ASHOKKUMAR ರವರ ಬ್ಲಾಗ್

ಗುಬ್ಬಚ್ಚಿಗಳು ಪ್ರಶಸ್ತಿ ಗೆದ್ದಿದೆ..

ದೇಶದ ಪ್ರತಿಷ್ಠಿತ ಸ್ವರ್ಣಕಮಲ ಪ್ರಶಸ್ತಿ ಪ್ರಕಟವಾಗಿದ್ದು,

ಕನ್ನಡದ "ಗುಬ್ಬಚ್ಚಿಗಳು" ---> ಅತ್ಯುತ್ತಮ ಮಕ್ಕಳ ಚಿತ್ರ

ಅತ್ಯುತ್ತಮ ಕನ್ನಡ ಚಿತ್ರವಾಗಿ ------>ಪಿ.ಶೇಷಾದ್ರಿ ನಿರ್ದೇಶನದ-------------> ವಿಮುಕ್ತಿ

ಅತ್ಯುತ್ತಮ ತುಳು ಚಿತ್ರ--------------->ಶಿವಧ್ವಜ್ ಶೆಟ್ಟಿ ನಿರ್ದೇಶನದ----------------> ಗಗ್ಗರ

ಅಭಿನಂದನೆಗಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪೋಂಜಿ ಸ್ಕೀಮ್ ಎನ್ನುವ ಟೋಪಿ ಕತೆ

ಮನೆ ಬಾವಿಗೆ ಇಲಿ ಬಿತ್ತಂತೆ.ಅದನ್ನು ಹೊರ ತೆಗೆಯಬೇಕಲ್ಲಾ? ಸತ್ತರೆ ಬಾವಿ ನೀರು ಹಾಳಾಗುತ್ತದೆ ನೋಡಿ.

ಬೆಕ್ಕು ಇಳಿಸಿದರೆ,ಅದು ಇಲಿ ತಿಂದೀತು ಅಂತ ಸಲಹೆ ಬಂತು.

ಆದರೆ ಬೆಕ್ಕನ್ನು ಹೊರತೆಗೆಯುವುದು ಹೇಗೆ ಎನ್ನುವ ಸಮಸ್ಯೆ.

ಅದಕ್ಕೆ ಅದೆಲ್ಲ ಬೇಡ,ಇಲಿ ಪಾಷಾಣ ಹಾಕೋಣ.

ಇಲಿ ನೀರು ಕುಡಿದು ಸತ್ತು ಹೋದಾಗ,ಅದನ್ನು ಹೊರಗೆತ್ತಿ ಹಾಕೋದು ಸುಲಭ ಅಂತ ರಾಂಪ ಪರಿಹಾರ ಸೂಚಿಸಿದನಂತೆ :)

----------------------------------------------------------------

ರಾಂಪನ ಮನೆಗೆ ಕಳ್ಳರು ನುಗ್ಗಿದರು.ವಾಶಿಂಗ್ ಮೆಶೀನ್,ಫ್ರಿಜ್,ಕಂಪ್ಯೂಟರ್ ಎಲ್ಲಾ ಒಯ್ದರೂ,ಟಿವಿ ಮುಟ್ಟಲಿಲ್ಲ.

ಯಾಕಿರಬಹುದು ಎಂದಿರಾ?

"ನಾನಾಗ ಟಿವಿ ನೋಡ್ತಿದ್ದೆನಲ್ಲಾ",ಎಂದ ರಾಂಪ :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಬ್ಯಾಂಕ್ ಸೇವಾದರಗಳ ವೈಚಿತ್ರ್ಯ

ಬ್ಯಾಂಕುಗಳಲ್ಲಿ ಹಣ ವರ್ಗಾವಣೆಗೆ RTGS ಮತ್ತು NEFT ಎಂಬ ಎರಡು ತೆರನ ಸೇವೆಗಳು ಲಭ್ಯ. ಬ್ಯಾಂಕಿನ ಒಂದು ಖಾತೆಯಿಂದ ಇನ್ನೊಂದು ಶಾಖೆಯ ಖಾತೆಗೆ ವರ್ಗಾವಣೆ ಮಾಡಲು RTGS ಶಿಫಾರಸ್ಸು ಮಾಡುವ ಬ್ಯಾಂಕಿನವರು,ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆಗೆ NEFT ಬಳಸಲು ಹೇಳುತ್ತಾರೆ. ಇವೆರಡೂ ಬ್ಯಾಂಕುಗಳ ಕಂಪ್ಯೂಟರ್ ಜಾಲಗಳನ್ನು ಬಳಸಿ ಒದಗಿಸುವ ಸೇವೆಗಳು. RTGS ಸೇವೆಯು ತಕ್ಷಣ ಹಣ ವರ್ಗಾವಣೆಗೆ ಅನುವು ಮಾಡಿದರೆ,NEFT ವಿಧಾನವು ತುಸು ನಿಧಾನ. RTGS ಮತ್ತು NEFTಗೆ ಅನುಕ್ರಮವಾಗಿ Rs.25+ ಮತ್ತು Rs.6 ದರ ವಿಧಿಸಲಾಗುವುದು(ಕನಿಷ್ಠ).ಅದೇ ನೀವು ಅಂತರ್ಜಾಲ ಮೂಲಕ ಹಣ ವರ್ಗಾವಣೆಯನ್ನು ಸ್ವತ: ಮಾಡಿದರೆ NEFT ಮೂಲಕ ಮಾಡಿದರೆ, ದರ Rs.6. ಆದರೆ ಬ್ಯಾಂಕಿನ ಒಂದು ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾವಣೆ ಉಚಿತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ಸುದ್ದಿಗಳನ್ನು ಓದುತ್ತಿಲ್ಲವೇ?

ನಾನು ಪತ್ರಿಕೆಗಳನ್ನು ತಿರುವಿ ಹಾಕುತ್ತೇನೆ. ಮನೆಗೆ ಮೂರು ಪತ್ರಿಕೆಗಳು ಬರುತ್ತವೆ. ಅಂತರ್ಜಾಲದಲ್ಲೂ ಸಾಕಷ್ಟು ಓದುತ್ತೇನೆ(ಅಥವ ಹಾಗೆಂದು ಕೊಂಡಿದ್ದೇನೆ).

ಆದರೆ ನಾನು ಸುದ್ದಿಗಳ ಕಡೆಗೆ ಗಮನ ಕೊಡುತ್ತಿಲ್ಲ ಎಂಬ ಸಂಶಯ ಬರುತ್ತಿದೆ.ಅದಕ್ಕೆ  ಕಾರಣವಾದ ಎರಡು ಸಂಗತಿಗಳಿವೆ.

ಮೊದಲನೆಯದಾಗಿ ಮೊನ್ನೆ ಕ್ರಿಕೆಟ್ ಟೆಸ್ಟ್ ಆರಂಭವಾಗುವ ವರೆಗೂ(ಆಗಲೇ ಭಾರತ ಒಂದು ವಿಕೆಟ್ ಕಳೆದುಕೊಂಡೂ ಆಗಿತ್ತು. ನನಗೆ ಅಂದು ಟೆಸ್ಟ್ ಪಂದ್ಯ ಇರುವುದೂ ಗೊತ್ತಿರಲಿಲ್ಲ.ಬಿಜೆಪಿ ಪಕ್ಷದ ಭಾವೀ ಅಧ್ಯಕ್ಷ ನಿತಿನ್ ಗಡ್ಕಾರಿ(ಸರಿಯೇ?) ಅವರು ಆಗಬಹುದು ಎಂಬ ಸುದ್ದಿ ಓದುವವರೆಗೂ,ಆ ಮಹಾನುಭಾವನ ಹೆಸರೇ ನನಗೆ ಗೊತ್ತಿರಲಿಲ್ಲ್!

ಸುದ್ದಿಯ ಬಗ್ಗೆ ನನ್ನ ಅಸಡ್ಡೆಗೆ ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕೇ?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ಉಬುಂಟು ಹಬ್ಬ

ಉಬುಂಟು 9.10 ಕಾರ್ಮಿಕ್ ಕೋಅಲಾ ಆವೃತ್ತಿಯನ್ನು ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿಚಯಿಸೋಣವೆಂದು ಕಾರ್ಯಕ್ರಮ ಹಾಕಿಕೊಂಡೆವು. ಇಡಿ ದಿನದ ಕಾರ್ಯಕ್ರಮ ಬೇಡವೆಂದು ಕೇವಲ ಒಂದು-ಒಂದೂವರೆಯ ಸಮಯ ನಿರ್ಬಂಧ ಹಾಕಿಕೊಂಡೆವು.ಮೊದಲಾಗಿ ಕಾರ್ಯಕ್ರಮದಲ್ಲಿ ಏನಿರಬೇಕು ಎಂದು ನಿಶ್ಚಯಿಸಿದೆವು. ಲೈವ್ ಸಿಡಿಯಿಂದ ಉಬುಂಟು ಚಾಲೂ ಮಾಡಿ,ಅದರ ಗುಣಗಳ ಪರಿಚಯ ಮಾಡುವುದು-ಲಭ್ಯವಿರುವ ತಂತ್ರಾಂಶಗಳು,ಸುಲಭ ಬಳಕೆ,ಐಬಸ್ IMEಯಿಂದ ಸ್ಥಳೀಯ ಭಾಷೆ ಬಳಕೆ ಸುಲಭವಾಗಿರುವ ಬಗೆ,ಬೇಕಾದ ತಂತ್ರಾಂಶಗಳನ್ನು ಇಳಿಸಿಕೊಳ್ಳುವ ಬಗೆ,ಕಂಪ್ಯೂಟರ್-ನಿಸ್ತಂತು ಇತ್ಯಾದಿ ಜಾಲಗಳಿಗೆ ಸಂಪರ್ಕಿಸುವ ಬಗೆ,ಪ್ರೊಗ್ರಾಮಿಂಗ್‌ಗೆ ಉಬುಂಟುವಿನಲ್ಲಿ ಇರುವ ಸಾಧ್ಯತೆ ,ಭದ್ರತೆ ಇತ್ಯಾದಿಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡುವುದು ಎಂದು ನಿರ್ಣಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

Pages

Subscribe to RSS - ASHOKKUMAR ರವರ ಬ್ಲಾಗ್