ಸಂಪದ ನನಗೇಕೆ ಮುದ ನೀಡಬೇಕು?

4.333335

ಸಂಪದ ಎಂದರೆ ನಾವು. ಸಂಪದ ನಮ್ಮದು.ಅದು ನಮಗೆ ಮುದ ನೀಡುವುದು ಹೇಗೆ?

ಅದು ನಮಗೆ ಮುದ ನೀಡುವ ಸಾಧನವಲ್ಲ. ಸಂಪದಕ್ಕೆ ನಾವು ಮುದ ನೀಡಬೇಕು.

ಒಳ್ಳೆಯ ಲೇಖನಗಳು ಬರುತ್ತಿಲ್ಲ ಅನ್ನುವ ಮಾತೂ ಇದೆ. ಒಳ್ಳೆಯ ಕೆಲಸ ನಾನೇ ಏಕೆ ಮಾಡಬಾರದು? ಎಲ್ಲವನ್ನೂ ಅನ್ಯರೇ ಮಾಡಬೇಕೆಂಬ ನಿರೀಕ್ಷೆ ಏಕೆ?

ಯಾರೇ ಆದರೂ, ತಮ್ಮ ಮಾನಸಿಕ ಸ್ಥಿತಿಯ ಮತ್ತು ಭಾವನೆಗಳ ಏರಿಳಿತಗಳಿಗೆ ಸಂಪದವನ್ನು ದೂಷಿಸಬೇಡಿ.

ನಾನು ಎಂದಿನವರೆಗೆ ಪರರಿಂದ ನಿರೀಕ್ಷಿಸುತ್ತಿರುತ್ತೇನೋ ಅಲ್ಲಿಯವರೆಗೆ ನನಗೆ ಯಾರೂ ಮುದ ನೀಡುತ್ತಿಲ್ಲ ಅನ್ನುವ ಯೋಚನೆ ಮನದಲ್ಲಿ ಮೂಡಬಹುದು.

ನಾವು ಏನಾದರೂ ಬರೆದು, ಅನ್ಯರಿಗೆ ಮುದನೀಡಿ ಆ ತೃಪ್ತಿಯಲ್ಲಿ ಮುದ ಪಟ್ಟುಕೊಂಡರೆ ಹೇಗೆ? ನಿಜವಾಗಿ ಹೇಳಬೇಕೆಂದರೆ ನನಗೆ ಮುದ ನೀಡುವ ಸಂಗತಿ ಇದೇ ಆಗಿದೆ.

ಮನಸ್ಸಿಗೆ ಬೇಸರವಾದಾಗ ಮನೆಬಿಟ್ಟು ಹೋಗುವರೇ? ಕಟ್ಟಿಕೊಂಡವರ ಬಿಟ್ಟು ಹೊರಡುವುದುಂಟೇ? ಹೆತ್ತ ಮಕ್ಕಳ ತೊರೆಯುವುದುಂಟೇ?

ಹಾಗೊಮ್ಮೆ ಹೋಗೇ ಹೋಗುವವರ ತಡೆಯಲು ನಾವ್ಯಾರು? ನಾ ತೆರಳಲು ಮರಳಿ ಕರೆದು ಕೂರಿ ಎನ್ನಲು ನನಗೆ ನೀವ್ಯಾರು?

ನನ್ನ ಪಾಲಿಗಂತೂ ಸಂಪದ ಸಂಪದ್ಭರಿತವಾಗಿದೆ.

ನಾನು ಮನಬಂದಾಗ ಬರೆಯುತ್ತೇನೆ.

ನನ್ನ ಮನ ಬಯಸಿದ್ದನ್ನು ಓದುತ್ತೇನೆ.

ಪ್ರತಿಕ್ರಿಯಿಸಬೇಕೆನಿಸಿದಾಗ ಪ್ರತಿಕ್ರಿಯಿಸುತ್ತೇನೆ.

ತಪ್ಪುಗಳು (ಬರಹದ ಕನ್ನಡದಲ್ಲಿ - ಬರಹಗಾರನ ಭಾವನೆಗಳಲ್ಲಿ ಅಲ್ಲ) ಕಂಡು ಬಂದಾಗ ಲೇಖಕರನ್ನು ಪ್ರತ್ಯೇಕವಾಗಿ ಸಂಪರ್ಕಿಸಿ ತಿದ್ದುತ್ತೇನೆ. ಒಪ್ಪಿದರೆ ಸಂತೋಷ. ಒಪ್ಪದಿದ್ದರೆ, ಬೇಸರವೂ ಇಲ್ಲ.

ನಾನಿಲ್ಲಿ ಬರೆದಾಗ ಕೊಂಡಾಡುವವರಿರಬಹುದು. ನಾನು ಬರೆಯುವುದನು ನಿಲ್ಲಿಸಿದಾಗ, ಅಳುವವರು ಯಾರೂ ಇಲ್ಲ. ನನಗೆ ಕರೆ ಮಾಡಿ "ದಯವಿಟ್ಟು ಬನ್ನಿ, ಏನಾದರೂ ಬರೆಯಿರಿ ಸ್ವಾಮೀ," ಎನ್ನುವವರಿಲ್ಲ.

ಏಕೆಂದರೆ ಯಾರೇ ಆಗಲಿ ಇಲ್ಲಿ ಅನಿವಾರ್ಯರಲ್ಲ.

ಸಂಪದ ನನಗೆ ಅನಿವಾರ್ಯ ಆಗಿರಬಹುದು. ಸಂಪದಕ್ಕೆ ನಾನಲ್ಲ.

ಇದ್ದಷ್ಟು ದಿನ ಇರೋಣ ಒಂದಾಗಿ, ಹೋಗುವ ಮಾತೇಕೆ?

ಮುಂದೊಂದು ದಿನ ಕಾಲನ ಕರೆ ಬಂದಾಗ, ಹೇಳದೇ ಹೋಗಬೇಕು.

ಆಗ ಯಾರಿಗೂ ಹೇಳದೇ ಹೋಗೋಣ, ಒಬ್ಬೊಬ್ಬರಾಗಿ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಎಷ್ಟು ಸತ್ಯವಾದ ಮಾತನ್ನು ಹೇಳಿದ್ದೀರಿ ಆಸು ಅವರೇ... ಸಂಪದ ನಮಗೊಂದು ಖುಶಿ ಕೊಡುವ ತಾಣ . ಅದರಿಂದ ನಮಗೆ ಲಾಭವಾಗಿದೆಯೇ ಹೊರತು ನಷ್ಟವೇನಿಲ್ಲ. ಹಾಗಾಗಿ ಸಂಪದದ ಸಂಪತ್ತಿನ ಉಪಯೋಗ ಮಾತ್ರ ಪಡೆಯೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸಂಪದ ನಮಗೊಂದು ಖುಶಿ ಕೊಡುವ ತಾಣ . ಅದರಿಂದ ನಮಗೆ ಲಾಭವಾಗಿದೆಯೇ ಹೊರತು ನಷ್ಟವೇನಿಲ್ಲ.<<
ಈ ಮಾತೂ ನಿಜ. ಧನ್ಯವಾದಗಳು.

>>ಹಾಗಾಗಿ ಸಂಪದದ ಸಂಪತ್ತಿನ ಉಪಯೋಗ ಮಾತ್ರ ಪಡೆಯೋಣ. <<

ಈ ಧೋರಣೆ ಯಾರದೇ ಆದರೂ, ಅದು ತಪ್ಪು, ಭವಾನೀ.

ಸಂಪದಕ್ಕೆ ನಮ್ಮಿಂದಾಗುವ ಕೊಡುಗೆ ನೀಡೋಣ.
ಅದನ್ನು ಇನ್ನೂ ಇನ್ನೂ ಹೆಚ್ಚು ಹೆಚ್ಚು ಸಂಪದ್ಭರಿತವಾಗಿ ಮಾಡುತ್ತಲೇ ಇರೋಣ.
ಇಲ್ಲವಾದರೆ ಈ ಸಂಪತ್ತು ಖಾಲಿ ಆಗುವುದಿಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮನದ ಮಾತೇ ನೀವೂ ಆಡಿದಿರಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಎಷ್ಟೊಂದು ಜನ ಸಂಗೀತ ಶಾಸ್ತ್ರ ತಿಳಿದವರಿದ್ದೀರಿ! ನಿಮ್ಮ ಮೇಲೆ ನನಗೆ ಹೊಟ್ಟೆ ಕಿಚ್ಚು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ ;)

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಹೊಟ್ಟೆಯ ಕಿಚ್ಚನ್ನು ಶಮನಗೊಳಿಸಿ, ಅತ್ತ ಗಮನಹರಿಸಿ, ಶ್ರಮ ಪಟ್ಟು ನೋಡಿ.
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ವಿಚಾರ ಸರಿ , ಸಂಪದ ದ ಬಗ್ಗೆ ನಿಮ್ಮ ಅಭಿಪ್ರಾಯ ನನಗೆ ತುಂಬಾ ಒಪ್ಪಿಗೆಯಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಸುರೇಶ್

ನಿಜವಾಗಿ ಎಷ್ಟು ಒಳ್ಳೆಯ ಮಾತು ಹೇಳಿದ್ದೀರಿ... ನಾವು ಬಿಡುವುದರಿಂದ ಸಂಪದಕ್ಕೆ ಯಾವ ನಷ್ಟವೂ ಇಲ್ಲ... ನಷ್ಟವೇನಿದ್ದರೂ ನಮಗೇ........ ಹೌದು... ನಾವೇ ಅದನ್ನು ಇನ್ನೂ ಸಂಪದ್ಭರಿತವನ್ನಾಗಿ ಮಾಡಬೇಕು. ಸಂಪದದ ಸಂಪತ್ತು ಮೊಗೆದಷ್ಟೂ, ಅಧಿಕವಾಗುತ್ತಲೇ ಇರಬೇಕು. ಧನ್ಯವಾದಗಳು ನಿಮಗೆ..

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದ ಯಾವಾಗಲೂ ನಿಂತ ನೀರಾಗದೆ ಸದಾ ಹರಿಯುವ ನೀರಾಗಲಿ ನಿತ್ಯ ಹೊಸತು ಕೊಡಲಿ ಸರ್. ನಿಮ್ಮ ಮಾತು ಸತ್ಯ ನಾವೆಲ್ಲ ಒಂದುಗೂಡಿ ಪ್ರಯತ್ನಿಸೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಿದ ಕುಟುಂಬ ತುಂಬಿದಾಗೆ ಇರಲಿ ಇನ್ನು ಹೆಚ್ಚು ಹೆಚ್ಚು ಸಂಪನ್ನರ್ರು ಸೇರಲಿ ಸಂಪದಕ್ಕೆ....ಸಂಪದದ ಸಂಪತ್ತು ಎಲ್ಲೆಲ್ಲು ಹರಿಯಲಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಸು ಹೆಗ್ಡೆ ಅವರು ಬರೆದ ಈ ಬರಹ ನನಗೆ ಅಚಾನಕ್ಕಾಗಿ ಸಿಕ್ಕಿತು .. ಓದಿ ಖುಷಿಯೂ ಆಯ್ತು.. ಇಲ್ಲಿನ ಅವರ ಆಲೋಚನಾ ಲಹರಿ ನಂಗೆ 'ದೇಶಕ್ಕಾಗಿ ನೀ ಎಂದು ಮಾಡಿದೆ ಎನ್ನುವುದು ಮುಖ್ಯ , ನಿನಗೆ ದೇಶ ಏನು ಕೊಟ್ಟಿತು ಎನ್ನುವುದು ಅಲ್ಲ' ಎಂಬ ಮಾತು ನೆನಪಿಸಿತು.. ಸಂಪದಕ್ಕೆ ನನ್ನ ಕೈಲಾದ ಕೊಡುಗೆ ಸಲ್ಲಿಸುತ್ತಲೇ ಇರುವೆ - ಸಾಧ್ಯ ಆಗುವವರೆಗೆ... ----------------------------------------------------------------- ಈ ಬರಹದ ಕೆಳಗೆ ಸಿಕ್ಕ ಸಂಪದ ಬಗೆಗಿನ ಲೇಖನಗಳು.. ಗೆಳೆಯನಾಗಿ "ಸಂಪದ" | ಸಂಪದ - Sampada http://sampada.net/b... ’ಸಂಪದ ಕನ್ನಡ ತಾಣ" ಕ್ಕೆ ಪಾದಾರ್ಪಣೆ. ಅರ್ಥಾತ್ ಮೊದಲ ಹೆಜ್ಜೆ ! | ಸಂಪದ - Sampada http://sampada.net/b... ಸಂಪದದಲ್ಲಿ ಯಾಕೆ ಹೀಗೆ....? | ಸಂಪದ - Sampada http://sampada.net/b... ಸಂಪದ ನೋಡದಿದ್ದರೆ | ಸಂಪದ - Sampada http://sampada.net/b... ಅಸು ಹೆಗ್ಡೆ ಅವ್ರೆ, ಇದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಓದಿದೆ.... ಒಂದು ಚಿಂತನಾ ಸುರ್ ಸುರ್ ಬತ್ತಿ ಹಚಿದ್ದಕ್ಕಾಗಿ ನನ್ನಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಬರಹ, ಅತ್ಯುತ್ತಮ ಪ್ರತಿಕ್ರಿಯೆಗಳು. ಹುಡುಕಿ ತೆಗೆದು ನ‌‌ಮ‌ಗೆಲ್ಲ ತೋರಿಸಿಕೊಟ್ಟ ಸಪ್ತಗಿರಿವಾಸಿಗಳಿಗೆ ಅನೇಕ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದ ಎಂದರೆ ನಾವು. ಸಂಪದ ನಮ್ಮದು. ಇದರಲ್ಲಿ ಯಾವ ಉತ್ಪ್ರೇಕ್ಷೆಯು ಇಲ್ಲ. ನಿಮ್ಮ ಲೇಖನಗಳು ಮತ್ತು ಲೇಖರನ್ನು ಆಗಾಗ ಎಚ್ಚರಿಸುವ ಕಿವಿಮಾತುಗಳು ನಮಗೆ ಬಹಳ ಪ್ರಿಯ. ನಾನು ದಕ್ಷಿಣ ಕನ್ನಡದ ಜಾಣ ಜಾಣೆಯರ ಬಗ್ಗೆ ಒಂದು ಲೇಖನ ಬರೆದಾಗ ತಾವು ಎಷ್ಟು ಪ್ರೋತ್ಸಾಹ ಕೊಟ್ಟಿರಿ. ಹಲವು ತಿದ್ದುಪಡಿಗಳನ್ನು ಸಮಯೋಚಿತವಾಗಿ ಮಾಡಿ ತೋರಿಸಿದಿರಿ. ಇವಕ್ಕೆಲ್ಲ ಒಂದು ಸೊಗಸಾದ ತಾಣವನ್ನು ನಿರ್ಮಿಸಿಕೊಟ್ಟ ನಾಡಿಗ್ ರವರಿಗೆ ನಮ್ಮ ವಂದನೆಗಳು. ಮನಸ್ಸಿಗೆ ಬಂದಾಗ ತಕ್ಷಣ ಬರೆದು, ಸುಮ್ಮನೆ ಎಸೆದರೆ, ಸಾಕು ಅದು ಸಂಪದದ ಮಡಿಲಲ್ಲಿ ಬಿಳುತ್ತದೆ.! ಪ್ರಕಟವಾಯಿತೆ ಇಲ್ಲವೇ ಎಂದು ಸಂಪಾದಕರನ್ನು ಪ್ರಶ್ನಿಸುವ ಗೋಜಿಲ್ಲ ! ಇಂತಹ ಸ್ವಾತಂತ್ರ್ಯವೇ ನಮಗೆ ಮುದಕೊಡುವ ಸಂಗತಿಗಳಲ್ಲೊಂದು. ಇದು ನನ್ನ ಅನಿಸಿಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.