ಓಟ

4

ನಾವು ಏಕೆ ಓಡುತಿದ್ದೇವೆ?

ಕೆಲ ಸಮಯ, ನಾನು ನಿ೦ತು ಆಲೋಚಿಸುತ್ತೇನೆ.... "ನಾವು ಯಾವುದಕ್ಕಾಗಿ ಓಡುತಿದ್ದೇವೆ?"  ಸುತ್ತ ನೋಡಿ ಓಡುವವರನ್ನು ಕೇಳುತ್ತೇನೆ. ಆದರೆ, ಅವರು ಓಡುವುದರಲ್ಲಿ ತೊಡಗಿರುತ್ತಾರೆ. ನಿ೦ತು ಉತ್ತರಿಸಲು, ಸಮಯ ಮತ್ತು ತಾಳ್ಮೆ ಇರುವುದಿಲ್ಲ. ನಿ೦ತವರು ಆಲೋಚಿಸುತ್ತಾರೆ, ಆದರೆ ಅವರು ಏಕೆ ಓಡುತ್ತಿದ್ದಾರೆ೦ದು ಅವರಿಗೇ ತಿಳಿಯುವುದಿಲ್ಲ, ಎಲ್ಲರೂ ಓಡುತ್ತಿದ್ದಾರೆ, ಅದರಿ೦ದ ಅವರೂ ಓಡುತ್ತಿದ್ದಾರೆ.
ನಾವು ಏಕೆ ಓಡಬೇಕು? ಏಕೆ ಎಲ್ಲದಕ್ಕೂ ಅವಸರ? ಯಾವಾಗಲೂ ಸಮಯದ ಅಭಾವವೇಕೆ?
ಜೀವನ ಕಿರಿಯದು... ಅದನ್ನು ಜೀವಿಸೋಣ. ಕಾಣದ ಮರೀಚಿಕೆ ಜಾಡು ಹಿಡಿದು ಓಡಿದರೆ, ಅದು ಕೈಗೆ ಸಿಗುವುದೆ೦ಬುದು ಭ್ರಮೆ!  
ನಿ೦ತು ಹಿ೦ದಿರುಗಿ ನೋಡಿದಾಗ ನಮ್ಮ ಸಾಧನೆಯ ಅರಿವು ಮೂಡುತ್ತದೆ. ಇನ್ನೂ ಓಡಬೇಕೆನಿಸಿದರೆ, ಓಟ ಮು೦ದುವರೆಸಿ... ಅದು ನಿಮ್ಮ ನಿರ್ಧಾರ. ಆದರೀ ಓಟ ನಮ್ಮನ್ನು ಎಲ್ಲೂ ತಲುಪಿಸುವುದಿಲ್ಲ.

ನೆನಪಿರಲಿ: ಈ ಇಲಿಗಳ ಓಟದಲ್ಲಿ ನಾವು ಗೆಲ್ಲಬಹುದೇನೊ, ಆದರೆ ಆಗಲೂ ನಾವಿನ್ನೂ ಇಲಿಗಳಾಗಿಯೇ ಉಳಿದಿರುತ್ತೇವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಒಂದು ರೀತಿಯಲ್ಲಿ ನಿಮ್ಮ ವಾದ ಸರಿ. ಆದರೆ, ಇಂದಿನ ಸ್ಥಿತಿಯಲ್ಲಿ ಓಡುತ್ತಲೇ ಇದ್ದರೆ ಇರುವಲ್ಲೇ ಇರುತ್ತೇವೆ, ಓಡದಿದ್ದರೆ ಹಿಂದೆ ಉಳಿಯುತ್ತೇವೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಇತರರಿಗಿ೦ತ ಹಿ೦ದುಳಿದಿದ್ದೇವೆ ಎ೦ಬುದೇ ಒ೦ದು ಮರೀಚಿಕೆ ಎನ್ನುವುದು ನನ್ನ ವಾದ. ಒ೦ದು ರೀತಿ ನೋಡಿದರೆ ಈ RAT RACE ನಾವು ಅಳವಡಿಸಿಕೊಳ್ಳುವ ಜೀವನ ಶೈಲಿಯಮೇಲೂ ಆಧಾರಪಡಿರುತ್ತದೆನೋ. ಆದರೆ ನನಗಿನ್ನು ಅನುಭವ ಸಾಲದಿರಬಹುದು. ನೀವು ಹೇಳುವುದು ನಿಜವಿರಬಹುದು. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಡುವವರು ಮಾತ್ರವೇ ಮು೦ದುವರೆದವರು ಹಾಗೂ ನಡೆಯುವವರು ಯಾವಾಗಲೂ ಹಿ೦ದುಳಿದವರು ಎ೦ಬ ವಾದ ಸುಳ್ಳು ಅರುಣ್. ಓಟ ಯಾವುದಕ್ಕಾಗಿ? ಓಡುವುದು ಹೇಗೆ? ಓಡಲೇಬೇಕೆ? ಮು೦ತಾದ ಪ್ರಶ್ನೆಗಳೂ ಇಲ್ಲಿ ಉಧ್ಬವಿಸುತ್ತವೆ. ಸಮಸ್ಯೆ ಮತ್ತು ಕಾಲ ಎರಡರ ಮೇಲೆ ಓಟವು ಅವಲ೦ಬಿಸಿದೆ ಎ೦ಬುದು ನನ್ನ ಅನಿಸಿಕೆ. ಗ್ರಾಮೀಣ ಪ್ರದೇಶಗಳು ಹಾಗೂ ನಗರಗಳು ಎರಡನ್ನೂ ಈ ವ್ಯಾಪ್ತಿಗೆ ತ೦ದಾಗ ನಮಗೆ ಅವರವರ ಜೀವನಶೈಲಿಗಳೇ ಓಟದ ವೇಗವನ್ನು ನಿರ್ಧರಿಸುತ್ತವೆ ಎ೦ಬುದನ್ನು ನಾವು ಅರಿಯಬಹುದು. ಓಟದ ಗತಿ ನಿಧಾನವಾದಾಗ ಅದು ನಡಿಗೆಯೇ. ಜೋರು ಓಟ ಹಾಗೂ ನಿಧಾನ ಓಟಗಲೆ೦ಬ ವಿಧಗಳೇನೂ ಇಲ್ಲವೆ೦ದು ನನ್ನ ಅಭಿಪ್ರಾಯ. ಈ ಗತಿಯಲ್ಲಿ ನೋಡಿದರೆ ನಿಮ್ಮ ವಾದ ಸರಿಯೆ೦ದು ನನಗನ್ನಿಸುತ್ತದೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಆಲೋಚನೆಗಳು ಹೋಲುವ೦ತಿದೆ. ಮೆಚ್ಚಿದ್ದಕ್ಕೆ ಧನ್ಯವಾದಗಳು ರಾಘವೇ೦ದ್ರ ನವಾಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಮಾನ್ಯವಾಗಿ ನಾವು ಓಟದಾಟದಲ್ಲಿ ಗೆಲ್ಲುವುದಕ್ಕಾಗಿ ಓಡುತ್ತೇವೆ... ಇದು ಸಹಜ ಹಾಗೂ ಅನಿವಾರ್ಯ... ಆದರೆ ಓಟದಾಟದಲ್ಲಿ ನಾನಾ ತರನಾಗಿದೆ.. ೧೦೦ ಮೀ, ೨೦೦ ಮೀ, ೮೦೦ ಮೀ, ೫೦೦೦ ಮೀ, ೧೦೦೦ ಮೀ... etc... ನಮ್ಮ ಮಿತಿಯ ಹಾಗೂ ನಮಗೆ ಇಸ್ಟವಾದ ಓಟದಾಟ ಹಾಗೂ ಟ್ರಾಕ್ ನಾವೇ ಆರಿಸಿಕೊಂಡರೆ ಆಟದಲ್ಲಿ ಮಜ ಇರುತ್ತೆ :) ಸೋತರೂ, ಕೆಲವುಬಾರಿ, ಹಿಂದಿನ ಓಟಕ್ಕಿಂತ ಈಗಿನ ಓಟದ ಸಮಯ ಕಡಿಮೆಯಾದರೆ ಖುಶಿ ಪಡುತ್ತೇವೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.