ಹೀಗೇಯೇ ನಡೆದರೆ ಐದು ವರ್ಷ ಉಳಿಯುವುದಿಲ್ಲ!!!

0

ನಮ್ಮ ಸರ್ಕಾರಕ್ಕೆ ಅದೇಕೋ ಇದೀಗ ಕೆಟ್ಟ ಕಾಲ
ರೆಡ್ಡಿಗಳು ನೋಡಿ ನಿಧಾನಕ್ಕೆ ಬಿಚ್ಚುತ್ತಿದ್ದಾರೆ ಬಾಲ

ಸಿರಿಯೊಂದಿಗೆ ಅಧಿಕಾರವೂ ಸೇರಲು ಅಧೋಗತಿ
ತನ್ನವರಿಗೇ ಜನರು ಕಾಣಿಸದೇ ಇರಲಾರರು ಗತಿ

ಗಣಿ ದೊರೆಗಳಿಗೆ ಗುಟ್ಟು ರಟ್ಟಾಗುವುದೆಂಬ ಭಯ
ಕೇಂದ್ರದ ತನಿಖೆಯಿಂದ್ಯಾರೂ ನೀಡುತ್ತಿಲ್ಲ ಅಭಯ

ತಮಗೇನು ಬೇಕೆಂಬುದನೇ ಇವರು ಅರಿತಂತಿಲ್ಲ
ತಾವು ಕುಳಿತ ಮರದ ರೆಂಬೆಯ ಕಡಿಯುತಿಹರಲ್ಲ

ಅಧಿಕಾರದ ಗದ್ದುಗೆಯೇರಿ ವರುಷವಾದುದಕೆ ಈಗ
ಸಂಭ್ರಮ ಏಕೆ ಇರಲಾರರೇ ಐದು ತುಂಬುವಾಗ

ಅಭಿವೃದ್ಧಿ ಕಾರ್ಯಗಳ ಲೆಕ್ಕ ಗಣನೆಗೇ ಸಿಗುವುದಿಲ್ಲ
ಆದರೂ ಮರ್ಯಾದೆ ಬಿಟ್ಟವರಂತೆ ವರ್ತಿಸುತಿಹರಲ್ಲ

ಕುಮಾರಿ ಅಲ್ಲಿ ಅತ್ತು ಕೆಡಿಸಿದರೂ ಸಭೆಯ ಶೋಭೆ
ನಾ ನಿನ್ನ ಬಿಡಲಾರೆ ಎನುತಿಹನಲ್ಲಾ ಮುದಿಗೂಬೆ

ಎಲ್ಲಾ ಸಫಲ ಪುರುಷರ ಹಿಂದೆ ಹೆಣ್ಣಿರುವಳೆಂಬಂತೆ
ಈತನ ಮಹಾಪತನವೂ ನಿಜದಿ ಈಕೆಯಿಂದಲಂತೆ

ಎಷ್ಟು ಒದೆ ತಿಂದರೂ ಬುದ್ಧಿ ಬರುವಂತೆ ಕಾಣುತ್ತಿಲ್ಲ
ಹೀಗೇಯೇ ನಡೆದರೆ ಐದು ವರ್ಷ ಉಳಿಯುವುದಿಲ್ಲ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜವಾಗಿಯೂ ಉಳಿಯುವುದಿಲ್ಲ ಬಿಡಿ ...
ಚಂದ ಬರೆದಿದ್ದೀರಿ ಸರ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಹೀಗೇಯೇ ನಡೆದರೆ ಐದು ವರ್ಷ ಉಳಿಯುವುದಿಲ್ಲ<<
ನಮಗೂ ಅದೇ ಭಯ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಸರ್ ಆದರೆ ಅವರಿಗೆ ಬೀಳುವವರೆಗೂ ಅರ್ಥ ಆಗೋಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸರ್, ನಿಜವಾಗಿಯು ಉಳಿಯುವುದಿಲ್ಲ
ಎಲ್ಲ ಪಕ್ಷವೂ ಒಂದೇ ಎಂದು ತೋರಿಸುತ್ತಿದ್ದಾರೆ..ಎಲ್ಲರೂ ಕೇವಲ ಅಧಿಕಾರ, ಕುರ್ಚಿಗಾಗಿ ಹೋರಾಡುವವರೇ ಎಂದು ತೋರಿಸುತ್ತಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.