ವಿದೇಶಿಯರ ವಿದೇಶಿಯರೆಂದೊಡೇನಹುದಯ್ಯಾ?

3.333335

ಪರದೇಶದಲಿ ನೆಲೆಸಿ ಅಲ್ಲಿನ ಪ್ರಜೆಗಳಾದವರ
ಕರೆದು ನಮ್ಮವರೆಂದು ಕೊಂಡಾಡಿ ಸನ್ಮಾನ
ಮಾಡುವ ಭವ್ಯ ಪರಂಪರೆ ನಮ್ಮದು

ಪರದೇಶದ ಪ್ರಜೆಯಾಗಿ ಪರಭಾಷೆಯಲಿ
ಬರೆದು ಪ್ರಸಿದ್ಧರಾಗಿ ಮಡಿದವರಿಗಾಗಿ
ನಮ್ಮವರೆಂದು ಕಣ್ಣೀರಿಳಿಸುವ ಚಾಳಿ ನಮ್ಮದು

ಬಚ್ಚನನ ಮಡದಿಯನು ಬಂಗಾಲೀ ಎಂದೂ
ಸೊಸೆಯನ್ನು ಕರಾವಳಿಯವಳೆಂದು ಕರೆದು
ಹೆಮ್ಮೆಪಟ್ಟುಕೊಳ್ಳುವ ಅಭ್ಯಾಸ ನಮ್ಮದು

ಅಮೇರಿಕಾದ ಪ್ರಜೆಯಾಗಿ ಅಧ್ಯಕ್ಷನಾದರೂ
ಒಬಾಮಾನ ಆಫ್ರಿಕಾ ಮೂಲದ ನೆನಪ
ಎಲ್ಲರೂ ದಿನ ಪ್ರತಿದಿನ ಮಾಡಲೂ ಬಹುದು

ನಮ್ಮವರು ಯಾವ ರಾಜ್ಯ ಯಾವ ದೇಶದ
ಪ್ರಜೆಯಾದರೂ ನಮ್ಮವರೆಂದು ಕರೆದಂತೆ
ಮೂಲತಃ ವಿದೇಶಿಯರ ನಾ ವಿದೇಶಿಯರೆಂದೊಡೇನಹುದಯ್ಯಾ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸತ್ಯವಾದ ಮಾತು.
ಪಾಪ ಮೈಕಲ್ ಜಾಕ್ಸನ್ ತೀರ್ಕೊಡ್ನಂತೆ.....
ಹೆಗ್ಡೆ ಅವರ ಮುಖ ಚರ್ಯೆ ಬದಲಾಗಿದೆ.(ಪರಿಚಯದಲ್ಲಿ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸತ್ಯವಾದ ಮಾತು.

ಧನ್ಯವಾದಗಳು.

>>ಪಾಪ ಮೈಕಲ್ ಜಾಕ್ಸನ್ ತೀರ್ಕೊಡ್ನಂತೆ.....
ಹೌದ್ರೀ..ಪಾಪ.

>>ಹೆಗ್ಡೆ ಅವರ ಮುಖ ಚರ್ಯೆ ಬದಲಾಗಿದೆ.(ಪರಿಚಯದಲ್ಲಿ)
ನಗು ನಗುತಾ ನಲೀ ನಲೀ

ಮಾಲತಿ, ನಿಮ್ಮ ಮೂರು ಸಾಲಿನ ಪ್ರತಿಕ್ರಿಯೆಯಲ್ಲಿ ಮೂರು ಭಿನ್ನ ವಿಚಾರಗಳು.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್,
ನೋಡಿ ಮತ್ತೆ ಶುರುವಾದಿತು ಮರಿ ಹಾವಳಿ . ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ,
ಧನ್ಯವಾದಗಳು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ.
ಬರೆಯಬೇಡಿ ಯಾರನ್ನೂ ಕೆರಳಿಸುವುದಕ್ಕೆ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆದಿಲ್ಲ ನಾನು ಕೆರಳಿಸಿ
ಹೇಳಿದ್ದೇನೆ ಅಷ್ಟೇ ವಾಸ್ತವ ಸ್ಥಿತಿ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರದೇಶದಲ್ಲಿದ್ದೂ ವಿದೇಶೀ ವ್ಯಾಮೋಹಕ್ಕೊಳಗಾಗದೆ,
ನಮ್ಮ ಭಾಷೆಯಲ್ಲೇ ಬರೆಯುವ ಕೆಟ್ಟ ಚಟ ನನ್ನದು !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.