ಸಮೂಹಸನ್ನಿಗೆ ಜೈ

1.6

ಈ ಸಲದ ಪಾಡುಕಾಸ್ಟಲ್ಲಿ

:: ಸಮೂಹ ಸನ್ನಿ – ಅಲ್ಲು ಇಲ್ಲು ಎಲ್ಲೂ
:: ಸಮೂಹ ಮಾಧ್ಯಮ  <-> ಪಾಪ್ ಕಲ್ಚರ್
:: ಶ್ಯಾಂ ಸಿಂಗ್ ಜತೆ ಮಾತುಕತೆ – ಭಾಗ ೧

:: ಜಾನಪದ ಹಾಡು – ಮರೆಪ್ಪದಾಸರು ಹಾಗು ಅಂಜನಪ್ಪದಾಸರು

ಮಾತಿಗ್ಮಾತು ಮಿಲಾಯಿಸೋರು: ಪರಮೇಶ್/paramesh  ಸುದರ್ಶನ್/sudarshan
ರೆಕಾರ್ಡಿಂಗ್, ನಿರ್ವಹಣೆ/recording, producer : ಸಾರಂಗ/saranga

ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಚಿಟುಕಿ

http://paaducastu.wordpress.com/2010/01/13/ep7

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.6 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಳೀಬೇಕು..ಇಳೀಬೇಕು.. ಇಷ್ಟು ನೀಚಮಟ್ಟಕ್ಕೆ ಇಳಿಯುವುದಾ? ಇವರ ಕೆಲಸಕ್ಕೆ ಬಾರದ ಬಂಡಲ್ ಮಾತನ್ನು, ಸುಳ್ಳುಗಳನ್ನು ವಿರೋಧಿಸುವುದು ಸಮೂಹಸನ್ನಿಯಂತೆ! ವಿಷ್ಣುವರ್ಧನ್ ಹಾಸ್ಯ ಸಿನಿಮಾ ಮಾಡಿಲ್ಲ ಎಂಬುದು ಇವರ ಅಭಿಪ್ರಾಯವಂತೆ. ಅದನ್ನ ಒಪ್ಪಿಕೋಬೇಕಂತೆ. ಇವರು ಬಾಯಿಗೆ ಬಂದಂತೆ ಆಡುವುದನ್ನು ಕೇಳಲು ಇಪ್ಪತ್ತಮೂರು ನಿಮಿಷ ಸಮಯ ಹಾಳುಮಾಡಿಕೊಬೇಕಾ? ಇದನ್ನು ಕೇಳುವುದು ಸಮಯ ವ್ಯರ್ಥ! ಹಳ್ಳಿಯಲ್ಲಿ ಅರಳೆಕಟ್ಟೆಯ ಮೇಲೆ ಕುಳಿತು ಮಾತನಾಡುವ ಸೋಂಬೇರಿಗಳ ಹರಟೆಗಿಂತ ಕೆಳಮಟ್ಟದಲ್ಲಿದೆ ಈ (ನಾಯಿ)’ಪಾಡು’ ಕಾಸ್ಟು! ಈ (ನಾಯಿ)ಪಾಡುಕಾಸ್ಟು! ಬರೀ ಟೈಮು ವೇಸ್ಟು! ಕೆಲಸಕ್ಕೆ ಬಾರದ ಪುರಾಣ ಕೇಳಿ ಕೈಮುಗಿಯಣ್ಣ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಧ್ಯ, ಪುಣ್ಯಕ್ಕೆ ಹೆಚ್ಚೆಲ್ ನಾಗೇಗೌಡ್ರನ್ನ ಬಿಟ್ಬಿಟ್ರಲ್ಲ, ಅದೆಲ್ಲಿ ಅವ್ರನ್ನೂ ಹಿಂದಿನ ಸಾಲಿಗೆ ಸೇರ್ಸಿಬಿಡ್ತೀರೋಂತ ಹೆದ್ರಿದ್ದೆ! ಏನಾದ್ರೂ ಒಂದು ಅರ್ಥಪೂರ್ಣವಾದ ಪಾಡ್ಕಾಸ್ಟ್ ಮಾಡಿ ಹಾಕಿದ್ರೆ ನೀವು ಮಾಡಿದ್ಕೂ ಸಾರ್ಥಕ ಕಣ್ರೀ, ಇದೆಲ್ಲಾ ಸುಮ್ನೆ ನಮ್ಮ-ನಿಮ್ಮ ಸಮಯ, ಹಣ, ಬುದ್ಧಿ ಎಲ್ಲಾ ವ್ಯರ್ಥ ಕಣ್ರೀ. ಅಲ್ಲಿ ಆಸ್ಟ್ರೇಲಿಯಾದಲ್ಲಿ ನಮ್ಮ ಹುಡುಗರ ಮೇಲೆ ಅಷ್ಟೊಂದು ಅನಾಹುತಕಾರಿ ಆಕ್ರಮಣಗಳು ನಡೀತಿವೆ, ಸಂಬಂಧಪಟ್ಟ ಅಧಿಕಾರಿಗಳು, ರಾಜತಾಂತ್ರಿಕರು ಏನಂತಾರೆ? ಇದಕ್ಕೇನು ಪರಿಹಾರ ಅನ್ನೋದ್ರ ಬಗ್ಗೆ ನೀವು ಮಾತಾಡಿದ್ದಿದ್ರೆ ಸ್ವಲ್ಪ ಗೌರವವಾದ್ರೂ ಸಿಗ್ತಿತ್ತು. ಅದು ಬಿಟ್ಟು ನಿಮ್ಮ ಹಿಂದಿನ ಪಾಡ್ಕಾಸ್ಟಿಗೆ ಬಂದ ಪ್ರತಿಕ್ರಿಯೆಗಳನ್ನೆಲ್ಲಾ "ಸಮೂಹ ಸನ್ನಿ" ಅಂತ ಕರೆದು ಅದೇನೋ ವಿಚಿತ್ರವಾಗಿ ನೀವಿಬ್ರೇ ಖುಷಿ ಪಟ್ಕೊಂಡಿದ್ದೀರಲ್ಲಾ! ಇದು ನಿಜಕ್ಕೂ "ಪಾಡ್ಕಾಸ್ಟ್ ಲೋಕದ ದುರಂತ".
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಮೊದಲಿಗೆ "ನಮ್ಮನ್ನು ಅಂದುಕೊಂಡು ಬೇರೆ ಯಾರನ್ನೋ ಕೊಂದಿದ್ದಾರೆ.. ನಾವೇನು ಪಂಜಾಬಿ ತರಾ ಕಾಣ್ತೀವಾ? " ಇತ್ಯಾದಿ ಅಣಿಮುತ್ತುಗಳನ್ನು ಉದುರಿಸಿ ಅದೇ ದೊಡ್ಡ ಜೋಕು ಎಂಬಂತೆ ನಕ್ಕಿದ್ದಾರೆ! ಇವರ (ಅಪ)ಹಾಸ್ಯಪ್ರಜ್ಞೆಯ ಬಗ್ಗೆ ನನ್ನ ಅನುಕಂಪಗಳು! ತಾವೊಬ್ರೇ ಬುದ್ದಿವಂತ್ರು ಉಳಿದೋರೆಲ್ಲಾ ದಡ್ರು ಅನ್ನೋ ಭ್ರಾಂತಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.