ಭೈರಪ್ಪನವರ "ಸಂಶೋಧನೆ"

1

ಶ್ರೀಯವರು “ಭೈರಪ್ಪನ್ನ ನಂಬ್ಕೊಂಡರೆ ಪರೀಕ್ಷೆ ಫೇಲ್!” ಅನ್ನೋ ಬರಹಕ್ಕೆ ಸಂಪದದಲ್ಲಿ
ಪ್ರತಿಕ್ರಿಯೆ ಕೊಡುತ್ತಾ, ಭೈರಪ್ಪನವರ ಅಂಕಿ-ಅಂಶದ ಮೂಲ ಇದು ಎಂದು
http://www.christianaggression.org/features_statistics.php ಕೊಟ್ಟರು. ಆ
ಬರಹ ಬರೆಯುವಾಗ ಭೈರಪ್ಪನವರ ಅಂಕಿ-ಅಂಶದ ಮೂಲ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಆ
ಅಂಕಿ-ಅಂಶ ಬರೇ ತಪ್ಪು ಅನ್ನುವುದಕ್ಕಿಂತ ಹೆಚ್ಚು ಆತಂಕಕಾರಿ ಅನಿಸುತ್ತಿದೆ.

ಭೈರಪ್ಪನವರ ಅಂಕಿ-ಅಂಶದ ಮೂಲ ಒಂದು ಅನಾಮಿಕ ವೆಬ್‌ಸೈಟ್. ಅನಾಮಿಕವಾಗಿರೋದು
ತಪ್ಪೇನಲ್ಲ. ಆದರೆ ಬೇಜವಾಬ್ದಾರಿ ಮಾತುಗಳನ್ನು ಹೇಳುವುದಕ್ಕಾಗಿಯೇ ಅನಾಮಿಕರಾಗಿರೋದು
ಅಪಾಯ. ಕ್ರಿಶ್ಚಿಯಾನಿಟಿಯನ್ನು ದೂರುತ್ತಾ ಉಳಿದವರನ್ನು “ಸಂತುಷ್ಟ”ರನ್ನಾಗಿಸುವ ಉತ್ಕಟ
ಆಸೆ ಅದರ ಎಲ್ಲ ಹಾಳೆಗಳಲ್ಲಿ ನೀವು ಕಾಣಬಹುದು. ಅಂತಹವು ಎಲ್ಲ ಧರ್ಮಗಳ ವಿರುದ್ಧ ಹಲವು
ವೆಬ್‌ಸೈಟುಗಳಿವೆ ಅನ್ನುವುದೂ ನಿಜ.

ವಿಷಯ ಅದಲ್ಲ. ಅಲ್ಲಿಂದ ಅನಾಮತ್ತಾಗಿ ತಮ್ಮ ಅಂಕಿ-ಅಂಶಗಳನ್ನು ಎತ್ತಿಕೊಂಡಿರುವ
ಭೈರಪ್ಪನವರು ತಮ್ಮ ಪತ್ರಿಕೆಯ ಲೇಖನದಲ್ಲಿ ಅದರ ಹೆಸರು ಹೇಳಿಲ್ಲ. ಭೈರಪ್ಪನವರಿಗೂ, ಆ
ವೆಬ್‌ಸೈಟಿಗೂ ಒಂದು ಕಾಮನ್ ಮೂಲ ಇರಬಹುದು. ವೆಬ್‌ಸೈಟಿನವರೂ ಅದನ್ನು ಹೇಳಿಲ್ಲದೇ
ಇರೋದರಿಂದ. ಭೈರಪ್ಪರ ಬರಹಕ್ಕಿಂತ ಮುಂಚೆಯೇ ಆ ವೆಬ್‌ಸೈಟಿರೋದರಿಂದ, ಅಲ್ಲಿಂದ
ಎತ್ತಿಕೊಂಡಿದ್ದಾರೆ ಅಂದುಕೊಳ್ಳಲು ಅಡ್ಡಿಯಿಲ್ಲ.

ಕನ್ನಡದ ಹೆಸರಾಂತ, “ಜವಾಬ್ದಾರಿಯುತ(?)”, ಲೇಖಕ ಹೀಗೆ ಮೂಲ ಹೇಳದೆ ತನ್ನದೇ
ಸಂಶೋಧನೆ ಎಂಬಂತೆ ಬರಿಯುವುದು ಬರೀ ತಪ್ಪಷ್ಟೇ ಅಲ್ಲ - ಸಂಶೋಧಕರ ಪ್ರಕಾರ “ಘೋರ ಅಪರಾಧ”
ಕೂಡ. ತತ್ವಶಾಸ್ತ್ರದ ಕಂಪಾರಿಟಿವ್ ಸ್ಟಡಿ ಎಂಬಂತ ಸಂಶೋಧನೆ ಮಾಡಿರುವ ಭೈರಪ್ಪನವರಿಗೆ
ಇದು ತಿಳಿಯದ ಸಂಗತಿಯಲ್ಲ. ತಿಳಿದಿದ್ದೂ ಮಾಡುವುದರ ಹಿಂದಿನ ಉದ್ದೇಶ, ಕುಟಿಲತೆ
ಅಪಾಯಕಾರಿ. ಇಂಟರ್ನೆಟ್ ಕೈಗೆಟುಕದ ಎಷ್ಟೋ ಮಂದಿ ಓದುಗರು ಇವರ ಮಾತುಗಳನ್ನು “ಸಾಬೀತಾದ
ಮಾತು” ಎಂದು ಪರಿಗಣಿಸುವ ಅಪಾಯವಿದೆ. “ಅಗಾಧ ಸಂಶೋಧನೆಯ ಫಲ” ಅಂದುಕೊಳ್ಳುವ ಅಪಾಯವಿದೆ.
ಹೆಸರಾಂತ ಪತ್ರಿಕೆಯ ಬೆಂಬಲ ಇರುವುದರಿಂದ ಜನರ ಮನಸ್ಸನ್ನು ಕೆಡಿಸುವ ಅಪಾಯವಂತೂ ಇದ್ದೇ
ಇದೆ.

ಹೀಗೆಲ್ಲಾ ಏಕೆ ಅಂದುಕೊಳ್ಳುತ್ತಿದ್ದೇನೆಂದು ಕೆಳಗಿನ ಎರಡು ಭಾಗಗಳನ್ನು ಗಮನಿಸಿದರೆ
ನಿಮಗೇ ಗಟ್ಟಿಯಾಗುತ್ತದೆ. ಇವಲ್ಲದೆ ಆ ಲೇಖನದಲ್ಲಿ ಬೇರೆ ಹಲವು ಮಾಹಿತಿಗಳು ಇವೆ.
ಇವನ್ನು ನೋಡಿದ ಮೇಲೆ ಅವುಗಳನ್ನೂ ಅನುಮಾನದಿಂದಲೇ ನೋಡಬೇಕಾಗುತ್ತದೆ. ಎಡಗಡೆ
ಭೈರಪ್ಪನವರ ಲೇಖನದ ತುಣುಕುಗಳು, ಎಡಗಡೆ ಆ ಅನಾಮಿಕ ವೆಬ್‌ಸೈಟಿನ ತುಣುಕುಗಳು.

---------------------------------------------------------------

---------------------------------------------------------------

 

 
---------------------------------------------------------------

ಕಡೆಗೆ ಇದು “ಪ್ರಾಮಾಣಿಕ” “ಜವಾಬ್ದಾರಿಯುತ” ಭೈರಪ್ಪನವರು ಉಳಿದವರಿಗೆ ಕೊಡುವ ಉಪದೇಶ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭೈರಪ್ಪ ಅವರನ್ನ ಸರಿಯಾಗಿ, ಸಾಕ್ಷಿ ಸಮೇತ, ಹಿಡಿದಿದ್ದೀರಿ ಅನಿವಾಸಿ! ಚೆನ್ನಾಗಿದೆ!

ಅಪರೂಪಕ್ಕೊಮ್ಮೆ ಧರ್ಮ ಪ್ರಚಾರಕ್ಕೆ ಬರುವವರನ್ನು ಹಿಂದೆ ನಾನು ನಮ್ಮ ಬೀದಿಯಲ್ಲಿ ಕಂಡಿದ್ದೇನೆ. ಒಮ್ಮೆ ಯಾವುದೋ ಒಂದು ಚರ್ಚ್ ನ ವಿಳಾಸ ಪುಸ್ತಕದಲ್ಲಿ ಅಡ್ರೆಸ್ ಬರೆದಿದ್ದ ಮೇಲೆ ಕೆಲವು ಪ್ರಚಾರಕರು ಮನೆಗೂ ಬಂದದ್ದುಂಟು - ಅವರನ್ನು ನಯವಾಗೇ ನಾನು ಮಾತಾಡಿಸಿ ಕಳಿಸಿದ್ದೆ. ಪಾದ್ರಿಗಳ ಶಾಲೆಯಲ್ಲಿ ಓದಿರುವ ನನಗೆ ಪಾದ್ರಿಗಳ ಜೊತೆ ಒಳ್ಳೆಯ ಮಾತಾಡಿ, ನಿಮ್ಮ ನಂಬಿಕೆ ನಿಮಗೆ ನನ್ನ ನಂಬಿಕೆ ನನಗೆ ಎಂದು ಹೇಳುವುದಕ್ಕೇನೂ ಮುಜುಗರವಾಗಿರಲಿಲ್ಲ.

ಅಂದಹಾಗೆ, ಮೊನ್ನೆ ಮನೆಬಾಗಿಲಲ್ಲಿ ಒಂದು ಚೀಟಿ ಬಿದ್ದಿತ್ತು. ಈಗ ನಡೆಯುತ್ತಿರುವ ಈ ಸುದ್ದಿಗಳಿಂದ, ಸಾಧಾರಣವಾಗಿ ಕ.ಬು.ಗೆ ಹೋಗಬೇಕಾದ ಚೀಟಿಯನ್ನೊಮ್ಮೆ ವಿವರವಾಗಿ ನೋಡಿದೆ. ವಿವರಗಳಿಗಿಂತ ಗಮನಸೆಳೆದದ್ದು ಅಲ್ಲಿದ್ದ ಚಿತ್ರ. ಒಬ್ಬ ಪ್ರಚಾರಕ (ಇಲ್ಲಿ ಪಾದ್ರಿಗಳಿಗೆ ಬೇರೆ ವೇಷವೇನೂ ಇಲ್ಲದ್ದರಿಂದ ಅದು ಪಾದ್ರಿಯೋ ಅಲ್ಲವೋ ಹೇಳಲಾರೆ) ಇನ್ನೊಬ್ಬ ವ್ಯಕ್ತಿಯೊಂದಿಗೆ ಕುಳಿತು ಮಾತಾಡುತ್ತಿರುವ ಚಿತ್ರ. ಪಾದ್ರಿ ಪ್ಯಾಂಟ್ ಧರಿಸಿದ ಬಿಳಿಮುಖದವನಾದರೆ, ಕೇಳುತ್ತಿರುವ ವ್ಯಕ್ತಿ ಜುಬ್ಬಾ ತೊಟ್ಟ :) ಕಂದು ಬಣ್ಣದ ಮುಖ! ಮುಖಲಕ್ಷಣದಿಂದ ಈ ವ್ಯಕ್ತಿ ಭಾರತ ಉಪಖಂಡದ ಮೂಲದವನಾಗಬೇಕೆನ್ನುವುದರಲ್ಲಿ ಅನುಮಾನವೇ ಇಲ್ಲ.

ಆ ಮೂಲದವರನ್ನೇ ಗುರಿಯಾಗಿಟ್ಟುಕೊಂಡು ಈ ಜಾಹೀರಾತು ತಯಾರಿಸಿದ್ದಾರಾ? ಗೊತ್ತಿಲ್ಲ - ಆದರೂ "If it walks like, quacks like a duck, then most probably it is a duck" ಅನ್ನೋ ಮಾತಂತೂ ನೆನಪಿಗೆ ಬಂತು!

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಂಸಾನಂದಿಯವರೆ,
ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್.
ನೀವು ಹೇಳಿದ ಹಾಗೆ, ಇಲ್ಲಿಯೂ ಇಂಡಿಯನ್ ಸಬ್‌ಕಾಂಟಿನೆಂಟ್ ಹಾಗು ಏಷಿಯಾದ ಮಂದಿಯನ್ನು ಮಾತಾಡಿಸಲು ಬರುತ್ತಾರೆ. ಒಮ್ಮೆ ಯಾರಿಗೋ ಕಾಯುತ್ತಾ ನಿಂತಿದ್ದಾಗ ಬಂದ ಇಬ್ಬರು ಕ್ರಿಶ್ಚಿಯನ್ ಹುಡುಗರನ್ನು ನಿಲ್ಲಿಸಿಕೊಂಡು "ದೇವರನ್ನು ನಂಬುವುದು ತುಂಬಾ ಅಪಾಯಕರ ಮತ್ತು ನಾಚಿಕೆಗೇಡು" ಎಂದು ಬೋಧಿಸಿ ಕಳಿಸಿದ್ದೆ. ಇವನ ಹತ್ತಿರ ಯಾಕೆ ಸಿಕ್ಕಿಕೊಂಡೆವಪ್ಪ ಎಂದುಕೊಂಡು ಹೋದರು. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

> ಭೈರಪ್ಪನವರ ಅಂಕಿ-ಅಂಶದ ಮೂಲ ಒಂದು ಅನಾಮಿಕ ವೆಬ್‌ಸೈಟ್

ಅನಾಮಿಕ ವೆಬ್‍ಸೈಟ್ ಅಂದ್ರೆ?

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಯವರೆ,
೨. anonymous (ಗು) 1) ಅನಾಮಧೇಯದ, ಅಜ್ಞಾತನಾಮಕ 2) ಅಜ್ಞಾತ ಕರ್ತೃತ್ವದ, ಬೇನಾಮಿ, ಅನಾಮಿಕ, ಹೆಸರಿಲ್ಲದ 3) ಸಾಮಾನ್ಯ, ವೈಶಿಷ್ಟ್ಯರಹಿತ

ಇಲ್ಲಿ "ಅಜ್ಞಾತ ಕರ್ತೃತ್ವದ" ಹೆಚ್ಚು ಸೂಕ್ತ. ಆ ವೆಬ್‌ಸೈಟಿಗೆ ಯಾರು ಜವಾಬ್ದಾರರು ಎಂದು ತಿಳಿಯುವುದೇ ಇಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

S L Bairappa

"ನಾನೇಕೆ ಬರೇಯೂತ್ತೇನೇ?" (ಇವರೇಕೇ ಬರೇಯೂತ್ತರೇ ಕರ್ಮಾ,,,,, )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಆವರಣ" ಪುಸ್ತಕ ದಲ್ಲಿ ಇದೆ ತರ research ಮಾಡಿದರಲ್ಲ ಅದು ಯಷ್ಟರಮಟ್ಟಿಗೆ ಸರಿ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>"ನಾನೇಕೆ ಬರೇಯೂತ್ತೇನೇ?" (ಇವರೇಕೇ ಬರೇಯೂತ್ತರೇ ಕರ್ಮಾ,,,,, )
ಕರ್ಮಾ - ಯಾರದು? ಬರೆದವರದೋ, ಓದುವವರದೋ? :)
>>"ಆವರಣ" ಪುಸ್ತಕ ದಲ್ಲಿ ಇದೆ ತರ research ಮಾಡಿದರಲ್ಲ ಅದು ಯಷ್ಟರಮಟ್ಟಿಗೆ ಸರಿ?
ಈ ಅನುಮಾನ ಆರೋಗ್ಯಕರ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿಂದೂ ಯಾರು ಅನ್ನುವದನ್ನೇ ಇನ್ನೂ ಯಾರೂ ನಿರೂಪಿಸಿಲ್ಲಾ, ಕೇವಲ ವೈದಿಕರನ್ನಷ್ಟೇ ದ್ರುಷ್ಟಿಯಲ್ಲಿಟ್ಟುಕೊಂಡು ಬರೆಯುವ ಈ ಭೈರಪ್ಪನಂತವರು, ಬೌದ್ದರೂ, ಸಿಖ್ಖರೂ, ಜೈನರೂ, ಚಾರ್ವಾಕರೂ, ಲಿಂಗಾಯತರೂ ಹಿಂದುಗಳು ಹೌದೋ ಅಲ್ಲವೋ ಎಂಬುವದರಬಗ್ಗೆ ಬರೆಯಲಿ.
ಈ ಎಲ್ಲ ಮತಾಂತರದ ಗೊಂದಲಗಳು ಕೇವಲ ಕಿರಿಸ್ತಾನಿಯರನ್ನು ಕೇಂದ್ರೀಕರಿಸಿರುವದೇಕೋ?.
ಪ್ರತಿವರ್ಷ ಸಾವಿರಾರು ಜನರು ಬೌದ್ದ ಧರ್ಮಕ್ಕೆ ಪರಿವರ್ತಿತರಾಗುವದರ ಬಗ್ಗೆ ಇವರ ತಕರಾರೇನಿಲ್ಲಾ ?
ಹಾಗಾದರೆ ಇವರ ನಿಜವಾದ ಉದ್ದೇಶ ಏನು ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವಕುಮಾರರೆ,
ಭೈರಪ್ಪನಂತಹ ಬುದ್ಧಿಜೀವಿಗಳು ಮನಸ್ಸುಗಳನ್ನು ಮುರಿಯುವ ಅಪಾಯವಿರುವುದಂತೂ ದಿಟ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Alla anivasi gale nivu bhyrappa navarannu teekisale beku antha barediddiralla? avaru kotta anki amsha kaddiddu antha, kotta anki amsha thappu antha!!!

bhyrappanavaru aryabhatanu alla, pythagores nu alla, anki ashta heege, ishte antha heloke. avaru ettiruva vaadakke nimma uttaravenu? athava nimma uddesha avara anki thappide antha helodu mathrane?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೂರ್ವಾ ಉದ್ದೇಶದಿಂದ ತಪ್ಪು,ತಪ್ಪು,,, ಬರೆದು ಮತ್ತು ಅದನ್ನೇ , ನಿಜ ಅಂತ, ಜನರನ್ನ ತಪ್ಪು ದಾರಿಗೆ ಯಳೇಯೂವರನ್ನ,ಟೀಕಿಸಬೇಕಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭೈರಪ್ಪನವರನ್ನೆ ಬಯ್ಯೋದನ್ನ ಮುಖ್ಯವಾದ ಕೆಲಸ ಮಾಡಿಕೊಂಡಿರುವವರು ಇದನ್ನೂ ಸ್ವಲ್ಪ ಗಮನಿಸಿ. ಹೇಗೆ ನಮ್ಮ ಧರ್ಮವನ್ನ ಬೇರೆ ಕಡೆ project ಮಾಡುತ್ತಿದ್ದಾರೆ ಅಂತ ಸ್ವಲ್ಪ ಗೊತ್ತಾಗತ್ತೆ. ನಮ್ಮ ಧರ್ಮ ಇರ್ಲೇ ಇಲ್ಲ, ಇತ್ತೀಚೆಗೆ ಹುಟ್ಟಿರೊದು ಅಂತ ಎಷ್ಟು ಚನಾಗಿ ಸುಳ್ಳನ್ನ ಬರಿತಿದಾರೆ, ಬರಿತಾನೆ ಇದಾರೆ, ಬರಿತಾನೆ ಇರ್ತಾರೆ. ಅದಕ್ಕೆ ನಮ್ಮ so called ಬುಧ್ಧಿಜೀವಿಗಳು ಸಪೋರ್ಟ್ ಮಾಡ್ತಾರೆ

http://www.oration.com/~mm9n/
http://www.oration.com/~mm9n/articles/index.htm

SLB ಬರೆದಿರೊ ಸಂಖ್ಯೆಗಳಲ್ಲಿ ಸ್ವಲ್ಪ ತಪ್ಪಿರಬಹುದು, ಆದ್ರೆ ಅವರು ಧರ್ಮ ರಕ್ಷಣೆಯ ಕಾರ್ಯಕ್ಕೆ ಮುಂದಾಗಿರುವುದು, ಸಂತಸದ ವಿಷಯ. at least ಒಬ್ಬರಾದರೂ open ಆಗಿ protest ಮಾಡ್ತಿದಾರೆ ನಮ್ಮೆಲ್ಲರ ಮೇಲಿನ ಧಾರ್ಮಿಕ ದಬ್ಬಾಳಿಕೆಯನ್ನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.