ಒಂದಿಷ್ಟು ಸ್ವಗತ, ಒಂದಿಷ್ಟು ಕನ್ನಡ ಶಬ್ದ

0

ಸಂಪದದಾಗ ಭಾಷಾದ ಮ್ಯಾಲೆ ಮಸ್ತ ಡಿಸ್ಕಶನ್ ನಡದದ. ಇದನ್ನೆಲ್ಲ ಬಾಜೂಕ ನಿಂತು ನೋಡ್ಲಿಕತ್ತೀನಿ ಇನ್ನ ಹೆಂಗ-ಹೆಂಗ, ಯಾ-ಯಾ ಕಡೆ ಹರಿತದ ವಿಚಾರ ಅಂತ. ಬಾಜೂಕ ನಿಂತು ಅವರೇನಂದ್ರು, ಇವರೇನಂದ್ರು ಅಂತ ನೋಡೊದ್ರಾಗ ಮಜ ಅದ, ಜೊತೀಗೆ ನನ್ನವೇ ಎಷ್ಟೊ ಅಭಿಪ್ರಾಯನ ಪ್ರಶ್ನೆ ಮಾಡ್ಕೊಳ್ಳೊದೂ ನಡದದ. ಇರಲಿ, ಆದರ ಈ ವೀಕೆಂಡಿನ್ಯಾಗ ಒಂದು ಸಣ್ಣ ಟಿಪ್ಪಣಿ ಬರೀಬೇಕು.

ಅಲ್ಲೀತನಕ ಈ ಕೆಳಗಿನ ಕನ್ನಡ ಪ್ರಯೋಗ ನೋಡ್ರಿ. ಇವನ್ನ ಜಗನ್ನಾಥದಾಸರು ಹರಿಕಥಾಮೃತಸಾರದಾಗ ಬಳಸ್ಯಾರ. ಹಂಗ ನೋಡಿದ್ರ ಹರಿಕಥಾಮೃತಸಾರದಾಗ ಬೇಕಾದಷ್ಟು ಸಂಸ್ಕೃತ ಪದ ಅವ. ಜೊತೀಗೆ ಎಷ್ಟು ಛೊಲೊ ಕನ್ನಡ ಬಳಸ್ಯಾರ ನೋಡ್ರಿ.

೧. ನುಡಿವೆಣ್ಣಿನಾಣ್ಮಾಂಡದೊಳು
೨. ಎಲರುಣಿಯವೋಲ್
೩. ಚಳಿವೆಟ್ಟಳಿಯ

(ಹೆಚ್ಚು ಕಡಿಮಿ ನಮ್ಮ ಮನಿ ಒಳಗ ಮಾತಾಡಿಧಂಗ ಬರದೀನಿ ಇಲ್ಲೆ. ನಿಮಗೆಲ್ಲ ಸರಳ ತಿಳೀತು ಅಂದರ ಇಷ್ಟರ ಮಟ್ಟಿಗೆ ಕರ್ನಾಟಕ ಏಕೀಕರಣ ಆಗೇದ ಅಂತ ಅನ್ಕೋತೀನಿ ;) )

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಂದ್ ಬರೆದಿದಿರ್ ರೀ.. ಹಿಂಗ ಬರೀರೆ ಮತ್ತ ( ನಾನು ಮಯ್ಸೂರಿನವನು ..ನೀವ್ ಬರೆದುದು ನಂಗೆ ಅರ್ತ ಆಗುತ್ತೆ :) )

೨) ಎಲರುಣಿಯವೋಲ್ = ಎಲರ್+ಉಣಿಯ+ಪೋಲ್= ಗಾಳಿಯನ್ನು ಉಣ್ಣುವ ಹಾಗೆ ಅಂತಿರ್ಬೋದು ...ಸಕ್ಕತ್ ಪದ ರೀ ಇದು.
ಇದರ ಹಿಂದು ಮುಂದು ಹೇಳಿದ್ರೆ ನಮಗೂ ತಿಳಿಯೋದಕ್ಕೆ ನೆರವಾಗುತ್ತೆ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೋ ನೋಡ್ರಿ, ಜಗನ್ನಾಥದಾಸರ ಇನ್ನೊಂದು ಪದ್ಯ:

ಕಣ್ಣಿಗೆವೆಯಂದದಲಿ ಕೈ ಮೈ |
ತಿಣ್ಣಿಗೊದಗುವ ತೆರದಿ ಫಲ್ಗಳು |
ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ |
ಪುಣ್ಯ ಫಲವೀವಂದದಲಿ ನುಡಿ|
ವೆಣ್ಣಿ ನಾನ್ಮಾಂಡದೊಳು ಲಕ್ಷ್ಮಣ |
ನಣ್ಣ ನೊದಗುವ ಭಕ್ತರವಸರಕಮರಗಣ ಸಹಿತ ||

ಯಾರಾದ್ರೂ ಅರ್ಥ ಬಿಡಿಸ್ರೀ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥ ಬಿಡಿಸಿದವರಿಗೆಲ್ಲ ಥ್ಯಾಂಕ್ಯೂ :)
ಚಳಿವೆಟ್ಟಳಿಯ => ಚಳಿ ಬೆಟ್ಟದ[ಅಭಿಮಾನಿಯ] ಅಳಿಯ => ಹಿಮವಂತನ ಅಳಿಯ => ಶಿವ
ನುಡಿವೆಣ್ಣಿನಾಣ್ಮಾಂಡದೊಳು => ನುಡಿ ಹೆಣ್ಣಿನ ಆಣ್ಮನ ಅಂಡದೊಳು => ಬ್ರಹ್ಮಾಂಡದೊಳು
ಎಲರುಣಿಯವೋಲ್ => ಎಲರ್ ಉಣಿಯಂತೆ => ಗಾಳಿಯನ್ನೇ ತಿನ್ನುವುದರಂತೆ => ಗಾಳಿಯನ್ನೇ ತಿಂದು ಬದುಕುವದು ಹಾವು => ಹಾವಿನಂತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.