ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.

0

ಆಗಲೇ ನಿನ್ನ ಹುಟ್ಟುಹಬ್ಬವಾಗಿ ಮೂರ್ನಾಕು ದಿನ ಕಳೆದಿದೆ. ನೆನಪೇ ಆಗಲಿಲ್ಲ. ಒಂದು ಗ್ರೀಟಿಂಗ್ ಆದರೂ ಕಳಿಸಬಹುದಿತ್ತು. ಈಗ ಒಳ್ಳೊಳ್ಳೆ ಗ್ರೀಟಿಂಗ್ ಕಾರ್ಡುಗಳು ಸಿಗುತ್ತವೆ. ಬಣ್ಣಬಣ್ಣದ್ದು, ಫಳಫಳ ಹೊಳೆಯುವದು. ಕೆಲವದರಲ್ಲಿ ಇಂಗ್ಲೀಷಿನ ಒಳ್ಳೊಳ್ಳೇ ಸಾಲುಗಳು ಇರುತ್ತವೆ. ಇನ್ನು ಕೆಲವಲ್ಲಿ ಕೆಟ್ಟಕೆಟ್ಟ ಪ್ರಾಸದ ಸಾಲುಗಳು. ಶುಭದ ಬಗ್ಗೆ, ಬದುಕಿನ ಬಗ್ಗೆ, ವಿಸ್ಮಯದ ಬಗ್ಗೆ, ಪುಣ್ಯ,ಅದೃಷ್ಟದ ಬಗ್ಗೆ ಹಾಗೂ ಪ್ರೀತಿ-ಶಾಂತಿಯ ಬಗ್ಗೆ. ಬಣ್ಣಬಣ್ಣದ್ದು. ಫಳಫಳ ಹೊಳೆಯುವದು. ನನಗೆ ಕೊಳ್ಳೋದಕ್ಕೆ ಕಷ್ಟವೇನಿಲ್ಲ. ಕೈತುಂಬಾ ಸಂಬಳ. ಸರಿಯಾಗಿ ಪರಿಚಯವಿಲ್ಲದವರಿಗೂ ಕಾರ್ಡು ಕಳಿಸಿರುವಾಗ, ನಿನಗೆ ಸ್ವಲ್ಪ ಹೆಚ್ಚಿನ ಬೆಲೆಯದ್ದೇ ಕೊಳ್ಳಬಹುದಿತ್ತು.

ಆದರೆ ನೀನೀಗ ಎಲ್ಲಿದ್ದಿ ಅಂತ ಗೊತ್ತಿಲ್ಲದ್ದರಿಂದ ಗ್ರೀಟಿಂಗ್ ಕಾರ್ಡಿನಿಂದ ಏನೂ ಪ್ರಯೋಜನವಿಲ್ಲ, ಬಿಡು. ಇದರಿಂದ ಬೇಸರವೇನೂ ಇಲ್ಲ. ಯಾಕೆಂದರೆ ನಿನ್ನನ್ನು ಹುಡುಕೋದನ್ನೇ ಬಿಟ್ಟುಬಿಟ್ಟಿದ್ದೇನೆ. ನಿನ್ನನ್ನು ಹುಡಕೋಕೆ ಹೋದರೆ ಈಗೀಗ ಸಿನಿಕತೆ, ಕುಹಕ, ಅನುಮಾನ ಸಿಗತ್ತವೆ. ಅವೆಲ್ಲಾ ಇರಲಿ ಅಂದರೂ, ಅವೆಲ್ಲಾ ಸರಿಯಾದ ಕಾರಣಕ್ಕ ಅನ್ನೋದು ಮುಖ್ಯ ಪ್ರಶ್ನೆ.

ನಿನ್ನನ್ನು ಮರೆತರೇನೂ ನಷ್ಟ ಇಲ್ಲ ಬಿಡು.
ಆದರೆ, ನಿನ್ನ ಬದಲಿಗೆ ಯಾರು ನೆನಪಾಗುತ್ತಾರೆ? ಯಾಕೆ ನೆನಪಾಗುತ್ತಾರೆ? ಇದು ಕೊಂಚ ಜಟಿಲ.
ನಿನ್ನ ಹುಟ್ಟುಹಬ್ಬ ಜಾರಿಹೋದರೂ ನಷ್ಟ ಇಲ್ಲ ಬಿಡು.
ಆದರೆ, ಅದರ ಬದಲಿಗೆ ಏನು ಹುಟ್ಟಿದೆ? ಯಾಕೆ ಹುಟ್ಟಿದೆ? ಇದು ಕೊಂಚ ಜಟಿಲ

ಸ್ವಾರ್ಥಕ್ಕೆ ನಿನ್ನ ನೆನಪು, ಚಿತ್ರ ಬಳಸ್ತೀವಿ ಅನ್ನೋದು ಬರೀ ಬೊಗಳೆ ಮಾತು. ಆದರೆ, ಆರೋಗ್ಯವಾದ ಸ್ವಾರ್ಥ ನಾವಿನ್ನೂ ಕಲೀಬೇಕಿದೆಯಲ್ಲ ಅದು ಜಟಿಲ.

ಈ ನಡುವೆ, ಇಪ್ಪತ್ತೊಂದನೇ ಶತಮಾನದ ಸವಾಲನ್ನು ಎದುರಿಸುವುದಕ್ಕೆ ಮಾತ್ರವಲ್ಲ, ಅದನ್ನು ಸಂಭಾಳಿಸಲು ಹಿಂಬಾಗಿಲಲ್ಲಿ ಹೊಂಚುವವರಿಗೂ ನಿನ್ನ ನೆನಪು ಆದರ್ಶ ಬಂಡವಾಳವಾಗಿದೆಯಲ್ಲ - ಅದು ಕೊಂಚ ಜಟಿಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಹಾತ್ಮಾ ಗಾಂಧೀಜಿ ಸ್ಮರಣೆಗೆ ಇದಕ್ಕಿಂತ ಉತ್ತಮ ಕಾಣ್ಕೆ ಬೇಕೆ?

ಚೆನ್ನಾಗಿದೆ ಅನಿವಾಸಿಯವರೇ!

- ಚಾಮರಾಜ ಸವಡಿ
http://chamarajsavadi.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಾಮಧೇಯ, ಅಂತ ಬರೀತೀರಿ, ಅಂತಿಟ್ಕೊಳ್ಳಿ. ಅದೇನ್ ಹೆಸ್ರಲ್ವೇಮತ್ತೆ ? ಇದ್ರಿಂದ ಏನಾಯ್ತು. ನಿಮ್ಗೆ ಒಳ್ಳೇ ಪ್ರಾಪಗ್ಯಾಂಡ ಸಿಕ್ತು. ಅಷ್ಟಲ್ದೇ ಮತ್ತೇನು. ನಿಮ್ಗೇನ್ ನಷ್ಟ್ಟ ಸ್ವಾಮೀ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಥ್ಯಾಂಕ್ಸ್ ಚಾಮರಾಜರೆ,
ದಯವಿಟ್ಟು ಆಶೋಕರ ಚಪ್ಪಾಳೆಯನ್ನೂ ಸ್ವೀಕರಿಸಿ! :)
ವೆಂಕಟೇಶರೆ,
ನಿಮ್ಮ ಪ್ರತಿಕ್ರಿಯೆ ಅರ್ಥವಾಗಲಿಲ್ಲ. ಕೊಂಚ ವಿವರಿಸುತ್ತೀರ? ಹೆಸರಿನ ಬಗ್ಗೆ ನಿಮ್ಮ ತಕರಾರೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.