ಪತ್ರಿಕಾ ಧರ್ಮ

0

"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗಳ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."
— ಕುವೆಂಪು

ಮೇಲಿನ ಸಾಲುಗಳು ಸಂಪದ ಪೋರ್ಟಲ್ ನ ಸುಭಾಷಿತಗಳನ್ನು ತೋರಿಸುವ ಕಡೆ ಸಿಕ್ಕಿತು. ಯಾವ ಪತ್ರಿಕೆಯ ಬಗ್ಗೆ ಇರಬೇಕು ಕುವೆಂಪು ಈ ರೀತಿ ಅಸಮಾಧಾನದಿಂದ ಗೊಣಗುಟ್ಟಿದ್ದು? ನನ್ನ ಸಂದೇಹ ಮಣಿಪಾಲದಿಂದ ಪ್ರಕಾಶಿತವಾಗುವ ಪತ್ರಿಕೆಯೆಡೆಗೆ ಹೋಗುತ್ತಿದೆ. ಈ ಪತ್ರಿಕೆಯ ಒಳ ಭಾಗಗಳಲ್ಲಿ ತುಂಬಿರುವುದು ಕುವೆಂಪು ಅವರು ಹೇಳಿದ ವಿಷಯಗಳೇ. ಧಾರ್ಮಿಕತೆ ಇರಬೇಕು, ಆದರೆ ಅದು ಸರ್ವಸ್ವ ಆಗಬಾರದು. ಜನ ಪತ್ರಿಕೆ ಓದುವುದು ನಿತ್ಯ ನಡೆಯುವ ವಿದ್ಯಮಾನಗಳು, ಚರ್ಚೆಗಳು, ವಾಚಕರ ಪ್ರತಿಕ್ರಿಯೆಗಳನ್ನು ಓದಲು. ಸಂಪಾದಕನ ತೆವಲನ್ನಲ್ಲ. ಪತ್ರಿಕೆಗಳು ಜವಾಬ್ದಾರಿ ಅರಿತು ನಡೆದುಕೊಂಡರೆ ಸಮಾಜವನ್ನು ಸುಧಾರಿಸಲು ಸಾಧ್ಯ. ತಮ್ಮ ರಾಜಕೀಯ ನಿಲುವುಗಳನ್ನು ಮತ್ತು ವೈಯಕ್ತಿಕ ಆಶಯಗಳನ್ನು ಜನರ ಮೇಲೆ ಹೇರುವುದು ಪತ್ರಿಕಾ ಧರ್ಮಕ್ಕೆ ಹೇಳಿಸಿದ್ದಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇದು ತಮ್ಮ ಪತ್ರಿಕೆ ಹಾಕುವವನಿಗೆ ಕುವೆಂಪು ಬಯ್ಯುತ್ತಿದ್ದುದು.
ಕನಿಷ್ಠ ವಾರಕ್ಕೊಮ್ಮೆ ಈ ರೀತಿ ಬೈದು ಪತ್ರಿಕೆ ಬದಲಿಸುತಿದ್ದರಂತೆ ಕುವೆಂಪು.
ಈ ಬೈಗುಳಕ್ಕೆ ಎಲ್ಲಾ ಪತ್ರಿಕೆಗಳು ಒಳಗಾಗಿದ್ದವು.
ಪೂ ಚಂ ತೇ ಅವರ ಅಣ್ಣನ ನೆನಪು ಓದಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

thank you for the information, shri harsha.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನ್ನ ಸಂದೇಹ ಮಣಿಪಾಲದಿಂದ ಪ್ರಕಾಶಿತವಾಗುವ ಪತ್ರಿಕೆಯೆಡೆಗೆ ಹೋಗುತ್ತಿದೆ. ಈ ಪತ್ರಿಕೆಯ ಒಳ ಭಾಗಗಳಲ್ಲಿ ತುಂಬಿರುವುದು ಕುವೆಂಪು ಅವರು ಹೇಳಿದ ವಿಷಯಗಳೇ. ಧಾರ್ಮಿಕತೆ ಇರಬೇಕು, ಆದರೆ ಅದು ಸರ್ವಸ್ವ ಆಗಬಾರದು. ಜನ ಪತ್ರಿಕೆ ಓದುವುದು ನಿತ್ಯ ನಡೆಯುವ ವಿದ್ಯಮಾನಗಳು, ಚರ್ಚೆಗಳು, ವಾಚಕರ ಪ್ರತಿಕ್ರಿಯೆಗಳನ್ನು ಓದಲು. ಸಂಪಾದಕನ ತೆವಲನ್ನಲ್ಲ.<<

ಸಂಪಾದಕರ ಅಭಿಪ್ರಾಯಗಳನ್ನು ಓದುವವರೂ ಇರುತ್ತಾರೆ. ವಡ್ಡರ್ಸೆ, ಅರುಣ್ ಶೌರಿ, ಎಂ. ಜೆ. ಅಕ್ಬರ್, ಶೇಖರ್ ಗುಪ್ತ, ಅರುಣ್ ಪುರಿ, ಮುಂತಾದವರ ಸಂಪಾದಕೀಯ ಓದುವ ಚಟ ಇತ್ತು ನನಗೂ.

ಸಂಪಾದಕೀಯ ಇಲ್ಲದೇ ಪ್ರಕಟವಾಗುತ್ತಿದ್ದ ಪತ್ರಿಕೆಯೆಂದರೆ ಇದೊಂದೇ ಆಗಿತ್ತು. (ಮಣಿಪಾಲದ ಪತ್ರಿಕೆ ಅಂದಿರಲ್ಲಾ ಅದು)
ಸುದ್ದಿ ಮತ್ತು ಜಾಹೀರಾತು, ಅಷ್ಟೆ ಆಗಿತ್ತು.
ಈಗ ಸಂಪಾದಕೀಯ ಶುರು ಆಗಿರಬೇಕೇನೋ...ಗೊತ್ತಿಲ್ಲ. ಇತ್ತೀಚೆಗೆ ಓದಿಲ್ಲ ನೋಡಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಘಟನೆಗಳ ಬಗ್ಗೆ ಯಾವುದೇ ಉತ್ಪ್ರೇಕ್ಷೆ ಇಲ್ಲದೆ ಬರೆಯುವ ಪತ್ರಿಕೆ ಅದೊಂದೆ. ಅದಕ್ಕೆ ಈಗಲೂ ಕರಾವಳಿಯಲ್ಲಿ ಆ ಪತ್ರಿಕೆಯನ್ನೆ ಹೆಚ್ಚು ಜನರು ಓದುವುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.