ಚೊಚ್ಚಲ ಲೇಖನ ಪ್ರಕೃತಿಗೆ ನಮನ!!

4.5

ಚೊಚ್ಚಲ ಲೇಖನ ಪ್ರಕೃತಿಗೆ ನಮನ  !!
 
ತನ್ನ ಹುಟ್ಟನ್ನು ತನ್ನ ಪ್ರಭೆಯಿಂದಲೇ ತಿಳಿಸುವಂತೆ
ಹಕ್ಕಿಗಳ ಇಂಚರದ ಮೇಳದೊಡನೆ ಮೂಡಣದಿ ಮೂಡಿಬರುವನು,
ಕವಿಗಳ ಕಲ್ಪನೆಯ ಸಾರಥಿಯಾಗಿ, ಭಾವನೆಗಳ ಹರಿಕಾರನಾಗಿ, ಚಿಣ್ಣರ ಕಣ್ಣಿನ ಹಣ್ಣಾಗಿ,
ಲಲನೆಯರ ಕಣ್ಣಿನ ಮುದವಾಗಿ, ದಿಗಂತದಲ್ಲಿ ಹೆಜ್ಜೆಯಿಡುತಾನೆ ನಮ್ಮ ಸೂರ್ಯ !
 
ಪ್ರಕೃತಿಯ ಅರಮನೆಯ ದೀಪದಂತೆ ವಿಭ್ರಾಜಮಾನನಾಗಿ!
ಜೀವರಾಶಿಯೆಲ್ಲದರ ಚೈತನ್ಯನಾಗಿ - ಆಸ್ತಿಕರ ಪ್ರಾರ್ಥನೆಯ ವಿಶೇಷನಾಗಿ
ಹಗಲಿಗೆ ಹಿತವಾಗಿ - ಸಂಜೆಗೆ ತಂಪಾಗಿ - ಮಧ್ಯದಲಿ ಹುರುಪಿನ ಸಾಕ್ಷಿಯಾಗಿ
ಜೀವನದ ಹಂತಗಳ, ಮೌನದಲೆ ಸಾರುತಿಹ ಜೀವಲೋಕಕೆ ಗುರುವು ನಮ್ಮ ಸೂರ್ಯ !
 
ಸ್ವಪ್ನಗಳ ಸಾರ್ಥತೆಗೆ ಶ್ರಮಿಸುವುದೆ ಸಾಧನವು,  ಜಡತನವ ತ್ಯಜಿಸಿರೈ ಎಂದು ತಿಳಿಸಿ -
ಲಕ್ಷ್ಯವನೆ ಎಂದೆಂದು ಮನದೊಳಗೆ ತಾ ಉಳಿಸಿ - ಉದ್ಯಮಿಸು ನೀ ಜೀವಿ ಎಂದು ಹರಸಿ!
ಮುಂಬರುವ ಜೀವನವ ಕುಗ್ಗದೆಯೆ ಎದುರಿಸು, ಕಷ್ಟಗಳ ಸರಮಾಲೆ ತೃಣದ ಸಾಲು
ಎಂದೆನುತ ಆಶಯವ ಭೂರಿ, ಜೀವದಿ ತುಂಬಿ ಕೈ ಬೀಸುತಾ ಇಳಿವ ನಮ್ಮ ಸೂರ್ಯ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ ನಿಮ್ಮ ಪ್ರಕೃತಿ ಬಗ್ಗೆ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

DHANYAVAADAGALU :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯುನಿ ಕೋಡ್ ಬದಲಾಗಿ http://www.google.co... ಅನ್ನುಪ್ರಯತ್ನಿಸಿ. ನಿಮ್ಮ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಚ್ಚಿನ ಸಲಹೆಗಳಿಗಾಗಿ http://sampada.net/a...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

DHANYAVAADA
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಪ್ರಮೇಯ, ತಾವು ಸೂರ್ಯನನು ಬಣ್ಣಿಸಿದ ರೀತಿ ಇಷ್ಟವಾಯ್ತು ಆದರೆ, "ವಿಭ್ರಾಜಮಾನ" ಮತ್ತು "ಸಾರ್ಥತೆ" ಎನ್ನವ ಎರಡು ಪದಗಳು ಹೊಸತೆನಿಸಿದವು. -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿಭ್ರಾಜಮಾನ ಎಂದರೆ ದಿವ್ಯವಾಗಿ ಹೊಳೆಯುವ ಅಂತ ; ಸರ್ಥತೆ - ಸಾರ್ಥಕತೆ ಎಂಬ ಪದದ ಮತ್ತೊಂದುಪ್ರಯೋಗ .. ಇಂತು; ಧನ್ಯವಾದಗಳೊಂದಿಗೆ ಅಪ್ರಮೇಯ ಶರ್ಮ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ, ತಮ್ಮ ಹೆಸರನ್ನು "ಅಪ್ರಮೇಯ" ಕ್ಕೆ ಬದಲಾಗಿ "ಆಪ್ರಮೇಯ" ಎಂದು ಬರೆದಿದ್ದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಪದಕ್ಕೆ ಸ್ವಾಗತ ಶರ್ಮರೆ, ಸು೦ದರ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಷ್ಟಗಳ ಸರಮಾಲೆ ತೃಣದ ಸಾಲು ಸುಂದರ ಸಾಲು, ಅಪ್ರಮೇಯ ಅವರೇ. ಸುಂದರ ಕವನ ಕೂಡಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ನೀಯರೆ, ಸಂಪದಕ್ಕೆ ಸ್ವಾಗತ, ನಿಮ್ಮ ಚೊಚ್ಚಲ ಕಾಣಿಕೆ ಸುಂದರವಾಗಿದೆ. ಹೀಗೆ ಮುಂದುವರಿಯಲಿ . ವಂದನೆಗಳು/ಮಧ್ವೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯಪೂರ್ವಕವಾಗಿ ಸ್ಪೂರ್ತಿಗೆ ತಕ್ಕ ಪ್ರಯತ್ನ ನಡೆಸಿ ನನ್ನ ಮನದ ಭಾವನೆಗಳಿಗೆ ಲೇಖನಿಯನ್ನು ಕೊಟ್ಟು ಪ್ರಕೃತಿಯನ್ನು ಮನಃ ಪೂರ್ವಕವಾಗಿ ಬಣ್ಣಿಸಲು ಪ್ರಯತ್ನಿಸುತ್ತೇನೆ ನಿಮ್ಮವ, ಅಪ್ರಮೇಯ ಶರ್ಮ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.