ಹೀಗೇ .... ಒಂದು ಸಂಜೆ ..

5

ಮುಂಗಾರಿನ ಹನಿಗಳಿಗೆ
ಮುನ್ನುಡಿಯ ಬರೆವ ಹೊತ್ತು
ಆಗಸದ ತುಂಬ ಮುನಿಸು ಬಿಟ್ಟ
ಮೋಡಗಳ ಚಿತ್ತಾರ
ಬುವಿಯೊಡಲ ಕುಡಿಗಳಿಗೆ
ನೀರ ಗುಟುಕಿಸುವ ತವಕ
ಮೊಟ್ಟೆಯೊಡೆದ ಮಂಡೂಕದ ಮರಿಗಳಿಗೆ
ಹೊಸತೊಂದು ಪುಳಕ
ಕಾಯುತ್ತಲೇ ಇತ್ತು ಇಳಿಸಂಜೆ
ಮುಂಗಾರು ಮಳೆಯ ಸ್ಪರ್ಷಕ್ಕೆ
ಬಂದ ಮಳೆಯ ಮುದ್ದಾಡಿ ಅದರೊಲವಲ್ಲಿ
ನೆನೆದು ಹಣ್ಣಾಗುವ ಹರ್ಷಕ್ಕೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಊರಲ್ಲಿ ತುಂಬಾ ಮಳೆನಾ? ಮಳೆಯ ಬಗ್ಗೆ ಬರೆದ ಕವನ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಏನಿಲ್ಲ ... ಸುಮಾರಾಗಿ ಮಳೇನೆ . ಧನ್ಯವಾದ ಸರ್ ಪ್ರತಿಕ್ರಿಯೆಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಾ...ಏನ್ ಬರೀತೀರಿ ಭವಾನೀ...
ಓದಿದವನಿಗೆ ಖುಷಿ ಆಯ್ತು ಅಂತೀನೀ..
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಧನ್ಯವಾದ ಸಂಪದಿಗ ಆಸು
ನಾನಾದೆ ಕವಿತೆಯ ಪರೀಕ್ಷೆಯಲಿ ಪಾಸು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ ಭವಾನಿ....

"ನಾನಾದೆ ಕವಿತೆಯ ಪರೀಕ್ಷೆಯಲಿ ಫಸ್ಟ್ ಕ್ಲಾಸು" ಅಂದರೆ ಚೆನ್ನಾಗಿರುತ್ತಿತ್ತಲ್ವಾ ?

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಶಾಮಲ... ಕ್ಲಾಸುಗಳನ್ನೆಲ್ಲ ನೀವ್ ತಾನೆ ಕೊಡಬೇಕು ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) :-)

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿತೆಗಳು ಭಾವ ತುಂಬಿರಲು ಆಗುವುದಿಲ್ಲ ಫೇಲು
ಯಾವ ಕವಿತೆಯೂ ಕೀಳಲ್ಲ ಇಲ್ಲ ಯಾವುದೂ ಮೇಲು

ಓದುಗರು ಮೆಚ್ಚಿಕೊಂಡು ವ್ಯಕ್ತಪಡಿಸಿದರೆ ತೃಪ್ತಿ
ಕವಿತೆ ಬರೆದ ಕವಿಗಳಿಗೆ ಆಗ ನಿಜಕ್ಕೂ ಆತ್ಮತೃಪ್ತಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.