anivaasi ರವರ ಬ್ಲಾಗ್

ಪಾಡುಕಾಸ್ಟು - ೩


ಮೂರನೇ ಎಪಿಸೋಡು ಕೇಳಲು ಇಲ್ಲಿ ಚಿಟುಕಿ

ಮೂರನೇ ಕಂತಿನಲ್ಲಿ ನಿಮಗಾಗಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಂತೆಯ ಕಂತು-೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಕನ್ನಡದ ಹೊಸ ಪಾಡುಕಾಸ್ಟು

ಪಾಡುಕಾಸ್ಟುಕನ್ನಡದಲ್ಲಿ ಪಾಡ್‌ಕಾಸ್ಟೊಂದನ್ನು ಶುರು ಮಾಡಿದ್ದೇವೆ. ನಾವು ನಗುತ್ತಾ-ಮಾತಾಡುವ ಸಂಗತಿಗಳು, ಅದರಲ್ಲಿ ಕಾಣುವ ವಿಚಿತ್ರಗಳು ಇವುಗಳನ್ನೇ ರೆಕಾರ್ಡ್ ಮಾಡಿ ವಾರವಾರ ಹಾಕುವ ಯೋಚನೆ ಇದೆ. ಕನ್ನಡದಲ್ಲಿ ಹೀಗೆ ಬೇರೆ ಪಾಡ್‌ಕಾಸ್ಟುಗಳಿದೆಯೋ ಇಲ್ಲವೋ ಗೊತ್ತಿಲ್ಲ. (ಸಂಪದದ ಪಾಡ್‌ಕಾಸ್ಟ್‌ಗಳಲ್ಲದೆ).

ನಮ್ಮದಂತೂ ಇಲ್ಲಿದೆ. ಕೇಳಿ ಏನನಿಸುತ್ತದೆ ಎಂದು ಅಲ್ಲಾದರೂ ಇಲ್ಲಾದರೂ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಮಲಾ ದಾಸ್ ಮತ್ತು ಸಿಂಹ

Kamala Dasಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊಳ್ಳುತ್ತಾಳೆ. ಸಿಂಹದ ರಾಶಿಯ ಅವನ ಜತೆಗೆ ತನ್ನ ಸಂಗವನ್ನು ಕೆಲವೊಮ್ಮೆ ಮಧುರವಾಗಿ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಸಿಟ್ಟಿನಿಂದ ನೆನಪಿಸಿಕೋತಾಳೆ. ಅವನ ದರ್ಪ ಮೋಸ ಅರ್ಥವಾಗಿಯೂ ಕಾತರ ನಿಲ್ಲುವುದಿಲ್ಲ. ಅಸಹಾಯಕತೆಯನ್ನು ಮೀರಿದ ಮತ್ತೇನೋ ಅಲ್ಲಿ ಕೆಲಸಮಾಡುತ್ತಿರುತ್ತದೆ. ಆದರೆ ಕಡೆಗೂ ಆ ನಲ್ಲ ಬರುವುದೇ ಇಲ್ಲ.

ಈ ಕತೇನ ನೆನಪಿಂದ ಹೇಳ್ತಾ ಇದ್ದೀನಿ. ಯಾಕೆಂದರೆ ಕಮಲಾ ದಾಸ್ ಬರೆದ ‘ದ ಸೈನ್ ಆಫ್ ಎ ಲಯನ್’ ಎಂಬ ಕತೆಯನ್ನು ಯಥಾವತ್ತಾಗಿ “ಸಿಂಹ” ಅಂತ ಕನ್ನಡಿಸಿ ೧೯೮೮ರಲ್ಲಿ ನಾಟಕ ಮಾಡಿದ್ದೆವು. “ಬೆನಕ”ದ “ಮಂಡೇ ಥೇಟರ್‍” ಅನ್ನೋ ಇಂಟಿಮೇಟ್ ಸಭಾಂಗಣದಲ್ಲಿ. ಬೆನಕದ ನಟಿ ವೀಣಾ ಒಬ್ಬಾಕೆಯೇ ಪ್ರಭಾವಶಾಲಿಯಾಗಿ ನಟಿಸಿದ್ದ ಪ್ರಯೋಗ ಅದು. ಇಪ್ಪತ್ತೈದು ಜನರಷ್ಟೇ ಸುತ್ತ ಕೂತು ನೋಡಬಹುದಾದ ಆ ಪ್ರಯೋಗ ಹಲವರನ್ನು ದಿಗ್ಭ್ರಮೆಗೊಳಿಸಿತು. ಆ ಹೆಣ್ಣಿನ ಒಳಪಾತಳಿಯನ್ನು ಪಕ್ಕದಲ್ಲೇ ಕೂತು ಅನುಭವಿಸಿದ ಹಾಗೆ ನಾಟಕ ನೋಡಿದವರಿಗೆ ಅನಿಸಿತ್ತು. ಹಾಗೆ ಅನಿಸುವುದರಲ್ಲಿ ಕಮಲಾ ದಾಸ್ ಕತೆಯದು ಹಾಗು ಮಾತುಗಳದು ದೊಡ್ಡ ಪಾತ್ರ. ಆ ಹೆಣ್ಣಿನ ಅಂತರಾಳದ ಮಾತುಗಳು ಹರಿದಾಡುವುದೇ ಸಭ್ಯತೆ ಅಂಚಿನಲ್ಲಿ, ಸಮಾಜ ಒಪ್ಪದ ಅಂತರಂಗದ ತುಡಿತದಲ್ಲಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಿಡತೆ ಸಂತೆ ಕತೆ

locust_USFWSಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
ಇದರದ್ದದು ಅದರದ್ದಿದು ಕಾಲ್ಕೆರೆದೂ ಕೆರೆದೂ
ಮತ್ಮತ್ತೆ ಸೆರಟೊನನ್ ತಲೇಲಿ ಉಕ್ಕೀ ಉಕ್ಕಿ
ಹುಚ್ಚೆದ್ದು ಲಗ್ಗೆಯಿಟ್ಟಲ್ಲೆಲ್ಲಾ ಹಾವಳಿ;
ಮರಾ ಗಿಡಾ ಬೆಳೆಗಳಿಗೆಲ್ಲಾ
ಕಂಟಕಪ್ರಾಯ
ಈ ಬೈರಾಗಿ ಮಿಡತೆ ರೌಡಿ ಸಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - anivaasi ರವರ ಬ್ಲಾಗ್