ಕನ್ನಡದಲ್ಲಿ ಬರೆದ mnc bank cheque .. not accepted ಅಂತೆ !

0

ಕಳೆದ ವಾರ ಕನ್ನಡದಲ್ಲಿ ಬರೆದ mnc bank cheque ನನಗೇ ವಾಪಸ್ ಬಂದಿತು. "Not accepted" ಎಂಬ ದುರ:ಂಕಾರದ ಉತ್ತರವಿತ್ತು ! ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ ದೊರೆಯುತ್ತಿರುವ ಉತ್ತರವಿದು !

ಹೆಚ್ಚು ಮಂದಿ ಕನ್ನಡದಲ್ಲಿ mnc bank cheque ಬರೆದರೆ MNC bankಗಳ ಮೇಲೆ ಒತ್ತಡ ಹೇರಬಹುದು. ಇದರಿಂದ BCom MBA ಓದುತ್ತಿರುವ ನಮ್ಮ ನಿಮ್ಮ ಅಣ್ಣ ತಮ್ಮ ಅಕ್ಕ ತಂಗಿಯರಿಗೆ ಕೆಲಸ ಸಿಗುವ ಅವಕಾಶ ಹೆಚ್ಚಾಗುತ್ತದೆ. 

ಇನ್ನು ಮುಂದೆ bank cheque ಬರೆಯುವಾಗ ಕನ್ನಡ ಉಪಯೋಗಿಸೋಣ... ಬದಲಾವಣೆಯನ್ನು ನಾವೇ ತರಬಲ್ಲೆವು...

 

ಇಂತೀ,

ಅನುಪ್ ಮಲೆನಾಡು

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತಿರಸ್ಕರಿಸಿದರೆ ಅವರಿಗೂ ನಷ್ಟವಾಗುವ ಚೆಕ್ ಕನ್ನಡದಲ್ಲಿ ಬರೆದು ಕೊಡೋಣ-ಉದಾಹರಣೆಗೆ ಸಾಲ ಠೇವಣಿ ಇಡಲು,ಕ್ರೆಡಿಟ್ ಕಾರ್ಡ್ ಪಾವತಿಗೆ...

*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನುಪ್, ಆ ಚೆಕ್ಕನ್ನು + ಬ್ಯಾಂಕಿನ ಉತ್ತರವನ್ನು ಸೀದಾ ಹತ್ತಿರದ ಕ.ರ.ವೇ ಕಛೇರಿಗೋ ಅಥವಾ ಕನ್ನಡ ಪ್ರಾಧಿಕಾರ (ಚಂದ್ರು) ಅವರಿಗೆ ತಲುಪಿಸಿ.

[quote=ashokkumar]ತಿರಸ್ಕರಿಸಿದರೆ ಅವರಿಗೂ ನಷ್ಟವಾಗುವ ಚೆಕ್ ಕನ್ನಡದಲ್ಲಿ ಬರೆದು ಕೊಡೋಣ-ಉದಾಹರಣೆಗೆ ಸಾಲ ಠೇವಣಿ ಇಡಲು,ಕ್ರೆಡಿಟ್ ಕಾರ್ಡ್ ಪಾವತಿಗೆ... [/quote]

ಒಳ್ಳೆಯ ಉಪಾಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ashokkumar wrote:
ತಿರಸ್ಕರಿಸಿದರೆ ಅವರಿಗೂ ನಷ್ಟವಾಗುವ ಚೆಕ್ ಕನ್ನಡದಲ್ಲಿ ಬರೆದು ಕೊಡೋಣ-ಉದಾಹರಣೆಗೆ ಸಾಲ ಠೇವಣಿ ಇಡಲು,ಕ್ರೆಡಿಟ್ ಕಾರ್ಡ್ ಪಾವತಿಗೆ...

ಒಳ್ಳೆ ಉಪಾಯ ಅದು ಹೇಗೆ? ಆ ತಿಂಗಳಿನ ಕಂತು ತಲುಪಲಿಲ್ಲ ಅಂತ ಮುಂದಿನ ತಿಂಗಳು ಓವರ್ಡ್ಯೂ ಬಡ್ಡಿ ಸೇರಿಸೋಲ್ವೆ ಆ "ಬಡ್ಡಿ" ಮಕ್ಕಳು?

-ನವರತ್ನ ಸುಧೀರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಡ್ಡಿ ಸೇರಿಸದೆ ಬಿಡರು..ಆದರೆ ್ತಾನು ಪಾವತಿಸಿದ್ದೇನೆ...ಸ್ವೀಕರಿಸದ್ದಕ್ಕೆ ಬ್ಯಾಂಕು ಹೊಣೆ ಎಂದು ತಗಾದೆ ಹೂಡುವ ಛಲ ಇದ್ದರೆ ಮಾತ್ರಾ ಮುಂದುವರಿಯಬೇಕು!
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಹಾರಾಷ್ಟ್ರದಲ್ಲೇನಾದರೂ ಹೀಗಾಗಬೇಕು... ಆಗುಂಟು ಈ ಎಂ ಎನ್ ಸಿ ಗಳ ಅವಸ್ಥೆ. ಶಿವನ ಸೇನೆಯವರಿಂದ ಹಿಡಿದು, ನವ ನಿರ್ಮಾಣ ಸೇನೆ, ರಸ್ತೆ ಸೇನೆ, ಬೀದಿ ಸೇನೆ, ಟ್ರೇನ್ ಸೇನೆ, ಬೀಚ್ ಸೇನೆಯವರೆಲ್ಲ ಬಂದು ಧಾಂಧಲೆ ಮಾಡಿ, ’ ಮಲಗಿದೆ ನೋಡ್ರೋ ಕಂಪನಿ’ ಎಂದು ಹೇಳಿಯೇ ಹೋಗುತ್ತಾರೆ.

ಮರಾಠಿಗರ ಭಾಷಾ ಪ್ರೇಮದಿಂದ ಕಲಿಯೋಕೆ ಸಾಕಷ್ಟಿದೆ ಕಣ್ರೀ..

ಮುಂಬಯಿಯಿಂದ...ಪ್ರೀತಿಯಿಂದ..
ಅವಿನಾಶ್ ಕಾಮತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂದರೆ ನಿಮ್ಮ ಪ್ರಕಾರ ಮಹಾರಾಷ್ಟ್ರದಲ್ಲಿನ MNC ಬ್ಯಾಂಕ್‍ಗಳಲ್ಲಿ ಮರಾಠಿ ಭಾಷೆಯ ಚೆಕ್‍ಗಳನ್ನು ಸ್ವೀಕರಿಸುತ್ತಾರಾ? ನಿಮಗೆ ಸ್ವಂತ ಅನುಭವವಿದೆಯಾ?

-ನವರತ್ನ ಸುಧೀರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಅನುಭವ!

ಪೀಠಿಕೆ ::

ನನ್ನ ಪಾಸ್ಪೋರ್ಟ್ ನಲ್ಲಿ ಕನ್ನಡದ ಸಹಿ ಇದೆ. ಪ್ಯಾನ್ ಕಾರ್ಡ್ ನಲ್ಲೂ ಕನ್ನಡದ ಸಹಿ ಇದೆ. ನನ್ನ ಎಲ್ಲ ಬ್ಯಾಂಕ್ ಗಳ ಉಳಿತಾಯ ಖಾತೆ ಗಳಲ್ಲೂ ಕನ್ನಡ ದ ಸಹಿ ಇದೆ.

ವಿಷಯ ::

ಒಮ್ಮೆ ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ನ ಒಬ್ಳು ಕನ್ಯಾ ಮಣಿ ಹಿಂದೆ ಬಿದ್ದು ಕ್ರೆಡಿಟ್ ಕಾರ್ಡ್ (ಆ ತರ ಒಂದು ಕಾರ್ಡ್ ..ರೆಡಿ ಲೋನ್ ಸೌಲಭ್ಯ ಇರೋ ಒಂದು ಕಾರ್ಡ್ ) ತಗಳಕ್ಕೆ ಒತ್ತಾಯ ಮಾಡ್ತಾ ಇದ್ಲು. ಅವ್ಳು ತಿಂಗಳಾನುಗಟ್ಟಲೆ ಸತಾಯಿಸೋದು ನೋಡಿ ...ಪಾಪ ಅಂದುಕೊಂಡು :)... ಅದರಲ್ಲಿನ ಕೆಲವು ಫೀಚರ್ಸ್ ಗೆ ಮರುಳಾಗಿ ಒಪ್ಪಿಕೊಂಡೆ. ಡಾಕ್ಯುಮೆಂಟ್ಸ್ ಸಹಾ ಕೊಟ್ಟೆ....ಕನ್ನಡದಲ್ಲಿ ರುಜು ಹಾಕಿ.

ನನ್ನ ಮಕ್ಳು !.... ಇಂಗ್ಲೀಶಿನಾಗಿ ಸಹಿ ಹಾಕಕ್ಕೆ ಹೇಳಿ ಕಳಿಸಿದ್ರು!. ಆಗಲ್ಲ ಅಂದಿದ್ದಕ್ಕೆ "ನಾನು ಬ್ಯಾಂಕಿನ ಎಲ್ಲ ನೀತಿ ನಿಯಮಗಳಿಗೆ ಒಪ್ಪಿಕೊಂಡಿದ್ದೇನೆ , ಅದನ್ನು ಇಂಗ್ಲೀಶ್ ಬಲ್ಲವರಿಂದ ಓದಿ ತಿಳ್ಕೊಂಡಿದ್ದೇನೆ" ಅನ್ನೋ ಅರ್ಥ ಬಾರೋ ರೀತಿಯ ಒಂದು ಡಿಕ್ಲರೇಶನ್ ಫಾರ್ಮ್ ಗೆ ಸಹಿ ಮಾಡಕ್ಕೆ ಒತ್ತಾಯ ಮಾಡಿದ್ರು. ನನ್ನ ಮತ್ತು ಅಲ್ಲಿನ ಬ್ರಾಂಚ್ ಮ್ಯಾನೇಜರ್ ಜೊತೆ ಸಣ್ಣ ಪುಟ್ಟ ವಾದಾತಗಳು / ಚರ್ಚೆಗಳು ನಡೆದವು.

ಕೊನೆಗೆ ನಾನು ಆ ಫಾರ್ಮ್ ಗೆ ಸಹಿ ಹಾಕಲ್ಲ... ನಿಮ್ಮ ಬ್ಯಾಂಕ್ ಸಹವಾಸವೇ ಬೇಡ ಅಂದೇ. ವಿಷಯ ಮುಗೀತು! ;)

ಪಾಪ ಆ ಹುಡುಗಿ ಒಂದು ತಿಂಗಳಿಗೂ ಹೆಚ್ಚು ನನ್ನ ಹಿಂದೆ ಬಿದ್ದು ಆಕೆ ಸಮಯ ಅಲ್ಲದೆ ನನ್ನ ಹೊತ್ತನ್ನೂ ಹಾಲಿ ಮಾಡಿದಳು.

ಕನ್ನಡದ ಸಹೀನೆ ಒಪ್ಪೋಲ್ಲ.... ಅಂತಾದ್ರಾಗೆ ಕನ್ನಡದಲ್ಲಿ ವಿಷಯ ಬರೆದರೆ ಒಪ್ಕೊತಾರಾ?!

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆ ನೋಡಿದ್ರೆ ಸಹಿಗೆ ಭಾಷೆಯಿದೆಯೇ? ಅದು ಒಂದು pattern ಅಲ್ಲವೇ?
ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡದ ಸಹಿ ಒಪ್ಕೊಳ್ಲಿಲ್ವಾ!!

ಕೆಲವ್ರು ಯಾವ ಭಾಷೆ ಅಂತನೇ ಗೊತ್ತಾಗದ ಹಾಗೆ ಸಹಿ ಹಾಕ್ತಾರೆ. ಅದನ್ನ ಏನ್ ಮಾಡ್ತಾರಪ್ಪ!
ಸಹಿ ಅನ್ನೋದು ನಮಗಿಷ್ಟ ಬಂದಂತೆ ಮಾಡುವುದಲ್ವಾ? ಅದನ್ನೂ ಇಂಗ್ಲೀಷಲ್ಲೇ ಮಾಡಬೇಕು ಅಂತ ಹೇಳ್ತಾರಾ?! ಬುಲ್ ಶಿಟ್ಟು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತೃ, ನೀವು ಬೇರೆಡೆ ಇಂಗ್ಲೀಷಿನಲ್ಲಿ ಸಹಿ ಹಾಕಿ ಇಲ್ಲಿ ಕನ್ನಡದಲ್ಲಿ ಹಾಕಿದ್ರ? ಹಾಗೆ ಮಾಡಿದ್ದಲ್ಲಿ ರಿಜೆಕ್ಟ್ ಆಗೋದು ಗ್ಯಾರಂಟಿ.

ನಮ್ಮ ತಂದೆಯವರಿಂದ ಹಿಡಿದು ನನ್ನ ಸ್ನೇಹಿತರು ಹಲವರು ಕನ್ನಡದಲ್ಲೇ ಸಹಿ ಹಾಕೋದು. ನನಗೆ ತಿಳಿದಂತೆ ಯಾವತ್ತೂ ಅವರ ಚೆಕ್ಕುಗಳು ರಿಜೆಕ್ಟ್ ಆಗಿಲ್ಲ. ಎಲ್ಲರೂ ಕ್ರೆಡಿಟ್ ಕಾರ್ಡುಗಳನ್ನ ತಗೊಂಡಿದಾರೆ - ಏನೂ ತೊಂದರೆಯಾಗಿಲ್ಲ. ICICI ಮುಂತಾದ MNC ಬ್ಯಾಂಕುಗಳಲ್ಲಿ ಕೂಡ ಕನ್ನಡದಲ್ಲಿರುವ ಚೆಕ್ಕು ನಡೆಯತ್ತೆ. SBI, Syndicate Bank, Corporation Bank, State Bank of Mysore, Canara Bank ಮುಂತಾದವುಗಳಲ್ಲಂತೂ ಸಂಪೂರ್ಣ ಕನ್ನಡದಲ್ಲೇ ಪ್ರತಿಯೊಂದನ್ನೂ ಮಾಡಬಹುದು (ಉದಾಹರಣೆಗೆ ಮ್ಯಾನೇಜರಿಗೆ ಬರೆದ ಪತ್ರಗಳು ಇತ್ಯಾದಿ).
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>ನೀವು ಬೇರೆಡೆ ಇಂಗ್ಲೀಷಿನಲ್ಲಿ ಸಹಿ ಹಾಕಿ ಇಲ್ಲಿ ಕನ್ನಡದಲ್ಲಿ ಹಾಕಿದ್ರ? ಹಾಗೆ ಮಾಡಿದ್ದಲ್ಲಿ ರಿಜೆಕ್ಟ್ ಆಗೋದು ಗ್ಯಾರಂಟಿ

:)

hpn , ಇಂತ ತಪ್ಪು ಮಾಡೋ ಹಂತವನ್ನ ನಾನಾಗಲೇ ದಾಟಿ ಬಿಟ್ಟಿದ್ದೇನೆ! :) ವಿಷಯ ಇರೋದು... ಸಹಿ ಹೊಂದುವುದರಲ್ಲಿ. ನನ್ನ ಸಹಿ ಎಲ್ಲ ಕಡೆ ಒಂದೇ ರೀತಿ!

ಅಷ್ಟಕ್ಕೂ ನನಗೆ ಚೆಕ್ ವಿಷಯದಲ್ಲಿ ಯಾವುದೇ ತೊಂದರೆ ಆಗಿಲ್ಲ. ಹೊಸದಾಗಿ ಆ ಕಾರ್ಡ್ ಕೊಡೊ ವಿಷಯದಲ್ಲಿ ಅವರು ಆ ರೀತಿ ವರ್ತಿಸಿದರು.

ಸವಿತೃ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನೊಪ್ ರವರೆ, ನನಗೆ ತು೦ಬಾ ದಿನದಿ೦ದ ಕನ್ನಡದಲ್ಲಿ ಚೆಕ್ಕಕ್ಕನ್ನು ತು೦ಬುವ ಆಸೆ ಇತ್ತು, ಆದರೆ ಒ೦ದು ರೀತಿಯ ಮುಜುಗರ. ನಿಮ್ಮ ಬರಹ ಮತ್ತು ಜನರ ಪ್ರತಿಕ್ರಿಯೆಗಳೆಲ್ಲಾ ನೋಡಿ ಈಗ ನನ್ನಲ್ಲೊ ರಕ್ತ ಕುದಿಯಕ್ಕೆ ಶುರುಆಗಿದೆ. ನಮ್ಮೊರಲ್ಲಿ ಬೇರೆಯವರು ಬ೦ದು ನಮ್ಮ ಕೆಲಸ ಕಸಿಯುತ್ತಿದ್ದಾರೆ ಅ೦ತಿವಲ್ಲಾ, ಈ ನಮ್ಮ ಸ್ಥಿತಿಗೆ ನಾವೇ ಹೊಣೆ.

ಇನ್ನುಮು೦ದೆ ಬ್ಯಾ೦ಕಿನೊಡನೆ ಪತ್ರವ್ಯವಹಾರ, ಚೆಕ್ಕು ತು೦ಬುವುದು, ಎಲ್ಲಾನೊ ಕನ್ನಡದಲ್ಲೇ. ಆದರೆ, ನನ್ನ ಸಹಿ ಮಾತ್ರ ಆ೦ಗ್ಲ ಭಾಷೆಯಲ್ಲೇ ಇರಬೇಕಾಗತ್ತೋ ಎನೊ!!!! ನನ್ನಲ್ಲಿ ಹೊಸಾ ಹುರುಪು ತು೦ಬಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆಕ್ಕಿಗೆ ಕನ್ನಡದಲ್ಲಿ ಏನ೦ತಾರೋ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಲ್ಮೆಯ ಸ್ನೇಹಿತರಾದ ಕಲ್ಯಾಣ್ ಅವರು ಈ ಬಗ್ಗೆ ಬರೆದಿರುವ ಉತ್ತರ ಇಲ್ಲಿದೆ:

http://i522.photobucket.com/albums/w344/kannadiga/BankBasheneetiVK061220...

ಕರ್ನಾಟಕದಲ್ಲಿರುವ ಯಾವುದೇ ರೀತಿಯ ಬ್ಯಾಂಕು [ಸರ್ಕಾರಿ-ಸಹಕಾರಿ-ಸಾರ್ವಜನಿಕ-ಖಾಸಗಿ]ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕೆಂಬುದು ನಿರ್ವಾವಾದ [ಲಗತ್ತಿಸಿರುವ RBI_kannada.pdf ನಿಯಮ ೨.೧.೧ / Fair_Practices_Code.pdf page 2, 2a para / bank code.pdf item 2 ನೋಡಿ]. ಯಾವುದೋ ಒಂದು ಖಾಸಗಿ ಬ್ಯಾಂಕು ಅಥವ ಅದರ ಶಾಖೆ ಇದಕ್ಕೆ ಹೊರತಾಗಲು ಸಾಧ್ಯವೇ ಇಲ್ಲ.

ಕರ್ನಾಟಕದ ಯಾವುದೇ ಬ್ಯಾಂಕಿನ ಶಾಖಾ ವಿವರಗಳು, ಸೂಚನಾ ಫಲಕಗಳು, ಕನ್ನಡದಲ್ಲಿ ವ್ಯವಹಾರ ಮಾಡ ಬಯಸುವ ಗ್ರಾಹಕರಿಗೆ ಅಲ್ಲಿನ ಅರ್ಜಿ,ನಮೂನೆ ಕನ್ನಡದಲ್ಲಿ ದೊರಕಿಸಿಕೊಡಬೇಕು ಎಂಬ ನಿಯಮವಿದೆ. ಆದರೆ ಸಮಸ್ಯೆಯ ಮೂಲ ಇರುವುದು ನಮ್ಮಲ್ಲೇ! ಕನ್ನಡ ಗ್ರಾಹಕರಾಗಿ ನಾವು ಬ್ಯಾಂಕಿನಲ್ಲಿ ವ್ಯವಹರಿಸದೇ ಇರುವುದು! ಇದನ್ನು ದುರುಪಯೋಗ ಮಾಡಿಕೊಂಡು ಖಾಸಗಿ ಹಾಗು ಎಲ್ಲಾ ಬ್ಯಾಂಕುಗಳು ಕನ್ನಡದ ಬಗ್ಗೆ ಅಸಡ್ಡೆ ದೋರಣೆ ತಳೆದಿವೆ. ನಾವು [ಕನ್ನಡ ಗ್ರಾಹಕನಾಗಿ]ಎಚ್ಚೆತ್ತುಕೊಂಡು ಮುಂದೆ ನಾವು [ಕನ್ನಡ ಗ್ರಾಹಕನಾಗಿ]ಯಾವುದೇ ಬ್ಯಾಂಕಿನಲ್ಲಿ ಯಾವುದೇ ರೀತಿಯ ವ್ಯವಹಾರ ಮಾಡುವಾಗ ಕನಿಷ್ಟ ಕೆಳಗಿನ ವಿಷಯ ನೆನಪಿಟ್ಟುಕೊಂಡು ಆಚರಣೆಗೆ ತಂದರೆ - ನಮ್ಮ ಸತತ [ಕನ್ನಡ ಗ್ರಾಹಕರ] ಒತ್ತಾಯದಿಂದಾಗಿ ಕನ್ನಡಕ್ಕೆ ಮನ್ನಣೆ ದೊರಕುವುದರಲ್ಲಿ / ಬ್ಯಾಂಕುಗಳು ಕನ್ನಡಮಯವಾಗುವುದರಲ್ಲಿ ಸಂದೇಹವೇ ಇಲ್ಲ. ನಾವು [ಗ್ರಾಹಕರು]ಜಾಗೃತರಾಗಬೇಕು ಮತ್ತು ನಮ್ಮ [ಕನ್ನಡ ಗ್ರಾಹಕನ] ಹಕ್ಕಿಗೆ ಒತ್ತಾಯ ಮಾಡಬೇಕಿದೆ.

೧] ಯಾವುದೇ ಬ್ಯಾಂಕಿನಿಂದ ನಿಮಗೆ ದೂರವಾಣಿ ಕರೆ ಬಂದಲ್ಲಿ ಅವರು ಕನ್ನಡದಲ್ಲಿ ಮಾತನಾಡಲು ತಿಳಿಸಿ.
೨] ಯಾವುದೇ ಬ್ಯಾಂಕಿಗೆ ನೀವು ಕರೆ ಮಾಡಬೇಕಾಗಿ ಬಂದಲ್ಲಿ ಕನ್ನಡ ಮಾತನಾಡುವ ಅಧಿಕಾರಿಗಾಗಿ ಭೇಡಿಕೆ ಸಲ್ಲಿಸಿ
೩] ಕರೆ ಕೇಂದ್ರಗಳಿಂದ ಮಾತನಾಡಬಯಸುವ ಅಧಿಕಾರಿಗಳಿಗೆ ಕನ್ನಡ ಮಾತನಾಡಲು ತಾಕೀತು ಮಾಡಿ.
೪] ಬ್ಯಾಂಕಿನಲ್ಲಿ ಖಾತೆ ತೆರೆಯಬೇಕಾದಾಗ ಕನ್ನಡದ ಅರ್ಜಿ ಬೇಕೆನ್ನಿ. ಅರ್ಜಿಯನ್ನು ಕನ್ನಡದಲ್ಲೇ ಭರ್ತಿ ಮಾಡಿ
೫] ಬ್ಯಾಂಕಿನ ಯಾವುದೇ ವ್ಯವಹಾರವಿರಲಿ [ಹೊಸ ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡಿಗೆ ಅರ್ಜಿ ಬರೆಯುವುದು, ಮನೆ ಸಾಲ, ವಾಹನ ಸಾಲ, ದುರಸ್ತಿ ಸಾಲ, ಪೀಠೋಪಕರಣ ಸಾಲ]ಅರ್ಜಿ ಕನ್ನಡದಲ್ಲೇ ಬರೆಯಿರಿ, ಸಹಿ ಕನ್ನಡದಲ್ಲಿ ಮಾಡಿ. ಸಂಬಂಧ ಪಟ್ಟ ಅಧಿಕಾರಿಯೊಡನೆ ಕನ್ನಡದಲ್ಲೇ ಮಾತನಾಡಿ
೬] ಬ್ಯಾಂಕಿಗೆ ಹಣ ತುಂಬುವ-ಹಣ ತೆಗೆಯುವ ಚಲನ್ನು [ನಮೂನೆ] ಕನ್ನಡದಲ್ಲೇ ಬರೆಯಿರಿ [ಅಂಕಿ ಸಮೇತ]
೭] ಚೆಕ್ಕುಗಳನ್ನು ಕನ್ನಡದಲ್ಲೇ ಬರೆದು ವಿತರಿಸಿ
೮] ಸ್ವಹನೀಯ [ಸ್ವಯಂಚಾಲಿತ ಹಣ ನೀಡುವ ಯಂತ್ರ] ಏಟಿಎಂ ಉಪಯೋಗಿಸುವಾಗ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ
೯] ಬ್ಯಾಂಕಿಗೆ ನೀವು ನೀಡುವ ಯಾವುದೇ ದೂರು-ಸಲಹೆಗಳನ್ನು ಕನ್ನಡದಲ್ಲೇ ಬರೆದು ಕೊಡಿ.
೧೦] ನಮಗೆ ಇಂಗ್ಲೀಷ್ ಬರಲ್ಲ ಎನ್ನ ಬೇಕಾಗಿಲ್ಲ! ನಾವು ಕನ್ನಡದಲ್ಲಿ ವ್ಯವಹರಿಸಬಯಸುವೆವೆಂದು ಮನವರಿಕೆ ಮಾಡಿ.

ನಿಮ್ಮ ಪೂರಕ ಓದಿಗಾಗಿ ಕೆಲವು ದಾಖಲೆಗಳನ್ನು ಲಗತ್ತಿಸಿದ್ದೇನೆ.

ಸಮಯಕೊಟ್ಟು ಓದಿ.

ಕನ್ನಡ ಗ್ರಾಹಕನ ಹಕ್ಕಿಗಾಗಿ ನಿಮ್ಮದೂ ಧನಿ ಸೇರಿಸಿ..........ಸೇವೆ ನಿರಾಕರಿಸಿದವರ ವಿರುದ್ಧ ಪ್ರತಿಭಟಿಸಿ, ಸಂಬಧ ಪಟ್ಟ ಇಲಾಖೆ, ಅಧಿಕಾರಿಗಳಿಗೆ ದೂರು ಸಲ್ಲಿಸಿ........

ಇದನ್ನು ಇತರ ಗುಂಪುಗಳಿಗೂ ರವಾನಿಸಿ.

ಚಂ.ಶೇ. ಕಲ್ಯಾಣ ರಾಮನ್,
ಬೆಂಗಳೂರು

-
ವಸಂತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಡತಗಳಿಗಾಗಿ ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ:

RBI Kannada:
http://www.scribd.com/doc/4768902/RBI-Kannada

PV 13062006
http://www.scribd.com/full/4769069?access_key=key-jxuh2iw7l6t0gslqijt

Bank code:
http://www.scribd.com/full/4769070?access_key=key-c0gqa10vhh3rytibgnq

Bank nalli kannada:
http://www.scribd.com/full/4769071?access_key=key-25yjr17kap8jlgr2vf84

Fair practices Code:
http://www.scribd.com/full/4769076?access_key=key-14y15c2f84iu7pxuiv0n

ಕಲ್ಯಾಣ್ ಅವರಿಗೆ ವಿಶೇಷವಾಗಿ ಆಗಿ ಧನ್ಯವಾದ ಹೇಳಬೇಕು.. ಇದೆಲ್ಲ ಅವರ ಹುಡುಕಾಟದ ಫಲ.
-
ವಸಂತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಯಾಣ್ ಮತ್ತು ವಸಂತ್ ಅವರು ಈ ಎಳೆಯ ಚರ್ಚೆಯನ್ನೂ ದದ ಮುಟ್ಟಿಸಿದ್ದಾರೆ. ನನ್ನಿ.
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.