ತಾಲಿಬಾನಿಯೋರ್ವ ನೊಣವಾಗಿ ಬಂದಿರಬಹುದೇ..!?

5

ಆರ್ಥಿಕ ಹಿಂಜರಿತದ ಪರಿಣಾಮ ಹೀಗಾಗಬಹುದೆಂದು ಅರಿತಿತ್ತೆ ಜನ
ಅಮೇರಿಕಾ ಅಧ್ಯಕ್ಷ ಒಬಾಮ ಕೂಡ ನಿನ್ನೆ ಹೊಡೆಯುತ್ತಿದ್ದನಲ್ಲಿ ನೊಣ

ತಮ್ಮನ್ನು ಕಾಡಿದವರ ಬಿಡಲಾರೆವೆಂಬ ಮಾತನ್ನು ಒತ್ತಿ ಹೇಳುವಂತಿತ್ತು
ಅಲ್ಲಿ ಆ ನೊಣವನ್ನೂ ಚಾಣಾಕ್ಷತನದಿಂದ ಕೊಲ್ಲುವ ತಯಾರಿ ನಡೆದಿತ್ತು

ಯಾರಿಗೆ ಗೊತ್ತು ಆ ನೊಣದೊಳಗೆ ಯಾರ ಆತ್ಮ ಇದ್ದಿರಬಹುದೆಂದು
ನನಗನುಮಾನ ತಾಲಿಬಾನಿಯೋರ್ವ ನೊಣವಾಗಿ ಬಂದಿರಬಹುದೆಂದು

ನೊಣದ ಮೂಲಕ ಅಮೇರಿಕಾ ಅಧ್ಯಕ್ಷನ ಕೆಡಹಲು ಹೊರಟಿದ್ದಿರೋ
ನೊಣದಿಂದ ಕಡಿಸಿ ಆತನ ದೇಹಕ್ಕೆ ವಿಷವೇನಾದರೂ ಉಣಿಸಿದ್ದರೋ

ನೊಣವೇನೋ ತನ್ನ ಮಹತ್ಕಾರ್ಯವನು ಮುಗಿಸಿ ನೆಲಕ್ಕುರುಳಿ ಬಿತ್ತು
ಪ್ರಾಣಿದಯಾ ಸಂಘಟನೆಗಳಿಗೆ ಅಲ್ಲಿ ಈಗ ಹೊಸ ವಿಷಯ ಸಿಕ್ಕಿ ಬಿಡ್ತು

ಒಬಾಮಾ ವಿರುದ್ಧ ಇನ್ನು ಊರೆಲ್ಲಾ ಘೋಷಣೆಗಳು ಕೇಳಿಬರಬಹುದು
ನೊಣ ಹೊಡೆದುದಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿ ಬರಬಹುದು

ವಿಶ್ವದೆಲ್ಲೆಡೆಯಿಂದ ನೊಣಗಳ ದಂಡುಗಳೆ ಹೊರಟು ಬಿಟ್ಟಿವೆಯಂತೆ
ಶ್ವೇತಭವನದಲಿ ಧರಣಿ ನಡೆಸಿ ಆತನಿಂದ ನ್ಯಾಯ ಕೇಳುತ್ತಾವಂತೆ

ಕಾರಣವಿಲ್ಲದೆ ಯಾರೇ ಆದರೂ ನೊಣ ಕೊಂದರದು ಅನ್ಯಾಯ
ಸುದ್ದಿ ಮಾಡಲೆಂದೇ ನೊಣವನು ಬಿಟ್ಟಿದ್ದರೆಂದರೂ ಯಾವ ನ್ಯಾಯ

ಆರ್ಥಿಕ ಹಿಂಜರಿತದ ಪರಿಣಾಮ ಹೀಗಾಗಬಹುದೆಂದು ಅರಿತಿತ್ತೆ ಜನ
ಅಮೇರಿಕಾ ಅಧ್ಯಕ್ಷ ಒಬಾಮ ಕೂಡ ನಿನ್ನೆ ಹೊಡೆಯುತ್ತಿದ್ದನಲ್ಲಿ ನೊಣ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ಸೂಪರ್...ಬೆಳಿಗ್ಗೆ ಈ ಸುದ್ದಿ ಪತ್ರಿಕೆಯಲ್ಲಿ ಓದಿದ್ದೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ,
ಸೂಪರ್ ಧನ್ಯವಾದಗಳು.

ಕ್ಷಮಿಸಿ, ಕವನದ ಹೆಸರನ್ನು ಬದಲಾಯಿಸಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ ಅದು ನೊಣವೋ ಸೊಳ್ಳೆಯೋ confirm ಆಗಿದೆಯಾ..?
ಸೂಪರ್ ಕವನ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸರ್ ಅದು ನೊಣವೋ ಸೊಳ್ಳೆಯೋ confirm ಆಗಿದೆಯಾ..?<<

ಅದು ಸೊಳ್ಳೆಯಾಗಿದ್ದಿದ್ದರೆ, ನನ್ನ ಈ ಅನುಮಾನಕ್ಕೆ ಇನ್ನೂ ಬಲ ಬರುತ್ತದೆ:

"..... ಕಡಿಸಿ ಆತನ ದೇಹಕ್ಕೆ ವಿಷವೇನಾದರೂ ಉಣಿಸಿದ್ದರೋ"

ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೊಣವನ್ನ ತಾಲಿಬಾನ್ ಗಳಿಗೆ ಹೋಲಿಸಿದ ನಿಮಗೆ 'ಅಖಿಲ ಭಾರತ ಅಲ್ಪಸಂಖ್ಯಾತ ನೊಣಗಳ ಸಂಘ' ಮಾನನಷ್ಟ ಮೊಕದ್ದಮೆ ಹೂಡಲು ಉದ್ದೇಶಿಸಿದ್ದಾವಂತೆ,ನಿಮ್ಮ ಸಿದ್ದತೆ? :D :-D :lol:

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಗ್ನರಾಗಿ ಊರೆಲ್ಲಾ ಸುತ್ತುವ ನೊಣಗಳು ತಮ್ಮ ಮಾನ ನಷ್ಟ ಆಗಿದೆ ಎಂದು ವಾದಿಸುವ ಮೊದಲು, ತಮಗೆ ಅದು ಇತ್ತು ಅನ್ನುವುದನ್ನು ಸಾಬೀತು ಪಡಿಸಲಿ ಎಂದು ಪಾಟೀ ಸವಾಲು ಹಾಕುತ್ತೇನೆ.
ಇಲ್ಲದ್ದನ್ನು ಕಳೆದುಕೊಂಡೆವೆಂದರೆ ಯಾವ ನ್ಯಾಯಾಲಯ ಒಪ್ಪುತ್ತದೆ ಹೇಳಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು, ವಿನುತ.

ನೀವೋ ಮುಖವೆರಡು ಮಾಡಿ ನಕ್ಕು ಸುಮ್ಮನಾದಿರಿ
ನಾನೂ ಸುಮ್ಮನಿದ್ದರೆ ಹೇಗೆ ನನ್ನ ಬೈಯ್ಯದಿರುವಿರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲ್ಸವೇನೂ ಇರ್ಲಿಲ್ಲ.:-D

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಸಮಂಜಸವಾದ ಮಾತುಗಳು ಪ್ರಸ್ತುತ ಆರ್ಥಿಕ ಪರಿಸ್ಥಿತಿಗೆ.ಇವು ಬಲವಾದ ಕಟುಸತ್ಯಗಳು. ಅಮೇರಿಕದ ಬಾಲಬಡುಕರು ಇನ್ನಾದರೂ ಎಚ್ಚೆತ್ತಿಕೊಳ್ಳಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.