ನನಗನ್ನಿಸಿದ್ದನ್ನ ಹೇಳ್ತಿದ್ದೀನಿ... ಒಪ್ಪಿದರೆ ಒಪ್ಕೋ ...ಇಲ್ಲಾಂದ್ರೆ ಬಿಡು

4

ಯಾಕೋ ಗೊತ್ತಿಲ್ಲ, ಈ ವಿಚಾರ ಗೊತ್ತಾಗಿ ಇಷ್ಟು ದಿನಾಗಳಾದ್ರೂ ನನ್ನ ಮನಸಲ್ಲಿ ಬಂದ ಭಾವನೆಗಳನ್ನು ಹಂಚಿಕೊಳ್ಳದೆ , ನಿನ್ನೊಂದಿಗೆ ಹೇಳದೆ ಇರೋಕಾಗ್ತಿಲ್ಲ ನಂಗೆ . ಚಿತ್ರರಂಗಕ್ಕೆ ಮಾತ್ರವಲ್ಲ, ನಮ್ಮೆಲ್ಲರ ಮನೆಯ ಮಗಳಂತಿದ್ದವಳು ನೀನು... ಚಿತ್ರದಲ್ಲಿ ಪಾತ್ರ ಮಾಡುವವರ ಬಗ್ಗೆ ಯಾವತ್ತಿಗೂ ಜನಮಾನಸದಲ್ಲಿ ಒಂದು ತಾತ್ಸಾರದ ಭಾವನೆ ಇದ್ದಿರುತ್ತಾದರೂ ನಿನ್ನ ಬಗ್ಗೆ ಎಂದೂ ನಮಗೆ ಹಾಗೆ ಅನ್ನಿಸಲೇ ಇಲ್ಲ. ನಮ್ಮ ಮನೆಯ ಹುಡುಗಿ ಈಕೆ ಅಂತನ್ನಿಸುವ ಮಟ್ಟಿಗೆ ನಾವೆಲ್ಲಾ ನಿನ್ನ ಅಭಿಮಾನಿಗಳು, ನಿನ್ನನ್ನು ಮೆಚ್ಚಿಕೊಂಡುಬಿಟ್ಟಿದ್ದೆವು. ಚಿತ್ರರಂಗಕ್ಕೆ ಮೊದಮೊದಲು ಬಂದ ನೀನು ನಿನ್ನ ಹೆಸರನ್ನು ಬದಲಿಸಿಕೊಂಡು ಹೊಸ ಹೆಸರಿನ ಚಿತ್ರದಲ್ಲಿ ಪಾತ್ರ ಮಾಡಿದಾಗಿನಿಂದಲೂ ನಿನ್ನ ಅಪ್ಪಟ ಅಭಿಮಾನಿಯಾಗಿಟ್ಟೆ ನಾನು. ಅದೆಷ್ಟು ಚೆನ್ನಾಗಿ ಭಾವ ತುಂಬಿ ಅಭಿನಯಿಸ್ತಾ ಇದ್ದೆ ನೀನು ? ಪ್ರತೀ ಪಾತ್ರಗಳಲ್ಲಿ ತಲ್ಲೀನಳಾಗಿಬಿಡ್ತಿದ್ದೆ. ನಾವೆಲ್ಲ ನಿನಗೋಸ್ಕರವೇ, ನಿನ್ನ ಅಭಿನಯ ನೋಡ್ಲಿಕ್ಕೋಸ್ಕರವೇ ಚಿತ್ರಮಂದಿರಕ್ಕೆ ಬರ್ತಾ ಇದ್ದೆವು ಅಂದ್ರೂ ತಪ್ಪಲ್ಲ.. ಚಿತ್ರರಂಗದಲ್ಲಿ ಉಳಿಯೋ ತನಕ ಕೂಡಾ ಯಾವತ್ತೂ ಸಹ್ಯವಲ್ಲ ಅನ್ನಿಸೋ ಪಾತ್ರವನ್ನು ಮಾಡಲೇ ಇಲ್ಲ ನೀನು. ಅದೇ .. ಅದೇ... ನಮಗೆ ಮೆಚ್ಚುಗೆಯಾದದ್ದು. ನಾವು ನಿನ್ನನ್ನು ಒಬ್ಬ ನಟಿ ಅಂತ ನೋಡ್ಲಿಲ್ಲ. ಒಬ್ಬ ಅಭಿನೇತ್ರಿ ಅಂತ ಕಂಡೆವು. ಆರಾಧಿಸಿದೆವು. ನಿನ್ನ ಹುಟ್ಟುಹಬ್ಬದ ದಿನ ಪ್ರತೀ ವರ್ಷ ರೋಗಿಗಳಿಗೆ , ಅನಾಥರಿಗೆ, ನಿರ್ಗತಿಕರಿಗೆ ಹಣ್ಣು ಹಂಪಲು ಹಂಚಿದ್ದೆವು. ನಿನ್ನ ವಯಸ್ಸಿನಷ್ಟೇ ತೂಕದ ಕೇಕನ್ನು ನಾವೇ ಕತ್ತರಿಸಿ ಸಂಭ್ರಮಿಸಿದ್ದೆವು. ನಿನ್ನ ಮೇಲಿನ ನಮ್ಮ ಅಭಿಮಾನ ಕೇವಲ ಇಷ್ಟೇ ಆಗಿರಲಿಲ್ಲ. ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಸಂಘ ಅಂತ ಕಟ್ಟಿಕೊಳ್ಳದಿದ್ದರೂ ನಮ್ಮದೇ ತಾಣಗಳಲ್ಲಿ , ಫ್ಯಾನ್ ಕ್ಲಬ್ಬುಗಳನ್ನು, ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡೆವು. ಅಷ್ಟೇ ಯಾಕೆ, ಹೆಸರಾಂತ ನಿರ್ದೇಶಕರೂ, ನಿನ್ನದೇ ಚಿತ್ರಗಳಿಗೆ ನಿರ್ದೇಶನ ಮಾಡ್ತಾ ನಿನ್ನ ಕೈಯಲ್ಲಿ ಒಳ್ಳೆ ಒಳ್ಳೆಯ ಪಾತ್ರ ಮಾಡಿಸಿದಾತನೂ , ಸಜ್ಜನನೂ, ಸಭ್ಯನೂ ಆದ ಆತನನ್ನು ನೀನು ಮದುವೆಮಾಡಿಕೊಂಡೆ. ಆಗಲೂ ನಿನ್ನ ಸ್ಪಷ್ಟ ನಿರ್ಧಾರ ನೋಡಿ ನಮಗೆಲ್ಲ ಅತೀವ ಸಂತಸವಾಗಿತ್ತು. ಇಬ್ಬರೂ ಯಶಸ್ಸಿನ ಉತ್ತುಂಗದಲ್ಲಿದ್ದವರೇ. ಹೇಳಿ ಮಾಡಿಸಿದ ಜೋಡಿಯ ಹಾಗಿದ್ದಿರಿ. ಎಷ್ಟು ಚೆನ್ನಿತ್ತು ನಿಮ್ಮ ಸಂಸಾರ...ಮದುವೆಯಾದ ನಂತರ ಮಾಧ್ಯಮಗಳಲ್ಲಿ ನೀನು ಕೊಟ್ಟ ಮೊದಲ ಸಂದರ್ಶನವನ್ನು ಬೀದಿಯವರೆಲ್ಲ ಕುಳಿತು ನೋಡಿದ್ದೆವು. ಆಗಲೇ ನಮಗೆ ಗೊತ್ತಾಗಿದ್ದು. ನೀನು ಮತ್ತು ಆತನೂ ಮಾಧ್ಯಮದವರ ಕಣ್ಣು ತಪ್ಪಿಸಿಯೂ ಕೆಲ ವರ್ಷಗಳ ಹಿಂದಿನಿಂದಲೇ ಪ್ರೀತಿಸುತ್ತಿದ್ದಿರಿ ಅಂತ. ತಪ್ಪೇನಿರಲಿಲ್ಲ ಬಿಡು.. ನಿನ್ನಿಂದ ಅಂಥಾ ಭಾವುಕ ಪಾತ್ರಗಳನ್ನು ಮಾಡಿಸುವಾಗ, ನಿನ್ನ ಅಭಿನಯವನ್ನು ನೋಡುವಾಗ ಒಬ್ಬ ನಿರ್ದೇಶಕನಾಗಿ ಅವನಿಗೆ ನಿನ್ನ ಮೇಲೆ ಪ್ರೀತಿ ಹುಟ್ಟಿದ್ದು ಸಹಜವೇ ! ಹಾಗೆ ನೋಡಿದರೆ ಚಿತ್ರ ನೋಡಿದ ಮಾತ್ರಕ್ಕೇ ನಿನ್ನನ್ನು ನಾವಿಷ್ಟು ಪ್ರೀತಿಸುತ್ತೇವೆ ಅಂದ ಮೇಲೆ ! ಅಲ್ಲವೇ? ನಾವುಗಳೆಲ್ಲ ನೀನಂದ್ರೆ ಹೀಗೇ... ಅಂತ ನಮ್ಮ ಮನಸ್ಸುಗಳಲ್ಲಿ ಒಂದು ಚೌಕಟ್ಟಿನ ಚಿತ್ರವನ್ನು ಸ್ಥಾಪಿಸಿಕೊಂಡುಬಿಟ್ಟಿದ್ದೆವು.... ಈ ಘಟನೆ ಆಗುವವರೆಗೆ.........
ಇರಲಿ ವಿಷಯಕ್ಕೆ ಬರೋಣ.. ಇನ್ನು ಕಾಯಿಸುವುದು ಬೇಡ . ಅಲ್ಲಾ ... ಅಂತಾದ್ದೇನಾಗಿತ್ತೇ ನಿಂಗೇ ? ಅವನಿಗೆ ವಿಚ್ಛೇದನ ಕೊಡುವಂಥ ತೀರ್ಮಾನ. ನೀನೇ ಹೇಳಿಕೊಂಡ ಹಾಗೆ ಅವನೂ ನೀನೂ ಒಬ್ಬರನ್ನೊಬ್ಬರು ಅಷ್ಟೊಂದು ಪ್ರೀತಿ ಮಾಡಿದ್ರಿ ಅದೂ... ಸಾಕಷ್ಟು ಸಮಯ ! ಮದುವೆ... ತಿರುಗಾಟ... ಹನಿಮೂನು ಇವೆಲ್ಲಾ ಇನ್ನೇನು ಮುಗೀತು ಅನ್ನುವಷ್ಟರಲ್ಲಿ ನಿಮಗೊಬ್ಬ ಮುದ್ದಾದ ಪುಟ್ಟ ಮಗಳೂ ಹುಟ್ಟಿದಳು. ನೀನೂ... ನಿನ್ನ ಗಂಡ ...ನಿನ್ನ ಮಗಳು.. ಇದೇ ರಂಗದಲ್ಲಿ ವೃತ್ತಿಯಲ್ಲಿದ್ದ ನಿನ್ನ ತಂದೆ, ಇಬ್ಬರು ಅಮ್ಮಂದಿರು... ( ನಾವು ಯಾವ ಅಮ್ಮನ ಮಕ್ಕಳು ಅಂತ ತಿಳಿಯದ ಹಾಗೆ ಇಬ್ಬರೂ ನಮ್ಮನ್ನು ಬೆಳೆಸಿದ್ದರು ಅಂತ ನೀನೇ ಎಲ್ಲೋ ಒಂದೆಡೆ ಹೇಳಿದ್ದ ನೆನಪು.) ಇದೇ ವೃತ್ತಿಗೆ ಕಾಲಿರಿಸಿದ್ದ ನಿನ್ನ ತಮ್ಮ .. ದೊಡ್ಡ ಕುಟುಂಬದ ಪುಟ್ಟ ಮುತ್ತೈದೆ ನೀನು... ಯಾರಾದರೂ ಹೊಟ್ಟೆಕಿಚ್ಚುಪಡುವಷ್ಟು ಸುಖವಾಗಿತ್ತು ನಿನ್ನ ಸಂಸಾರ..
ಹ್ಮ್ಮ್.... ಬರೋಬ್ಬರಿ ಹತ್ತು ವರ್ಷ... ನೀನು ರಾಜಕೀಯಕ್ಕೆ ಬಂದು ಒಂದು ದೊಡ್ಡ ಪಕ್ಷದ ನಿಗಮ ಮಂಡಲಿಯಲ್ಲಿ ಅಧ್ಯಕ್ಷೆಯ ಗಾದಿಯಲ್ಲಿ ಕುಳಿತುಕೊಳ್ಳುವ ತನಕ.... ಆ ಹುದ್ದೆಯಾದರೂ ಎಂಥದ್ದು ? ಮಹಿಳೆಯರ ಅಭಿವೃದ್ಧಿಗಾಗಿ ನಿನಗೆ ಸಿಕ್ಕ ಅವಕಾಶ ! ಜವಾಬ್ದಾರಿ ದೊಡ್ಡದಿತ್ತು. ನಮಗೆ ನಂಬಿಕೆಯೂ ಇತ್ತು. ನೀನದನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಅಂತ.
ಆದರೆ ಮೊನ್ನೆ ಮೊನ್ನೆ ಮಾಧ್ಯಮಗಳಲ್ಲಿ ನೀನು ನಿನ್ನ ಗಂಡನಿಗೆ ವಿಚ್ಛೇದನ ಕೊಡ್ತಿದ್ದಿ ಅಂತ ತಿಳಿದ ಮೇಲೆ ಬೇಸರವಾಯ್ತು. ಜಗತ್ತಿನಲ್ಲಿ ನಡೆಯದ್ದೇನಲ್ಲಾ ಇದು . ಆದರೆ.... ಅಂಥಾ ತಪ್ಪೇನಾಗಿತ್ತು ಆತನಿಂದ . ನೀನೇ ಹೇಳಿದ ಪ್ರಕಾರ ಅವನಿಗೆ ಮಗಳ ಭವಿಷ್ಯಕ್ಕೆ ಕೊಡುವಷ್ಟು ಹಣವಿಲ್ಲ ಅಂತಾ... ಎಂಥಾ ವಿಪರ್ಯಾಸ ನೋಡು.. ಲಕ್ಷಗಟ್ಟಲೆ ದುಡಿಯುವಾಗ ಹುಟ್ಟಿದ ಪ್ರೀತಿ ಹಣವಿಲ್ಲ ಅಂದಾಗ ಮುಗಿದು ಹೋಯ್ತೆ ? ಹಾಗಾದರೆ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ? ಅಲ್ಲದೇ ಅವನು ನಿನ್ನ ಹೆಸರಿಗೆ ಮನೆ ಕೊಡಿಸಿದ್ದು .. ಜಮೀನು ಕೊಡಿಸಿದ್ದು ಎಲ್ಲವೂ ಸುಳ್ಳೇ? ಹೌದು , ಇತ್ತೀಚೆಗೆ ಅವನೂ ಕೂಡ ಚುನಾವಣೆಗೆ ನಿಂತು ಸೋತಿದ್ದನು. ಕಾಸು ಖರ್ಚಾಗಿದ್ದಿರಬಹುದು... ಕೈಯಲ್ಲಿ ಚಿತ್ರಗಳೂ ಕಡಿಮೆಯಾಗಿದ್ದವು. ಹಾಗಂತ ವಿಚ್ಛೇದನ ಕೊಡುವಂಥದ್ದೇನಿತ್ತು ? ನಿನಗೇ ಒಳ್ಳೆಯ ಸ್ಥಾನಮಾನ ಸಿಕ್ಕಿತ್ತಲ್ಲಾ... ! ನಿನ್ನ ಸಂಪಾದನೇನೆ ಚೆನ್ನಾಗಿತ್ತಲ್ಲಾ .. ನೀನೇ ಭರಿಸಬೇಕಿತ್ತು ಹಣವನ್ನ ಮಗಳ ಭವಿಷ್ಯಕ್ಕೆ !! ನೋಡು ಬಾ ಇಲ್ಲಿ ನಮ್ಮ ಹಳ್ಳಿ ಕಡೆ ಹೆಣ್ಣುಮಕ್ಕಳು ಇವತ್ತಿಗೂ ಕುಡುಕ ಗಂಡನ ಜೊತೆ... ಸೋಮಾರಿ ಗಂಡನ ಜೊತೆ...ಕೆಟ್ಟ ಗಂಡನ ಜೊತೆ... ದಿನಾ ರಾತ್ರಿ ಬಂದು ಹೊಡೆಯೋ ಗಂಡನ ಜೊತೆಸಂಸಾರ ಮಾಡ್ತಾ ... ಕೂಲಿ ನಾಲಿ ಮಾಡಿ ತನ್ನ ಗಂಡನನ್ನೇ ಹಿರೀಮಗನ ಹಾಗೆ ನೋಡಿಕೊಳ್ತಿದ್ದಾರೆ. ಕಟ್ಟಿದ್ದ ತಾಳಿಗೋಸ್ಕರ, ಹುಟ್ಟಿದ ಮಕ್ಕಳಿಗೋಸ್ಕರ, ಮೆಟ್ಟಿದ ಮನೆಗೋಸ್ಕರ ತಮ್ಮ ಇಡೀ ಜೀವಮಾನವನ್ನೇ ಬಲಿ ಕೊಟ್ಟು, ಕೊನೇ ಉಸಿರಿರುವ ತನಕ ಅಂಥವರ ಸಂಗಡ ಬಡಿದಾಡ್ತಾರೆ. ಅಂಥಾದ್ದಾಗಿತ್ತೇ ನಿಂಗೇ ? ಇಲ್ಲವಲ್ಲಾ ... ಚಿತ್ರಗಳಲ್ಲಿ ಬರೀ ತ್ಯಾಗಮಯೀ ಹೆಣ್ಣಿನ ಪಾತ್ರಗಳ್ನ ಮಾಡಿ ಶಿಳ್ಳೆ ಹಾಕಿಸಿಕೊಂಡ್ರೆ ಸಾಲದವ್ವಾ ! ನಿಜ ಜೀವನದಲ್ಲೂ ಒಂದಷ್ಟು ತ್ಯಾಗ ಮಾಡೋದನ್ನ ಕಲೀಬೇಕು. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರೋ ನೀನು ನಮ್ಮಂಥ ಅಭಿಮಾನಿಗಳಿಗೆ ಮಾದರಿಯಾಗಿರ್ಬೇಕು.. ಅದು ಬಿಟ್ಟು ಛೇ! ಅಲ್ಲಾ ಇನ್ನೊಂದ್ ವಿಷ್ಯ ನಿನ್ನನ್ನು ಕೇಳಬೇಕು ಅಂತಿದ್ದೆ ..ನೋಡು ಈ ಅಮ್ಮಂದಿರ ದಿನಕ್ಕೆ ನಿನ್ನ ಮಗಳು ನಿಂಗೆ ಶುಭಾಶಯ ಕೋರುವ ಹೊತ್ತಿಗೆ ಒಬ್ಬ ತಾಯಿಯಾಗಿ ಆಕೆಗೆ ಏನು ಉಡುಗೊರೆ ಕೊಡ್ತಾ ಇದ್ದೀ ? ಅವಳಪ್ಪನನ್ನ ಅವಳಿಂದ ದೂರ ಮಾಡ್ತಾ ಇರೋ ಉಡುಗೊರೆ . ಇದೇನಾ ? ಅವಳು ನಿನ್ನನ್ನ ಹೇಗೆ ಅಮ್ಮಾ ಅಂತ ಹಚ್ಚಿಕೊಂಡಿದ್ದಾಳೋ ಹಾಗೆ ಅವಳಪ್ಪನನ್ನೂ ಹಚ್ಚಿಕೊಂಡಿರ್ತಾಳೆ. ನೀನೇನೆ ತಂದುಕೊಟ್ರೂ ಕೊನೆಗೆ ( ಹೊಸಾ ಅಪ್ಪನನ್ನು ಕೊಟ್ರೂ ) ಏನೇ ಆಟಿಕೆಗಳನ್ನು ತಂದು ಮುಂದೆ ಇಟ್ರೂ ಅವಳ ಅಪ್ಪನ ಪ್ರೀತಿಯನ್ನ, ಆ ಸೆಳೆತವನ್ನ , ಆ ಬಾಂಧವ್ಯವನ್ನ ತಂದು ಕೊಡೋಕೆ ಸಾಧ್ಯವೇ? ಇವತ್ತಲ್ಲಾ ನಾಳೆ ಅವಳಿಗೆ ನಿನ್ನ ಬಗ್ಗೆ ಬೇಸರ ಹುಟ್ಟೊದಿಲ್ವೆ ? ಕಣ್ಣೆದುರಿದ್ದೂ ಅಪ್ಪನೊಂದಿಗೆ ದಿನ ಕಳೆಯಲಾಗದ ಆ ಮಗುವಿನ ದುರ್ದೈವಕ್ಕೆ ಏನೆನ್ನಬೇಕು ? ಇಷ್ಟಕ್ಕೂ ಆತನ ಬಗ್ಗೆ ನಿನ್ನ ಮಗಳಿಗೆ ಏನಂತ ದೂರು ಹೇಳೋಕೆ ಸಾಧ್ಯ ? ನನಗೆ ಆತ ಒಳ್ಳೆ ಗಂಡ ಅಲ್ಲ ಅದಕ್ಕೇ ನಿನಗೂ ಅವನು ಬೇಡ ಅಂತೀಯ ? ಸಂಬಂಧಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ತಿರೋದು ಇಂಥದ್ದೇ ಕಾರಣಗಳಿಗೆ . ಅಷ್ಟೆಲ್ಲಾ ಯಾಕೆ .. ನಿನ್ನ ಇಬ್ಬರು ಅಮ್ಮಂದಿರೂ ಇಷ್ಟೂ ವರ್ಷ ಒಬ್ಬನೇ ಪತಿಯ ಜೊತೆ ನೆಮ್ಮದಿಯ ಸಂಸಾರವನ್ನ ಅನ್ಯೋನ್ಯವಾಗಿ ಸಾಗಿಸ್ತಾ ಇಲ್ವೇನು ? ಅದಕ್ಕಿಂತ ಉದಾಹರಣೆ ಬೇಕೇನು ನಿಂಗೆ ? ನಿನ್ನ ಈ ದಿಟ್ಟ ? ನಿರ್ಧಾರ ಅವರಿಗೂ ಇಷ್ಟ ಆಗಿರಲಿಕ್ಕೆ ಸಾಧ್ಯವೇ ಇಲ್ಲ.
ಕೂತ್ಕೊಂಡು ನಿಧಾನವಾಗಿ ಯೋಚ್ನೆ ಮಾಡು ಅಂತ ಹೇಳೋಕು ಕಾಲ ಮೀರಿ ಹೋಗಿದೆ. ಎಲ್ಲಾ ಮುಗಿದು ಹೋದ ಮೇಲೆ ಏನು ತಾನೆ ಮಾಡೋಕೆ ಸಾಧ್ಯ ಹೇಳು . ಆತ ಯಾವತ್ತಿಗೂ ಒಬ್ಬ ಸಭ್ಯ ವ್ಯಕ್ತಿಯೇ . ನಿನ್ನ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿದ್ದವನು. ಮಾಧ್ಯಮದೆದುರು ಈ ವಿಷಯವನ್ನು ಹೇಳಿಕೊಳ್ಳಲಿಕ್ಕೂ ನಾಚಿಕೆಯಾಗಿ ಎಲ್ಲರಿಂದ, ಮಾಧ್ಯಮಗಳಿಂದ ದೂರವಿರಲು ಬಯಸಿದವನು. ಆದರೆ ನೀನು ಗಟ್ಟಿಗಿತ್ತಿ. ನಿನ್ನ ಧೈರ್ಯ ಅವನಿಗೆ ಬರದೇ ಹೋಯ್ತು ನೋಡು ! ಇಷ್ಟೆಲ್ಲಾ ಆಗಿದ್ರೂ ಧೈರ್ಯವಾಗಿ ಅದು ನನ್ನ ವೈಯಕ್ತಿಕ ವಿಷಯ ಅಂತ ಹೇಳಿ ಜಾರಿಕೊಳ್ಳೋಕೆ ನೋಡ್ತಾ ಇದ್ದೀ .. ಹಾಗೆ ನೋಡಿದರೆ ನಿನ್ನ ವೃತ್ತಿರಂಗದಲ್ಲಿ ಪ್ರತಿಯೊಂದು ಮೆಟ್ಟಿಲು ಏರಿ ನಿಂತಾಗಲೂ ನಾವು ಸಂಭ್ರಮ ಪಟ್ಟೆವಲ್ಲ... ನಮ್ಮ ಹುಟ್ಟಿದ ದಿನ ನೆನಪಿಲ್ಲದಿದ್ದರೂ ನಿನ್ನ ಬರ್ತ್ ಡೇಗೆ ಎಲ್ಲರೂ ಸೇರಿ ಸಂಭ್ರಮಿಸಿದೆವಲ್ಲಾ .. ಕುಣಿದು ಕುಪ್ಪಳಿಸಿದೆವಲ್ಲಾ .. ಅವತ್ತೂ ನೀನು ಹೇಳ್ಬೇಕಿತ್ತು ಇದು ನನ್ನ ವೈಯಕ್ತಿಕ ವಿಷಯ .. ನೀವು ಖುಷಿ ಪಡಬೇಡಿ ಅಂತ .. ಸರಿ ಬಿಡು ಎಷ್ಟು ಮಾತಾಡಿದರೂ ಪ್ರಯೋಜನವಿಲ್ಲ ಅಂತ ಗೊತ್ತಿದ್ದೂ ಮಾತ್ನಾಡ್ತಾ ಇದ್ದೇನೆ.
ಅಲ್ಲವ್ವಾ ...ಈ ಜೀವ ಎಷ್ಟು ದಿನ ಇರುತ್ತೋ ತಿಳೀದು . ನೀನು ಮಾಡಿದ ಕೆಲ್ಸದಿಂದ ಜನ ನಿನ್ನನ್ನ ಮೆಚ್ಚಿ ನೆನೆಯಬೇಕೆ ಹೊರತು ಯಾರೂ ದೂಷಿಸಬಾರದು ಅಲ್ಲವೇ ? ಯಾಕಿಷ್ಟೆಲ್ಲಾ ಹೇಳ್ತೀನಿ ಅಂದ್ರೆ ನಾವೆಲ್ಲಾ ನಿನ್ನ ಮೇಲೆ ಅಷ್ಟೊಂದು ಅಭಿಮಾನ ಇಟ್ಟಿದ್ವು.. ಎಲ್ಲಾ ನಟಿಯರೂ ಒಂದೇ ರೀತಿಯಾದರೂ ನೀನು ಮಾತ್ರ ಹಾಗಿರಲಿಕ್ಕಿಲ್ಲ ಅಂತ ಅಂದುಕೊಂಡಿದ್ದೆವು.
ಆದ್ರೂ ನಿನ್ನದೇ ವೃತ್ತಿರಂಗದಲ್ಲಿ ಮಕ್ಕಳೇ ಇಲ್ಲದಿದ್ರೂ ಅದೇ ಸಂಗಾತಿಗಳನ್ನ ಉಳಿಸಿಕೊಂಡು ಒಬ್ಬರಿಗೊಬ್ಬರು ನೆಮ್ಮದಿಯಾಗಿ ಸಂಸಾರ ಮಾಡ್ತಾ ಇರೋ ಅದೆಷ್ಟು ಜೋಡಿಗಳಿಲ್ಲ ? ಇರ್ಲಿ ಬಿಡು. ಅನ್ಸಿದ್ದು ಹೇಳಿದ್ದೀನಿ . ನನ್ನ ಹಾಗೆ ಎಷ್ಟೋ ಮಂದಿಗೂ ಅನ್ನಿಸಿರುತ್ತೆ . ಆದ್ರೆ ಅವರ್ಯಾರೂ ಹೇಳಲ್ಲ ಅಷ್ಟೆ. ಇಷ್ಟಕ್ಕೂ ನನ್ನ ಮಾತಿನಿಂದ ನಿಂಗೆ ಬೇಸರ ಆಗಿದ್ರೆ ಕ್ಷಮಿಸಿಬಿಡು.

ಇಂತಿ ನಿನ್ನ ಮಾಜಿ ಅಭಿಮಾನಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭವಾನಿ

ನಿಮ್ಮ ಅಭಿಪ್ರಾಯ ಹಾಗೂ ಅಭಿಲಾಷೆಗಳು ಒಬ್ಬ ಅಭಿಮಾನಿಯಾಗಿ ಸರಿಯಿದೆ. ನೀವು ನೋಡುತ್ತಿರುವುದು ಭಾರತೀಯ ಸಾಂಸ್ಕೃತಿಕ ಚೌಕಟ್ಟಿನಲ್ಲಿ, ಹಾಗಾಗಿ ಅದರ ನೋವು ಆ ವ್ಯಕ್ತಿಗಿಂತ ನಿಮಗೆ ಹೆಚ್ಚಿದೆ, ತಪ್ಪಿಲ್ಲ, ಕೆಲವು ಸಿನಿಮಾ ನಟನೆಗಳು ಹಾಗೂ ಅದರ ಪಾತ್ರಗಳಲ್ಲೇ ಒಬ್ಬ ವ್ಯಕ್ತಿಯ ಗುಣ ನಡತೆಗಳನ್ನು ಅರಿಯುವುದಾದರೆ, ಪ್ರತಿಯೊಬ್ಬರು ಆದರ್ಶ ಜೀವಿಗಳೇ, ಕೆಲವರು ಸಮಾಜ ಮುಖಿಯಾಗಿರುತ್ತಾರೆ ಅಷ್ಟೆ. ನನ್ನಲ್ಲಿ ಕೆಲವು ಸಾಮಾನ್ಯ ಪ್ರಶ್ನೆಗಳಿವೆ,.............
೧. ನೀವು ಹೇಳುವಂತೆ ಸಿನಿಮಾಗಳ ಪಾತ್ರ ಆಕೆಯ ಗುಣಗಳನ್ನು ತಿಳಿಸುತ್ತದೆಯೇ ?
೨. ಯಾವುದೋ ಮಹೋನ್ನತ ಹುದ್ದೆ ದೊರೆತ ತಕ್ಷಣ ವ್ಯಕ್ತಿಗಳು ಮಹೋನ್ನತರಾಗುತ್ತಾರೆಯೇ ?
೩. ಎಷ್ಟು ಸಂಸಾರದಲ್ಲಿ ಈ ಬಿರುಕುಗಳು ಎಲ್ಲರಿಗೂ ಗೊತ್ತಾಗುತ್ತದೆ ಹೇಳಿ ?
೪. ಹಿರಿಯ ಕಲಾವಿದೆಯೊಬ್ಬರೂ ತನ್ನ ನೋವುಗಳೆಲ್ಲವನ್ನೂ ತನ್ನ ಮಗನಿಗಾಗಿಯೇ ನುಂಗಿಕೊಂಡಾಗ ಯಾಕೆ ಪ್ರತಿಭಟಿಸಲಿಲ್ಲ ?
೫. ಮಗದೊಬ್ಬ ಹಿರಿಯ ಕಲಾವಿದೆಯೊಬ್ಬರು ಸಾಲು ಸಾಲು ಜನಕ್ಕೆ ದ್ರೋಹವೆಸಗಿ ದೂರದ ಅಮೇರಿಕಾಗೆ ಸೇರಿಕೊಂಡಾಗ ಯಾಕೆ ಪ್ರತಿಭಟಿಸಲಿಲ್ಲ ?

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿಯವರೆ,
ನಿಮ್ಮ ಮನದ ಕಕ್ಕುಲತೆಯ ಬಗ್ಗೆ ನನ್ನದೊಂದು ಕೈ ಜೋಡಣೆ...ನಿಮ್ಮ ಯೋಚನಾ ಲಹರಿ ಸರಿಯಾಗೆ ಇದೆ...ಈ ಪ್ರಶ್ನೆಗಳು ನನ್ನಲ್ಲು ಮೊಡಿದವು.....
ಹಾಗೆ ಅರವಿಂದರ ಪ್ರತಿಕ್ರಿಯೆಯು ಸರಿ ಎನಿಸಿತು....ಅವರವರ ಭಾವ,ಭವಿಷ್ಯ.................
ನನ್ನ ಯೋಚನೆ ಮಾತ್ರ ಪ್ರಪಂಚವನ್ನೆ ಸರಿಯಾಗಿ ಅರಿಯದ ಆ ಮುದ್ದು ಕಂದಮ್ಮನ ಮನಸಿಗಾಗುವ ಅಘಾತತದ ಬಗ್ಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಮಾಲತಿ.. ಎಲ್ಲವೂ .. ಎಲ್ಲರೂ ಸರಿಯಾಗಿದ್ದಾಗ ಇಡಿ ಸಮಾಜ ಸಂತೋಷಪಡುತ್ತೆ. ಆದರೆ ಅವರದೇ ವೈಯಕ್ತಿಕ ಜೀವನವಾದರೂ ಸಮಾಜದ ಎಲ್ಲ ಜನರೂ ಅದನ್ನು ತಮ್ಮದೇ ವೈಯಕ್ತಿಕ ನೆಲೆಯಲ್ಲಿ ಪ್ರಶ್ನಿಸುತ್ತಾರೆ.
ಇನ್ನು ಆ ಮುದ್ದು ಕಂದಮ್ಮ ???

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಬ್ಬ ಸೋದರಿ, ಸಂಬಂಧಿಕ ಅಥವಾ ಒಳ್ಳೆಯ ಗೆಳತಿ (ಗೆಳತಿ) ಹೇಳುವಂಥ ಮಾತುಗಳನ್ನು ನೀವು ಹೇಳಿದ್ದೀರಿ. ನಿಮ್ಮ ಕಳಕಳಿ ಅರ್ಥವಾಗುವಂಥದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ವಿನಯ್ , ನನ್ನ ಲೇಖನದ ಬಗೆಗಿನ ನಿಮ್ಮ ಕಳಕಳಿಗೆ ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<೧. ನೀವು ಹೇಳುವಂತೆ ಸಿನಿಮಾಗಳ ಪಾತ್ರ ಆಕೆಯ ಗುಣಗಳನ್ನು ತಿಳಿಸುತ್ತದೆಯೇ ?
೨. ಯಾವುದೋ ಮಹೋನ್ನತ ಹುದ್ದೆ ದೊರೆತ ತಕ್ಷಣ ವ್ಯಕ್ತಿಗಳು ಮಹೋನ್ನತರಾಗುತ್ತಾರೆಯೇ ?
೩. ಎಷ್ಟು ಸಂಸಾರದಲ್ಲಿ ಈ ಬಿರುಕುಗಳು ಎಲ್ಲರಿಗೂ ಗೊತ್ತಾಗುತ್ತದೆ ಹೇಳಿ ?
೪. ಹಿರಿಯ ಕಲಾವಿದೆಯೊಬ್ಬರೂ ತನ್ನ ನೋವುಗಳೆಲ್ಲವನ್ನೂ ತನ್ನ ಮಗನಿಗಾಗಿಯೇ ನುಂಗಿಕೊಂಡಾಗ ಯಾಕೆ ಪ್ರತಿಭಟಿಸಲಿಲ್ಲ ?
೫. ಮಗದೊಬ್ಬ ಹಿರಿಯ ಕಲಾವಿದೆಯೊಬ್ಬರು ಸಾಲು ಸಾಲು ಜನಕ್ಕೆ ದ್ರೋಹವೆಸಗಿ ದೂರದ ಅಮೇರಿಕಾಗೆ ಸೇರಿಕೊಂಡಾಗ ಯಾಕೆ ಪ್ರತಿಭಟಿಸಲಿಲ್ಲ >>
+++++++
ಅರವಿಂದ್ ಅಣ್ಣ ಸಿನಿಮಾ ಎಂಬುದು ನಮ್ಮಲ್ಲಿ ಕೇವಲ ಮನೋರಂಜನೆಯ ಮಾಧ್ಯಮವಾಗಿರದೇ ,ನಮ್ಮ ಬದುಕಿನ ಒಂದು ಭಾಗವಾಗಿ ಬಿಟ್ಟಿದೆ . ಅದಕ್ಕೆ ಕಾರಣ ಅಂಥ ಕಾಲವಿದರು ಹುಟ್ಟಿಬೆಳೆದ ನಾಡು ನಮ್ಮದು , ಹಾಗೆಯೇ ಸಾಮಾಜಿಕ ಬದುಕಿನ ಒಂದು ಮುಕ ಕೂಡ ಇದಾಗಿತ್ತು . ಹಾಗಾಗಿ ಜನ ಅವರ ಅಭಿನಯವನ್ನೇ ನಿಜ ಜೀವನಕ್ಕೆ ಹೋಲಿಸಿಕೊಂಡು ಬಿಡುತ್ತಾರೆ .ತಪ್ಪಲ್ಲ ಅದು .
ಹುದ್ದೆ ಬಂದ ತಕ್ಷಣ ವ್ಯಕ್ತಿ ಮಹೋನ್ನತ ಆಗುತ್ತಾರೆ ಅಂತ ಅಕ್ಕ ಎಲ್ಲೂ ಹೇಳಿಲ್ಲ , ಉತ್ತಮ ಅಂತ ನಮ್ಮ ಕಣ್ಣಿಗೆ ಕಾಣುವ ವ್ಯಕ್ತಿ ಗೆ ಒಂದು ಹುದ್ದೆ ಸಿಕ್ಕಾಗ ಅದಕ್ಕೆ ನ್ಯಾಯ ಒದಗಿಸಿಕೊಡ್ತ್ಹಾರೆನೋ ಅನ್ನೋ ಭಾವ ಬರೋದೇ ತಪ್ಪೇ ?
ನಮ್ಮ ಸಂಸಾರದಲ್ಲೇ ಆಗಿರಬಹುದು , ಹಾಗೆಂದ್ರ ಮಾತ್ರಕ್ಕೆ ಅದನ್ನ ಮುಕ್ತವಾಗಿ ಚರ್ಚೆ ಮಾಡ್ಬೇಕು ಅಂತ ಏನು ಇಲ್ಲ . ಹಾಗೆಯೇ ಸಮಾಜದಲ್ಲಿ ನಡಿಯೋ ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯಿಸಬೇಕು ಅಂತಾನು ಇಲ್ಲ . ಹಾಗ ಮಾಡ್ತಾ ಹೋದ್ರೆ ನಾವೇ ಸಮಾಜವಾಗಿಬಿಡ್ತಿವಿ.
ನಿಮ್ಮ ಉಳಿದೆರಡು ಪ್ರಶ್ನೆಗೆ ಮೇಲಿನೆ ಉತ್ತರಿಸಿದ್ದೇನೆ ಅಂದು ಕೊಳ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ , ನಿಮ್ಮ ಪ್ರಶ್ನೆಗಳಿಗೆ ವಿನಯನ ಉತ್ತರವೇ ಸಾಕು ಅಂದುಕೊಳ್ತೇನೆ. ಅಷ್ಟಾಗಿಯೂ ನಾನು ಕೇವಲ ನನ್ನೊಬ್ಬಳ ಅಭಿಪ್ರಾಯವನ್ನು ಮಾತ್ರವೇ ಇಲ್ಲಿ ಪ್ರಕಟಿಸಿಲ್ಲ. ನನ್ನದೇ ಸುತ್ತಮುತ್ತಲ ಜನರ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಬರೆದಿದ್ದೇನೆ. ಅಲ್ಲದೇ ನಾನಿದನ್ನು ನನ್ನ ಅಂಕಣ ಬರಹಕ್ಕೆಂದೇ ಸಿದ್ಧಪಡಿಸಿದ್ದು. ( ಸಂಕೀರ್ತನ ಪಾಕ್ಷಿಕದಲ್ಲಿ ಭಾವನೆಗಳ ಯಾನದಲ್ಲಿ ಅನ್ನುವ ಒಂದು ಅಂಕಣವನ್ನು ಒಂದು ವರ್ಷದಿಂದ ನಿರಂತರವಾಗಿ ಬರೀತಿದ್ದೇನೆ. ) ಇರಲಿ ನಿಮ್ಮ ಅಭಿಪ್ರಾಯಗಳು ನಿಮ್ಮ ದೃಷ್ಟಿಯಲ್ಲಿ , ನಿಮ್ಮದೇ ಮನಸ್ಥಿತಿಯ ಅನೇಕರ ದೃಷ್ಟಿಯಲ್ಲಿ ಸರಿ ಇದ್ದಿರಬಹುದು. ನಾನದನ್ನು ಅಲ್ಲವೆನ್ನಲಿಲ್ಲ. ನೀವು ಪಟ್ಟಿಮಾಡಿರುವ ಎಲ್ಲಾ ವಿಚಾರಗಳಲ್ಲೂ ತಲೆ ತೂರಿಸಿ ಮಾತನಾಡುವಷ್ಟು ಪ್ರಾಗ್ನಳಲ್ಲ ನಾನು . ಅಷ್ಟಾಗಿಯೂ ಇಡೀ ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ಸಮಾಜೋದ್ಧಾರಕಿಯೂ ಅಲ್ಲ. ಒಬ್ಬ ಸಾಮಾನ್ಯ ಹೆಣ್ಣಾಗಿ ... ಬರಹಗಾರ್ತಿಯಾಗಿ ಸುತ್ತಮುತ್ತಲ ಸಮಾಜದ ಅಭಿಪ್ರಾಯಗಳನ್ನು ನನ್ನ ಅಕ್ಷರಗಳಲ್ಲಿ ನೀಡಿದ್ದೇನೆ. ನಾನು ಆತನ ಅಭಿಮಾನಿಯೂ ಅಲ್ಲ. ಅಥವಾ ಆಕೆಯ ದ್ವೇಷಿಯೂ ಅಲ್ಲ. ಉತ್ತರ ಸಿಕ್ಕಿದೆ ಅಂದುಕೊಂಡಿದ್ದೇನೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಣ್ಣು ಒಂದು ಪರಿಮಿತಿಯಲ್ಲಿ ಇದ್ದರೆ ಮಾತ್ರ ಆಕೆಗೆ ಬೆಲೆ,
ಬರಿ ದುಡ್ಡಿಗಾಗೆ ಮದುವೆ ಮಾಡಿಕೊಳ್ಳುತ್ತಿರುವೆ ಎಂದು ಮಾಧ್ಯಮಗಳಲ್ಲಿ ಡಂಗುರ ಭಾರಿಸುತಾಳಲ್ಲ ಅವಳ ನಾಚಿಕೆ ಮಾನ ಮರ್ಯಾದೆ ಎಲ್ಲ ಸಿನೆಮಾದಲ್ಲಿ ತೋರ್ಸಿ ಖಾಲಿಯಾಗಿರಬಹುದೇ?!

-- ಶಶಿ ಬಿರ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದು ಆಕೆ ಹೇಳಿದ ದುಡ್ಡಿನ ಕಾರಣದಿ೦ದಾಗಿ ಆಕೆಯ ವ್ಯಕ್ತಿತ್ವವನ್ನೇ ಪ್ರಶ್ನಿಸುತ್ತಿದ್ದೀರಲ್ಲ, ವರದಕ್ಷಿಣೆಯ ಎಷ್ಟು ಸಾವುಗಳು ನಮ್ಮ ಸಮಾಜದಲ್ಲಿ ಇ೦ದಿಗೂ ನಡೆಯುತ್ತಿಲ್ಲ? ಗ೦ಡನ ಮನೆಯವರೆಲ್ಲರ ಸೇವೆಯ ಜೊತೆಗೆ ಹಣವನ್ನೂ ಕೊಡಬೇಕು. ಇಲ್ಲಿ ಎಲ್ಲಿವೆ ಭಾವನೆಗಳು, ನಾಚಿಕೆ ಮಾನ ಮರ್ಯಾದೆಗಳು? ಮನೆಯ 'ಮರ್ಯಾದೆಗಾಗಿ' ಎಲ್ಲರ ಹಿ೦ಸೆಯನ್ನು ಮೂಕಳಾಗಿ ಸಹಿಸಿಕೊಳ್ಳಬೇಕು. ಇದೆಲ್ಲಿಯ ನ್ಯಾಯ? ಹೆಣ್ಣಿಗೆ ಪರಿಮಿತಿಯನ್ನು ವಿಧಿಸುವ ಮೊದಲು ಆಕೆಯನ್ನು ಮನುಷ್ಯಳಾಗಿ ನಡೆಸಿಕೊಳ್ಳುವುದನ್ನು ಕಲಿಯಬೇಕಿದೆ.
ಈಕೆಯಾದರೂ ತನ್ನ ನಿರ್ಧಾರವನ್ನು ಧೈರ್ಯದಿ೦ದ ತೆಗೆದುಕೊ೦ಡಿದ್ದಾಳೆ. ಏನೋ ಸಿಕ್ಕಿದ ಕಾರಣ ಹೇಳಿದ್ದಾಳೆ. ಹೇಳಲಾಗದ ಎಷ್ಟು ನೋವು ಅವಳಲ್ಲಿದೆಯೋ? ೧೦ ವರ್ಷದ ಸಾಂಸಾರಿಕ ಜೀವನ ಹಾಗೂ ಮಗಳನ್ನು ಬಿಟ್ಟು ಹೊರನಡೆಯುವುದು ಆಕೆಗೂ ಸುಲಭದ ನಿರ್ಧಾರವಾಗಿರಕ್ಕಿಲ್ಲ. ಒಮ್ಮೆ ಅವಳ ಸ್ಥಾನದಲ್ಲಿಯೂ ನಿ೦ತು ನೋಡಬೇಕಾಗುತ್ತದೆ. ಇಷ್ಟಕ್ಕೂ ಅದು ಅವಳ ವೈಯಕ್ತಿಕ ನಿರ್ಧಾರ. ಕಲಾವಿದರ ಕಲೆಯಷ್ಟೇ ನಮ್ಮದು. ಅವರ ವೈಯಕ್ತಿಕ ಜೀವನ ನಮ್ಮದಲ್ಲ. ಅದೂ ಹೌದು ಎನ್ನುವುದಾದರೆ, ಅವರ ಕಷ್ಟ ಸುಖಗಳೆಲ್ಲದರಲ್ಲೂ ನಾವೂ ಭಾಗಿಗಳಾಗಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಇ೦ದು ಆಕೆ ಹೇಳಿದ ದುಡ್ಡಿನ ಕಾರಣದಿ೦ದಾಗಿ ಆಕೆಯ ವ್ಯಕ್ತಿತ್ವವನ್ನೇ ಪ್ರಶ್ನಿಸುತ್ತಿದ್ದೀರಲ್ಲ, ವರದಕ್ಷಿಣೆಯ ಎಷ್ಟು ಸಾವುಗಳು ನಮ್ಮ ಸಮಾಜದಲ್ಲಿ ಇ೦ದಿಗೂ ನಡೆಯುತ್ತಿಲ್ಲ? ಗ೦ಡನ ಮನೆಯವರೆಲ್ಲರ ಸೇವೆಯ ಜೊತೆಗೆ ಹಣವನ್ನೂ ಕೊಡಬೇಕು. ಇಲ್ಲಿ ಎಲ್ಲಿವೆ ಭಾವನೆಗಳು, ನಾಚಿಕೆ ಮಾನ ಮರ್ಯಾದೆಗಳು? ಮನೆಯ 'ಮರ್ಯಾದೆಗಾಗಿ' ಎಲ್ಲರ ಹಿ೦ಸೆಯನ್ನು ಮೂಕಳಾಗಿ ಸಹಿಸಿಕೊಳ್ಳಬೇಕು. ಇದೆಲ್ಲಿಯ ನ್ಯಾಯ? ಹೆಣ್ಣಿಗೆ ಪರಿಮಿತಿಯನ್ನು ವಿಧಿಸುವ ಮೊದಲು ಆಕೆಯನ್ನು ಮನುಷ್ಯಳಾಗಿ ನಡೆಸಿಕೊಳ್ಳುವುದನ್ನು ಕಲಿಯಬೇಕಿದೆ.
ಈಕೆಯಾದರೂ ತನ್ನ ನಿರ್ಧಾರವನ್ನು ಧೈರ್ಯದಿ೦ದ ತೆಗೆದುಕೊ೦ಡಿದ್ದಾಳೆ. ಏನೋ ಸಿಕ್ಕಿದ ಕಾರಣ ಹೇಳಿದ್ದಾಳೆ. ಹೇಳಲಾಗದ ಎಷ್ಟು ನೋವು ಅವಳಲ್ಲಿದೆಯೋ? ೧೦ ವರ್ಷದ ಸಾಂಸಾರಿಕ ಜೀವನ ಹಾಗೂ ಮಗಳನ್ನು ಬಿಟ್ಟು ಹೊರನಡೆಯುವುದು ಆಕೆಗೂ ಸುಲಭದ ನಿರ್ಧಾರವಾಗಿರಕ್ಕಿಲ್ಲ. ಒಮ್ಮೆ ಅವಳ ಸ್ಥಾನದಲ್ಲಿಯೂ ನಿ೦ತು ನೋಡಬೇಕಾಗುತ್ತದೆ. ಇಷ್ಟಕ್ಕೂ ಅದು ಅವಳ ವೈಯಕ್ತಿಕ ನಿರ್ಧಾರ. ಕಲಾವಿದರ ಕಲೆಯಷ್ಟೇ ನಮ್ಮದು. ಅವರ ವೈಯಕ್ತಿಕ ಜೀವನ ನಮ್ಮದಲ್ಲ. ಅದೂ ಹೌದು ಎನ್ನುವುದಾದರೆ, ಅವರ ಕಷ್ಟ ಸುಖಗಳೆಲ್ಲದರಲ್ಲೂ ನಾವೂ ಭಾಗಿಗಳಾಗಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು.>>
+++++++++++
ನೀವು ತಪ್ಪು ತಿಳಿದು ಕೊಂಡಿದ್ದಿರಿ ವಿನುತಕ್ಕ , ಇಲ್ಲ ಭವಾನಿ ಅಕ್ಕ ಆಕೆಯ ವ್ಯಕ್ತಿತ್ವವನ್ನು ಪ್ರಶ್ನಿಸಿಲ್ಲ . ವ್ಯಕ್ತಿ ಯಾವಾಗ ದ್ವಿಮುಕ ಹೊಂದುತ್ತಾನೋ ಅವಾಗಲೇ ಈ ರೀತಿಯ ಸಮಸ್ಯೆ ಗಳು ಹುಟ್ಟಿಕೊಳ್ಳುವುದು .ಇದು ಆಕೆಯ ವೈಯಕ್ತಿಕ , ನಿಜವಾಗಿ ಅದರ ಬಗ್ಗೆ ನಾವು ಚರ್ಚಿಸಲು ಬಾರದು .
ನೀನೆ ನನ್ನ ಅರ್ಧಾಂಗ , ನೀನಿಲ್ಲದೆ ನನ್ನಿಲ್ಲ . ಜೀವನದ ಕಷ್ಟ ಸುಖಗಳಲ್ಲಿ ನಿನ್ನದೆಷ್ಟೋ ನನ್ನದು ಅಷ್ಟೇ ಎಂದು ಹೊಸಲು ತುಳಿದು ಬಂದವಳು , ಸುಖವಿದ್ದಾಗ ಜೊತೆ , ಕಷ್ಟ ಬಂದಾಕ್ಷಣ ದೂರ ಸರಿಯುವುದು ಎಷ್ಟು ಸರಿ .ಅಷ್ಟಕ್ಕೂ ಒಂದು ವಿದ್ಯಾಬ್ಯಾಸ ಕೊಡಿಸದಷ್ಟು ಪಾಪರ್ ಆಗಿರಲಿಲ್ಲ ಅವನು . ನನ್ನ ಮಗನಿಗೆ /ಳಿಗೆ ನಿಮ್ಮಿಂದ ಏನು ಮಾಡಲು ಆಗುವುದಿಲ್ಲ ಅಂದು ಕೊಂಡಿದ್ದಾರೆ ನಮ್ ಅಪ್ಪ ಅಮ್ಮ ಯಾವಾಗಲೋ ಬೇರೆ ಆಗಬೇಕಿತ್ತು .
ನಿಮ್ಮ ಮಾತೆ ಒಪ್ಪುತ್ತೇನೆ ಬೇರೆ ಯಾವುದೊ ನೋವಿಗೆ ಈ ಕಾರಣ ಕೊಟ್ಟಿದ್ದಾಳೆ ಅಂತ . ಅದು ನಿಜವೇ ಆಗಿದ್ದರೆ ಬೇರೆ ಬದುಕಬೇಕೆ ಹೊರತು , ಇನ್ನೊಬ್ಬರಿಂದ ಕಸಿದುಕೊಂಡ ಬೇರೆಯವರ ಜೊತೆಗಲ್ಲ ಅಲ್ಲವೇ ?

ಅವರ ವೈಯಕ್ತಿಕ ವಿಚಾರ ವೈಯಕ್ತಿಕವಾಗೆ ಇದ್ದಿದ್ರೆ ನಾವು ಇಷ್ಟು ಚರ್ಚಿಸುವ ಅವಶ್ಯಕತೆಯೂ ಇರುತ್ತಿರಲಿಲ್ಲ ,ನೀವು ಅವರ ಸುಖ ದುಃಖದಲ್ಲಿ ಭಾಗಿ ಆಗಿ ಅಂತ ಹೇಳುತ್ತಿರಲಿಲ್ಲ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಉತ್ತರ ಶಶಿಕಾ೦ತ ಅವರ ಮಾತುಗಳಿಗಾಗಿತ್ತು ವಿನಯ್. <<ಹೆಣ್ಣು ಒಂದು ಪರಿಮಿತಿಯಲ್ಲಿ ಇದ್ದರೆ ಮಾತ್ರ ಆಕೆಗೆ ಬೆಲೆ,
ಬರಿ ದುಡ್ಡಿಗಾಗೆ ಮದುವೆ ಮಾಡಿಕೊಳ್ಳುತ್ತಿರುವೆ ಎಂದು ಮಾಧ್ಯಮಗಳಲ್ಲಿ ಡಂಗುರ ಭಾರಿಸುತಾಳಲ್ಲ ಅವಳ ನಾಚಿಕೆ ಮಾನ ಮರ್ಯಾದೆ ಎಲ್ಲ ಸಿನೆಮಾದಲ್ಲಿ ತೋರ್ಸಿ ಖಾಲಿಯಾಗಿರಬಹುದೇ?! >> ನನಗೇನೋ ಇದೊ೦ದು ಅಸ೦ಭದ್ಧ ಪ್ರಲಾಪ ಅನಿಸಿತು. ಗ೦ಡಿನ ಎಲ್ಲ ದೌರ್ಜನ್ಯಗಳನ್ನು ಮೂಕವಾಗಿ ಸಹಿಸಿಕೊಳ್ಳುವ ಅಗತ್ಯ ಹೆಣ್ಣಿಗಿಲ್ಲ. ಭವಾನಿಯವರ ಮಗುವಿನ ಕುರಿತಾದ ಕಾಳಜಿ ನನಗೆ ಅರ್ಥವಾಗುತ್ತದೆ. ಆದರೆ ಪೂರ್ವಾಪರಗಳ ಸ೦ಪೂರ್ಣ ಅರಿವಿಲ್ಲದೆ ಆಕೆಯ ನಿರ್ಧಾರ ತಪ್ಪು ಎನ್ನುವ ಅಧಿಕಾರ ನಮಗ್ಯಾರಿಗೂ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇನೇ ಇರಲಿ ಮನೆಯ ೪ ಗೋಡೆಗಳ ನಡುವೆ ಇರಬೇಕಾದ್ದು , ೪ ಜನರ ಬಾಯಿಗೆ ಬಂದದ್ದು ತಪ್ಪು .
ಲೇಕನ ಏಕ ಮುಕವಾಗಿದೆ ಅನ್ನೋ ಮಾತು ಕೆಲವರದು .ಕಾರಣ ಪ್ರತಿಕ್ರಿಯೆಯು ಒಂದೇ ಕಡೆ ಇಂದ ನಿರಂತರವಾಗಿ ಬರ್ತಾ ಇರೋದು. ಆ ಕಡೆ ಇರುವ ಮೌನ ,ಈ ಕಡೆ ಇಂದಲೂ ಇದ್ದಿದ್ದರೆ ಬಹುಶಃ ನಾವಿಷ್ಟು ಚರ್ಚಿಸ ಬೇಕಾಗುತ್ತಿರಲಿಲ್ಲ ಅನ್ನಿಸುತ್ತೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನಾಕೆಯ ವ್ಯಕ್ತಿತ್ವವನ್ನೆಲ್ಲೂ ಪ್ರಶ್ನಿಸಿಲ್ಲ.. ಹಾಗೆ ಪರಿಮಿತಿಯನ್ನೂ ವಿಧಿಸಿಲ್ಲ.. ಒಂದು ಮಾತು ವಿನುತಾ... ಆತ ಕೂಡ ಇವಳ ಹಾಗೆ ಮಾತನಾಡಿದ್ದರೆ ಅದು ಬೇರೆ ವಿಷಯ . ಒಬ್ಬ ವ್ಯಕ್ತಿಗೆ ಯಾರದೇ ಬೆಂಬಲ ಸಿಕ್ಕಾಗ ಮಾತ್ರ ಅವಳು ಮುನ್ನುಗ್ಗುವ ಧೈರ್ಯ ತೋರುತ್ತಾಳೆಂಬುದನ್ನು ಎಲ್ಲರೂ ತಿಳಿದಿದ್ದಾರೆ. ಇವಳ ಒಂದು ನಿರ್ಧಾರ ಎರಡು ಸಂಸಾರವನ್ನ ಬಲಿ ತೆಗೆದುಕೊಂಡ ಕಾರಣ ಇದು ಒಂದು ಮಾಧ್ಯಮಗಳಲ್ಲಿ ದೊಡ್ಡ ವಿಷಯವಾಯಿತು.
ಇಷ್ಟಕ್ಕೂ ಅದು ಅವಳ ವೈಯಕ್ತಿಕ ನಿರ್ಧಾರ.>>>> ನಾನಲ್ಲವೆಂದೆನೇ ?
<<ಕಲಾವಿದರ ಕಲೆಯಷ್ಟೇ ನಮ್ಮದು. ಅವರ ವೈಯಕ್ತಿಕ ಜೀವನ ನಮ್ಮದಲ್ಲ. ಅದೂ ಹೌದು ಎನ್ನುವುದಾದರೆ, ಅವರ ಕಷ್ಟ ಸುಖಗಳೆಲ್ಲದರಲ್ಲೂ ನಾವೂ ಭಾಗಿಗಳಾಗಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು.>>>
ಹೌದು ಆದರೆ ಎಲ್ಲ ಕಲೆ , ಮನೋರಂಜನೆ ಎಲ್ಲವುಗಳ ಹಿಂದೆ ಒಂದು ಸಂದೇಶವಿರುತ್ತದೆಂಬುದನ್ನೂ ( ಅಥವಾ ಇರಬೇಕೆಂದು ಸಮಾಜ ಬಯಸುತ್ತದೆಂಬುದನ್ನೂ ) ಮರೆಯಬಾರದು .. ಅಲ್ಲವೇ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಹೆಣ್ಣು ಒಂದು ಪರಿಮಿತಿಯಲ್ಲಿ ಇದ್ದರೆ ಮಾತ್ರ ಆಕೆಗೆ ಬೆಲೆ,
ಬರಿ ದುಡ್ಡಿಗಾಗೆ ಮದುವೆ ಮಾಡಿಕೊಳ್ಳುತ್ತಿರುವೆ ಎಂದು ಮಾಧ್ಯಮಗಳಲ್ಲಿ ಡಂಗುರ ಭಾರಿಸುತಾಳಲ್ಲ ಅವಳ ನಾಚಿಕೆ ಮಾನ ಮರ್ಯಾದೆ ಎಲ್ಲ ಸಿನೆಮಾದಲ್ಲಿ ತೋರ್ಸಿ ಖಾಲಿಯಾಗಿರಬಹುದೇ?!>>
++++++
ಇದು ಒಪ್ಪೋ ಮಾತಲ್ಲ ಶಶಿ ಅಣ್ಣ .
ಹೆಣ್ಣಿಗೆ ಪರಿಮಿತಿ ಹಾಕಲು ನೀವ್ಯಾರು ಅಥವಾ ನಾನ್ಯಾರು .ಅವಳಿಗೊಂದು ಪರಧಿ ಕೊಟ್ಟು ಅದರಿಂದ ಹೊರ ಬಂದರೆ ನೀನು ಸರಿಯಿಲ್ಲ ಅಂತ ಪಟ್ಟ ಕಟ್ಟೋ ನಮಗೆ ಮೊದಲು ನಮ್ಮ ಪರಧಿ ಏನು ಅಂತ ಅರಿತುಕೊಳ್ಳೋ ವ್ಯವಧಾನವಿರಬೇಕು .
ಈ ರೀತಿ ಒಬ್ಬರ ಮಾನ ಮರ್ಯಾದೆ ಬಗ್ಗೆ ಮಾತಾಡೋ ಹಕ್ಕು ನಮಗಿಲ್ಲ ಅನ್ಸುತ್ತೆ ಶಶಿ ಅಣ್ಣ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಶಿ , ಆಕೆ ದುಡ್ಡಿಗಾಗಿ ಮದುವೆ ಮಾಡಿಕೊಳ್ತಿದ್ದೀನಿ ಅಂತ ಹೇಳದಿದ್ದರೂ ಈತನ ಮುಂದೆ ಅವನ ಗುಣಗಳು ನಿಕೃಷ್ಟ ಅಂತ ಅರ್ಥ ಬರುವ ಹಾಗೆ ಸಂದರ್ಶನದಲ್ಲಿ ಹೇಳಿದ್ದಾಳೆ. ಇನ್ನು ಮಾನ ... ಮರ್ಯಾದೆ ?? ಅದರ ಬಗ್ಗೆ ನಾನೇನೂ ಹೇಳಲು ಇಚ್ಚಿಸುವುದಿಲ್ಲ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಘಟನೆಗಳಿಗೆ ಏಕ ಪಕ್ಷೀಯವಾಗಿ ಪ್ರತಿಕ್ರಿಯಿಸಿದರೆ ಆಗೋ ಅವಾಂತರ ಇದು.
ಸುಮ್ಮನೇ ಒಂದು ಘಂಟೆ ವ್ಯರ್ಥ ಮಾಡಿದಿರಿ ಭವಾನೀ.
ಅವರವರ ಜೀವನದಲ್ಲಿನ ಆಗು ಹೋಗುಗಳಿಗೆ ಅವರವರೇ ಜವಾಬ್ದಾರರು.
ಆಕೆ ಏನು ಕಷ್ಟ ಇತ್ತೋ ಯಾರಿಗೆ ಗೊತ್ತು. ಕಷ್ಟ ಇಲ್ಲಾಂದ್ರೂ ಆಕೆಗೆ ಖುಷಿ ಇದೆ ಇದರಲ್ಲಿ ಅಂತಾದ ಮೇಲೆ ನಮಗೇನ್ರೀ ಕಷ್ಟ.
ಪತಿ ಪತ್ನಿ ಇಬ್ಬರೂ ಒಪ್ಪಿ ವಿಚ್ಚೇದನ ಪಡೆಯುತ್ತಿರುವಾಗ, ನಾವ್ಯಾಕೆ ಸ್ಪಂದಿಸಬೇಕು ಅವರ ಖಾಸಗಿ ಜೀವನಕ್ಕೆ.
ಇತ್ತೆಚೆಗೆ ಒಬ್ಬ ಚಿತ್ರ ನಟಿ ರಾಜಕೀಯ ನಾಯಕನನ್ನು ಬಲೆಗೆ ಹಾಕಿಕೊಂಡಾಗ ನೀವು ಯಾಕೆ ಪ್ರತಿಕ್ರಿಯಿಸಿಲ್ಲ?
ಆಕೆ ಲಂಡನಿಗೆ ಹೋಗಿ ಆತನ ಮಗುವನ್ನು ಹಡೆದು ಬಂದಾಗ ಯಾಕೆ ಸುಮ್ಮನಿದ್ದಿರಿ?
ಆ ರಾಜಕೀಯ ನಾಯಕನ ಮೊದಲ ಪತ್ನಿಯೇ ಈ ಎರಡನೇ ಮದುವೆ ಮಾಡಿಸಿದಳೆಂಬ ಸುದ್ದಿ ಬಿತ್ತರವಾದಾಗ ನೀವು ಯಾಕೆ ಸುಮ್ಮನಿದ್ದಿರಿ? ಆತ ಮತ್ತು ಆತನ ಪತ್ನಿ ಈರ್ವರೂ ಸಾರ್ವಜನಿಕ ರಂಗದಲ್ಲಿ ಇರುವವರು. ಜನ ಪ್ರತಿನಿಧಿಗಳು. ಅವರಿಗೆ ಇಲ್ಲದ ಸಾಮಾಜಿಕ ಜವಾಬ್ದಾರಿ ನಿಮ್ಮ ನಾಯಕಿಗೆ ಮಾತ್ರ ಏಕಿರಬೇಕು? ಸುಮ್ಮನೇ ವ್ಯರ್ಥ ಈ ಸಂವಾದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀವನದಲ್ಲಿ ಕಷ್ಟ ಸುಖಗಳು ನಿರಂತರ. ಪರಸ್ಪರ ಅರ್ಥೈಸಿಕೊಂಡು ಹೋದಲ್ಲಿ ಸುಲಲಿತ ಇಲ್ಲವಾದ್ದರೇ ಈ ಥರಾ.....
ಮನಸ್ಸುಗಳ "ಮಿಲನ"ವೇ ವಿವಾಹಕ್ಕೊಂದು ಅರ್ಥ ಕೊಡಬಲ್ಲದು. ಆಧುನಿಕ ಜೀವನ ಶೈಲಿಯಲ್ಲಿ ಜೀವನದ ಮೌಲ್ಯವನ್ನೇ ಕಳೆದುಕೊಳ್ಳುತ್ತಿದ್ದೇವೆ ಎನಿಸುವುದಿಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ತಿಪ್ಪೇಸ್ವಾಮಿ ಅವರೇ ... ನಿಜಕ್ಕೂ ಇವತ್ತಿನ ಸಮಾಜದಲ್ಲಿ ಸಂಬಧಗಳ ಮೌಲ್ಯ ಹಳಸುತ್ತಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<<<<ಘಟನೆಗಳಿಗೆ ಏಕ ಪಕ್ಷೀಯವಾಗಿ ಪ್ರತಿಕ್ರಿಯಿಸಿದರೆ ಆಗೋ ಅವಾಂತರ ಇದು.
ಸುಮ್ಮನೇ ಒಂದು ಘಂಟೆ ವ್ಯರ್ಥ ಮಾಡಿದಿರಿ ಭವಾನೀ.
ಅವರವರ ಜೀವನದಲ್ಲಿನ ಆಗು ಹೋಗುಗಳಿಗೆ ಅವರವರೇ ಜವಾಬ್ದಾರರು.
ಆಕೆ ಏನು ಕಷ್ಟ ಇತ್ತೋ ಯಾರಿಗೆ ಗೊತ್ತು. ಕಷ್ಟ ಇಲ್ಲಾಂದ್ರೂ ಆಕೆಗೆ ಖುಷಿ ಇದೆ ಇದರಲ್ಲಿ ಅಂತಾದ ಮೇಲೆ ನಮಗೇನ್ರೀ ಕಷ್ಟ.
ಪತಿ ಪತ್ನಿ ಇಬ್ಬರೂ ಒಪ್ಪಿ ವಿಚ್ಚೇದನ ಪಡೆಯುತ್ತಿರುವಾಗ, ನಾವ್ಯಾಕೆ ಸ್ಪಂದಿಸಬೇಕು ಅವರ ಖಾಸಗಿ ಜೀವನಕ್ಕೆ.
ಇತ್ತೆಚೆಗೆ ಒಬ್ಬ ಚಿತ್ರ ನಟಿ ರಾಜಕೀಯ ನಾಯಕನನ್ನು ಬಲೆಗೆ ಹಾಕಿಕೊಂಡಾಗ ನೀವು ಯಾಕೆ ಪ್ರತಿಕ್ರಿಯಿಸಿಲ್ಲ?
ಆಕೆ ಲಂಡನಿಗೆ ಹೋಗಿ ಆತನ ಮಗುವನ್ನು ಹಡೆದು ಬಂದಾಗ ಯಾಕೆ ಸುಮ್ಮನಿದ್ದಿರಿ?
ಆ ರಾಜಕೀಯ ನಾಯಕನ ಮೊದಲ ಪತ್ನಿಯೇ ಈ ಎರಡನೇ ಮದುವೆ ಮಾಡಿಸಿದಳೆಂಬ ಸುದ್ದಿ ಬಿತ್ತರವಾದಾಗ ನೀವು ಯಾಕೆ ಸುಮ್ಮನಿದ್ದಿರಿ? ಆತ ಮತ್ತು ಆತನ ಪತ್ನಿ ಈರ್ವರೂ ಸಾರ್ವಜನಿಕ ರಂಗದಲ್ಲಿ ಇರುವವರು. ಜನ ಪ್ರತಿನಿಧಿಗಳು. ಅವರಿಗೆ ಇಲ್ಲದ ಸಾಮಾಜಿಕ ಜವಾಬ್ದಾರಿ ನಿಮ್ಮ ನಾಯಕಿಗೆ ಮಾತ್ರ ಏಕಿರಬೇಕು? ಸುಮ್ಮನೇ ವ್ಯರ್ಥ ಈ ಸಂವಾದ.>>>>>>>>>>>>>>>>>
+++++++++++
ಆಸು ಸರ್ ನಿಮ್ಮ ಕೆಲವು ಪ್ರಶ್ನೆ ಗಳಿಗೆ ನಾನಾಗಲೆ ಉತ್ತರಿಸಿದ್ದೇನೆ .
ಈಗ ಮುಖ್ಯ ವಿಷಯಕ್ಕೆ ಬರೋಣ , ಹೌದಲ್ಲವೇ ಯೋಚಿಸಿಯೇ ಇರಲಿಲ್ಲ ಅವರ ವೈಯಕ್ತಿಕ ವಿಚಾರ ನಮಗೇಕೆ .
ಬೆಳಗ್ಗಿನಿಂದ ದುಡಿದು ಸುಸ್ತಾಗಿ ಬಂದು ಒಂದು ಕಪ್ ಕಾಫಿ ಹೀರುತ್ತ ಪ್ರಸಕ್ತ ವಿಷಯಗಳ ಬಗ್ಗೆ ತಿಳಿಯೋಣ ಅಂತ ಟಿ ವಿ ಹಾಕಿದ್ರೆ ಬಂತಲ್ಲ ಇವರ 'ವೈಯಕ್ತಿಕ' ವಿಷಯ .
ಹಾಳುಬಡಿದು ಹೋಗ್ಲಿ ಈ ಪೇಪರ್ ಅಲ್ಲಿ ಏನ್ ಬರ್ದಿದಾರೆ ಅಂತ ಅತ್ತ ಕಡೆ ಕಣ್ಣಾಯಿಸಿದರೆ ಮತ್ ಅಲ್ಲಿ ಇವರದೇ ' ವೈಯಕ್ತಿಕ ' ವಿಷಯ .
ತುತ್ ಅರಿಕಿ ಅಂತ ಬೆಳಗಾಗೆದ್ದು ಗಡಿಬಿಡಿಯಲ್ಲಿ ಓಡಿ ಬಂದು ಬಸ್ ಹತ್ತಿ ಕೂತಿದ್ರೆ , ಹಿಂದೆ ಕುತೊರಿಂದ ಮತ್ತದೇ ಚರ್ಚೆ ಇವರ 'ವೈಯಕ್ತಿಕ' ವಿಷಯದ ಬಗ್ಗೆ .

ಅಂದ ಮೇಲೆ ನಮಗ್ಯಾಕೆ ಬೇಕಲ್ಲವೇ ಇವರ "ವೈಯಕ್ತಿಕ" ವಿಷಯ .
:D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ,

ನಿಮ್ಮದು ನನ್ನ ಅನಿಸಿಕೆಗಳಿಗೆ ಸಹಮತವೋ ಅಲ್ಲಾ ಭಿನ್ನ ಮತವೋ...?
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸುಮ್ಮನೇ ವ್ಯರ್ಥ ಈ ಸಂವಾದ.>>
ನಕ್ಕು ನಲಿಯಲು ಬೇಕು ಅವರದೇ ವಿಷಯ
ಕಾಲೆಳೆಯಲು ಬೇಕು ಅವರದೇ ವಿಷಯ
ಸಂವಾದ ಬಂದಾಗ ಮಾತ್ರ ಅದು ಅವರ ವೈಯಕ್ತಿಕ .
<<ನಿಮ್ಮದು ನನ್ನ ಅನಿಸಿಕೆಗಳಿಗೆ ಸಹಮತವೋ ಅಲ್ಲಾ ಭಿನ್ನ ಮತವೋ...?>>
ನಾನು ನನ್ನ ಅನಿಸಿಕೆ ಹೇಳಿದ್ದಲ್ಲ , ವಾಸ್ತವ ಅಷ್ಟೇ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನ್ನಿಸಿದ್ದನ್ನ ಹೇಳಿಬಿಟ್ಟಿರಿ ಅದರೆ ನೀವೂ ಒಬ್ಬ ಹೆಣ್ಣಾಗಿ ಆಕೆ ಬಗ್ಗೆ ಸ್ವಲ್ಪ ಕನಿಕರವಿದ್ದಿದ್ದರೆ ಚೆನ್ನಾಗಿರುತಿತ್ತು.ಕಾರಣ ಏನೇ ಇದ್ದರು ಆಕೆ ಪ್ರೀತಿ ಬದಲಾದ ಹಾಗೆನೇ ನಿಮ್ಮ ಅಭಿಮಾನ ಬದಲಾದುದು ನಿಜ ಅಲ್ವಾ? ಒಬ್ಬ ನಟಿಯಾದ ಕಾರಣಕ್ಕೆ ಆಕೆ ತನ್ನ ನಿರ್ಧಾರವನ್ನ ತೆಗೆದುಕೊಳ್ಳುವ ಅವಕಾಶ ಇರಬಾರದೇ? ಆಕೆ ಅಭಿಮಾನಿಯಾಗಿ ನೀವು ನಿಮ್ಮ ಅಭಿಪ್ರಾಯವನ್ನ ತಿಳಿಸಿದ್ದರಲ್ಲಿ ತಪ್ಪಿಲ್ಲ.ಆದರೆ ... ????

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಣ್ಣಾಗಿದ್ದಕ್ಕೆ ನಾನು ಹೆಣ್ಣಿನ ಪರವೇ ಮಾತನಾಡಬೇಕೆಂದು ನೀವ್ಯಾಕೆ ತೀರ್ಮಾನಿಸಿದಿರಿ.. ? ಮಂಜು ಅವರೇ ..ನೀವು ನನ್ನ "ಭಾವನೆಗಳ ಯಾನದಲ್ಲಿ " ಅನ್ನುವ ಲೇಖನ ಮಾಲೆಯನ್ನು ಒಮ್ಮೆ ಓದಬೇಕು .. ಕೇವಲ ಹೆಣ್ಣಿನ ಹಿತಚಿಂತನೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬರೆದಿದ್ದೇನೆ. <<ಒಬ್ಬ ನಟಿಯಾದ ಕಾರಣಕ್ಕೆ ಆಕೆ ತನ್ನ ನಿರ್ಧಾರವನ್ನ ತೆಗೆದುಕೊಳ್ಳುವ ಅವಕಾಶ ಇರಬಾರದೇ?>>>
ಆಕೆಗೆ ಅವಕಾಶ ಇರಬಾರದು ಅಂತ ನಾನು ಹೇಳಿಲ್ಲ. ಇತ್ತೀಚೆಗೆ ಈ ನಟಿಯರಿಗೊಂದು ಚಟ ಶುರುವಾಗಿಬಿಟ್ಟಿದೆ. ದೂರದೇಶಗೆ ಮದುವೆಯಾಗೋದು . ಸರಿಯಿಲ್ಲ ಅಂತ ಬಿಟ್ಟು ಬರೋದು . ಇಲ್ಲಿಯ ಯಾರನ್ನಾದರೂ ಮದುವೆಯಾಗೋದು .. . ಎಷ್ಟು ಉದಾಹರಣೆಗಳಿಲ್ಲ ಅಂಥವು ? ಹೇಳಿ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಅವರೇ... ನಿಮ್ಮಿಂದ ಈ ಮಾತೇ ?
ಸದಾ ಸಮಾಜದ ಓರೆಕೋರೆಗಳತ್ತ ದೃಷ್ಟಿ ಹಾಯಿಸಿ ಹತ್ತಾರು ಸಾಲುಗಳಲ್ಲಿ ವ್ಯಂಗ್ಯವಾಗಿ ಅದನ್ನು ಬಿಂಬಿಸುವುದರಲ್ಲಿ ಎತ್ತಿದ ಕೈ ನಿಮ್ಮದು ! :) ಅಂಥಾದ್ದರಲ್ಲಿ .... !!! ಇರಲಿ .. ಎಲ್ಲರ ಜೀವನದಲ್ಲೂ ಅವರವರೇ ಜವಾಬ್ದಾರರು ಅಂತ ಸುಮ್ಮನೆ ಕುಳಿತಿದ್ದರೆ ಅವನನ್ನು ಮನುಷ್ಯ ಅಂತ ಏಕಾದರೂ ಅನ್ನಬೇಕು.. ಅವಳ ಸುತ್ತಲಿನ ಜನ ಅವಳಿಗೆ ಬುದ್ಧಿ ಹೇಳಿದ್ದರೆ .. ಒಂದುಗೂಡಿಸಿದ್ದರೆ ಎರಡು ಸಂಸಾರ ಚೆನ್ನಾಗಿರುತ್ತಿತ್ತು.
<<<ಇತ್ತೆಚೆಗೆ ಒಬ್ಬ ಚಿತ್ರ ನಟಿ ರಾಜಕೀಯ ನಾಯಕನನ್ನು ಬಲೆಗೆ ಹಾಕಿಕೊಂಡಾಗ ನೀವು ಯಾಕೆ ಪ್ರತಿಕ್ರಿಯಿಸಿಲ್ಲ?
ಆಕೆ ಲಂಡನಿಗೆ ಹೋಗಿ ಆತನ ಮಗುವನ್ನು ಹಡೆದು ಬಂದಾಗ ಯಾಕೆ ಸುಮ್ಮನಿದ್ದಿರಿ?
ಆ ರಾಜಕೀಯ ನಾಯಕನ ಮೊದಲ ಪತ್ನಿಯೇ ಈ ಎರಡನೇ ಮದುವೆ ಮಾಡಿಸಿದಳೆಂಬ ಸುದ್ದಿ ಬಿತ್ತರವಾದಾಗ ನೀವು ಯಾಕೆ ಸುಮ್ಮನಿದ್ದಿರಿ? >> ಹಾಗಂತ ಅವರೇ ಖುದ್ದಾಗಿ ಸಂದರ್ಶನ ನೀಡಿದ್ದರೇನು ?
ಗಾಳಿಸುದ್ಧಿಯೇ ಬೇರೆ... ಕಣ್ಣೆದುರು ನಡೆವ ವಿಷಯವೇ ಬೇರೆ... ಸಾಮಾಜಿಕ ಜವಾಬ್ದಾರಿ ನಮಗೆ, ನಿಮಗೆ .. ಈ ಸಮಾಜದಲ್ಲಿ ಎಲ್ಲರೊಳಗೊಂದಾಗಿ ಬದುಕುವ ಎಲ್ಲರಿಗೂ ಇರಬೇಕು .. ಏನಂತೀರಿ ?
<<ಸುಮ್ಮನೇ ಒಂದು ಘಂಟೆ ವ್ಯರ್ಥ ಮಾಡಿದಿರಿ ಭವಾನೀ.>> ನಿಮ್ಮ ಪ್ರತಿಕ್ರಿಯೆಗೆ ಛೇ ! ಹತ್ತು ನಿಮಿಷ ನಿಮಗೆ ವ್ಯರ್ಥವಾಗಲಿಲ್ಲವೇ ?? :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಆಕೆಯನ್ನು ಸಾರಾಸಗಟಾಗಿ ದೂರಿದ್ದರೆ, "ನೀವು ಗಂಡಸರೇ ಹೀಗೆ. ಮಹಿಳಾ ದೇಷಿಗಳು. ಮಹಿಳೆಯರ ಶೋಷಣೆ ಮಾಡ್ತೀರಿ" ಅಂತ ಭಾಷಣ ಬಿಗೀಲಿಕ್ಕೆ ಶುರುಮಾಡ್ತಿದ್ರು ಜನರೆಲ್ಲಾ. ಈಗ ಆಕೆಯ ಸಮಸ್ಯೆಯನ್ನೂ ಅರಿತುಕೊಳ್ಳಬೇಕಿತ್ತು ನಾವು, ಅಂತ ಹೇಳಿದ್ರೆ ಅದೂ ತಪ್ಪಾಯ್ತೇ?
ಸರಿ ಬಿಡಿ. ಒಂದು ಹೆಣ್ಣು ವಿಚ್ಚೇದನಕ್ಕೆ ತಯಾರಾಗುವುದು, ಗಂಡು ತಯಾರಾದಷ್ಟು ಸುಲಭವಾಗಿಯಲ್ಲ, ಅಂತ ನನ್ನ ಅನಿಸಿಕೆ.

>>ಹಾಗಂತ ಅವರೇ ಖುದ್ದಾಗಿ ಸಂದರ್ಶನ ನೀಡಿದ್ದರೇನು ?
ಗಾಳಿಸುದ್ಧಿಯೇ ಬೇರೆ... ಕಣ್ಣೆದುರು ನಡೆವ ವಿಷಯವೇ ಬೇರೆ... ಸಾಮಾಜಿಕ ಜವಾಬ್ದಾರಿ ನಮಗೆ, ನಿಮಗೆ .. ಈ ಸಮಾಜದಲ್ಲಿ ಎಲ್ಲರೊಳಗೊಂದಾಗಿ ಬದುಕುವ ಎಲ್ಲರಿಗೂ ಇರಬೇಕು .. ಏನಂತೀರಿ ?<<

ಹೂಂ...ಅಂತೀನಿ. ಉಹೂಂ ...ಅನ್ನೋಲ್ಲಾ...

<<ಸುಮ್ಮನೇ ಒಂದು ಘಂಟೆ ವ್ಯರ್ಥ ಮಾಡಿದಿರಿ ಭವಾನೀ.>> ನಿಮ್ಮ ಪ್ರತಿಕ್ರಿಯೆಗೆ ಛೇ ! ಹತ್ತು ನಿಮಿಷ ನಿಮಗೆ ವ್ಯರ್ಥವಾಗಲಿಲ್ಲವೇ ??

ಆಯ್ತು. ಏನು ಮಾಡೋಣ. ನೀವೂ ಸಂಪದಿಗಿತ್ತಿ ತಾನೇ, ನಮ್ಮವರೇ ಆದ ನಿಮಗಾಗಿ ಹತ್ತು ನುಮಿಷ ವ್ಯರ್ಥವಾದರೆ ಅದೇನೂ ಮಹಾ ಅಲ್ಲ ಬಿಡಿ.

ನನ್ನ ನಷ್ಟದ ಚಿಂತೆಯಿಲ್ಲರೀ ನನಗೆ
ನಷ್ಟವಾಗದಿರಲಿ ಎಂದಿಗೂ ನಿಮಗೆ

:-D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿ,
ಹೆಸರು ಹೇಳದೆ ಕಥೆಯನ್ನು ಎಷ್ಟು ಸಲೀಸಾಗಿ ಓದುವಂತೆ ಮಾಡಿದೆಯಮ್ಮಾ? ನಿನ್ನಂತಹ ಒಬ್ಬ ಹೆಣ್ಣ ಮುಂದೆ ನಿಮ್ಮ ಕಥಾನಾಯಕಿಯರಂತೋರು ನೂರುಜನರನ್ನು ನೀವಳಿಸಿ ಬಿಸಾಕು. ಅಬ್ಭಾ! ನಮ್ಮ ಸಂಸ್ಕೃತಿ-ಪರಂಪರೆಯಬಗ್ಗೆ ನಿನ್ನ ಹೃದಯಾಂತರಾಳದ ಶ್ರಧ್ಧೆಯು ನನ್ನನ್ನು ಮೂಕನನ್ನಾಗಿಸಿತು. ಇದು ಶೃತಿಯೊಬ್ಬಳಿಗೆ ನೀನು ಹೇಳಿರುವ ಮಾತಲ್ಲ, ತನ್ಮೂಲಕ ಇಡೀ ಸಮಾಜಕ್ಕೆ ಒಂದು ಆದರ್ಶದ ಮಾತುಗಳನ್ನಾಡಿದ್ದೀ. ಇಂತಹಾ ಸತ್ಯವನ್ನು ಹೇಳಲು ಧೈರ್ಯ ಬೇಕು, ಎಲ್ಲರೂ ಹೇಳಲು ಸಾಧ್ಯವಿಲ್ಲ. ಅಂದು ನಾನು ಚಕ್ರವ್ಯೂಹದಲ್ಲಿ ಶೃತಿಯಾಡಿದ ಒಂದು ಮಾತು ಕೇಳಿದೆ" ಜನರು ನಾನು ಮಾಡಿದಂತೆ ಮಾಡಬೇಕಿಲ್ಲ" ಎಂಬ ಅಪ್ಪಣೆ ಕೊಟ್ಟು ಬಿಟ್ಟಳು. ಈ ಟಿ.ವಿ ಯ ಹಮೀದ್ ಸರಿಯಾಗಿ ಜಾಡಿಸಿದರು.
ಇಂತಹಾ ಸಿನೆಮಾ ತಾರೆಯರ ಆದರ್ಶ ಬೇಕೆ? ಸೀತೆ ಸಾವಿತ್ರಿಯರಂತಾ ಆದರ್ಶ ಹೆಣ್ಣುಗಳನ್ನು ಕಂಡ ತಾಯಿ ಭಾರತಿಯ ಈ ಮಣ್ಣಿನಲ್ಲಿ ಬೇರೆ ಯಾವ ಆದರ್ಶ ಬೇಕು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶ್ರೀಧರಣ್ಣಾ ... ಹೆಸರಲ್ಲೇನಿದೆ ? ಅಂತ ನೀವೇ ಹೇಳಿಲ್ಲವೇ ? :) ಸಂಸ್ಕೃತಿ-ಪರಂಪರೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕು.. ಆಧುನೀಕತೆಯ ಹೆಸರಿನಲ್ಲಿ ನಾವು ಮಾಡಿದ್ದೆಲ್ಲವೂ ಸರಿ ಅನ್ನುವ ಭಾವನೆ ಖಂಡಿತಾ ತಪ್ಪಲ್ಲವೇ ? ಆದರ್ಶಯುತ ಜೀವನವನ್ನ ನಡೆಸುವವರಿಂದ ಒಂದು ಸಮಾಜ ಅವರ ಚಿಂತನೆಗಳನ್ನು ಸ್ವೀಕರಿಸದೇ ಇದ್ದಿದ್ದರೆ ಇವತ್ತು ನಮ್ಮ ದೇಶ ಗಾಂಧಿ, ಬುದ್ಧ, ಪರಮಹಂಸ , ವಿವೇಕಾನಂದ , ಅಷ್ಟೆ ಯಾಕೆ ಸಮಾಜ ಸುಧಾರಕರನ್ನ ... ಅಂಥವರನ್ನೆಲ್ಲಾ ನೆನಪಲ್ಲೇಕೆ ಇಟ್ಟುಕೊಳ್ಳಬೇಕು ? ಇಡಿ ಮಾಧ್ಯಮ ಈ ಬೆಳವಣಿಗೆಯನ್ನ ಖಂಡಿಸದಿದ್ದಿದ್ದರೆ ಈ ಬಗ್ಗೆ ನಾನೂ ಮಾತನಾಡುತ್ತಿರಲಿಲ್ಲ. ಎಲ್ಲರಿಗೂ ಅವರವರ ಭಾವಕ್ಕೆ ಅವರವರ ಭಕುತಿಗೆ.. ಹಾಗೆ ನನಗೂ .. ಅಲ್ಲವೇ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ತಮ್ಮ ಚಾರಿತ್ರ್ಯವನ್ನು ಕಾಪಾಡಿಕೊಳ್ಳಬೇಕೆ೦ದು ಬಯಸುವುದು ಬಹುತೇಕ ನಮ್ಮಲ್ಲಿ ಸಹಜವೂ ಅಥವಾ ಅವರು ಒ೦ದು ಮಾದರಿಯಾಗಬೇಕಾದ ಅಗತ್ಯವಿರುತ್ತದೆ ಎ೦ದು ಬಲವಾಗಿ ಭಾವಿಸಿ ನ೦ಬಿರುತ್ತೇವೆ. ಖಾಸಗಿ ವಿಷಯವಾದರೂ ಒ೦ದು ತಾತ್ವಿಕತೆಯ ಕೋನದಲ್ಲಿ ಅದು ತಪ್ಪು ಎ೦ದು ಅರ್ಥವಾಗುವ ಸ೦ಭವವೂ ಉ೦ಟು. ಆದರೆ ಮನುಷ್ಯನ ವೈಯುಕ್ತಿಕವಾದ ಬದುಕು ಅದರ ಪ್ರೇಮ ರಾಗ ದ್ವೇಷ, ನಿಗೂಢ ಆಳ ನಿರಾಳಗಳು ಒಮ್ಮೊಮ್ಮೆ ಎಲ್ಲ ಸಾಮಾಜಿಕ ಹೊಣೆಗಾರಿಕೆತನವನ್ನೂ, ಸ೦ಪ್ರದಾಯವನ್ನೂ ಹೊಸಕಿಹಾಕುವುದೂ ಮನುಕುಲದ ಒ೦ದು ನಿಗೂಢ ಸ೦ಗತಿ. ಒಮ್ಮೊಮ್ಮೆ ಅದು ಅನಿವಾರ್ಯವೋ ಎ೦ದೂ ಸಹ ಅನಿಸದೇ ಹೋಗಲಾರದು. ಅ೦ತ್ಯದಲ್ಲಿ ತನ್ನ ಭಾವನೆಗಳು ಅದು ಆಳದ್ದೋ ಅಥವಾ ಮೇಲ್ಮೈಯದ್ದೋ ಗೆಲುವನ್ನು ಸಾಧಿಸುತ್ತವೆ. ಇದು ಬದುಕನ್ನು ಸಮಗ್ರವಾಗಿ ಅರ್ಥಮಾಡಿಕೊಳ್ಳದವರ ಅಥವಾ ಆ ದೆಸೆಯಲ್ಲಿ ಸಹನೆಯಿಲ್ಲದವರ ದುರ೦ತ ಕಥೆಯೆ೦ದೇ ನನಗನ್ನಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೇ.. ನೀವು ಕೂಡಾ ಪ್ರತಿಕ್ರಿಯೆ ನೀಡಿದ್ದು ಸಂತೋಷವಾಯ್ತು.. ನಾನಿಲ್ಲಿ ಹೇಳಹೊರಟಿದ್ದೂ ಸಹ ಅದನ್ನೇ.. ಇಷ್ಟೆಲ್ಲಾ ಮಾತನಾಡುವ ನಾವು ನಮ್ಮ ಮನೆಗಳಲ್ಲೇ ಇಂಥ ಘಟನೆಗಳು ನಡೆವಾಗ .. ಸರಿಯಮ್ಮ ನಿನ್ನಿಷ್ಟ ನಿನ್ನ ನೋವು ಏನಿತ್ತೋ ಏನೋ ... ವಿಚ್ಚೇದನ ಕೊಟ್ಟುಬಿಡು ಅಂದುಬಿಡುತ್ತೇವಾ.. ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಇದು ಅತಿಯಾಯಿತೇನೊ ಅನಿಸ್ತಿದೆ..
ಕಲಾವಿದ/ದೆ ಯ ಕಲೆ ಕಲಾಭಿವ್ಯಕ್ತಿ ಆದರ್ಶವಾಗಬಹುದೇ ಹೊರತು ಕಲಾವಿದ/ದೆ ಯಾವತ್ತಿಗೂ ಆದರ್ಶ ಜೀವಿಯಾಗಲು ಸಾದ್ಯವೇ ಇಲ್ಲಾ.. ಆ ರೀತಿಯ ಜೀವನ ನಡೆಸಲು ಅಪೇಕ್ಷಿಸಲೂ ಬಾರದು... ಈ ಲೇಖನ ನಿಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಬಲವಂತವಾಗಿ ಹೇರಿದಂತಾಗಿದೆ.. ನಿಮ್ಮ ಉದ್ದೇಶದಲ್ಲಿ ಅವರಿಗೆ ಎಷ್ಟೇ ಕಷ್ಟಗಳಿದ್ದರೂ ಅದನ್ನು ಸಹಿಸಿಕೊಂಡು ಜೀವನ ಪೂರ್ತಿ ನರಳ್ತಾನೆ ಇರ್ಬೇಕು ಅನ್ನೋ ರೀತಿಯಲ್ಲಿದೆ.. ಹಾಗಾದರೆ ಅವರಿಗೆ ಇದರಿಂದ ಯಾವಾಗ ಮುಕ್ತಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶೀರ್ಷಿಕೆಯಲ್ಲಿ ನಾನೇ ಹೇಳಿದ್ದೀನಿ ಒಪ್ಕೊಂಡ್ರೆ ಒಪ್ಕೋ ಬಿಟ್ರೆ ಬಿಡು ಅಂತ .., ಹಾಗಾದ ಮೇಲೆ ಬಲವಂತ ಏನಲ್ಲಿ ?? <<ನಿಮ್ಮ ಉದ್ದೇಶದಲ್ಲಿ ಅವರಿಗೆ ಎಷ್ಟೇ ಕಷ್ಟಗಳಿದ್ದರೂ ಅದನ್ನು ಸಹಿಸಿಕೊಂಡು ಜೀವನ ಪೂರ್ತಿ ನರಳ್ತಾನೆ ಇರ್ಬೇಕು ಅನ್ನೋ ರೀತಿಯಲ್ಲಿದೆ.. ಹಾಗಾದರೆ ಅವರಿಗೆ ಇದರಿಂದ ಯಾವಾಗ ಮುಕ್ತಿ...>>ಖಂಡಿತಾ ಅಲ್ಲ... ಆದರೆ ತುಂಬಾ ಸಿಲ್ಲಿ ಕಾರಣಗಳಿಗೆ ಸಂಬಧಗಲನ್ನ ಕಡಿದುಕೊಳ್ಳೋದು ತಪ್ಪು ಅಂದೆ ಅಷ್ಟೆ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮಸ್ಯೆಗಳು ಎಲ್ಲರ ಮನೆಯಲ್ಲೂ ಇರುವುದು.
ಹೆಚ್ಚಿನ ಹೆಣ್ಣುಮಕ್ಕಳಿಗೆ ತಮ್ಮ ಮನೆ ಕಷ್ಟವನ್ನು ಇನ್ನೊಬ್ಬರ ಬಳಿ ಹೇಳಿಕೊಂಡಾಗ ಸಮಾಧಾನ.ಪಾಪ, ಸಲಹೆ ಕೇಳಿ ಬಲೆಗೆ ಬಿದ್ದಿರಬಹುದು. ಪತಿ, ಪತ್ನಿಗಿಂತ ಆ 'ವೋ'ನ ಮೇಲೆ ಒಂದು ಪ್ಯಾರಾ ಆದರೂ ಬೈಯಬೇಕಿತ್ತು.
ಏನೇ ಹೇಳಿ,
ಮದುವೆಯಾಗಿ,ಮಕ್ಕಳಾಗಿದ್ದರೂ ತಮ್ಮ ಗಂಡನ ಮೇಲೆ ಒಂದು ಕಣ್ಣಿಟ್ಟಿರಬೇಕು. ಆತ ಇನ್ನೊಂದು ಹೆಣ್ಣಿನ ಬಗ್ಗೆ 'ಅಯ್ಯೋಪಾಪ' ಅಂದರೆ ಡಬಲ್ ಕನ್ನಡಕ ಹಾಕ್ಕೊಂಡು ನೋಡಬೇಕು.
'ಇಲ್ರೀ ನಮ್ಮೆಜಮಾನರು ಶ್ರೀರಾಮಚಂದ್ರ..'ಎನ್ನುವವರಿಗೆ- ರಾಮ ಸರಿ, ಚಂದ್ರನನ್ನು ನಂಬಬಹುದೋ?
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಸರಿ .. ಆದರೆ ಯರನ್ನೂ ಬೈಯ್ಯಬೇಕೆಂಬುದೇ ನನ್ನ ಉದ್ದೇಶವಾಗಿರಲಿಲ್ಲ ಗಣೇಶರೇ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿಯವರೆ,
ಯೋಚನಲಹರಿ ತುಂಬಾ ಚೆನ್ನಾಗಿ ಮೊಡಿಬಂದಿದೆ.
ತಾಳ್ಮೆ, ಕ್ಷಮಯಾಧರಿತ್ರಿ, ವಾತ್ಸಲ್ಯಮಯಿ,ಪ್ರೇಮ ಮಯಿ, ತ್ಯಾಗಮಯಿ ಇದೆಲ್ಲ ಹೆಣ್ಣೆಗಿರುವ ಇನ್ನೊಂದು ಹೆಸರು.......ಅದೆ ನಮ್ಮ ಭಾರತದ ಸಂಸ್ಕೃತಿಯಲ್ಲವೆ........ಅದಕ್ಕೆ ಅಲ್ಲವೆ ನಮ್ಮ ದೇಶಕ್ಕೆ ಅಷ್ಟೊಂದು ಗೌರವವಿರುವುದು.......ನನ್ನ್ ಪ್ರಕಾರ ಪತಿ ಪತ್ನಿ ಅಂದ ಮೇಲೆ ಸರಸ ವಿರಸ ಸಾಮಾನ್ಯ....ಅದರಲ್ಲು ಮೆಚ್ಚಿ ಮೊದುವೆಯಾದರೆ ಇನ್ನು ಹೆಚ್ಚೆ. ಹೆಣ್ಣಿನ ತ್ಯಾಗಮನೋಭಾವನೆಯಿಂದ ಮಾತ್ರ ಸಂಸಾರದಲ್ಲಿ ಸ ರಿ ಗ ಮ... ಇಲ್ಲವಾದರೆ ಅಪಸ್ವರ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.