್ವಾಲ್’ ನಾಟಕದ ಮರುಪ್ರದರ್ಶನವಿದೆ. ಹೋಗಬೇಕು....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.