ಪುಸ್ತಕ ಬಿಡುಗಡೆ

0

ಸ್ನೇಹಿತರೆ, ಮಿತ್ರ ವಸುಧೇಂದ್ರ ಈ ವರ್ಷವೂ 3 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವರು ಸಂಪದ ಬಳಗಕ್ಕೆ ವಿಶೇಷ ಸ್ವಾಗತ ಬಯಸಿದ್ದು ಹೀಗೆ:

ಮಾನ್ಯರೆ,
ಹೊಸ ಲೇಖಕರನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿರುವ ಛಂದ ಪುಸ್ತಕವು ಈ ವರ್ಷವೂ ಮೂರು ಪುಸ್ತಕಗಳನ್ನು ಪ್ರಕಟಿಸುತ್ತಿದೆ. ಈ ಬಾರಿಯ ಛಂದ ಪುಸ್ತಕ ಬಹುಮಾನವನ್ನು ಪಡೆದ ಅಲಕ ತೀರ್ಥಹಳ್ಳಿಯವರ ಕಥಾಸಂಕಲನ ಈ ಕತೆಗಳ ಸಹವಾಸವೇ ಸಾಕು, ಎಂ. ಆರ್. ದತ್ತಾತ್ರಿಯವರ ದಟ್ಸ್ ಕನ್ನಡದ ಅಂಕಣಗಳ ಸಂಗ್ರಹ ಪೂರ್ವ ಪಶ್ಚಿಮ ಮತ್ತು ಜಾನಕಿಯವರ `ಹಾಯ್ ಬೆಂಗಳೂರು' ಪತ್ರಿಕೆಯ ಅಂಕಣಗಳ ಸಂಗ್ರಹ ಜಾನಕಿ ಕಾಲಂ - ಮೂರೂ ಪುಸ್ತಕಗಳ ಬಿಡುಗಡೆಯನ್ನು ಇದೇ ಜನವರಿ ೨೯ರಂದು, ಬೆಳಿಗ್ಗೆ ೧೦ಕ್ಕೆ - ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಡ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ನಲ್ಲಿ ಹಮ್ಮಿಕೊಳ್ಳಲಾಗಿದೆ. ಪುಸ್ತಕಗಳ ಬಗ್ಗೆ ವಿಕ್ರಮ ವಿಸಾಜಿ, ಅಶೋಕ ಹೆಗಡೆ ಮತ್ತು ಜಿ.ಬಿ. ಹರೀಶ್ ಮಾತನಾಡಲಿದ್ದಾರೆ. ಜಯಂತ ಕಾಯ್ಕಿಣಿಯವರು ಮುಖ್ಯ ಅತಿಥಿಗಳಾಗಿ ಬರಲಿದ್ದಾರೆ.

- ವಸುಧೇಂದ್ರ (ಛಂದ ಪುಸ್ತಕದ ಪರವಾಗಿ)
(http://www.geocities.com/vas123u.rm/Chanda2006.html)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.