ತಾನಾಡಿದಂತೆ ಬಾಳಿದಾತನೇ ಧನ್ಯ ಕೋಟಿ ಮಂದಿಯಲ್ಲಿ!

0

ತನ್ನತನವನ್ನೇ ಮರೆತು ಹಣಕ್ಕಾಗಿ ಹೆಣವಾಗುತ್ತಿದ್ದಾರೆ ಮಂದಿ
ಹಣವಿಲ್ಲದವನು ಬಾಳೆಲ್ಲಾ ಆಗಿರುತ್ತಾನೆ ಕೀಳರಿಮೆಯ ಬಂಧಿ

ಈ ಸಮಾಜ ಗುರುತಿಸುವುದೂ ಹಣವಿದ್ದವರನ್ನಷ್ಟೇ ಇದೂ ಸತ್ಯ
ಬಸ್ಸಲ್ಲಿ ಬಂದವನಿಗಲ್ಲ, ಕಾರಲ್ಲಿ ಬರುವವನಿಗೇ ಈಗೆಲ್ಲಾ ಪ್ರಾಶಸ್ತ್ಯ

ಸಮಾಜದ ಕೀಳುದೃಷ್ಟಿಯ ಎದುರಿಸಿ, ಕೀಳರಿಮೆಯ ಮೆಟ್ಟಿ ನಿಂತು,
ತನ್ನ ಕಲೆಯನ್ನು ಬೆಳೆಸುವುದು ಬಹು ಕಷ್ಟ, ಅದು ಕೆಲವರಿಗೇ ಗೊತ್ತು

ತಾನು, ತಾನಾಗಿಯೇ ಬಾಳಿ, ತನ್ನತನವನ್ನು ಇಲ್ಲಿ ಉಳಿಸಿ ಹೋಗಬೇಕು
ತಾನಳಿದ ಮೇಲೆ, ತನ್ನ ಕಲೆಯ ಬಗ್ಗೆ ಜನರು ಮಾತಾಡುವಂತಾಗಬೇಕು

ತಾನು ಆಡಿದಂತೆಯೇ ಬಾಳಿ ತೋರಿಸಲು ಬಲು ಕಷ್ಟ ಈ ಸಮಾಜದಲ್ಲಿ
ಹಾಗೊಮ್ಮೆ ಬಾಳಿದನಾದರೆ, ಆತನೇ ಧನ್ಯ ಕೋಟಿ ಕೋಟಿ ಮಂದಿಯಲ್ಲಿ
****************
ಆತ್ರಾಡಿ ಸುರೇಶ ಹೆಗ್ಡೆ
ಇದೀಗ ನಾನು ಓದಿದ, ರೂಪಾರ ಈ ಕಥೆಗೆ ಆಸುಮನ ಸ್ಪಂದಿಸಿದ ಬಗೆ ಇದು.

http://sampada.net/article/27234

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೆಗಡೆಯವರೇ, ಒಳ್ಳೆಯ ಸ೦ದೇಶ. ದುಡ್ಡಿಲ್ಲದೆ ಜಗವಿಲ್ಲಾ! ದುಡ್ದೇ ಅಲ್ಲ ಎಲ್ಲಾ! ದಿನದ ಸ೦ಪದಾರ೦ಭಕ್ಕೆ ಒ೦ದು ಸು೦ದರ ನೀತಿಯ ಕವನ ಓದಿದ೦ತಾಯ್ತು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನದ ಆರಂಭ ಸುಂದವಾಗಿದ್ದರೆ ದಿನವೂ ಸುಂದರವಾಗಿಯೇ ಇದ್ದೀತು ಧನ್ಯವಾದಗಳು ರಾಘವೇಂದ್ರ. - ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ ನಿಮ್ಮ ಕೊಂಡಿ ನಿಮ್ಮದೇ ಈ ಹಾಡಿಗೇ ಇದೆ ಇದಲ್ಲವೇ ಇರಬೇಕಾಗಿದ್ದುದು http://sampada.net/a... <<<ತಾನು ಆಡಿದಂತೆಯೇ ಬಾಳಿ ತೋರಿಸಲು ಬಲು ಕಷ್ಟ ಈ ಸಮಾಜದಲ್ಲಿ ಹಾಗೊಮ್ಮೆ ಬಾಳಿದನಾದರೆ ಆತನೇ ಧನ್ಯ ಕೋಟಿ ಕೋಟಿ ಮಂದಿಯಲ್ಲಿ>>> "ಕೋಟಿ" ಯ ಮಾತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥ್, ಕೊಂಡಿ ಬದಲಾಯಿಸಿದ್ದೇನೆ. ಧನ್ಯವಾದಗಳು ತಿದ್ದಿದ್ದಕ್ಕೆ ಮತ್ತು ಪ್ರತಿಕ್ರಿಯಿಸಿದ್ದಕ್ಕೆ. -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲೆಯೆಂದರೆ ಜೀವನ ಎಂದರ್ಥವಾದರೆ ಸರಿ. ಇಲ್ಲವಾದರೆ ಕವನ ಗೊಂದಲ ಮೂಡಿಸುತ್ತದೆ ಅನ್ನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲ. ಇಲ್ಲಿ "ಕಲೆ" ಎಂದರೆ ಪ್ರತಿಯೊಬ್ಬ ಮನುಜನ ಒಳಗಿರುವ ಪ್ರತಿಭೆ ಎಂದು ಭಾವಿಸಿದರೆ ಸಾಕು. - ಆಸು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ೦ಗಳವಾರದ ಆರ೦ಭವೇ ಬಲು ಮ೦ಗಳಕರವಾಗಿದೆಯಲ್ಲಾ! ಅದೂ ಮಹಾಲಕ್ಷ್ಮಿಯ ಬಗ್ಗೆ ಕವನದೊ೦ದಿಗೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಗಳವಾರವಿಡೀ, ಆ ಲಕ್ಷ್ಮೀಕಟಾಕ್ಷದೊಂದಿಗೆ, ಮಂಗಳಕರವಾಗಿರಲೆಂದೇ ಆಶಯ . ಧನ್ಯವಾದಗಳು ಮಂಜುನಾಥ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವರೇ ಕಥೆಯಿಂದ ಬಂದ ಕವನ ಸೂಪರ್ ಹಾಗೂ ಅರ್ಥಗರ್ಭಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚೇತನ್!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾತನ್ನು ಕೇಳುವವರು ಸಾವಿರಾರು ಬದುಕನ್ನು ನೋಡಿ ಕಲಿಯುವವರು ಕೆಲವರು ಸಾವಿರ ಜನರು ಹಾಗೆಯೇ ಉಳಿಯುತ್ತಾರೆ ಬದುಕು ಬದಲಿಸಿದ ಕೆಲವರು ಅಮೂರ್ತರಾಗುತ್ತಾರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಸಂತೋಷ್. "ಅಮೂರ್ತ" ಈ ಪದಬಳಕೆಯ ಔಚಿತ್ಯ ಅರ್ಥವಾಗಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ ಹೆಗ್ಡೆಯವರೇ, ಸುಂದರ ಸಂದೇಶ. ವೇಷಭೂಷಣವನೊಪ್ಪೀತು ನೆರೆಗಡಣ| ನೀತಿಪಾಠವನು ಮೆಚ್ಚೀತು ಶ್ರೋತೃಗಣ|| ನುಡಿದಂತೆ ನಡೆದರದುವೆ ಆಭರಣ| ಮೊದಲಂತರಂಗವನೊಪ್ಪಿಸೆಲೋ ಮೂಢ||
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.