ಕಮಲಾ ದಾಸ್ ಮತ್ತು ಸಿಂಹ

3.666665

Kamala Dasಹುಡುಗಿ ಒಬ್ಬಳು ತನ್ನ ನಲ್ಲನಿಗೆ ಕಾಯ್ತಾ ಇದ್ದಾಳೆ. ಅವಳ ನಲ್ಲ ಒಬ್ಬ ರಾಜಕಾರಣಿ. ಅವನನ್ನು ಭೇಟಿ ಮಾಡಲು ಕಾತರಿಸ್ತಾ ಇದ್ದಾಳೆ… ಕಾಯ್ತಾ ನಲ್ಲನ್ನ ಬಣ್ಣಿಸ್ತಾಳೆ. ಅವನ ಇಷ್ಟ, ಕಷ್ಟ, ಪ್ರೀತಿ ದ್ವೇಷ ಎಲ್ಲಾ ವರ್ಣಿಸ್ತಾ ತನ್ನನ್ನೇ ತೆರೆದಿಟ್ಟುಕೊಳ್ಳುತ್ತಾಳೆ. ಸಿಂಹದ ರಾಶಿಯ ಅವನ ಜತೆಗೆ ತನ್ನ ಸಂಗವನ್ನು ಕೆಲವೊಮ್ಮೆ ಮಧುರವಾಗಿ, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಸಿಟ್ಟಿನಿಂದ ನೆನಪಿಸಿಕೋತಾಳೆ. ಅವನ ದರ್ಪ ಮೋಸ ಅರ್ಥವಾಗಿಯೂ ಕಾತರ ನಿಲ್ಲುವುದಿಲ್ಲ. ಅಸಹಾಯಕತೆಯನ್ನು ಮೀರಿದ ಮತ್ತೇನೋ ಅಲ್ಲಿ ಕೆಲಸಮಾಡುತ್ತಿರುತ್ತದೆ. ಆದರೆ ಕಡೆಗೂ ಆ ನಲ್ಲ ಬರುವುದೇ ಇಲ್ಲ.

ಈ ಕತೇನ ನೆನಪಿಂದ ಹೇಳ್ತಾ ಇದ್ದೀನಿ. ಯಾಕೆಂದರೆ ಕಮಲಾ ದಾಸ್ ಬರೆದ ‘ದ ಸೈನ್ ಆಫ್ ಎ ಲಯನ್’ ಎಂಬ ಕತೆಯನ್ನು ಯಥಾವತ್ತಾಗಿ “ಸಿಂಹ” ಅಂತ ಕನ್ನಡಿಸಿ ೧೯೮೮ರಲ್ಲಿ ನಾಟಕ ಮಾಡಿದ್ದೆವು. “ಬೆನಕ”ದ “ಮಂಡೇ ಥೇಟರ್‍” ಅನ್ನೋ ಇಂಟಿಮೇಟ್ ಸಭಾಂಗಣದಲ್ಲಿ. ಬೆನಕದ ನಟಿ ವೀಣಾ ಒಬ್ಬಾಕೆಯೇ ಪ್ರಭಾವಶಾಲಿಯಾಗಿ ನಟಿಸಿದ್ದ ಪ್ರಯೋಗ ಅದು. ಇಪ್ಪತ್ತೈದು ಜನರಷ್ಟೇ ಸುತ್ತ ಕೂತು ನೋಡಬಹುದಾದ ಆ ಪ್ರಯೋಗ ಹಲವರನ್ನು ದಿಗ್ಭ್ರಮೆಗೊಳಿಸಿತು. ಆ ಹೆಣ್ಣಿನ ಒಳಪಾತಳಿಯನ್ನು ಪಕ್ಕದಲ್ಲೇ ಕೂತು ಅನುಭವಿಸಿದ ಹಾಗೆ ನಾಟಕ ನೋಡಿದವರಿಗೆ ಅನಿಸಿತ್ತು. ಹಾಗೆ ಅನಿಸುವುದರಲ್ಲಿ ಕಮಲಾ ದಾಸ್ ಕತೆಯದು ಹಾಗು ಮಾತುಗಳದು ದೊಡ್ಡ ಪಾತ್ರ. ಆ ಹೆಣ್ಣಿನ ಅಂತರಾಳದ ಮಾತುಗಳು ಹರಿದಾಡುವುದೇ ಸಭ್ಯತೆ ಅಂಚಿನಲ್ಲಿ, ಸಮಾಜ ಒಪ್ಪದ ಅಂತರಂಗದ ತುಡಿತದಲ್ಲಿ.

ಈಗ ಕಮಲಾ ದಾಸ್ ತೀರಿಕೊಂಡಿದ್ದಾರೆ. ನೆನಪು ಉಳಿದುಕೊಂಡಿದೆ.

ಚಿತ್ರ: www.newint.org

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಮಲಾದಾಸ್ ಅವರ ಕೃತಿಗಳು ಕನ್ನಡಕ್ಕೆ ಬಂದಿವೆಯೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಜ್‌ರವರೆ,
ಇಲ್ಲಿ ಅವರ "ಬಾಲ್ಯದ ನೆನಪುಗಳು" ಪುಸ್ತಕದ ಬಗ್ಗೆ ಇದೆ ನೋಡಿ.
http://www.kendasampige.com/article.php?id=2502
ಹಾಗೆಯೇ ಕೆಳಗೆ ಹರಿ ಕೊಟ್ಟ ಕೊಂಡಿಯಲ್ಲಿ ಉಳಿದ ಪುಸ್ತಕಗಳ ಬಗ್ಗೆ ನೋಡಿರುತ್ತೀರಿ ಅಂದುಕೊಳ್ಳುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿವಾಸಿಗಳಿಗೆ ನನ್ನಿ,.. ಭಾವನೆಗಳನ್ನು ಪದಗಳಲ್ಲಿ ಕಟ್ಟಿಡಲು ನೋಡಿದ ಪುಸ್ತಕಗಳು ನನಗೆ personally ತುಂಬ ಇಸ್ಟ ಆಗೋವಂತವು,.. ಅಲ್ಲಿ ಮನುಜ ನಡೆದದ್ದನ್ನು ಹಂಗಂಗೆ ಹೇಳೋಕೆ ನೋಡಿದ್ರೂ, ಅದರಲ್ಲಿ ತನ್ನ ಮನಸ್ಸಿಗಾದ, ನೋವು, ನಲಿವುಗಳ ಕುಣಿತವನ್ನು ಓದುಗನಿಗೆ ಅರ್ಥ ಮಾಡ್ಸೋಕೆ ನೋಡಿರ್ತಾನೆ,.. ಬಹುಶ್ಯ ಘಟನೆಗಳ ಹೊರಮೈ ಅಸ್ಟೇ ನೋಡಿದಾಗ, ಅವುಗಳ ಇನ್ನೊಂದು ಆಯಾಮ ತಿಳಿಯೋದಿಲ್ಲ... ’ದ ಸೈನ್ ಆಫ್ ಅ ಲಯನ್’ ಒಂದು ಸಲ ಓದಬೇಕು ಅನಿಸಿದೆ.. ನನ್ನಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಗನಗೌಡರೆ,
ಹೌದು unassuming ನಿರೂಪಣೆ ತುಂಬಾ ಶಕ್ತಿಶಾಲಿಯಾಗಿ ಒಳತೋಟಿಯನ್ನು ತೆರೆದಿಡಬಹುದು.
ನಾನು ಆಧರಿಸಿಕೊಂಡಿದ್ದು ಒಂದೆರಡು ಪುಟದ ತುಂಬಾ ಪುಟ್ಟ ಇಂಗ್ಲಿಷ್ ಕತೆ. ಅದನ್ನು ಸಾಲಿಲಿಕ್ವಿಯಂತೆ ಹಾಗೇ ಮಾಡಿಸಿದ್ದೆ. ಯಾವುದೋ ಕಥಾಸಂಕಲನದಿಂದ ಹೆಕ್ಕಿಕೊಂಡಿದ್ದು. ಅದಕ್ಕೆ ಶಾಕುಹಾಚಿಯ (ಜಾಪನೀಸ್ ಕೊಳಲು) ಸಂಗೀತ ಬಳಸಿಕೊಂಡಿದ್ದೆವು. ಅದು ಆಕೆಯ ಮಾತುಗಳಿಗೆ, ಭಾವನೆಗಳಿಗೆ ತುಂಬಾ ಆಳವನ್ನು ಒದಗಿಸಿತು.
ನಿಮ್ಮ ಆಸಕ್ತಿಗೆ ಥ್ಯಾಂಕ್ಸ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.