ಟೇಕ್ ಕೇರ್...

0

take care ಗೆ ಕನ್ನಡದಲ್ಲಿ ಏನನ್ನಬೇಕು..ನಾನು ಸಾಮಾನ್ಯವಾಗಿ "ಜೋಪಾನ" ಎನ್ನುತಿದ್ದೆ. ಆದ್ರೆ ಇತ್ತೀಚೆಗೆ ಒಂದು ಜಾಹಿರಾತಿನಲ್ಲಿ takecare ಗೆ "ಕಾಳಜಿ ಮಾಡಿರಿ" ಅಂತ ನೋಡಿದೆ. ಅದೇನೋ, ನನಗೆ ಆ ಬಳಕೆ ಹಿಡಿಸಲಿಲ್ಲ.ನಮ್ಮ ಸೊಗಡಿಗೆ ಸರಿಹೊಂದಲಿಲ್ಲ ಅನ್ನಿಸ್ತು. takecare ಅಂತ ಕನ್ನಡದಲ್ಲಿ, ಮನಸ್ಸಿಗೆ ಆಪ್ತವಾಗುವ ರೀತಿ ಹೇಳುವುದು ಹೇಗೆ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂಗ್ಲೀಷಿನದ್ದನ್ನು ಕನ್ನಡದಲ್ಲಿ ಅದೇ ರೀತಿ ಹೇಳಬೇಕು ಎನ್ನುವುದು ಸರಿಯಲ್ಲ. ಒಂದೊಂದು ಭಾಷೆಗೂ ಅದರ ಬಳಕೆಯಲ್ಲಿ ಬೇರೆಯದೇ ಆದ ಸೊಗಡಿರುತ್ತದೆ.
takecare ಎಂಬುದನ್ನು ’ಕಾಳಜಿ ಮಾಡಿರಿ’ ಎಂದು ಕನ್ನಡಕ್ಕೆ ತಂದಿರುವುದು ಹಾಸ್ಯಾಸ್ಪದ.

ಜೋಪಾನ, ಹುಷಾರು ಎನ್ನುವ ಪದಗಳ ಕನ್ನಡದಲ್ಲಿ ಸಹಜವಾಗಿ ಬಳಕೆಯಲ್ಲಿವೆ.
ಸಂದರ್ಭಕ್ಕೆ ತಕ್ಕನಾಗಿ ಇದನ್ನು ಸ್ವಲ್ಪ ಬೇರೆ ಬೇರೆ ರೀತಿಗಳಲ್ಲಿ ಬಳಸಿಕೊಳ್ಳಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಜಾಹಿರಾತುಗಳಲ್ಲಿ ,ಹಿಂದಿ ಅಥವ ಇಂಗ್ಲೀಶಿನ ಪದಗಳನ್ನ ಬರಿ ಬಾಷಾಂತರಿಸಿ ಬಿತ್ತರಿಸುತ್ತಾರೆಯೆ ಹೊರತು ಕನ್ನಡೀಕರಿಸುವ ಗೋಜಿಗೆ ಹೋಗೋದೆ ಇಲ್ಲ. ನಿಘಂಟಿನಲ್ಲಿ ಬಿಡಿಬಿಡಿಯಾಗಿ ಸಿಕ್ಕ ಒರೆಗಳನ್ನು ನೋಡಿ, ಅದನ್ನೆ ಹೇಳುತ್ತಾರೆ.’ಕಾಳಜಿ ಮಾಡಿ’, ’clear ಇದೆ’, ’ಬಾಯಿ ಸಿಹಿ ಮಾಡಿ’ ಇನ್ನು ಏನೇನೋ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೋಕೆ, ಜಾಗ್ರತೆ ಅಂದ್ರೂ ಸಾಕಪ್ಪ. ಇಷ್ಟೆಲ್ಲ ತೊಡರೇಕಪ್ಪ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ಸರ್..ಜೋಪಾನ,ಜಾಗ್ರತೆ ಅಂತ ಹಾಕೋದು ಬಿಟ್ಟು "ಕಾಳಜಿ ಮಾಡಿರಿ" ಅಂತ ಹಾಕಿದ್ದಾರೆ. ಅದನ್ನು ಓದಿ ನಗುವಂತಾಯಿತು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಾಗ್ರತೆ, ಹುಷಾರು :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು
ಹುಶಾರು ಅಂತಾನೆ ಉಪಯೋಗಿಸೋದು

http://thereda-mana.blogspot.com/

ರೂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡನ ಕುಲಗೆಡಿಸೋದಕ್ಕೆ, ಈ ಕ೦ಪನಿಗಳ ಹಿ೦ದಿ ಜಾಹೀರಾತುಗಳ ವಿಚಿತ್ರ ಅನುವಾದವೇ ಕಾರಣ. ಈ ರೀತಿ ಜಾಹೀರಾತುಗಳನ್ನು ನೋಡಲು ತು೦ಬಾ ಅಸಹ್ಯವಾಗುತ್ತದೆ. ಅಲ್ಲಾ, ನಮ್ಮಲ್ಲಿ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಈ ಕ೦ಪನಿಗಳು, ಕನ್ನಡದಲ್ಲಿ ಒ೦ದು ಜಾಹೀರಾತು ಸರಿಯಾಗೆ ಕೊಡಲು ಅನರ್ಹರಾ? ಒ೦ದು ಸರಿಯಾದ ಕನ್ನಡದ ಸಾಲು? "ಕಾಳಜಿ ಮಾಡಿರಿ" - ಅಸಹ್ಯ ಆಗಲ್ವ.
ಅಥವಾ ನಾವೆಲ್ಲಾ ಆಟಕ್ಕು೦ಟು ಲೆಕ್ಕಕ್ಕೆ ಇಲ್ಲದ ಜನರಾ? ಥೂ..!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದು ಅಂಶ ಗಮನಿಸಿದ್ದೀರ?ಕೆಲವು ಕಂಪನಿಗಳು,ಉದಾ: ಪೆಪ್ಸಿ(ಅಥವ ಕೋಕ್?) ಹಿಂದಿ ಜಾಹಿರಾತಿಗೆ ಶಾರುಕ್,ತಮಿಳಿಗೆ ಸೂರ್ಯ,ತೆಲುಗುವಿನಲ್ಲಿ ಮಹೇಶ್ ಬಾಬು ಹೀಗೆ ಆಯಾ ಭಾಷೆಯ ಜನಪ್ರಿಯ ತಾರೆಯರನ್ನು ಹಾಕಿದ್ದಾರೆ. ಆದ್ರೆ ಕನ್ನಡಕ್ಕೆ? ನಾವು ಶಾರುಕ್ ನನ್ನೆ ನೋಡಬೇಕು.ಸೋಪು ಶಾಂಪು ಆದ್ರೆ ಸಿಮ್ರನ್, ತ್ರಿಶರನ್ನು ನೋಡಬೇಕು.ಯಾಕೆ,ನಮ್ಮ ಸುದೀಪನ್ನೊ ದರ್ಶನನನ್ನೊ ಹಾಕಿದ್ರೆ ನೋಡಲ್ಲವ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಿಗರು ಆಟಕ್ಕು೦ಟು ಲೆಕ್ಕಕ್ಕೆ ಇಲ್ಲ. ನಾವು ಶಾರುಖ್ ಬೇಡ, ಸುದೀಪ್ ನ ಹಾಕಿ ಅ೦ಥಾ ಕೇಳಲ್ಲ. ನಮ್ಮ ಮೌನ ನಮ್ಮ ವೀಕ್ನೆಸ್ ಅ೦ದು ಕೊ೦ಡಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮಿಳು,ತೆಲುಗಿನ ಜಾಹಿರಾತುಗಳಿಗೆ ಆಯಾ ಪ್ರಾಂತ್ಯದ ಜನಪ್ರಿಯ ತಾರೆಗಳನ್ನು ಬಳಸುವ ಕಂಪನಿಗಳು ಕನ್ನಡದಲ್ಲಿ ಮಾತ್ರ ಯಾಕೆ ಹಾಗೆ ಮಾಡುವುದಿಲ್ಲ? ತಮಿಳಿನ ಹಾಸ್ಯ ನಟ ಸಹ ಮಿರಿಂಡಾ ಜಾಹಿರಾತಿನ ಹೀರೊ! ನಮ್ಮ ಭಾಷೆಯ ಒಬ್ಬ ನಟ,ನಟಿ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಿಗರಿಗೆ ಯಾರಾದ್ರೂ ಓ.ಕೆ.
ವಿಶ್ವಮಾನವ್ರು ನಮ್ಮವ್ರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಚ್ಚಿನ ಕಂಪೆನಿಗಳಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ತಮಿಳರೆ ಜಾಸ್ತಿ, ಮತ್ತೆ ನಾರ್ತ್ ಇಂಡಿಯ ದಲ್ಲಿ ಸೌತ್ ಇಂಡಿಯಾದವರನ್ನು ಮದ್ರಾಸಿ ಅಂತಲೇ ಅನ್ನೊದು ಅಸ್ಟೊಂದು ತಮಿಳರು ಇಮೇಜ್ ಸ್ರಿಷ್ಟಿಸಿದ್ದಾರೆ...ನಮ್ಮ ರಾಜಕುಮಾರ್ ಹೆಸ್ರು ಹೆಚ್ಚಿನವರಿಗೆ ಗೊತ್ತಿಲ್ಲ ಆದರೆ ರಜನಿ, ಕಮಲ್, ಯಾಕೆ ಈಗ ಬಂದಿರುವ ಅಲ್ಲು ಅರ್ಜುನ್ ..ಕಾಂಜಿ ಪೀಂಜಿಗಳ ಹೆಸರು ಅವರಿಗೆ ಗೊತ್ತು . ಯಾಕಂದರೆ ಅವರ ಸಿನಿಮಾನೆಲ್ಲ ಹಿಂದಿನಲ್ಲಿ ಡಬ್ ಮಾಡ್ತಾರೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದಕ್ಕೆ ನಾವೇ ಕಾರಣರು ಅನಿಸುತ್ತೆ... ತಮಿಳರು ಕಮಲ್ ನನ್ನು ಇಷ್ಟಪದುವಷ್ಟು ನಾವು ಸುದೀಪನನ್ನಾಗಲಿ, ದರ್ಷನ್ ನನ್ನಾಗಲಿ ಎಷ್ಟಪಡುತ್ತಿಲ್ಲ....ಅಲ್ಲ ರೀಮೇಕ್ ನಲ್ಲಿ ಅಬಿನಯಿಸುವ ಇವರನ್ನು ಹೇಗೆ ತಾನೆ ಇಷ್ಟಪಡಬಹುದು!!! ನಾನೊಬ್ಬ VFX artist ಆಗಿ ಹೇಳಿದರೆ ತಮಿಳರು, ತೆಳುಗಿನವರು, ನೀಡುವ 10% quality ಯನ್ನು ನಮ್ಮ ಕನ್ನಡಿಗರು ನೀಡುತ್ತಿಲ್ಲ... ಹೆಚ್ಚಿನ ಕನ್ನಡ ಸಿನಿಮಾ ಗಳು ನಿರ್ಮಾಣ ವಾಗುವುದು ಚೆನೈ ನಲ್ಲಿ!!. ಕನ್ನಡದ ನಿರ್ದೇಶಕರು ಕೇಳುವ ಕೆಲವು Effects ಕೇಳಿದರೆ ನಾಚಿಕೆಯಾಗುತ್ತೆ.... ಅದನ್ನು ಇಲ್ಲಿ ಕೆಲವರು ಗೇಲಿ ಮಾಡೋವಾಗ ಹೊಟ್ಟೆ ಉರಿಯಾಗುತ್ತೆ...ನಾವ್ಯಾಕೆ ಹೀಗೆ.... ನಮ್ಮ ಸಿನಿಮಾ ರಸಿಕರು ಇನ್ನೂ ಹಳೆಯ ಕಾಲದಲ್ಲೆ ಇದ್ದಾರೆ...ಅದ್ಹೇಗೆ...ಪೇಟೆ ಜನ ಕನ್ನಡ ಸಿನಿಮಾ ನೋಡಿದರೆ ತಾನೆ.... ಅಂದ್ರೆ ಕನ್ನಡ ಹೀಗಾಗೋಕೆ ಕಾರಣ ನಾವು ಕನ್ನಡಿಗರೆ..... ಒಂದೆ ಉದಾಹಣೆ ಸಾಕು.. ಮೊನ್ನೆ office ನಲ್ಲಿ "ತಿಪ್ಪಾರಳ್ಳಿ ತರಳೆಗಳು" ಚಿತ್ರದ titling work ಹೋಗುತ್ತಿತ್ತು ..ಮಾಡೋನು ತಮಿಳ.... "ತಿಪ್ಪಾರಳ್ಳಿ ತರಳೆಗಳು" ಎಂದು ಬರೆಯೊ ಬದಲು... "ಟಿಪ್ಪರಲ್ಲಿ ತರಲೆಗಳು" ಎಂದು ಬರೆದಿದ್ದಾನೆ... ಆದದ್ದು ಇಷ್ಟೆ english ನ "Tipparalli Tharalegalu" ಅನ್ನು ಅನುವಾದಿಸಿದ್ದ...!!!!

┐┐┐┐┐┐┐┐

█Ö█

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರವಾಗಿಲ್ಲ "ಟಿಪ್ಪರಲ್ಲಿ ತಲೆಗಳು" ಅಂತ ಬರೀಲಿಲ್ಲ .....ಏನಂತೀರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

take care - ಕಾಳಜಿ ತಗೋರಿ.
ನಮ್ಮಲ್ಲಿ ಹೀಗೇ ಬಳಕೆ ಇದೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

’ಕಾಳಜಿ ಇರಲಿ’ , ’ಕಾಳಜಿ ತಗೋರಿ’ ಸರಿ ಇದೆ. ಆದ್ರೆ ’ಕಾಳಜಿ ಮಾಡಿರಿ’ ಅನ್ನೋದು ನನಗ್ಯಾಕೊ ನಗು ತರಿಸುತ್ತೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ advertiseಗಳಲ್ಲಿ ಮಾಡೊ ಭಾಷಾಂತರದ ಅವಾಂತರಗಳು ಒಂದೆರಡಲ್ಲ.
ಕೆಲವು ವರ್ಷಗಳ ಹಿಂದೆ Fair and Lovely ನವರು ’ಗಮನೀಯ’ ಮೈಕಾಂತಿಗಾಗಿ ತಮ್ಮ ಕ್ರೀಮ್ ಬಳಸಿ ಅಂತ ಹೇಳ್ತಾ ಇದ್ರು. ಗಮನಾರ್ಹ ಗೊತ್ತು, ಗಣನೀಯ ಗೊತ್ತು, ಇದ್ಯಾವುದಪ್ಪ ಗಮನೀಯ ಅಂತ ತಲೆ ಕೆಡಿಸಿಕೊಂಡಿದ್ದು ನೆನಪಿದೆ. ಈಗಲೂ ’ಗಮನೀಯ’ ಅಂತ ಬಳಸ್ತಾರೊ ಹೇಗೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಗೌರವರ್ಣ ಅಂತಲೇನೋ ಬಳಸ್ತಾರೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.