ಕೊಡುಗೆಯೆಂಬುದೊಂದು ಅಳೆಯಲಾಗದ ಮಮತೆ>>ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೧

3.5

(೨೧೧) ಸ್ಪರ್ಧಾತ್ಮಕ ಮನೋಭಾವವಿರಿಸಿಕೊಳ್ಳಲು ಕ್ರೀಡಾಪಟುವಾಗಬೇಕಿಲ್ಲ, ನಿಖರವಾಗಿ ಬದುಕಲು ವೈದ್ಯರಾಗಬೇಕಿಲ್ಲ, ಆರೋಗ್ಯಪೂರ್ಣವಾಗಿ ಬದುಕಲು ಆಹಾರತಜ್ಞರಾಗಬೇಕಿಲ್ಲ. ಆದ್ದರಿಂದ ವೃತ್ತಿಪರನಾಗಿರುವುದಕ್ಕಿಂತಲೂ ವಿಷಯವೊಂದರ ಆಳಕ್ಕಿಳಿವುದು ಸೂಕ್ತ. ಡಾಕ್ಟರೇಟ್ ಪಡೆದವರಿಗಿಂತಲೂ ವಿದ್ವಾಂಸರಾಗಿರುವುದು ಲೇಸು!

(೨೧೨) ’ತನ್ನ ಬೋಧನೆಯನ್ನೊಂದು ಪ್ರಮೇಯವನ್ನಾಗಿಸಬೇಡಿ ಎಂಬುದನ್ನು ಬುದ್ಧ ತಿಳಿಸಿದ್ದಾನೆ’ ಎಂಬುದು ಬೌದ್ಧಧರ್ಮದ ಸಾರ!

(೨೧೩) ಛಾಯಾಚಿತ್ರವು ಅದರ ಒಳಗಿರುವವರಿಗೆ ಒಂದು ಮಾಯಾಗನ್ನಡಿ. ಅದರ ಮೊಲಕ ಅವರು ಹೊರಕ್ಕೆ ನೋಡಿದಾಗಲೆಲ್ಲ ಭವಿಷ್ಯಕಾಲವನ್ನೇ ನೋಡುತ್ತಿರುತ್ತಾರೆ. ಜೊತೆಗೆ ಭವಿಷ್ಯದಲ್ಲಿರುವವರು, ಅಂದರೆ ಛಾಯಾಚಿತ್ರದ ಹೊರಗಿರುವವರು, ತಿರುಗಿ ಅದರೊಳಗೆ ನೋಡಿದಾಗ ಭೂತವನ್ನೇ ನೋಡುತ್ತಿರುತ್ತಾರೆ. ಭೂತ‍ ಭವಿಷ್ಯತ್ ಕಾಲಗಳನ್ನು ಒಂದುಗೂಡಿಸುವ ಮಾಧ್ಯಮವೇ ಛಾಯಾಚಿತ್ರ ಕಲೆ!

(೨೧೪) ಮೀಸೆಯೆಂಬುದು ಮೊಗಿನ ಕೆಳಗಿನ, ತುಟಿಯ ಮೇಲು ಭಾಗವನ್ನು ಮುಚ್ಚಿಬಿಡುವುದೇಕೆಂದರೆ ಆ ಪ್ರದೇಶಕ್ಕೆ ಒಂದು ಹೆಸರಿಲ್ಲದಿರುವುದು!

(೨೧೫) ಕೊಡುವಾತನಿಗೆ ಸ್ವೀಕರಿಸುವವನ ಬಗ್ಗೆ ಇರುವ ಮಮತೆಯನ್ನು ಅಳೆಯಲಾಗದೆಂಬ ಸಂಕೇತವನ್ನು ’ಕೊಡುಗೆ’ಯು ಒಳಗೊಂಡಿರುತ್ತದೆ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅನಿಲ್ ಕುಮಾರ್ ನೀವು ಫಾದರ್ ಆಫ್ ಗಾದೆಗಳು. ನೀವು ಪತ್ರಿಕೆಗೆಳಿಗೆ ಕಳಿಸಿದರೆ ದಿನಕ್ಕೊಂದು ಗಾದೆ ಅಂತಾ ಖಂಡಿತಾ ಪ್ರಕಟಿಸುತ್ತಾರೆ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್ ಅವರೇ, ಎಂದಿನಂತೆ 'ನಿಮ್ಮ' ಗಾದೆಗಳು ಚೆನ್ನಾಗೇ ಇವೆ. ಸುರೇಶ್ ಅವರೇ, ಅನಿಲ್ ಅವರನ್ನು ಗಾದೆ-ವಿಶಾರದ ಎಂದೋ ಗಾದೆ-ಪ್ರವೀಣ ಎಂದೋ ಕರೆಯೋಣ. ಅವರನ್ನು ಗಾದೆ-ಪಿತನೆಂದು ಗುರುತಿಸಿ ಬಿಟ್ಟರೆ ಗಾದೆಗಳು 'ಗಾದೆ'ಗಳಾಗಿ ಉಳಿಯುವುದಿಲ್ಲವಲ್ಲ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[[ಮೀಸೆಯೆಂಬುದು ಮೊಗಿನ ಕೆಳಗಿನ, ತುಟಿಯ ಮೇಲು ಭಾಗವನ್ನು ಮುಚ್ಚಿಬಿಡುವುದೇಕೆಂದರೆ ಆ ಪ್ರದೇಶಕ್ಕೆ ಒಂದು ಹೆಸರಿಲ್ಲದಿರುವುದು!]] ವಾವ್! ಈ ಕುರಿತು ನನಗೆ ಹೊಳೆದೇ ಇರಲಿಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.