ಯುಗಾವತಾರಿಯ ಬಿಡುಗಡೆ ಸಂಭ್ರಮ

5

ಸಂಪದಿಗರೇ, ನಿಮ್ಮನ್ನೆಲ್ಲಾ ನಾನು ನನ್ನ ತಂಗಿ ಕರೆದೂ ಕರೆದೂ ಸಾಕಾಯ್ತು. ನೀವ್ಯಾರೂ ಬರಲಿಲ್ಲ. ಇರಲಿ... ಮೊನ್ನೆ ಹತ್ತನೇ ತಾರೀಖಿನಂದು ಸಂಜೆ ಆರು ಗಂಟೆಗೆ ಮಂಡ್ಯದ ಕಲಾಮಂದಿರದಲ್ಲಿ ಡಾ.ಪ್ರದೀಪಕುಮಾರ ಹೆಬ್ರಿಯವರ ಮಹಾಕಾವ್ಯ.. ’ಯುಗಾವತಾರಿ’ ಶ್ರೀ ಬಸವ ದರ್ಶನ ಕಾವ್ಯದ ಬಿಡುಗಡೆ ಸಮಾರಂಭ ಬಹಳ ವಿಜೃಂಬಣೆಯಿಂದ ನೆರವೇರಿತು. ಕನ್ನಡ ಸಾಹಿತ್ಯದಲ್ಲಿ ಅನೇಕ ಸಂಶೋಧನೆಯನ್ನು ಮಾಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಸರಳ, ಸಜ್ಜನ ವ್ಯಕ್ತಿ ಡಾ. ಎಂ.ಎಂ.ಕಲಬುರ್ಗಿಯವರು ಕಾವ್ಯದ ಮೂರನೇ ಸಂಪುಟವನ್ನು ಲೋಕಾರ್ಪಣೆ ಮಾಡಿದರು. ’ಕ್ಷಣ ಹೊತ್ತು ಆಣಿ ಮುತ್ತು’ ಖ್ಯಾತಿಯ ಶ್ರೀ ಎಸ್. ಷಡಕ್ಷರಿಯವರು ಡಾ. ಪ್ರದೀಪ ಕುಮಾರ ಹೆಬ್ರಿಯವರಿಗೆ ಸನ್ಮಾನ ಮಾಡಿದರು.ತಮ್ಮ ಮೋಡಿಯ ಆಣಿಮುತ್ತುಗಳನ್ನು ನಮಗೊಂದಷ್ಟು ನೀಡಿದರು. ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಮಂಡ್ಯದ ’ಕರ್ನಾಟಕ ಸಂಘ’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಅದರ ಅಧ್ಯಕ್ಷರಾದ ಪ್ರೊ|| ಬಿ.ಜಯಪ್ರಕಾಶಗೌಡರ ನೇತೃತ್ವದಲ್ಲಿ ಕಾರ್ಯಕ್ರಮದ ರೂಪುರೇಷೆ ಸಿದ್ಧವಾಗಿತ್ತು.. ಮೈಸೂರಿನ ವಾಣಿಜ್ಯ ತೆರಿಗೆ ಅಧಿಕಾರಿ ಶ್ರೀ ಬಿ.ಎಂ.ಬಸಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಡ್ಯದ ಶಾಸಕರಾದ ಮಾನ್ಯ ಶ್ರೀ ಎಂ.ಶ್ರೀನಿವಾಸ್ ರವರು ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮ ಬೇಬಿ ಮಠದ ಶ್ರೀ ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಗಳ ದಿವ್ಯಸಾನಿಧ್ಯದಲ್ಲಿ ನೆರವೇರಿತು. ಎಲ್ಲಕ್ಕಿಂತ ಮುಖ್ಯವಾಗಿ ಯುಗಾವತಾರಿಯ ಮೂರು ಸಂಪುಟಗಳಿಂದಾಯ್ದ ಕೆಲವು ದೃಶ್ಯಗಳಿಂದ ನೃತ್ಯರೂಪಕವನ್ನು ನಾಡಿನ ಹೆಸರಾಂತ ನೃತ್ಯಸಂಸ್ಥೆ ’ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ವಿದ್ಯಾರ್ಥಿಗಳು ನಡೆಸಿಕೊಟ್ಟರು... ಅದೂ ಸಹ ಕಾವ್ಯದ ಧಾರೆಗೊಂದು ಮೆರುಗು ನೀಡಿತ್ತು.. ಹ್ಮ್ಮ್ಮ್.. ಎಲ್ಲಾ ಚೆನ್ನಾಗಿತ್ತು. ಆದರೆ ನೀವ್ಯಾರು ಬರಲಿಲ್ಲ ಅನ್ನೋದೆ ಬೇಸರದ ಸಂಗತಿ. ಮುಂದಿನ ಬಾರಿ ಬರದೇ ಇರಬೇಡಿ... ಆಯ್ತಾ... ಅಂದ ಹಾಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನ ಶ್ರೀಮತಿ ಭವಾನಿ ಲೋಕೇಶ್ ಮಾಡಿದ್ರು... :)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

>>>ಅಂದ ಹಾಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನ ಶ್ರೀಮತಿ ಭವಾನಿ ಲೋಕೇಶ್ ಮಾಡಿದ್ರು... <<<<

ಹೌದಾ!!! ಈ ಹೆಸರು ಎಲ್ಲೋ ಕೇಳಿದಂತಿದೆ ಅಲ್ವ?

ಬರಬೇಕಾಗಿತ್ತು ಮಿಸ್ಸ್ಮಡ್ಕೊಂಡುಬಿಟ್ಟೆ, ಮುಂದಿನ ಸಲ ಖಂಡಿತವಾಗಿಯೂ ಬರುವೆ,

ಶಶಿ ಬಿರ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಆದರೆ ನೀವ್ಯಾರು ಬರಲಿಲ್ಲ ಅನ್ನೋದೆ ಬೇಸರದ ಸಂಗತಿ. ಮುಂದಿನ ಬಾರಿ ಬರದೇ ಇರಬೇಡಿ... ಆಯ್ತಾ... ಅಂದ ಹಾಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನ ಶ್ರೀಮತಿ ಭವಾನಿ ಲೋಕೇಶ್ ಮಾಡಿದ್ರು... <<

ಅಂದ ಹಾಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಭವಾನಿ ಲೋಕೇಶ್ ಅವರು ಬಹಳ ಬೇಸರದಿಂದ ಮಾಡಿದರೇ...?
:-)
ಸಾಕ್ಷಿಗಾಗಿ ಒಂದು ಭಾವಚಿತ್ರ ಇದ್ದಿದ್ದರೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವಚಿತ್ರ ಸಿಕ್ಕ ಮೇಲೆ ಹಾಕ್ತೀನಿ...
ಬೇಸರ ........ ಹಾಗೇನಿಲ್ಲ... ಖುಷಿಯಾಗಿಯೇ ನಿರೂಪಣೆ ಮಾಡಿದರು.... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಅಂದ ಹಾಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನ ಶ್ರೀಮತಿ ಭವಾನಿ ಲೋಕೇಶ್ ಮಾಡಿದ್ರು... <<<<

ನಿರೂಪಣೆಯ ಆಡಿಯೋ ರೆಕಾರ್ಡಿಂಗ್ ಸಿಕ್ಕರೆ ಅಪ್ಲೋಡ್ ಮಾಡಿ... ನಮಗೂ ನಿಮ್ಮ ನಿರೂಪಣೆ ಕೇಳುವ ಆಸೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಕ್ಕೋಸ್ಕರಾನೆ ಬನ್ನಿ ಅಂದಿದ್ದು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅಂದ ಹಾಗೆ ಇಡೀ ಕಾರ್ಯಕ್ರಮದ ನಿರೂಪಣೆಯನ್ನ ಶ್ರೀಮತಿ ಭವಾನಿ ಲೋಕೇಶ್ ಮಾಡಿದ್ರು.>>
ಬಿಡಿ ಅಕ್ಕೋ ಅಷ್ಟು ದೊಡ್ಡ ಕಾರ್ಯಕ್ರಮ ಅಂದ್ ಮೇಲೆ ಅವ್ರನಬಿಟ್ಟು ಬೇರೆ ಯಾರ್ ಮಾಡೋಕೆ ಆಗುತ್ತೆ ಅಲ್ವಾ . :D :D
:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕಾರ್ಯಕ್ರಮಕ್ಕೆ ನೀವೆ ನಿರೂಪಣೆ ಮಾಡ್ತೀರ ಅಂತ ಗೊತ್ತಾಯ್ತು ಅದಕ್ಕೆ ನಾನು ಬಂದಿಲ್ಲ ;)

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಬರದೇ ಇದ್ದಿದ್ದು ಒಳ್ಳೇದೇ ಆಯ್ತು ..
ನಾವು ನಮ್ಮ ಬ್ಯಾಲೆಗೆ ಅಂತ ಒಂದಷ್ಟು ಮರ ಗಿಡ ಕಡಿದು ತಂದು ಸೆಟ್ ಹಾಕ್ಸಿದ್ವಿ... ಆಮೇಲೆ ನೀವ್ ಅಲ್ಲೇ ಕೂತ್ಕೊಂಡು ಸತ್ಯಾಗ್ರಹ ಮಾಡೋದು ... ಪೋಲೀಸ್ ಬರೋದು...ಸಧ್ಯ ಇವೆಲ್ಲಾ ಏನೂ ಆಗಿಲ್ಲ.... ಒಳ್ಳೇದು ಮಾಡಿದ್ರಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರವಾಗಿಲ್ಲ ನಿಮಗೂನು ಭಯ ಇದೆ ಕಣ್ರಿ,
ಹೀಗೆ ಇರಲಿ ನಮ್ಮ ಭಯ... :D

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಅಷ್ಟು ದೊಡ್ಡ ಕಾರ್ಯಕ್ರಮ ಅಂದ್ ಮೇಲೆ ಅವ್ರನಬಿಟ್ಟು ಬೇರೆ ಯಾರ್ ಮಾಡೋಕೆ ಆಗುತ್ತೆ ಅಲ್ವಾ . <<
ಮೂರು ಜನ ಇದ್ರಾ...? (ಶ್ರೀಮತಿ, ಭವಾನಿ ಮತ್ತು ಲೋಕೇಶ್)
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D :D :D

ಏನೋ ಆ ಭವಾನಿ ಲೋಕೆಶ್ವರನೇ ಬಲ್ಲ .

:D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿಯಕ್ಕೋ
ದ್ರುಸ್ಯಮ್ಮನ್ನೂ ನಿನ್ನೂ ನೋಡಾ ಅಂಗಾಗೈತೆ. ನಾ ಗಡಿಬಿಡೀಲಿ ಇದ್ದಾಗ ಅದೇನೋ ಪಿರಾಗ್ರಾಮ್ ಮಾಡೀವ್ರಿ. ಈಪಟ್ ನಾನ್ ಎಲ್ಲಿಗಂಟಾದ್ರೂ ಬರಾಕ್ ರಡಿ, ಸ್ನೇಅ ಮಿಲ್ನಾ ಅಂತಾರಲ್ಲಾ ಅದ್ನಾ ಮಂಡ್ಯಾದಲ್ಲೇ ಮಾಡ್ರಕ್ಕೋ, ಎಲ್ಲಾ ಬತ್ತೀವಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭವಾನಿಯಕ್ಕ..ದ್ರುಸ್ಯಮ್ಮ...
ವಾಹ್..ವಾಹ್
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಬುಡು ಶೀದರಣ್ಣಾ, ಕರೆದಾಗ್ಲೇ ಬರ್ನಿಲ್ಲ ನೀವು.... ಈ ಪಟ್ಟು ಆಮಾತೆಲ್ಲ ಯಾಕೆ .... ಯಾಕೋ ನಂಗೂ ಗಾಚಾರ ಸರೀಗಿಲ್ಲ... ಏನ್ ಮಾಡಾಕಾಯ್ತದೆ.... ಬುಡು ಆ ಇಸ್ಯ ಎಲ್ಲ ಈಗ್ಯಾಕೆ .. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>ನಂಗೂ ಗಾಚಾರ ಸರೀಗಿಲ್ಲ...<<

ಏನಾಯ್ತು ನಿಮ್ಮ ಗಾಚಾರಕ್ಕೆ...?
:(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.