ನಾವು ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು ...?!

0

೧೯೮೦ರ ದಶಕದ ಆದಿಯಲ್ಲಿ ಅಮಿತಾಭ್ ಬಚ್ಚನ್ ಮತ್ತು ರೇಖಾ ನಟಿಸಿರುವ ಸಿಲ್‍ಸಿಲಾ ಚಿತ್ರದ, ಬಹು ಪ್ರಸಿದ್ಧಿಗೊಂಡಿದ್ದ,  ಸಂಭಾಷಣೆಗಳನ್ನೊಳಗೊಂಡ ಒಂದು ಹಾಡಿನ ಭಾವಾನುವಾದದ ಒಂದು ಪ್ರಯತ್ನ ಇಲ್ಲಿದೆ:


ನಾಯಕ:
 
ನನ್ನೀ ಏಕಾಂತ ಮತ್ತು ನಾನು ಸತತ ಸಂಭಾಷಣೆಯಲ್ಲಿ ನಿರತವಾಗಿರುತ್ತೇವೆ...
ನೀನು  ಇದ್ದಿದ್ದರೆ ಹೇಗಿರುತ್ತಿತ್ತು, ನೀನು ಆ ಮಾತಾಡುತ್ತಿದ್ದೀ, ನೀನು ಈ ಮಾತಾಡುತ್ತಿದ್ದೀ...,
ನೀನೀ ಮಾತಿನಿಂದ ಎಷ್ಟು ನೊಂದಿರುತ್ತಿದ್ದೀ, ನೀನಾ ಮಾತಿನಿಂದ ಎಷ್ಟೊಂದು ನಕ್ಕಿರುತ್ತಿದ್ದೀ...,
ನೀನು ಇದ್ದಿದ್ದರೆ ಹೀಗಾಗುತ್ತಿತ್ತು, ನೀನು ಇದ್ದಿದ್ದರೆ ಹಾಗಾಗುತ್ತಿತ್ತು...,
ನನ್ನೀ ಏಕಾಂತ ಹಾಗೂ ನಾನು ಸತತ ಸಂಭಾಷಣೆಯಲ್ಲಿ ನಿರತವಾಗಿರುತ್ತೇವೆ...

ನಾಯಕಿ:

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು  ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು
ನಿನ್ನ ಬಾಹುಗಳಲ್ಲಿ ಬಂಧಿಯಾಗಿರುವ ನನ್ನ
ದೇಹ-ಪ್ರಾಣಗಳೆರಡೂ ಕರಗಿಹೋಗುತಿಹುದಿಂದು

ನಾಯಕ:

ಇದು ರಾತ್ರಿಯೋ ಯಾ ಬಿಡಿಸಿಟ್ಟ ನಿನ್ನ ಕೇಶರಾಶಿಯೋ?
ಇದು ಬೆಳದಿಂಗಳೋ ಯಾ
ನಿನ್ನ ಕಂಗಳ ಹೊಳಪಿಂದ ನನ್ನೀ ರಾತ್ರಿ ತೊಳೆಯಲ್ಪಟ್ಟಿದೆಯೋ
ಇದು ಚಂದಿರನೋ ಯಾ ನಿನ್ನ ಕೈಗಳಲಿ ಹೊಳೆವ ಬಳೆಗಳೋ
ನಕ್ಷತ್ರಗಳ ರಾಶಿಯೋ ಯಾ ನಿನ್ನ ಸೆರಗಿನಲ್ಲಿನ ಚಿತ್ತಾರವೋ
ತಂಗಾಳಿಯ ತಂಪೋ ಯಾ ಇದು ನಿನ್ನ ದೇಹದ ಕಂಪೋ
ಈ ತರಗೆಲೆಗಳ ಸದ್ದೂ  ಗುಟ್ಟಾಗಿ ನನ್ನಲ್ಲೇನೋ ನುಡಿಯುವಂತಿಹುದು

ನೀನು ಇಲ್ಲ, ನೀನು ಎಲ್ಲೂ ಇಲ್ಲ ಎನ್ನುವ ಸತ್ಯದ ಅರಿವಿನ
ಮೆಲುಕಿನಲ್ಲಿ ನಾನು ಮೌನಿಯಾಗಿ ಆಲೋಚಿಸುತ್ತೇನಾದರೂ
ನನ್ನ ಈ ಮನವೇಕೆ ಸದಾ ನುಡಿಯುತಿಹುದು
ನೀನು ಇಲ್ಲೇ ಇರುವೆ, ಇಲ್ಲೆಲ್ಲೋ ಇರುವೆಯೆಂದು?

ನಾಯಕಿ:

ನೀನು ದೇಹವಾದರೆ ನಾನಿನ್ನ ನೆರಳಿನಂತೆ
ನೀನಿಲ್ಲವಾದರೆ ನಾನೆಲ್ಲಿ ಹೇಗೆ ಇರುವೆ
ನನ್ನನ್ನು ಪ್ರೀತಿಸುವ ಓ ನನ್ನ ನಲ್ಲನೇ
ನೀನೆಲ್ಲಿರುವೆಯೋ ನಾನಲ್ಲೇ ಇರುವೆ
ಈ ಹಾದಿಯಲ್ಲೇ ಮಂದುವರಿದು ನಮ್ಮೀ
ಮಿಲನ ಆಗಲೇಬೇಕಾಗಿತ್ತು ಇನಿಯಾ

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು  ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು

ನನ್ನ ಉಸಿರು ಪ್ರತಿ ಉಸಿರೂ ಘಮ್ಮೆನ್ನುತ್ತಿದೆ
ಸುಗಂಧವನ್ನು ಸೂಸುವ ಶ್ರೀಗಂಧದಂತೆ
ನಿನ್ನ ಪ್ರೀತಿಯೇ ನನಗೆ ಬೆಳದಿಂಗಳಂತೆ
ನನ್ನ ಮನವೇ ಆ ಬೆಳಕಿಗಂಗಳದಂತೆ
ಈ ಸಂಜೆ ಇನ್ನೂ ಮಧುರವಾಯಿತು
ಕೊನೆಗೊಳ್ಳುತ್ತಾ ಬರುತ್ತಿದ್ದಂತೆ

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು  ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು

ನಾಯಕ:

ನಿಸ್ಸಹಾಯಕ ಸ್ಥಿತಿ  ಇಲ್ಲೂ ಇದೆ ಅಲ್ಲೂ ಇದೆ
ಏಕಾಂತದ ಈ ರಾತ್ರಿ ಇಲ್ಲೂ ಇದೆ ಅಲ್ಲೂ ಇದೆ
ನುಡಿಯಲೇ ಬೇಕಾದ ಮಾತುಗಳಿವೆ ನೂರು,
ಆದರೆ ಯಾರಲ್ಲಿ ನುಡಿಯಲಿ?
ಅದೆಲ್ಲಿಯತನಕ ಮೌನಿಯಾಗಿ ಸಹಿಸಿಕೊಂಡಿರಲಿ?
ಈ ಮನಸ್ಸು ಹೇಳುತ್ತಿದೆ ಇಂದು ಈ ಸಮಾಜದ
ಎಲ್ಲಾ  ಕಟ್ಟಳೆಗಳನ್ನೂ ಮೀರಿ ಬಿಡೋಣವೆಂದು
ನಮ್ಮ ನಡುವಿರುವ ಈ ಗೋಡೆಯ ಕೆಡವಿಬಿಡೋಣವೆಂದು
ಏಕೆ ಮನದೊಳಗೇ ಬೇಯುತ್ತಲಿರಬೇಕು?
ಈ ಜನರಿಗೆಲ್ಲಾ ಹೇಳಿ ಬಿಡೋಣ ಇಂದು
ಹಾಂ... ನಾವು ಪ್ರೀತಿಸ್ತೇವೆ ...
ನಾವು ಪ್ರೀತಿಸ್ತೇವೆ ...  ಪ್ರೀತಿಸ್ತೇವೆ ...
ಈಗ ನಮ್ಮ ಮನಗಳಲ್ಲೂ ಇದೇ ಮಾತು
ಇಲ್ಲೂ ಇದೆ ಅಲ್ಲೂ ಇದೆ.

ನಾಯಕಿ:

ಹೀಗೇ ಜೊತೆ ಜೊತೆಯಲಿ ಸಾಗುತ್ತಾ
ನಾವು  ಅದೆಲ್ಲಿಗೆ ಬಂದು ತಲುಪಿದ್ದೇವೆ ಇಂದು

Lyrics --MALE--
Main Aur Meri Tanhaai Aksar Yeh Baatein Karte Hain
Tum Hoti To Kaisa Hota, Tum Yeh Kehti, Tum Voh Kehti
Tum Is Baat Pe Hairaan Hoti, Tum Us Baat Pe Kitni Hansti
Tum Hoti To Aisa Hota, Tum Hoti To Vaisa Hota
Main Aur Meri Tanhaai Aksar Yeh Baatein Karte Hain

 
--FEMALE--
Yeh Kahan Aa Gaye Hum
Yunhi Saath Saath Chalte
Teri Baahon Mein Hai Jaanam
Mere Jism-o-jaan Pighalte
Yeh Kahan Aa Gaye Hum
Yunhi Saath Saath Chalte

--MALE--
Yeh Raat Hai, Yeh Tumhaari Zulfein Khuli Hui Hai
Hai Chaandni Ya Tumhaari Nazrein Se Meri Raatein Dhuli Hui Hai
Yeh Chaand Hai Ya Tumhaara Kangan
Sitaarein Hai Ya Tumhaara Aanchal
Hawa Ka Jhonka Hai Ya Tumhaare Badan Ki Khushboo
Yeh Pattiyon Ki Hai Sarsaraahat Ke Tumne Chupke Se Kuch Kaha Hai
Yeh Sochta Hoon Main Kab Se Gumsum
Ke Jab Ki Mujhko Bhi Yeh Khabar Hai
Ke Tum Nahin Ho, Kahin Nahin Ho
Magar Yeh Dil Hai Ke Keh Raha Hai
Ke Tum Yahin Ho, Yahin Kahin Ho

--FEMALE--
O, Tu Badan Hai Main Hoon Chhaaya
Tu Na Ho To Main Kahan Hoon
Mujhe Pyaar Karne Waale
Tu Jahan Hai Main Vahan Hoon
Hamein Milna Hi Tha Hamdam
Issi Raah Pe Nikalte
Yeh Kahan Aa Gaye Hum
Yunhi Saath Saath Chalte
Mm, Meri Saans Saans Maheke
Koi Bheena Bheena Chandan
Tera Pyaar Chaandni Hai
Mera Dil Hai Jaise Aangan
Koi Aur Bhi Mulaayam
Meri Shaam Dhalte Dhalte
Yeh Kahan Aa Gaye Hum
Yunhi Saath Saath Chalte

--MALE--
Majboor Yeh Haalaat, Idhar Bhi Hai Udhar Bhi
Tanhaai Ki Ek Raat, Idhar Bhi Hai Udhar Bhi
Kehne Ko Bahut Kuch Hai, Magar Kisse Kahe Hum
Kab Tak Yunhi Khaamosh Rahe Aur Sahe Hum
Dil Kehta Hai Duniya Ki Har Ek Rasm Utha De
Deevaar Jo Hum Dono Mein Hai, Aaj Gira De
Kyoon Dil Mein Sulagte Rahe, Logon Ko Bata De
Haan Humko Mohabbat Hai, Mohabbat Hai, Mohabbat
Ab Dil Mein Yehi Baat, Idhar Bhi Hai Udhar Bhi

--FEMALE--
Yeh Kahan Aa Gaye Hum
Yunhi Saath Saath Chalte
Yeh Kahan Aa Gaye Hum

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸುರೇಶರೇ ನನಗೂ ಈ ಹಾಡು ತುಂಬಾನೆ ಖುಷಿ ಕೊಡುತ್ತೆ ನಿಮ್ಮ ಅನುವಾದ ಹೃದಯ ಸ್ಪರ್ಷಿ ಯಾಗಿದೆ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಈ ಪ್ರಯತ್ನ ನಿಮಗೆ ಖುಷಿ ಕೊಟ್ಟಿದೆಯೆನ್ನುವುದೇ ನನ್ನಲ್ಲಿ ಸಾರ್ಥಕತೆಯ ಭಾವವನ್ನು ತುಂಬುತ್ತದೆ. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಮತ್ತೊಂದು ಒಳ್ಳೆಯ ಕವನವನ್ನು ಅನುವಾದ ಮಾಡಿದ್ದಿರಿ . ಇಂದಿನ ಚಿತ್ರಗೀತೆಗಳ ಗುಣಮಟ್ಟ ತೀವ್ರ ಕುಸಿದಿದೆ. ಅದರಲ್ಲೂ ಕನ್ನಡದಲ್ಲಿ ಚಿತ್ರ ಗೀತೆ ರಚನೆಕರರೆಂದರೆ ಕೆಳಮಟ್ಟದ ಸಾಹಿತಿಗಳೆಂಬ ಭಾವದಟ್ಟವಾಗುವ ಅಪಾಯದಿಂದ ಕನ್ನಡ ಚಿತ್ರಗೀತೆಗಳನ್ನು ರಕ್ಷಿಸಿದ ಶ್ರೇಯ ಜಯಂತ್ ಕಾಯ್ಕಿಣಿ ಅವರಿಗೆ ಸಲ್ಲಬೇಕು .ಸರ್ ನಿಮ್ಮ ಕವನದೊಡನೆ ನಿಮ್ಮದೊಂದು ಟಿಪ್ಪಣಿ ಇದ್ದರೆ ಚೆನ್ನಾಗಿರುತ್ತಿತ್ತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸರ್ ಮತ್ತೊಂದು ಒಳ್ಳೆಯ ಕವನವನ್ನು ಅನುವಾದ ಮಾಡಿದ್ದಿರಿ >> ಧನ್ಯವಾದಗಳು ಸುನೀಲ್. <<ಇಂದಿನ ಚಿತ್ರಗೀತೆಗಳ ಗುಣಮಟ್ಟ ತೀವ್ರ ಕುಸಿದಿದೆ. ಅದರಲ್ಲೂ ಕನ್ನಡದಲ್ಲಿ ಚಿತ್ರ ಗೀತೆ ರಚನೆಕರರೆಂದರೆ ಕೆಳಮಟ್ಟದ ಸಾಹಿತಿಗಳೆಂಬ ಭಾವದಟ್ಟವಾಗುವ ಅಪಾಯದಿಂದ ಕನ್ನಡ ಚಿತ್ರಗೀತೆಗಳನ್ನು ರಕ್ಷಿಸಿದ ಶ್ರೇಯ ಜಯಂತ್ ಕಾಯ್ಕಿಣಿ ಅವರಿಗೆ ಸಲ್ಲಬೇಕು .>> ಇದು ಇಲ್ಲಿ ಅಪ್ರಸ್ತುತ. ಹಾಗಾಗಿ ಇದಕ್ಕೆ ನನ್ನ ಪ್ರತಿಕ್ರಿಯೆ ಇಲ್ಲ. <<ಸರ್ ನಿಮ್ಮ ಕವನದೊಡನೆ ನಿಮ್ಮದೊಂದು ಟಿಪ್ಪಣಿ ಇದ್ದರೆ ಚೆನ್ನಾಗಿರುತ್ತಿತ್ತು>> ನನಗದರ ಅವಶ್ಯಕತೆ ಕಂಡುಬರಲಿಲ್ಲ. ಹಾಗಾಗಿ ಬರೆದಿಲ್ಲ. ನನ್ನೆಲ್ಲಾ ಟಿಪ್ಪಣಿ ಭಾವ ಎಲ್ಲಾ ಆ ಭಾವಾನುವಾದದಲ್ಲೇ ಇದೆಯೆಂದು ನನ್ನೇಣಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖುಷಿ ಕೊಟ್ಟ ಅನುವಾದ.ಉಪಮೆಗಳು ಸೊಗಸಾಗಿ ಆಭಾಸವಿಲ್ಲದ೦ತೆ ಬಳಸಲ್ಪಟ್ಟಿವೆ. ಪ್ರಾಸಬಧ್ಧ ಸಾಲುಗಳು ಮನಸೆಳೆಯುತ್ತವೆ. ಆದರೂ ಕವಿಯ ಭಾವನೆ ಈ ಕೆಳಕ೦ಡ ಸಾಲುಗಳಲ್ಲಿ ಏಕೋ ಸೊರಗುತ್ತಿದೆ ಎ೦ದು ನನಗನ್ನಿಸಿತು ಹಾಗೂ ಸೂಕ್ತ ತಿದ್ದುಪಡಿ ಮಾಡಿ ಭಾವನೆಗಳನ್ನು ಬಲಗೊಳಿಸಬೇಕೆ೦ದು ಅನಿಸಿತು. >>ನೀನು ಈ ಮಾತಿಂದ ಸುಸ್ತಾಗುತ್ತಿದ್ದೀ, ನೀನು ಆ ಮಾತಿನಿಂದ ಎಷ್ಟೊಂದು ನಗುತ್ತಿದ್ದೀ<< ಪ್ರೇಮದಲ್ಲಿ ಯಾ ವಿರಹದಲ್ಲಿ ಪ್ರೇಮಿಗಳಿಗೆ ಸುಸ್ತಾಗುವುದಿಲ್ಲ, ಬದಲು ನೋವು, ತಳಮಳ ಉ೦ಟಾಗುತ್ತದೆ. ಎರಡನೆಯದರಲ್ಲಿ ನಗುವಿದ್ದ ಮೇಲೆ ಇಲ್ಲಿ ನೋವು ಆಗಬೇಕು ಅಥವಾ ಆ ಭಾವನೆಯನ್ನೇ ಹೊರಹೊಮ್ಮಿಸುವ ಸಶಕ್ತ ಪದದ ಅಗತ್ಯವಿದೆಯೆ೦ದು ಅನಿಸಿತು. >> ನೀನು ಇದ್ದಿದ್ದರೆ ಹೇಗೋ ಆಗುತ್ತಿತ್ತು<< ಇಲ್ಲಿಯೂ ಕೂಡಾ ಕವಿಯ ನಿರ್ಲಿಪ್ತತೆಯನ್ನು ಯಾ ಉದಾಸೀನವನ್ನು ವ್ಯಕ್ತಪಡಿಸುವ ಪದ ಬಳಕೆಯಾಗಿದೆ! ಇದು ಯಾಕೋ ಅಭಾಸ ಉ೦ಟು ಮಾಡುತ್ತಿದೆ ಎ೦ದು ನನಗನ್ನಿಸುತ್ತಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ತಮ್ಮ ನೇರ ಅನಿಸಿಕೆಗಳಿಗೆ ಸದಾ ಸ್ವಾಗತವಿದೆ. ತಿದ್ದುಪಡಿ ಮಾಡಿರುತ್ತೇನೆ. >>ನೀನು ಈ ಮಾತಿಂದ ಸುಸ್ತಾಗುತ್ತಿದ್ದೀ, ನೀನು ಆ ಮಾತಿನಿಂದ ಎಷ್ಟೊಂದು ನಗುತ್ತಿದ್ದೀ<< ನೀನೀ ಮಾತಿಂದ ಎಷ್ಟು ನೊಂದಿರುತ್ತೀ, ನೀನಾ ಮಾತಿನಿಂದ ಎಷ್ಟೊಂದು ನಕ್ಕಿರುತ್ತೀ ಅಲ್ಲದೇ, ಐಸಾ – ಹೀಗೆ ಹಾಗೂ ವೈಸಾ – ಹಾಗೆ ಎನ್ನುವ ಮೂಲ ಅರ್ಥಗಳನ್ನೇ ಬಳಸಿದ್ದೇನೆ ಈಗ. ಒಂದೇ ಸಾರಿಗೆ ಎಲ್ಲವೂ ಸುಸೂತ್ರವಾಗಿ ಹೊರಹೊಮ್ಮುವುದಿಲ್ಲ. ಕೆಲವು ಮರುಭೇಟಿಗಳ ಮತ್ತು ತಿದ್ದುಪಡಿಗಳ ಅವಶ್ಯಕತೆ ಇರುತ್ತದೆ. ತಮ್ಮ ನಿರಂತರ ಪ್ರೋತ್ಸಾಹಕ್ಕಾಗಿ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಇಲ್ಲಿ ನನ್ನ ಅನಿಸಿಕೆಯನ್ನಷ್ಟೇ ತಿಳಿಸಿದ್ದೆ. ಆದರೆ ಅದನ್ನು ತಾವು ಸ್ವೀಕರಿಸಿರುವುದು, ತಾವು ಸಾಹಿತ್ಯಕ್ಕೆ ಹಾಗೂ ಸಾಹಿತ್ಯದ ಮೌಲ್ಯವರ್ಧನೆಗೆ ಕೊಡುವ ಪ್ರಾಮಾಣಿಕ ಗೌರವವನ್ನು ತೋರಿಸುತ್ತದೆ ಅಲ್ಲದೆ ಎಲ್ಲರನ್ನೂ ಗೌರವಿಸುವ ನಿಮ್ಮ ಮಾನವೀಯ ಗುಣವನ್ನು ತೋರಿಸುತ್ತದೆ. ನನ್ನ ಅನಿಸಿಕೆಯನ್ನು ಸ್ವೀಕರಿಸಿದ್ದಕ್ಕಾಗಿ ಆಸುಮನಕ್ಕೆ ವ೦ದನೆಗಳು. ಈಗ ಅನುವಾದವು ನಿಜವಾಗಿಯೂ ನಿಮ್ಮ ಮತ್ತೊ೦ದು “ಮೇರು ರಚನೆ“ಯಾಗಿ ಸ್ಮರಣೀಯವಾಗುವುದರಲ್ಲಿ ಯಾವುದೇ ಸ೦ಶಯಗಳಿಲ್ಲ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮಗೂ ಹೃತ್ಪೂರ್ವಕ ಧನ್ಯವಾದಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪ್ರತಿಕ್ರಿಯೆಗಾಗಿ http://sampada.net/a... ಈ ಲೇಖ ನೋಡಿ. <ಗಮ್ಮೆನ್ನುತ್ತಿದೆ> ಇದನ್ನು ’ಘಮ್ಮೆನ್ನುತ್ತಿದೆ’ ಮಾಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾರ್ದಿಕ ಅಭಿವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ ಹೆಗ್ಡೆಯವರೆ.. ಭಾವಾನುವಾದ ಸಕತ್ತಾಗಿದೆ:). ಒಂದು ವಿಷಯ ನಿಮ್ಮ ಗಮನಕ್ಕೆ.. ನನಗನಿಸಿದ ಪ್ರಕಾರ 'ಹೈರಾನ್' ಅನ್ನುವದಕ್ಕೆ ನೊಂದುಕೊಳ್ಳುವುದು ಎನ್ನುವುದು ಸರಿಯಾಗುವುದಿಲ್ಲ. 'ಹೈರಾನ್' ಗೆ ದಿಗ್ಭ್ರಮೆ, ಗೊಂದಲ,ಗಲಿಬಿಲಿ, ಅಚ್ಚರಿ ಗಳು ತುಂಬಾ ಹತ್ತಿರ. ನೊಂದುಕೊಳ್ಳುವದನ್ನು 'ಪರೆಶಾನ' ಎನ್ನಬಹುದು. ಇಲ್ಲಿ ಮಾಸೂಮ ಚಿತ್ರದ 'ತುಝಸೆ ನಾರಾಜ ನಹಿ ಜಿಂದಗಿ ಹೈರಾನ ಹೂಂ ಮೈ..ತೆರೆ ಮಾಸೂಮ ಸವಾಲೊಂಸೆ ಪರೆಶಾನ ಹೂಂ ಮೈ'. ಹಾಡನ್ನು ನೆನೆಸಿಕೊಳ್ಳಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅನಿಸಿಕೆ ಸರಿ. ನಾನು ಪದ ಪ್ರತಿ ಪದದ ಅನುವಾದ ಮಾಡದೇ, ಭಾವಾನುವಾದ ಮಾಡುವಾಗಿನ ಸ್ವಾತಂತ್ರ್ಯವನ್ನು ಉಪಯೋಗಪಡಿಸಿಕೊಂಡಿದ್ದೇನೆ. ನಗುವಿಗೆ ವಿರುದ್ಧವಾದ ಭಾವವಿರಲಿ ಎಂಬ ಆಶಯವೂ ಇತ್ತು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ನೆನಪಿಸಿದ ಆ ಹಾಡಿನ ಭಾವಾನುವಾದವನ್ನು ನಾನು ಈಗಾಗಲೇ ಪ್ರಕಟಿಸಿರುತ್ತೇನೆ: http://sampada.net/b...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಸ್ಸಹಾಯಕ ಸ್ಥಿತಿ ಇಲ್ಲೂ ಇದೆ ಅಲ್ಲೂ ಇದೆ ಏಕಾಂತದ ಈ ರಾತ್ರಿ ಇಲ್ಲೂ ಇದೆ ಅಲ್ಲೂ ಇದೆ ನುಡಿಯಲೇ ಬೇಕಾದ ಮಾತುಗಳಿವೆ ನೂರು, ಆದರೆ ಯಾರಲ್ಲಿ ನುಡಿಯಲಿ? ಅದೆಲ್ಲಿಯತನಕ ಮೌನಿಯಾಗಿ ಸಹಿಸಿಕೊಂಡಿರಲಿ? ಈ ಮನಸ್ಸು ಹೇಳುತ್ತಿದೆ ಇಂದು ಈ ಸಮಾಜದ ಎಲ್ಲಾ ಕಟ್ಟಳೆಗಳನ್ನೂ ಮೀರಿ ಬಿಡೋಣವೆಂದು ನಮ್ಮ ನಡುವಿರುವ ಈ ಗೋಡೆಯ ಕೆಡವಿಬಿಡೋಣವೆಂದು ಏಕೆ ಮನದೊಳಗೇ ಬೇಯುತ್ತಲಿರಬೇಕು? ಈ ಜನರಿಗೆಲ್ಲಾ ಹೇಳಿ ಬಿಡೋಣ ಇಂದು ಹಾಂ... ನಾವು ಪ್ರೀತಿಸ್ತೇವೆ ... ನಾವು ಪ್ರೀತಿಸ್ತೇವೆ ... ಪ್ರೀತಿಸ್ತೇವೆ ... ಈಗ ನಮ್ಮ ಮನಗಳಲ್ಲೂ ಇದೇ ಮಾತು ಇಲ್ಲೂ ಇದೆ ಅಲ್ಲೂ ಇದೆ. ಸಾಲುಗಳು ಬಹಳ ಹಿಡಿಸಿದವು. ಶಾರದ ಎಮ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಸ್ವಂತದ್ದೇನಿಲ್ಲ... ಭಾವನೆಗಳನ್ನು ಆ ಭಾಷೆಯಿಂದ ಈ ಭಾಷೆಗೆ ಆಮದುಮಾಡಿದ್ದೇನೆ ಅಷ್ಟೇ... ಮೆಚ್ಚುಗೆಯ ಮಾತುಗಳು ಮೂಲ ಕವಿ ಸಾಹಿರ್ ಲೂಧಿಯಾನ್ವಿಯವರಿಗೇ ಸಲ್ಲಬೇಕು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.