ಹುಡುಗಿಯ ಪತ್ರ ..

4.5

ಮೌಲಿಕವಾದದ್ದನ್ನು, ಸುಂದರವೆನಿಸಿದ್ದನ್ನು, ಮನಸ್ಸಿಗೆ ಮುದನೀಡಿದ್ದನ್ನು, ಅನುಭವಿಸಿದಾಗ ತೀರಾ ಆತ್ಮೀಯರಾದವರೊಂದಿಗೆ ಹೇಳಿಕೊಳ್ಳ ಬಯಸುತ್ತದೆ ಈ  ಮನಸ್ಸು... ಏಕೇನ್ನುವಿರೋ? ತೀರಾ ಆಪ್ತರೊಂದಿಗೆ ಮಾತ್ರಾ ಒಂಚೂರು ಬಿಡದೆ ಹೇಳಿ ಬಿಡುತ್ತದೆ.     ಅದನ್ನು ಸ್ವೀಕರಿಸಿ ಕೇಳುವ  ಮನಸ್ಸೂ ಆಸ್ವಾದಿಸಿದಾಗ ಮನಸ್ಸು  ರೆಕ್ಕೆ ಬಿಚ್ಚಿದ ನವಿಲು,,,, ಅದೇನೋ ಸಾರ್ಥಕತೆಯ,ಧನ್ಯತೆಯ ಭಾವದಿಂದ ಸಿರಿವನ್ತರಾಗುತ್ತೇವೆ.. ಎಂಬ ಅಭೀಪ್ಸೆ ಅಷ್ಟೇ ..!   ಹೇಯ್  ನಿನ್ನ ಬಿಟ್ಟರೆ ಬೇರಾರಿದ್ದಾರೆ ಹೇಳು.....

ಮಂಜಿನ ಮುಸುಕು......ಮಬ್ಬಾದ  ವಾತಾವರಣ.....ಸಣ್ಣಗೆ ಚಳಿ ಏಳುವಾಗ ಅವನು ನೆನಪಾಗುತ್ತಾನೆ....ಗೊತ್ತಿಲ್ಲಾ..... ಪ್ರತಿ ಮುಂಜಾವಿನ  ಮಂಜಲ್ಲೂ  ಅವನಿದ್ದಾನೆ ಎನ್ನುವ ಭಾವ..ಅದರಿಂದಲೇ ಲವಲವಿಕೆಯೆನೋ.... ಅವನಿಲ್ಲದ ಕ್ಷಣ ಮನಸಿನ  ಸ್ಥಿರತೆಯೇ ಇಲ್ಲದ ಹಾಗೆ..... ಬೆಳ್ಳಂ ಬೆಳಗಳಿನ  ಜಾವ, ಚಂದ್ರ ಪುಟ್ಟ ಪುಟ್ಟ ಹೆಜ್ಜೆ ಇಡುವ ಕಾಲ ಬಂದದ್ದೂ, ಹೋದದ್ದೂ ಗೊತ್ತೇ ಆಗದು.ಮನಸ್ಸು ಅವನ ಧ್ಯಾನದಲ್ಲಿ ಹೊಸ ಹೊಸ ರಾಗಗಳ ಸಂಚಲನ... ಇದೆಲ್ಲ ಎಷ್ಟೋ ಬಾರಿ ಅಂತರ್ಮುಖಿ ಮಾಡಿಬಿಡುತ್ತದೆ...

ಕೈ ಕೈ ಹಿಡಿದು ನಡೆದ ಪುಟ್ಟ ಪಯಣ ......ಒಬ್ಬರ ಮುಖವನ್ನೇ ಅದೆಷ್ಟು ಹೊತ್ತು ದಿಟ್ಟಿಸಿದ್ದೆವು  .... ಹೊರಗಿನ ಮೋಹ ಆಕರ್ಷಣೆಯ  ಬಿಟ್ಟು ಮನಸ್ಸಿನ ಒಳ ಮಾತನ್ನು ಆಡುವುದಿದೆಯಲ್ಲಾ .... ಅದಲ್ಲವೇನೋ ಪ್ರೀತಿ.... ಅದೇಕೋ ನಿನ್ನೆದುರಿಗೆ  ಮಾತೇ ಹೊರಡದು. ನಿನ್ನನ್ನು ಪ್ರೀತಿಸಿ ಪ್ರೀತಿಸಿ ತಡೆಯಲಾಗದೇ ಅದನ್ನು ಹೇಳಲೇ ಬೇಕು ಅಂತ ಸಿದ್ಧಳಾಗಿದ್ದಾಗ  ಸಾಯಂಕಾಲದ ಆ ನನ್ನ ಮನಸ್ಸು ಹೇಗಿತ್ತು ಗೊತ್ತೇನೋ ....... ಈಗತಾನೆ ಅರಳಿದಂತ ಕೆಂಗುಲಾಬಿಯ ಘಮದಂತೆ....... ಆದರೆ ಏನು ಮಾಡಲಿ, ಮೌನವೇ ನಿನ್ನ ಮನಸ ಹೊಕ್ಕಿ ಮಾತನಾಡಿಸಿ ಬಿಡುತ್ತದೆ. ಅದೆಷ್ಟು ಆಡದ ಮಾತುಗಳು , ಅದೆಷ್ಟು ದಿನಗಳದು,,,,, ಗಂಟೆಗಳದು ,,,, ಅದಕೆ ಯಾವ ಲಿಪಿಯು ಬೇಕಿಲ್ಲ ಬರಿಯ ನಿನ್ನ ಇರುವಿಕೆ ಸಾಕು ನೆಮ್ಮದಿಯ ಸಿಂಚನಕ್ಕೆ...

ಪ್ರತಿ ಸಂಜೆಗತ್ತಲ ಹೊತ್ತಲ್ಲಿ, ತಂಪಾದ ಗಾಳಿಗೆ ಆರದಂತೆ ದೀಪವನ್ನು ತಡೆಯುತ್ತಾ ನಿನ್ನ ಇರುವಿಕೆಯನ್ನು ಬಯಸುತ್ತೇನೆ,,,,ತುಂಬಾ ಪ್ರೀತಿಯಿಂದ.......................ನೀನೆ ಹೇಳು ; ನನ್ನ ಪ್ರೀತಿಗೆ ಯಾವ ಸಮರ್ಥನೆ ಇದೆ?  ಅದೊಂದು ಸುಂದರವಾದ ಕುಸುಮ ...... ಮುಡಿಯಲು ಬಯಸುತ್ತದೆ ಮನಸ್ಸು.....ಕಾಲವಾದರೋ ನಿರ್ಭಯದಿಂದ ತಡೆಯುತಿದೆ... ಓ ಕಾಲವೇ  ಹೇಳಿಬಿಡು .... ಎಂದಿಗೆ ಅವನನ್ನು ಕರೆತರುವೆ?

ನೀನು ಅಂದರೆ ಅದೇನು ಸಂತಸ....! ಕಣ್ಣಲ್ಲಿ ದೀಪೋತ್ಸವ .....ಮೈಎಲ್ಲ ಕೆಂಪು ಸಂಜೆಯ ಬಾನಿನ ಹಾಗೆ.......ಉದ್ವೇಗ ಬರಿತ ಉಸಿರಾದರೂ........ ಮನಸ್ಸಿನಾಳದಲ್ಲಿ ನಿರ್ವಿಶಣ್ಣ ವಾದ ಪ್ರೀತಿ   ....ಮನಸ್ಸು ಹಕ್ಕಿಯಂತೆ ಎಷ್ಟೆಲ್ಲಾ ಉಲ್ಲಸಿತಳಾಗಿ ರೆಕ್ಕೆ ಬಡಿದದ್ದು ಗೊತ್ತೇನು ನಿನಗೆ..!     ನಂಗೆ ಇಡೀ ಜಗತ್ತೇ ಸಿಕ್ಕಷ್ಟು  ಖುಷಿಯಾಗಿತ್ತು......ಈ ಸಂತಸದ ಮೂಡಿನಲ್ಲೇ ಮನಸ್ಸು ಜೋಕಾಲಿ ಕಟ್ಟಿ ಆಡುತ್ತಿತ್ತು......ನಿನ್ನ ಇರುವಿಕೆ ಇಲ್ಲ ಅಂದರೆ ಏನೋ ಕಸಿವಿಸಿ...ನಾನೆಸ್ಟು ದೀನಳಾಗಿ, ಖಿನ್ನಳಾಗಿ  ಆಕಾಶ ನೋಡುತ್ತಾ ಅಳುತ್ತಾ ಕುಳಿತುಬಿಡುತ್ತೇನೆ...... ನಕ್ಷತ್ರಗಳನ್ನೊಮ್ಮೆ ಕೇಳಿನೋಡು......... ಸ್ವಲ್ಪ ಮಟ್ಟಿಗೆ ನನ್ನ ಹಕ್ಕಿಯ ರೆಕ್ಕೆಗಳನ್ನು  ಕಟ್ಟಿಡಲು ಬಯಸಿದ್ದೇನೆ..... ನಿನಗೆ ಇಷ್ಟ ವಾಗಲಿಲ್ಲವಲ್ಲ ಅದಕ್ಕೆ...ಸುಮ್ಮನೆ ಮನದ ಗೂಡಿನೋಳ ಗೆ  ರೆಕ್ಕೆ ಬಿಚ್ಚಿ   ಕೂರುವೆ ಅಷ್ಟೇ! ಅದನ್ನು ರೂಢಿ ಮಾಡಿಕೊಂಡಿದ್ದೇನೆ ...

ನಾನು ಬಯಸಿದ್ದಾದರೂ ಏನು? ನಿನ್ನ ಪ್ರೀತಿ ತಾನೇ..? ನಿನ್ನ ಪ್ರೀತಿಯ ಜಲಪಾತದಲ್ಲಿ ಮಿಂದು ತೇಲಿ ಬಿಡಬೇಕು... ನಿನಗೆ ನನ್ನ ಬಿಕ್ಕಳಿಕೆಯ ಧ್ವನಿ ಕೇಳುತ್ತಿದೆಯೇನು..? ನಾನು ಪ್ರೀತಿಸಿದ್ದು ನಿನ್ನನ್ನು... ಒಮ್ಮೆ ನನ್ನೆಡೆಗೆ ನೋಡಿಬಿಡು.... ನಾನು ನಿನ್ನ ಹೀಗೆ ಎಷ್ಟೋಂದು ಪ್ರೀತಿಸ್ತಿದೀನಿ ಅನ್ನೋ ವಿಷಯವನ್ನ   ಜಗತ್ತಿನಲ್ಲಿ ಯಾರೆಂದರೆ ಯಾರೊಬ್ಬರಿಗೂ ಹೇಳಿಲ್ಲ.... ಕಣ್ಣೀರು ಬರುತ್ತಿದರೂ ಹೊರಜಗತ್ತಿಗೆ ಕಾಣದಂತೆ ಒಳಗೆ ಉಳಿಸಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದೇನೆ.... ನನ್ನ ಪ್ರೀತಿಯ ಕಂಪನಗಳು ಬೇರೆ ಯಾರಿಗೋ ಕೇಳಿಸುವುದಿಲ್ಲ.. ಕಡೆಗೆ ನಿನಗೂ..? ಒಮ್ಮೆ ಆಲಿಸಿಬಿಡು....ಹೃದಯ ಒಡೆಯುವುದರೊಳಗಾಗಿ...

ಎಲ್ಲಿ ನೀನು ಹೋಗಿಬಿಡುತ್ತೀಯೋ ಎಂಬ ಆತಂಕದಿಂದ  ಕೆಲವೊಮ್ಮೆ ಕಿಟಕಿಯನ್ನು ನೋಡುತ್ತಾ ರಾತ್ರಿ ಇಡೀ  ಕುಳಿತಿರುತ್ತೇನೆ...... ನೀನು ಬಂದು ನೋಡು....ನನ್ನ ಕಣ್ತುಂಬಾ ನಿರೀಕ್ಷೆಗಳ    ಸಾಲು ಸಾಲು ದೀಪಗಳು ಹತ್ತಿ ಉರಿಯುತ್ತಿರುತ್ತದೆ.....ಒಮ್ಮೊಮ್ಮೆ ದಿಕ್ಕುತಪ್ಪಿದವಳಂತೆ ಭಯ ಕಾಡುತ್ತದೆ. ಪ್ರಾಣಕ್ಕೆನೋ  ಆದಂತಹ ನೋವು  ,, ನಿಜಕ್ಕೂ ನೀನು ನನ್ನ ಪ್ರೀತಿಸ್ತೀಯಾ ?ಇದೆಲ್ಲಾ ನಿಜವಾ?   ನಿನಗೋಸ್ಕರ ಕಾಯುತ್ತ ನಿಲ್ಲುವುದು.... ನಮ್ಮ ಬದುಕಿನ ತುದಿಯವರೆಗೂ ಇದು ಉಳಿದೀತೀನೋ ಎಂದೂ ಮನ ಕಸಿವಿಸಿ ಎಡೆಗೆ ಜಾರುವುದು ...ನಿನಗೆ ಗೊತ್ತೇನು ಈ ತರಹ ಕಸಿವಿಸಿ, ಆತಂಕ ಭಯ ನನ್ನನ್ನಾಕ್ರಮಿಸಿದಾಗ ಮನ ಬಯಸುವುದು ನಿನ್ನನ್ನು..... ನಿನ್ನ ಮಡಿಲನ್ನು....ಇದನ್ನೆಲ್ಲಾ ಸುಮ್ಮನಾಗಿಸಲಿಕ್ಕೆ ನೀನೇ ಬೇಕು...ನಿನ್ನಿಂದ ತಲೆ ನೇವರಿಸಿಕೊಂಡು, ಭರವಸೆಯ ಮಾತು ಕೇಳಿ, ಒಮ್ಮೆ ನಿನ್ನ ತೋಳಿನಲ್ಲಿ ಬಂಧಿಸಿಕೊಂಡು , ಕಿವಿಯಲ್ಲಿ ಪಿಸುಮಾತಲ್ಲೊಮ್ಮೆ ಹೆಸರು ಹೇಳಿ , 'ಸಮಾಧಾನ ಆಯ್ತೇನೆ ಹುಚ್ಚು ಹುಡುಗಿ'ಎಂದೂ ಹೇಳಲು ನೀನೆ ಬೇಕು......

ನನ್ನಲ್ಲಿನ ನಿರಂತರ ಪ್ರಶ್ನೆ, ಆತಂಕ, ದುಗುಡಗಳಿಗೆ ಸ್ಪಂದಿಸುವವ  ನೀನು,.ಅದೆಷ್ಟೋ ಬಾರಿ ನಿನಗೆ ಸಿಟ್ಟು ಬಂದಿರಬಹುದು... ನಿನ್ನ ಕೆಲಸಗಳ ಮಧ್ಯೆ ನಾನು ಕಾಡಿರಬಹುದು..... ನನಗೂ ನನ್ನ ಕೆಲಸಗಳಿಲ್ಲವೇನೋ..... ಅದರ ಮಧ್ಯೆ ನಾನು ನಿನ್ನ ಪ್ರೀತಿಸುವುದಿಲ್ಲವೇನೋ.....?ಪ್ರತಿಸಲ ಸಿಕ್ಕಾಗ ಮೌನ ಧರಿಸುತ್ತೇನೆ....ಅಪೂರ್ಣತೆಯ ಭಾವ ಇರುತ್ತದೆ,,,,ಅದಕ್ಕಾಗೇ ಮತ್ತೊಂದು ಭೇಟಿಗೆ, ಮಾತಿಗೆ, ಸಮಾಧಾನಕ್ಕೆ.ಚಿಕ್ಕದೊಂದು ಅಪ್ಪುಗೆಗೆ ಮನಸ್ಸು ತವಕಿಸುತ್ತದೆ...

ಹೇಯ್ ನನಗನ್ನಿಸಿದ ಹಾಗೆ ನಿನಗೂ ಅನ್ನಿಸುವುದಿಲ್ಲವೇನೋ..? ನನ್ನೆದೆಯ ದನಿ ನಿನಗೆ ಕೇಳಿಸುತ್ತದೆಯೇನೋ...?ನಿಂಗೊತ್ತಾ.....ನನ್ನೆದೆಯಲ್ಲಿ ಪುಟ್ಟ ಹಣತೆ ಹಿಡಿದು ಬದುಕಿನ ಕತ್ತಲು ಕಳೆಯಲು ಕಾದು ಕಾದು ನಿಂತಿರುವೆ...... ನಿನಗೋಸ್ಕರ...

                                                                                                                                     ನಿನ್ನ ಪ್ರೀತಿಯ... ಹುಡುಗಿ.....:)
".........................................................."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೇಳ್ರೀ ಯಾರಾತ..? ಇಷ್ಟು ಹೇಳಿದರೂ ಕೇಳದೇ ಇರುವಾತ..? ಚೆನ್ನಾಗಿದೆ ನಿಮ್ಮ ಮನದ ತೊಳಲಾಟ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ ಹ ಹ :) ಗೊತ್ತಿಲ್ಲ ಹುಡುಕುತ್ತಿದೀನಿ :) ಸಿಗುತ್ತಿಲ್ಲ.....:(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಮೌಲಿಕವಾದದ್ದನ್ನು, ಸುಂದರವೆನಿಸಿದ್ದನ್ನು, ಮನಸ್ಸಿಗೆ ಮುದನೀಡಿದ್ದನ್ನು, ಅನುಭವಿಸಿದಾಗ ತೀರಾ ಆತ್ಮೀಯದವರೊಂದಿಗೆ ಹೇಳಿಕೊಳ್ಳ ಬಯಸುತ್ತದೆ ಈ ಮನಸು....... ಯೆಕೇನ್ನುವಿರೋ? ತೀರಾ ಆಪ್ತರೊಂದಿಗೆ ಮಾತ್ರಾ ಒಂಚೂರು ಬಿಡದೆ ಹೇಳಿ ಬಿಡುತ್ತದೆ. ಅದನ್ನು ಸ್ವೀಕರಿಸಿ ಕೇಳುವ ಮನಸ್ಸೂ ಆಸ್ವಾದಿಸಿದಾಗ ಮನಸ್ಸು ರೆಕ್ಕೆ ಬಿಚ್ಹಿದ ನವಿಲು,,,, ಅದೇನೋ ಸಾರ್ಥಕತೆಯ,ಧನ್ಯತೆಯ ಭಾವದಿಂದ ಸಿರಿವನ್ತರಾಗುತ್ತೇವೆ.. ಎಂಬ ಅಭೀಪ್ಸೆ ಅಸ್ಟೇ ..! >> ನೂರಕ್ಕೆ ನೂರರಷ್ಟು ನಿಜ ರಿ ಈ ಮಾತುಗಳು ... ಚೆನ್ನಾಗಿದೆ ಪತ್ರ .. ಅಂದ ಹಾಗೆ ಯಾರಿಗೆ ಇದು ?? ಯಾರಿಂದ ?? :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಸುತ್ತಿರುವ ಯಾವುದೇ ಹುಡುಗಿ, ತನ್ನ ಮನದ ಮಾತುಗಳನ್ನ ಅರ್ಥ ಮಾಡಿಕೊಳ್ಳದಿರೊ ಹುಡುಗನಿಗೆ ಹೇಳೋದು......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತರಾ, ಬಹಳ ಚೆನ್ನಾಗಿ ಬರೆದಿದ್ದೀರಿ. ಭಾವಪೂರ್ಣ ಬರಹ. ಓದುತ್ತಾ, ಓದುತ್ತಾ ಕಣ್ಣಲ್ಲಿ ನೀರು ಜಿನುಗಿದ್ದಂತೂ ಸತ್ಯ. ನೀವು ಪ್ರೀತಿಸುವುದಕ್ಕಿಂತಲೂ ಹೆಚ್ಚು ಆ ವ್ಯಕ್ತಿ ನಿಮ್ಮನ್ನು ಪ್ರೀತಿಸುವಂತಾಗಲಿ ಎಂಬುದು ಈ ಗೆಳತಿಯ ಹಾರೈಕೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ಕಲ್ಪನೆ ಅಸ್ಟೇ... ವಾಸ್ತವ ಆಗಲಿ....ಪ್ರೀತಿಸುತ್ತಿರುವ ಎಲ್ಲರಿಗೂ ನಿಮ್ಮ ಹಾರೈಕೆಗಳು ಸಲ್ಲಲಿ... ಇಂಚರ ಅವರೇ....:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದಾ? ಕಲ್ಪನೆ ಅಷ್ಟೇನಾ? :-( ಕಲ್ಪನೆಯಲ್ಲಿ ಇಷ್ಟು ಚೆನ್ನಾಗಿ ಬರೆಯುವವರು ನೀವು, ಇನ್ನೂ ನಿಜಕ್ಕೂ ಎಷ್ಟು ಚೆನ್ನಾಗಿ ಬರೀಬಹುದು ಅಂತಾ ಕಲ್ಪನೆ ಮಾಡಿಕೊಳ್ತಾ ಇದ್ದೀನಿ :-) ಛೇ! ಕಣ್ಣೀರು ವ್ಯರ್ಥ ಆಗಿಹೋಯಿತಲ್ವಾ? ಮತ್ತೊಂದು ಪತ್ರ ಬರೆದು ನನ್ನ ಕಣ್ಣೀರನ್ನು ಒರೆಸುವಂತವರಾಗಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಹ್ಮ್ಮ್.... ಈ ಪತ್ರ ಕಲ್ಪನೆಗೆ ವಾಸ್ತವದ ಸ್ಪರ್ಶ ಕೊಡುತ್ತೆ... ಹೀಗಾಗಿ ನೀವು ಕಣ್ಣೀರು ಸುರಿಸಿದ್ದು ವ್ಯರ್ಥ ಆಗಿಲ್ಲ ಬಿಡಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಯ ನದಿಯಲಿ ಮಿಂದಿದ್ದವರ ಮನಗಳಿಗೆ ಮುದ ನೀಡಿದೆ ಪ್ರೀತಿಯಲಿ ನೋವುಂಡವರ ಕಣ್ಣುಗಳನ್ನೆಲ್ಲಾ ಒದ್ದೆಯಾಗಿಸಿದೆ ಪ್ರೀತಿಯಲ್ಲಿನ ಸುಖ ಅದನ್ನು ಅನುಭವಿಸಿದವನಿಗಷ್ಟೇ ಗೊತ್ತು ಅನ್ಯರಿಗೆ ಅರ್ಥವೇ ಆಗದು ಪ್ರೀತಿಲಿ ನೋವುಂಡವರ ಮಾತು - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಹ್ಮ್ಮ್....:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-):):) ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಇಷ್ಟೊ೦ದು ಪ್ರೀತಿಯಿ೦ದ ಕರೆಯೋವಾಗ ಅವರು ಬರದೆ ಇರೋಕೆ ಹೇಗೆ ಸಾದ್ಯ...ಕಣ್ಣಿನ ಹಣತೆಯಲ್ಲಿ ಪ್ರೀತಿಯ ದೀಪ ಹೀಗೆ ಬೆಳಗುತ್ತಿರಲಿ ಅನ್ನೋದೇ ನನ್ನ ಹಾರೈಕೆ... ....ಶ್ರೀ:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಹಾರೈಕೆಯು ಅದೇ.....:) ಆ ಮನಸ್ಸು ಬೆಚ್ಚಗೆ ಪ್ರೀತಿಯ ಚಿಪ್ಪಲ್ಲಿ ಇರಲಿ....:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಿನ ಮುಸುಕು......ಮಬ್ಬಾದ ವಾತಾವರಣ.....ಸಣ್ಣಗೆ ಚಳಿ ಏಳುವಾಗ ಅವನು ನೆನಪಾಗುತ್ತಾನೆ....ಗೊತ್ತಿಲ್ಲಾ..... ಬೆಳ್ಳಂ ಬೆಳಗಳಿನ ಜಾವ, ಚಂದ್ರ ಪುಟ್ಟ ಪುಟ್ಟ ಹೆಜ್ಜೆ ಇಡುವ ಕಾಲ ಬಂದದ್ದೂ, ಹೋದದ್ದೂ ಗೊತ್ತೇ ಆಗದು.ಮನಸ್ಸು ಅವನ ಧ್ಯಾನದಲ್ಲಿ ಹೊಸ ಹೊಸ ರಾಗಗಳ ಸಂಚಲನ... ಇದೆಲ್ಲ ಎಷ್ಟೋ ಬಾರಿ ಅಂತರ್ಮುಖಿ ........................................ ಕಲ್ಪನಾಲೋಕದಲ್ಲೇ ಇಷ್ಟು ಮೆರವಣಿಗೆ ಮಾಡಿದ್ದಿರಲ್ಲ, ನಿಜವಾಗಿಯೂ ಕಣ್ಣೆದುರಿಗೆ ಬಂದ್ರೆ ಏನ್ ಮಾಡೋ ಹುನ್ನಾರ ಇದೆ, ನಿಜಕ್ಕೂ ಆತ ತುಂಬಾ ಲಕ್ಕಿಕಣ್ರೀ...........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುನ್ನಾರದ ಬಗ್ಗೆ ಯೊಚಿಸಿಲ್ಲ ಸಾರ್...:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.