ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು?!

0

ಮಗಳನ್ನು ಹಾಸ್ಟೆಲಿಗೆ ಕಳುಹಿಸಿ ನಾವಿಲ್ಲಿ ಹೇಗೆ ಇರುವುದು
ಈ ಪ್ರಶ್ನೆ ಈ ಮುಂಜಾನೆ ನನ್ನ ಮಗಳಬ್ಬೆ ನನ್ನ ಕೇಳಿದ್ದು

ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು
ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು

ಮಗಳ ಮೇಲೆ ಮಮತೆ ನಿನಗೆ ನನ್ನ ಮೇಲೆ ಪ್ರೀತಿ ಇಹುದು
ಎಲ್ಲರೂ ಜೊತೆಗಿರಲೆಮ್ಮ ಮೇಲೆ ದೇವರ ದಯೆ ಎಲ್ಲಿಹುದು

ಮಕ್ಕಳಿಗಾಗಿ ನಾವು ತ್ಯಾಗ ಮಾಡಬೇಕು ಅದುವೇ ನಮ್ಮ ಜೀವನ
ಮಕ್ಕಳ ಮರೆತು ಬದುಕಿದರೆ ಯಾರಿರುವರೆಮಗೆ ಬಂದಾಗ ಮರಣ

ಭಂಗದ ಬದುಕು ಕಷ್ಟವಾಗದು ನೋವು ತಿಂದಿಹ ಜೀವವೆಮ್ಮದು
ಹಾಸ್ಟೆಲಿನಲ್ಲಿ ಮಗಳು ನೊಂದರೆ ನಮಗೆ ನೆಮ್ಮದಿ ಎಲ್ಲಿಹುದು

ಮಗಳು ನಲಿಯುತ್ತಿದ್ದರೆ ನಿನ್ನ ಮೊಗದಲ್ಲೂ ನಗುವು ಇರಬಹುದಲ್ಲ
ನೀವಿಬ್ಬರೂ ಖುಷಿಯಲ್ಲಿದ್ದರೆ ನನಗೂ ಒಳ್ಳೆಯ ನಿದ್ದೆ ಬರಬಹುದಲ್ಲಾ

ನಮ್ಮ ಮಗಳು ಡಾಕ್ಟರ್ ಆಗಬೇಕಿದ್ದರೆ ಈ ಕಷ್ಟವನು ಸಹಿಸಬೇಕು
ನಾಳೆ ಒಳ್ಳೇದಾಗಬೇಕಿದ್ದರೀ ನೋವ ನಾವಿಂದು ನುಂಗಿಕೊಳ್ಳಬೇಕು

ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು
ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು

(ತುಳುವಿನಲ್ಲಿ ಓದಬೇಕಿದ್ದರೆ ಇಲ್ಲಿಗೆ ಭೇಟಿ ಕೊಡಿ. http://athradi.wordpress.com)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು ಸರ್ ಈ ನೋವು ಅಕ್ಕನ್ನ ಅಲ್ಲಿಗೆ ಬಿಟ್ಟು ಬಂದಾಗ ನಮ್ಮ ಮನೆಯಲ್ಲೂ ಇತ್ತು. ಅವಳೇನೋ ನಾನು ವೈದ್ಯೆಯಾಗಲೇಬೇಕೆಂಬ ದೃಢ ನಿರ್ಧಾರ ಮಾಡಿ ಹೊರಟಳು. ಅವಳನ್ನು ಮೊದಲ ಬಾರಿ ಅಲ್ಲಿಗೆ ಬಿಟ್ಟು ಬರಲು ಅಪ್ಪ ಅವಳ ಜೊತೆ ಹೋಗಿದ್ರು. ಅಕ್ಕನಿಗಂತೂ (ನನಗೂ ಕೂಡ) ಅಮ್ಮನ್ನ ಬಿಟ್ಟಿದ್ರೂ ಅಪ್ಪನ್ನ ಬಿಟ್ಟಿರೋದು ಕಷ್ಟ. ಅವಳನ್ನು ಬಿಟ್ಟು ಅಪ್ಪ ಒಬ್ರೆ ಬಂದಿದ್ದಾರೆ ಬಸ್ಸಲ್ಲಿ. ದಾರಿಯುದ್ದಕ್ಕೂ ಅವಳದೇ ಚಿಂತೆ. ಮನೆಗೆ ಬಂದ ತಕ್ಷಣ ಅಪ್ಪನ್ನ ನೋಡಿ ಅಜ್ಜಿ ಅಳಲು ಶುರು ಮಾಡಿಬಿಟ್ರು ಅಪ್ಪಂಗೂ ಅಳು ಬಂದುಬಿಟ್ಟಿತು.... ಆಗಲೇ ನಂಗೆ ಹೇಳಿದ್ರು ನಿನ್ನನ್ನ ಎಲ್ಲೂ ಕಳಿಸೊಲ್ಲಮ್ಮ ಬೆಂಗಳೂರಲ್ಲೇ ಓದು ನೀನು ಅಂತ.....
ನಿಮ್ಮ ಮಗಳಿಗೆ ಮುಂದಿನ ಸುತ್ತಿನಲ್ಲಿ ಹತ್ತಿರದ ಕಾಲೇಜಿನಲ್ಲೆ ಸೀಟು ಸಿಗುವಂತಾಗಲಿ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನಾದರು ಪಡೆಯಬೇಕೆಂದರೆ, ಏನನ್ನಾದರೂ ತ್ಯಜಿಸಲೇಬೇಕೆಲ್ಲವೇ... ಕೆಲವೇ ವರ್ಷಗಳಲ್ಲಿ ನಿಮ್ಮ ಮಗಳು ಡಾಕ್ಟರ್ ಆಗಿ ನಿಮ್ಮ ಮುಂದೆ ಬಂದಾಗ ನಿಮಗಿಂತ ಹೆಚ್ಚಗೆ ಸಂತೋಷ ಪಡುವವರು ಬೇರಿನ್ಯಾರು??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸುರೇಶ್...
ನಾಳೆ ನಿಮ್ಮ ಮಗಳು ಒಬ್ಬ ಉತ್ತಮ ವೈದ್ಯೆ ಆದಾಗ, ನಿಮಗಿಂತ ಹೆಮ್ಮೆ ಪಡುವವರು ಯಾರು? ಅಗಲಿಕೆ ಕ್ಷಣಿಕ ಅಷ್ಟೆ..., ದೇಹದಿಂದ ದೂರವಾಗಿದ್ದರೂ ಅವಳ ಮನಸ್ಸು ಯಾವಾಗಲೂ ನಿಮ್ಮಿಬ್ಬರನ್ನೇ ಸುತ್ತುವರೆದಿರುತ್ತದಲ್ಲವೇ? ನಿಮ್ಮಿಬ್ಬರ ಮನಸ್ಸೂ ಸದಾಕಾಲವೂ ಅವಳ ಒಳಿತನ್ನೇ ಹಾರೈಸುತ್ತಿರುತ್ತದಲ್ಲವೇ? ಒಳ್ಳೆಯದನ್ನೇ ಚಿಂತಿಸಿ, ಅವಳ ಭವಿಷ್ಯದ ಕನಸು ಕಾಣುತ್ತಾ, ಮುಂದಿನ ಸುತ್ತಿನಲ್ಲಿ ಅವಳಿಗೆ ಇಲ್ಲೇ ಸೀಟು ಸಿಗಲಿ ಎಂದು ಹಾರೈಸುವೆ.

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆಯವರೆ,
ಕನ್ನಡ ಕವನ ತುಂಬಾ ಚೆನ್ನಾಗಿದೆ.
'ಮಗಲ್ ಹಾಸ್ಟೆಲ್‌ಗ್ ಪೋಯಲ್‌ಡ ನಮ ಎಂಚ ಉಪ್ಪುನಿ'-ತುಳು ಕವನ ಸೂಪರ್.
ನಿಮ್ಮ ಮಗಳಿಗೆ, ಮುಂದಿನ ಕೌನ್ಸೆಲಿಂಗ್‌ನಲ್ಲಿ ಬೆಂಗಳೂರಲ್ಲೇ ಸೀಟು ಸಿಗಲಿ ಎಂದು ಹಾರೈಸುವೆ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದುಶ್ರೀ, ಡಾ. ಮಧು, ಶ್ಯಾಮಲಾ ಜನಾರ್ಧನನ್ ಹಾಗೂ ಗಣೇಶ

ಹಾರ್ದಿಕ ಧನ್ಯವಾದಗಳು ನೀವು ತೋರಿದ ಕಾಳಜಿಗೆ ಹಾಗೂ ನಿಮ್ಮ ಶುಭ ಹಾರೈಕೆಗಳಿಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವಾಗೆನ್ ಹೆಗ್ಡೆ ಅವರೆ ಮೊಬೈಲ್ ಇದೆ ಬೇಕೆಂದಾಗ ಮಾತಾಡ್ಬೋಡು, ತಿಂಗಳಿಗೊಂದುಸಾರಿಯಂತೆ ನೋಡಿಕೊಂಡುಬಂದರಾಯಿತು....ಮೊದಮೊದಲು ಬೇಸರವಾಗುತ್ತದೆ ನಂತರ ಅದಕ್ಕೆ ಮನಸ್ಸು ಒಗ್ಗುತ್ತದೆ....ಮನುಷ್ಯ ಜೀವನವೆ ಹಾಗಲ್ಲವೆ.....ಆದರು ನಿಮಗೆ ಆ ದೇವರು ಆ ಸಂಧರ್ಭಕ್ಕೆ ಒಗ್ಗಿಕೊಳ್ಳು ವಂತ ಮನಸ್ಥಿಯನ್ನು ಬೇಗ ಕೊಡಲಿ....ಅದರಲ್ಲು ಮಗಳ ಮುಂದಿನ ಭವಿಷ್ಯವನ್ನು ನೆನೆದಾಗ ಮನಸ್ಸು ಬೇಗ ಒಗ್ಗುತ್ತದೆ.....ಅದರಲ್ಲು ತಂದೆ ತಾಯಂದರಿಗೆ ತಮ್ಮ ಮಕ್ಕಳ ಮೇಲಿರುವಂತ ಪ್ರೀತಿ ಅಪಾರವಾಗಿದ್ದರು ...ನಮ್ಮ ಜವಾಬ್ದಾರಿ ಪ್ರೀತಿಗಿಂತ ಮುಂದೆ ಇರುತ್ತದೆ ಅಲ್ಲವೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಕ್ಕಳನ್ನ ದೂರ ಓದೋಕೆ ಕಳಸಿಕೊಡೋದು ಹಾಗೆ ಮದುವೆ ಮಾಡಿ ಬೇರೆ ಮನೆಗೆ ಕಳಿಸೋದು .ಸಂತೋಷ ಮತ್ತು ದುಃಖ ಎರಡೂ ಒಟ್ಟಿಗೆ ಆಗೋ ಮತ್ತು ಅನುಭವಿಸುವ ಸಂದರ್ಭಗಳು . ಅವಳು ಚೆನ್ನಾಗಿ ಓದಿ ಸಮಾಜಕ್ಕೆ ಒಳ್ಳೆ ಸೇವೆ ಸಲ್ಲಿಸಿಸಲಿ ಅಂತ ಆ ದೇವರಲ್ಲಿ ಕೇಳೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿ ಮತ್ತು ಪ್ರಭಾಕರ್,

ಹೃತ್ಪೂರ್ವಕ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.