ವಿಶ್ವರೂಪ ದರ್ಶನ!!!

3

(ಇದು ನಾ ಬರೆದುದಲ್ಲ. ನನ್ನನುಜ ಪೃಥ್ವೀರಾಜನಿಂದ ಸಂದೇಶದ ರೂಪದಲ್ಲಿ ಇಂದು ಬಂದ ಕವನ)

ಮಳೆಯಲ್ಲವಿದು
ಮಳೆಯಲ್ಲವಿದು
ಇದುವೆ ರುದ್ರ ತಾಂಡವ||

ಮೇಳೈಸಿದೆ
ಸಿಡಿಲ್ಮಿಂಚಿನ
ಹಿಮ್ಮೇಳದ ವೈಭವ||

ನೋಡುತಿರುವೆ
ನೋಡುತಿರುವೆ
ವಿಶ್ವರೂಪ ದರ್ಶನ||

ನಟರಾಜನ
ನಾಟ್ಯಶಾಲೆಯಲ್ಲಿ
ವಿಶೇಷ ಪ್ರದರ್ಶನ||

ಸಿಡಿಲೆ ಇಲ್ಲಿ ಚಂಡೆಯಾಗಿ
ಗುಡುಗೇ ಮೃದಂಗವಾಗಿ
ನಾದ ನಿನಾದ ವಿನೋದವಾಗಿ
ಆನಂದಭಾಷ್ಪ ಮಳೆಯರೂಪದಿ|||

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಕ್ಕತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್..... ಏನನ್ಯಾಯ ಮಾಡಿಬಿಟ್ಟಿದಾನೆ ದೇವರು ಸಾರ್.... ಎಲ್ಲಾ ಪ್ರತಿಭೆಗಳನ್ನೂ ನಿಮ್ಮ ಮನೆಗೇ ಕಳಿಸಿಬಿಟ್ಟಿದ್ದಾನೆ....... ತುಂಬಾ ಚೆನ್ನಾಗಿದೆ.......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ ಮತ್ತು ಶ್ಯಾಮಲಾ,
ಈರ್ವರಿಗೂ ಧನ್ಯವಾದಗಳು.
ಹಾಗೆಯೇ ಆ ದೇವರಿಗೂ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಕೆ ತಡಿಲಿಕ್ಕೆ ಆಗ್ತಾ ಇಲ್ಲ, ಸ್ವಲ್ಪ ಗಾಳಿ ಹಾಕಿ ಈಚೆ ಕಳ್ಸಿ ಮರಾಯ್ರೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೆ, ನಿಜಕ್ಕೂ ನಿಮ್ಮ ಕವನ ತುಂಬಾ ಚೆನ್ನಾಗಿದೆ, ದೇವಿ ಸರಸ್ವತಿ ನಿಮ್ಮ ಪದಗಳಲ್ಲಿ ಬಂಧಿಯಾಗಿಬಿಟ್ಟಿದ್ದಾಳೆ. ಮುಂದುವರೆಸಿ, ಶುಭವಾಗಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಗಸಾಗಿದೆ ಮಳೆಯ ವರ್ಣನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು amg.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಹತ್ತು ಹನ್ನೆರಡು ದಿನಗಳ ಹಿಂದೆ ಮಿಂಚು ಗುಡುಗುಗಳ ಆರ್ಭಟಿಸುವಿಕೆಯೊಡನೆ ಮಳೆ ಬಂದಾಗ, ನಮಗೆ ಯಮರಾಜನ ನರ್ತನವೆನಿಸುವಂತೆ, ಪಾರ್ಶ್ವವಾಯು ತೊಂದರೆಯಿಂದ ನಡೆದಾಡಲಾರದೇ ಮಲಗಿದ್ದ ನಮ್ಮ ತಂದೆ ಭಯಗೊಂಡು, ಭಯದಿಂದಲೇ ಹೃದಯ ಕ್ರಿಯೆ ನಿಂತು, ನಮ್ಮನ್ನು ಅನಾಥರನ್ನಾಗಿಸಿಬಿಟ್ಟಿತು.
ನನಗೆ ಲೇಖನ, ಕವನ ಬರೆಯಲು ಬರುವುದಿಲ್ಲ. ಈ ಮಳೆಯ ಕಾರಣದಿಂದಾಗಿಯೇ (ಅಂತ ನನ್ನ ಭಾವನೆ, ಅದೊಂದು ನೆಪವಿರಲೂ ಬಹುದು) ನನ್ನ ತಂದೆಯನ್ನು ಕಳೆದುಕೊಂಡೆನೆಂಬ ಭಾವ. ಜೊತೆಗೆ ನನ್ನ ದುಃಖವನ್ನು ಹಂಚಿಕೊಳ್ಳುವ, ಸಮಾಧಾನ ಬಯಸುವ ಒಂದು ಸಣ್ಣ ಪ್ರಯತ್ನ. ಅದಕ್ಕಾಗಿ ನಿಮ್ಮ ಅನುಭವಕ್ಕೆ ವಿರುದ್ಧವಾದ (ಕಾರಣ ಒಂದೇ, ಅದು ಮಳೆ ಎಂಬ ದೃಷ್ಟಿಯಿಂದ) ನನ್ನ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ತಪ್ಪೆನಿಸಿದರೆ ದಯಮಾಡಿ ಕ್ಷಮಿಸಿ.

"ದುಃಖವನ್ನು ಹಂಚಿಕೊಳ್ಳುವುದರಿಂದ ದುಃಖ ಕಡಿಮೆಯಾಗುವುದಂತೆ", "ದುಃಖವನ್ನು ಹಂಚಬಾರದಂತೆ, ಸಂತೋಷವನ್ನು ಮಾತ್ರ ಹಂಚಬೇಕಂತೆ", ಹೀಗೆ ಏನೇನೋ ಅಂತೆ ಕಂತೆ ಗಳೊಂದಿಗೆ ಬರೆದಿದ್ದೇನೆ. ಪೋಸ್ಟ್ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಆದರೂ ಪೋಸ್ಟ್ ಮಾಡುತ್ತಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಶ್ವರೂಪ, ವಿಭಿನ್ನ ರೂಪ ದರ್ಶನ.
ರುದ್ರ ತಾಂಡವವಾದಗ ವಿಭಿನ್ನ ಪರಿಣಾಮಗಳು.

ನಿಮ್ಮ ತೀರ್ಥರೂಪರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ನಿಮಗೆ ಮತ್ತು ನಿಮ್ಮವರಿಗೆಲ್ಲಾ ದಯಪಾಲಿಸಲಿ.
ಅಗಲಿದ ಚೇತನಕ್ಕೆ ಚಿರಶಾಂತಿಯನ್ನೂ ಕರುಣಿಸಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ನನ್ನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.