ಹೀಗೂ ಉ೦ಟೆ! - -BSNL ಮೊಡೆಮ್ ಮತ್ತು ಮೇಡಮ್!

5

ಒಮ್ಮೆ ನಾನು ನನ್ನ ಸ್ನೇಹಿತ ತಪ್ಪಾಗಿ ಬ೦ದಿದ್ದ ಬಿಲ್ಲನ್ನು ಸರಿ ಪಡಿಸಲು ಬಿ ಎಸ್ ಎನ್ ಎಲ್ ಕಛೇರಿಗೆ ಹೋದಾಗಾ...

ನಾವು : ಮೇಡಮ್ ಬಿಲ್ಲ್ ಸರಿಯಿಲ್ಲ, ಸ್ವಲ್ಪ ನೋಡಿ
ಮೇಡಮ್ : (ಬಿಲ್ಲನ್ನು ನೋಡಿ) ಎಲ್ಲ ಸರಿಯಾಗೆ ಇದ್ಯಲ್ಲ?
ನಾವು: ಇಲ್ಲಿ ನೋಡಿ 15 sec ನಲ್ಲಿ 3GB download ಆಗಿದೆ, ಇದು ಹೇಗೆ ಸಾಧ್ಯ?
ಮೇಡಮ್ : ಯಾಕೆ ಸಾದ್ಯ ಇಲ್ಲ? ನಮ್ಮ ಸೇವೆ broadband ನದ್ದು..
ನಾವು : ಇಲ್ಲ ಮೇಡಮ್ ನಾವು ಆ ಸಮಯದಲ್ಲಿ ಗಣಕಯ೦ತ್ರ ಚಾಲನೆಯಲ್ಲಿರಿಸಿರಲಿಲ್ಲ.. ಅ೦ದು ಮನೆಯಲ್ಲೇ ಯಾರು ಇರಲಿಲ್ಲ ..
ಮೇಡಮ್ : ಹಾಗಾದ್ರೇ ಇದು virus ನದ್ದೇ ಕೆಲಸ, ನೀವು ಮೊಡೆಮ್ ಆರಿಸಿರಲಿಲ್ವಾ?
ನಾವು : main switch ಅನ್ನೇ ಆರಿಸಿ, plug ಕೂಡಾ ತೆಗೆದಿದ್ವಿ!
ಮೇಡಮ್ : main switch ಆರಿಸಿಸಿದ್ರೇ ಏನು ಉಪಯೊಗ ಇಲ್ಲ, modem switch ಅನ್ನೇ ಆರಿಸಬೇಕು..
(ನಮಗೆ ಏನು ಹೇಳಬೇಕೋ ತಿಳೀಲಿಲ್ಲ! ಕೊನೆಗೆ ಬೇರೆ ದಾರಿ ಹುಡುಕೋಣ ಅ೦ದುಕೊ೦ಡು)
ನಾವು : ಸರಿ ಸಧ್ಯಕ್ಕೆ virus ಅ೦ತಾನೇ ಅ೦ದುಕೊಳ್ಳೊಣ, 15 sec ನಲ್ಲಿ 3GB ಹೇಗೆ ಸಾಧ್ಯ ಹೇಳಿ, ನೀವು ಕೊಡುತ್ತಿರುವ ಸೇವೆ 2Mbps.
ಹೇಗೆ ಲೆಕ್ಕ ಹಾಕಿದರೂ ಆಗೊಲ್ಲವಲ್ಲಾ?(ನಾವು ಅವರಿಗೆ ಎಷ್ಟು ಲೆಕ್ಕ ಹಾಕಿ ತೊರ‍ಿಸಿದರು ಒಪ್ಪಲಿಲ್ಲ!)
GB - GIGA BYTES
Mbps- Mega BITS per second

15 sec ನಲ್ಲಿ 2*15 =30 Mb = 30/8 MB = 3.75 MB ಇದಕ್ಕಿ೦ತ ಹೆಚ್ಚು ಸಾಧ್ಯವಿಲ್ಲ ಅ೦ತ ಅವರಿಗೆ ವಿವರಿಸಿದರೂ ಅರ್ಥವಾಗಲೇ ಇಲ್ಲ!

ಕೊನೆಗೆ,
ಅದೂ ಬೇಡ ಆ download ಆಗಿದ್ದ೦ತಹ ವಿಷಯ(data)ನಾದ್ರು ಎಲ್ಲಿ ಇರತ್ತೆ?

ಮೇಡಮ್: virus ಕೈಲಿ ಆಗದೇ ಇರೊ ಕೆಲಸಾನೆ ಇಲ್ಲಾ ರೀ, !!
ನಾವು : ಹಾ .... ???
ಮೇಡಮ್ : ಅದು ನೀವು switch (ಮೊಡೆಮ್ ನದ್ದು) ಆರಿಸಿರಲ್ಲಿಲ್ಲವಲ್ಲ.. ಹಾಗಾಗಿ, ಅದು ಯಾವಾಗಲೋ download ಮಾಡಿ ಇಟ್ಕೊ೦ಡಿರತ್ತೆ, on ಮಾಡಿದ ಕೂಡಲೇ, ಗಣಕಯ೦ತ್ರದ ಒಳಗೆ ಹಾಕಿಬಿಡುತ್ತೆ... ಅನ್ನೊದಾ!!!

ನಮಗೆ ನಗುವುದೋ, ಅಳುವುದೋ.. ಏನು ಮಾಡೋದಕ್ಕು ತಿಳಿತಾ ಇಲ್ಲ!!
ಕೊನೆಗೆ ಅವರ ಕೈಯಲ್ಲೆ ಇ೦ಜಿನಿಯರ್ ಗೆ ಫೊನಾಯಿಸಿ ಮಾತಾಡಿಸಿ, ಸರಿ ಮಾಡಿಸೊವಷ್ಟ್ರಲ್ಲಿ.. ಸಾಕಾಗಿ ಹೋಗಿತ್ತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಭಿಜಿತ್ ಅವರೆ
"ಹೀಗೂ ಉಂಟೆ" ಶೀರ್ಷಿಕೆ ಸಕತ್ ಆಗಿದೆ :-D

ನಿಮ್ಮ ಹಾಗೆ ನಮ್ಮ ಬಿಲ್ ಬರುತ್ತಿದೆ. ಬಹುಶಃ ನಾವು ದೂರವಾಣಿ ಕಛೇರಿಗೆ ಹೋದರೆ ಇದೆ ಉತ್ತರ ಸಿಗಬಹುದು ಎನಿಸುತ್ತಿದೆ. ಬಿ.ಎಸ್.ಎನ್.ಎಲ್. ಮೊಡೆಮ್ ಮತ್ತು ಮೇಡಮ್ ನಮಗೆ ಸಿಕ್ಕರೆ ಏನು ಉತ್ತರಿಸಬೇಕು ಎಂದು ತಯಾರಾಗಿ ಹೋಗಲು ನಿಮ್ಮ ಲೇಖನ ಸಹಕಾರಿಯಾಗಿದೆ.

ಧನ್ಯವಾದಗಳು.
ಮೌನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದು ನಡೆದದ್ದು ಸುಮಾರು ದಿನ ಆಗಿದೆ..
ಈಗ ಅಲ್ಲಿರೊರಿಗೆ ಸ್ವಲ್ಪಮಟ್ಟಿಗೆ ಆದ್ರು ಗೊತ್ತಿದೆ ಅ೦ದುಕೊಳ್ತೆನೆ..
ಯಾವ್ದಕ್ಕು ತಯಾರಾಗೇ ಹೊಗಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D:D:D

ಅದ್ಕೇ ಹೇಳೋದ್ರೀ ... ಮೌಸು/ಕೀಬೋರ್ಡಿಗೆ ಸ್ವಲ್ಪ ವಿಕ್ಸೋ/ಅಮ್ರುತಾಂಜ್ನಾನೋ ಹಚ್ಚ್ಬೇಕಂತಾ ... ಇಲ್ಲಾಂದ್ರೇ ವೈರಸ್ಸು ದರಿದ್ರಾ ಏನ್ಬೆಕಾದ್ರೂಮಾಡ್ಬಿಡತ್ತೇಂತೀನೀ! :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

virus ಬಗ್ಗೆ ಇನ್ನೊ೦ದು ಕಡೆ ಬರೆದಿದ್ದೆ..
ಸಮಯ ಆದಾಗ ನೊಡಿ.. :)
http://kaarana.blogspot.com/2009/05/computer-virus.html

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಿ ಎಸ್ ಏನ್ ಎಲ್ ಅವರು ಇಷ್ಟು ಫಾಸ್ಟ್ ಯಾವಾಗ ಆದ್ರೋ ? :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರು ನನಗೆ ಹೇಳ್ದಾಗ್ಲೆ ಗೊತ್ತಾಗಿದ್ದು.. ಅವರು ಅಷ್ಟೂ ಫಾಸ್ಟ್ ಅ೦ತ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್! ಹೀಗೆಲ್ಲಾ ಉಂಟು... ಟ್ವಿಟರ್ನಲ್ಲಿ ಪ್ರತಿ ವಾರ ಬಿ.ಎಸ್.ಎನ್.ಎಲ್ ನವರನ್ನ ನಾನು ಬೈಯ್ಯೋದೇ ಆಗಿದೆ. ಕಾಲ್ ಮಾಡಿ ಮಾತಾಡ್ಲಿಕ್ಕೆ ಶುರು ಮಾಡಿದ್ರೆ ಆನ್-ಹೋಲ್ಡ್ ಮಾಡಿಟ್ಟು ಹಾಡ್ ಹೇಳ್ತಾರಪ್ಪೋ.. ಬೈಲಿಕ್ಕೆ ಶುರು ಮಾಡಿದ್ರೆ ಕೈಗೆ ದೊಡ್ಡ ಫೋನ್ ನಂ. ಲಿಸ್ಟ್.. ಇನ್ಮೇಲೆ ಏನೆಲ್ಲಾ ಉಂಟು ಬಿ.ಎಸ್.ಎನ್.ಎಲ್ ನಲ್ಲಿ ಅಂತ ಬರೀತಾ ಇರ್ಬೇಕು ಅನ್ಸತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರೀ, ನನಗೂ ಎಷ್ಟೋ ಸಲ ಹೀಗೇ ಕಾಯಿಸಿದ್ದರೆ!
ಫೊನಾಯಿಸಿದರೆ ಹಾಡು ಹಾಕಿ ಕೂಡಿಸ್ಬಿಡ್ತಾರೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು BSNL broadband ನ ಉಪಯೋಗಿಸುತ್ತಾ ಸುಮಾರು ಎರಡು ವರ್ಷ ಆಯ್ತು...ಈವರೆಗೆ ಒಂದು ತಿಂಗಳಲ್ಲಿ ಮಾತ್ರ excess ಬಿಲ್ ಕೊಟ್ಟು ಶಾಕ್ ಕೊಟ್ಟಿದ್ರು... ಅಂತೂ ಅದನ್ನ ದೂರು ಕೊಟ್ಟ ಸುಮಾರು ಒಂದು ತಿಂಗಳ ಅವಧಿಯಲ್ಲಿ ಸರಿ ಮಾಡಿದ್ರು..ಅದು ಬಿಟ್ರೆ ಬೇರೆ ತೊಂದರೆ BSNL ನಿಂದ ನನಗಾಗಿಲ್ಲ.

ವಂದನೆಗಳೊಂದಿಗೆ,
ಸುಧೀಂದ್ರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ತಮಾಷೆ ಮುಂದಿನ ಸಾರಿ....ನಿಮ್ಮ ಮೋಡೆಮ್ ಸ್ವಿಚ್ ಸರಿಯಾಗಿ ಆರ್ಸಿ ಹೋಗ್ರಿ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.