ಕೊರಗುವುದೇಕೆ?

5

ಸಖೀ,
ವಾರ ಪತ್ರಿಕೆಗಳಲಿ
ಬರುವ, ಯಾರ್ಯಾರೋ
ಬರೆದ ಕವಿತೆಗಳ
ಹನಿಗವನಗಳ ಓದಿ
ಅಥೈ೯ಸಿಕೊಂಡು
ಸಂತಸ ಪಟ್ಟು
ಆ ಕವಿಗಳ
ಕಲ್ಪನಾ ಜಾಣ್ಮೆಯ
ಕೊಂಡಾಡುವ ನನ್ನಾಕೆ
ನನ್ನ ಕಾಲ್ಪನಿಕ
ಸಖಿಯಾದ ನಿನ್ನ
ಕುರಿತು ನಾ ಬರೆದ
ಈ ಕವಿತೆಗಳ ಓದಿ
ಕೆಲವೊಮ್ಮೆ
ಕೆರಳಿ ಕೆಂಡವಾಗುವುದೇಕೆ
ಮತ್ತೆ ಒಮ್ಮೊಮ್ಮೆ
ಒಳಗೊಳಗೇ ಮರುಗಿ
ಕೊರಗುವುದೇಕೆ?
*-*-*-*-*-*-*

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಿತ್ತಲ ಗಿಡ ಮದ್ದಲ್ಲ. ಚೆನ್ನಾಗಿ ಹೇಳಿದ್ದೀರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಹಿತ್ತಲ ಗಿಡ ಮದ್ದಲ್ಲ" ಅಲ್ಲಾರೀ, ಇದಕ್ಕೆ ಅಸೂಯೆ/ಪ್ರೀತಿ ಅಂತಾರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>"ಹಿತ್ತಲ ಗಿಡ ಮದ್ದಲ್ಲ" ಅಲ್ಲಾರೀ, ಇದಕ್ಕೆ ಅಸೂಯೆ/ಪ್ರೀತಿ ಅಂತಾರೆ<<

ಈ ಆಸು ಮೇಲೆ ಪ್ರೀತಿ ಅಂತಾರೋ...?
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಈ ಆಸು ಮೇಲೆ ಪ್ರೀತಿ ಅಂತಾರೋ...?
ಹುಂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇದಕ್ಕೆ ಅಸೂಯೆ/ಪ್ರೀತಿ ಅಂತಾರೆ
ಏನೋಪ, ಅಷ್ಟು ಡೈರೆಕ್ಟ್ ಮೀನಿಂಗ್ ಇದೆ ಅಂತ ಗೊತ್ತಾಗ್ಲಿಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಹೆಣ್ಣೇ ಇನ್ನೊಂದು ಹೆಣ್ಣನ್ನು ಚೆನ್ನಾಗಿ ಅರಿಯಬಲ್ಲಳು...

:)
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಹೆಣ್ಣಿನ ಪ್ರೀತಿಯ ಆಳ ತಿಳಿಯೊದು ಕಷ್ಟ. ಈ ಆಸು ಮೇಲೆ ಪ್ರೀತಿ ಈ ರೀತೀನೇ, ಇದಕ್ಕಿಂತ ಹೆಚ್ಚಾಗೇ ಇರಲಿ (ನಿಮ್ಮ ಮಡದಿಗೆ) ಹ್ಹಿ ಹ್ಹಿ ಹ್ಹಿ..............
ಕವನ ಚೆನ್ನಾಗಿದೆ...."ಎಂದಿನಂತೆ"

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆರಳಿ ಕೆಂಡವಾಗುವುದೇಕೆ>>>>>

ತಕ್ಷಣ ಒಂದು ತಪ್ಪಲೆ ನೀರು ಇಟ್ಟು ಬಿಡಿ , ಕಾದು ಬಿಡುತ್ತೆ :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>.......ಕಾದು ಬಿಡುತ್ತೆ <<

ಕಾದ ನಂತರ ನನ್ನನ್ನು ಬಿಟ್ಟು ಬಿಟ್ಟರೆ ಕಷ್ಟ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.