ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!

2

ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ.

ಮಹರಾಸ್ಟ್ರ ಅಂತು ದಿನೆ ದಿನೆ ಇಂಚಿಂಚಾಗಿ ಕರುನಾಡನ್ನು ಕಬಳಿಸುತ್ತಿದೆ. ಕನ್ನಡ ಮನಸ್ಸುಗಳನ್ನು ತಿರುಚಿ ಮಹಾರಸ್ಟ್ರಕ್ಕೆ ಹೋಗಲು ರಚ್ಚೆ ಹಿಡಿಯುವಂತೆ ಮಾಡುತ್ತಿದೆ. ದೆವ್ವ ಮೆಟ್ಟಿದವ ದೇವರನ್ನು ಬಯ್ಯುವ ಹಾಗೆ!!

http://maps.live.com/default.aspx?v=2&cp=15.013769~77.678833&style=r&lvl=6&tilt=-90&dir=0&alt=-1000&sp=Point.mc9yqvq7txxh_Kannada_A%20place%20name%20in%20maharastra.__~Point.kzc3xdqd9wfz_Basavakalyan_Once%20center%20of%20Karunadu.__&encType=1

ಇಲ್ಲಿ ನಾನು ಎರಡು ಊರುಗಳನ್ನು ಪಿನ್ ಮಾಡಿದ್ದೇನೆ ನೋಡಿ, ಮಹಾರಸ್ಟ್ರದ ಗೋದಾವರಿ ಹೊಳೆಗೂ ಆಚೆ ಕನ್ನಡ ಎನ್ನುವ ಊರಿದೆ. ಮತ್ತು ಬಸವಕಲ್ಯಾಣ, ಅಲ್ಲಿ ಪಿನ್ ಮಾಡಲಾದ ಎರಡನೆ ಊರು.

ವರ್ಚುಅಲ್ ಮರಾಟಿಗರು

ಇಲ್ಲಿ ನೋಡಿ,

http://www.dailypioneer.com/indexn12.asp?main_variable=VOTE_2004&file_na...

ಎಲ್ಲೂರು ಅಪ್ಪಟ ಕನ್ನಡ ಹೆಸರು, ಇಲ್ಲಿ ೯೫% ಮಂದಿ ಮರಾಟಿಯಂತೆ. ಇವರು ಕನ್ನಡವನ್ನೇ ಮರೆತ ಕನ್ನಡಿಗರು, ಅದಕ್ಕೇ ಇವರನ್ನು ವರ್ಚುಅಲ್ ಮರಾಟಿಗರು ಅಂದಿದ್ದು. ಮರಾಟಿಗರಲ್ಲಿ ಒಂದು ನಂಬಿಕೆ ಇದೆ, ಅದೆಂದರೆ ಕನ್ನಡಿಗರು ಅಂದರೆ ಹಿಂದುಳಿದವರು, ಮರುಳರು ಅಂತೆ :D

ಗಡಿಗಳಲ್ಲಿ ಪರಿಸ್ತಿತಿ ಇದಕ್ಕೆ ಪೂರಕವಾಗಿಯೇ ಇದೆ, ನಮ್ಮ ಸ್ಟೇಟ್ ಸಿಲೆಬಸ್ ತುಂಬಾ ಸರಳವಾಗಿದೆ. ನಮ್ಮ ಸಿಲೆಬಸ್‍ನ್ನು ಬಿಗುಗೊಳಿಸಬೇಕಿದೆ. ಗಡಿಗಳಲ್ಲಿ ಕನ್ನಡ ಮೀಡಿಯಮ್ ಸಾಲೆಗಳಿಗೆ ಒತ್ತು ಕೊಡಬೇಕಿದೆ.

ನನ್ನ ಗೆಳೆಯನೊಬ್ಬ ಸೊಲ್ಲಾಪುದವ, ಅಪ್ಪಟ ಕನ್ನಡಿಗರ ಕುಟುಂಬ. ಅವರ ತಾಯಿಗೆ ಕನ್ನಡದ ಬಗ್ಗೆ ಬಲು ಹೆಮ್ಮೆ. ಅವಂದು ಮರಾಟಿ ಮೀಡಿಯಮ್, ಅವನಿಗೆ ಕನ್ನಡ ಸರಿಯಾಗಿ ಆಡೋಕೆ ಬರುತ್ತಿರಲಿಲ್ಲ, ನಮ್ಮ ಜೋಡಿ ಕೂಡಿ ಕಲಿತ ಅನ್ನಿ :) ಅವನಿಗೆ ಕನ್ನಡಿಗ ಅಂತ ಹೇಳಿಕೊಳ್ಳಲು ಹಿಂಜರಿಕೆ, ತಾನು ಮಹಾರಾಸ್ಟ್ರಿಯನ್ ಅಂತ ಹೇಳಿಕೊಳ್ಳುತ್ತಿದ್ದ.

ಬಸವಕಲ್ಯಾಣ, ಒಂದೊಮ್ಮೆ ವಚನ ಕ್ರಾಂತಿಯಿಂದ ಕನ್ನಡಕ್ಕೆ ಬರಹಗಳ ಹೊಳೆಯನ್ನೇ ಹರಿಸಿದ ಕನ್ನಡದ ನೆಲ. ಇಂದು ಅಲ್ಲಿಗೆ ಹೋದರೆ ಎಲ್ಲಾ ಕಡೆ ಹಿಂದಿ, ಮರಾಟಿನೇ ರಾಚುತ್ತದೆ. ಅಲ್ಲಿಯ ಹೆಚ್ಚಿನವರಿಗೆ ಕನ್ನಡಾನೇ ಬರಲ್ಲ. ಬಸವಣ್ಣನವರು ಬದುಕಿದ್ದು ಇಲ್ಲೇನಾ ಅನ್ನಿಸಬೇಕು.

ವರ್ಚುಅಲ್ ತೆಲುಗರು

ಕರುನಾಡಲ್ಲಿ ಕನ್ನಡಿಗರನ್ನು ಬಿಟ್ಟರೆ ತೆಲುಗರ ಸಂಕೆಯದೇ ಮೇಲುಗೈ. ಎ.ಪಿ.ಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೆಲುಗರು ಹೆಚ್ಚಿನ ಸಂಕೆಯಲ್ಲಿದ್ದಾರೆ. ತೆಲುಗು ಸನಿಮಾಗಳನ್ನು ಕನ್ನಡಿಗರು ಮುಗಿ ಬಿದ್ದು ನೋಡುತ್ತಿದ್ದಾರೆ. ಆ ರೀತಿ ಕನ್ನಡಿಗರು ತೆಲುಗು ಕಲಿಯುತ್ತಿದಾರೆ, ಆದರೆ ತೆಲುಗರು ಕನ್ನಡ ಕಲಿಯುವ ಪ್ರಮೇಯವೇ ಬರಲ್ಲಾ.

ಏ.ಪಿ ಗಡಿಗಳಲ್ಲಿ ಕನ್ನಡ ಬರದೇ ಇರೋರು ಬಹಳ ಇದಾರೆ. ಮಹಾರಸ್ಟ್ರದಂತೆ ಎ.ಪಿ. ನಮ್ಮ ನೆಲೆ ಕೇಳುತ್ತಿಲ್ಲವಾದರೂ ಗಡಿಗಳಲ್ಲಿ ಅಸ್ಟೇ ಅಲ್ಲ ಇಡೀ ಕರುನಾಡಲ್ಲಿ ಸಿನಿಮಾ ಮೂಲಕ ತೆಲುಗು ನುಗ್ಗುತ್ತಿದೆ. ನಾನು ಡಬ್ಬಿಂಗ್‍ಗೆ ಅವಕಾಸ ಕೊಡಬೇಕು ಅಂತ ಬಡಕೋತಿರುವದು ಇದಕ್ಕಾಗೇ.

ಟಿ.ವಿ9 ನಲ್ಲಿ ತೆಲುಗಿನ ಹೀರೋಗಳಾದ ಚಿರಂಜೀವಿಯಿಂದ ಹಿಡಿದು, ಅರುಣ್ ಪಾಂಡ್ಯಾವರೆಗೆ, ಅವರಿಗೆ ನಗಡಿಯಾದರೂ ಇಲ್ಲಿ ಅದು ಹೆಡ್ ಲೈನ್ಸ್ ಸುದ್ದಿ. ಇದೊಂದು ವರ್ಚುಅಲ್ ತೆಲುಗು ಚಾನೆಲ್!!

ಏನು ಮಾಡಬೇಕು?

೧) ಗಡಿಗಳಲ್ಲಿ ಕನ್ನಡವನ್ನು ಉಳಿಸಬೇಕು, ಕನ್ನಡ ಮೀಡಿಯಮ್ ಸಾಲೆಗಳಿಗೆ ಸರಿಯಾದ ಟೀಚರ್‍ಗಳನ್ನು ನೇಮಿಸಬೇಕು.

೨) ಸ್ಟೇಟ್ ಸಿಲಾಬಸ್ ನ್ನು ರಿವೈಸ್ ಮಾಡಬೇಕು, ಸಿ.ಬಿ.ಎಸ್.ಸಿ ಸಿಲೆಬಸ್‍ಗೆ ಕೊಂಚ ಮಟ್ಟಿಗಾದರು ಸಾಟಿಯಾಗುವಂತಿರಬೇಕು.

೩) ಡಬ್ಬಿಂಗ್ ಸಿನಿಮಾಗೆ ಅವಕಾಸ ನೀಡಬೇಕು, ಇದರಿಂದ ಒಳ್ಳೊಳ್ಳೆ ಇಂಗ್ಲೀಶ್ ಸಿನಿಮಾಗಳು ಕನ್ನಡದಲ್ಲಿ ಬರತೊಡಗಿದರೆ ಆ ನೆಪದಲ್ಲಿ ಮರಾಟಿಗರು, ತೆಲುಗರು ಕನ್ನಡ ಕಲಿತಾರೆ.

೪) ಒಳ್ಳೊಳ್ಳೇ ಕನ್ನಡ ಸಿನಿಮಾಗಳನ್ನು ಮಾಡಬೇಕು, ಗಡಿಗಳಲ್ಲಿ ಬಿಡುಗಡೆ ಮಾಡಬೇಕು.

ಏನು ಮಾಡಬಹುದು ಅಂತ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ನನ್ನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ದಕ್ಷಿಣ ಮಹಾರಾಷ್ಟ್ರದಲ್ಲಿ ಕನ್ನಡ ಶಾಸನಗಳು ಮತ್ತು ಊರಿನ ಹೆಸರುಗಳು ಹೇರಳವಾಗಿ ಸಿಗುತ್ತವೆ. ಎಲ್ಲೂರಿನಂತೆ ಶಿರೂರು ಇದೆ. ಕೊಲ್ಲಾಪುರ, ಜತ್ತ, ಅಕ್ಕಲಕೋಟೆ ಮತ್ತು ಸೊಲ್ಲಾಪುರ ನಮ್ಮ ಕೈತಪ್ಪಿದವು. ಪಾಟೀಲ ಪುಟ್ಟಪ್ಪನವರು ಹೇಳುವಂತೆ ಬ್ರಿಟಿಷರ ಕಾಲದಲ್ಲಿ ಪಶ್ಚಿಮದಲ್ಲಿರುವ ಸಿಂಧೂದುರ್ಗದಲ್ಲಿ ಕನ್ನಡ ಮಾತಾಡುವವರಿದ್ದರು. ನಾವು ಇತಿಹಾಸದಿಂದ ಸರಿಯಾದ ಪಾಠಗಳನ್ನೇ ಕಲಿತಿಲ್ಲ.

ನೀವು ಹೇಳುವ ಹಾಗೆ ನಮ್ಮ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಬೇಕು. ಆದರೆ ಸಿ.ಬಿ.ಎಸ್.ಸಿ/ಐ.ಸಿ.ಎಸ್.ಸಿ ಗಳನ್ನು ಅಳತೆಗೋಲಾಗಿ ನೋಡುವುದು ಬೇಡ. ನನ್ನ ಸಂಬಂಧಿಕರಲ್ಲಿ ಕೆಲವರು ಈ ಶಾಲೆಗಳಿಗೆ ಹೋಗ್ತಾರೆ. ನನ್ನ ಅಭಿಪ್ರಾಯದಲ್ಲಿ ಈ ಶಾಲೆಗಳಲ್ಲಿ ಸಿಗೋದು quantitative knowledge ಮಾತ್ರ. ಇದರ ಬದಲು quality ಯತ್ತ ನಮ್ಮ ಗಮನವಿರಲಿ. ನಮ್ಮ ಸ್ಟೇಟ್ ಸಿಲೇಬಸ್ ಈಗಾಗಲೆ ರಿವೈಸ್ ಆಗಿದೆ!! ಅಂಕಗಳ ಮಹತ್ವ ಹೋಗಿ ಗ್ರೇಡ್ ವ್ಯವಸ್ಥೆ ಬಂದಿದೆ (SSLC ಹೊರತಾಗಿ). ಸೃಜನಶೀಲತೆ, ಪಠ್ಯೇತರ ಚಟುವಟಿಕೆ, project work, ಮುಂತಾದವುಗಳಿಗೆ ಮಹತ್ವ ನೀಡಲಾಗುತ್ತಿದೆ. ಇವುಗಳ ಅನುಷ್ಠಾನ ಸರಿಯಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. Our goal should be to eliminate the rote learning system and build a new system that encourages creativity, critical and independent thinking skills.

ಸಿ.ಬಿ.ಎಸ್.ಸಿ/ಐ.ಸಿ.ಎಸ್.ಸಿ ಶಾಲೆಗಳಲ್ಲಿ ನಮ್ಮ ರಾಜ್ಯದ ಇತಿಹಾಸ, ನುಡಿ, ಸಂಸ್ಕೃತಿ, ಸಾಹಿತ್ಯ, ಸಾಮಾಜಿಕ ಇತಿಹಾಸ, ಭೂಗೋಳವನ್ನು ಸರಿಯಾಗಿ ಕಲಿಸುವುದಿಲ್ಲ. ವಿಜ್ಞಾನ ಮತ್ತು ಗಣಿತಕ್ಕಿರುವ ಮಹತ್ವ humanitiesಗೂ ಇರಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಕ್ಷಿಣ ಮಹಾರಾಷ್ಟ್ರ (ಅಂದರೆ ಸೊಲ್ಲಾಪುರ, ಕೊಲ್ಹಾಪುರ, ಸಾಂಗ್ಲಿ, ಲಾತೂರ್ ಮೊದಲಾದ ಜಿಲ್ಲೆಗಳಲ್ಲಿ) ಬಹಳ ಕನ್ನಡಿಗರಿದ್ದಾರೆ - ಆದರೆ ಆ ಸನುಗೂ ತಿಳಿಯದಂತಿರುತ್ತದೆ. ಬೆಳಗಾವಿಯಲ್ಲಿ ಎಲ್ಲಾ ಕಡೆ ಕನ್ನಡದ ಜೊತೆ ಮರಾಠಿ ಬೋರ್ಡ್ ಗಳು ರಾರಾಜಿಸುತ್ತಿದ್ದರೆ, ಕೊಲ್ಲಾಪುರದಲ್ಲಿ, ಸೊಲ್ಲಾಪುರದಲ್ಲಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡರೂ ಒಂದು ಕನ್ನಡ ಅಕ್ಷರಗಳು ಕಾಣಸಿಗದು. ಇನ್ನು ಕರ್ನಾಟಕದೊಳಗೇ ಇರುವ ನಿಪ್ಪಾಣಿಯಲ್ಲಿ ಔಷಧಿಗೆ ಅಂತ ಕೇಳಿದರೂ ಒಂದು ಕನ್ನಡ ಬೋರ್ಡ್ ಸಿಗಲಾರದು. ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿರುವ ನಿಪ್ಪಾಣಿ ಎಂಬ ಹೆಸರಿಗೆ ಕಪ್ಪು ಬಳಿದು, निपाणी ಎಂಬ ಭಾರೀ ಗಾತ್ರದ (೬ ಅಡಿ ಎತ್ತರದ) ಹೆಸರು ಹೊಳೆಯುತ್ತಿದೆ.

ಇದರ ಕಾರಣಗಳಲ್ಲಿ ಕರ್ನಾಟಕ ಸರ್ಕಾರದ ನಿರ್ಲಕ್ಷಯವೂ ಸೇರಿದೆ. ಗಡಿನಾಡಿನ ಜನಕ್ಕೆ ಬೇಕಾದ ಸೌಕರ್ಯಗಳನ್ನು ಕೊಡುವಲ್ಲಿ ಅದು ಸೋತಿದೆ. ಈಗ ಹೇಗಿದೆಯೋ ಗೊತ್ತಿಲ್ಲ. ಹಿಂದೆ, ಬೆಳಗಾವಿ-ಕೊಲ್ಲಾಪುರ ರಸ್ತೆಯಲ್ಲಿ ( ಅದೇ ರೀತಿ, ಕರ್ನಾಟಕದ ಇನ್ನೊಂದು ತುದಿಯ ಚಾಮರಾಜನಗರದಿಂದ ಸತ್ಯಮಂಗಲಕ್ಕೆ ಹೋಗುವ ದಾರಿಯಲ್ಲೂ) ಹೋದರೆ, ಕರ್ನಾಟಕ ಎಲ್ಲಿಗೆ ಮುಗಿಯಿತು ಎಂದು ಕಣ್ಣು ಮುಚ್ಚಿ ಹೇಳಬಹುದಾಗಿತ್ತು. ರಸ್ತೆಯ ಹೊಂಡಗಳಿಂದ ಜಗ್ಗುನುಗ್ಗಾಗುತ್ತಿರುವ ಮೈಗೆ,ಬಸ್ ಸದ್ದಿಲ್ಲದೆ ಹೋಗುತ್ತಿದೆ ಎಂದರೆ, ಕರ್ನಾಟಕದ ಗಡಿ ದಾಟಿದ್ದೇವೆ ಎಂದೇ ಅರ್ಥವಾಗಿತ್ತು :(

-ಹಂಸಾನಂದಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರಾರಾಸ್ಟ್ರ ಒಳನಾಡುಗಳಲ್ಲಿ ರೋಡುಗಳು ನೋಡಲಾಗದಂತಿದ್ದರೂ, ಗಡಿಯಲ್ಲಿ ಅಸ್ಟೇ ಅಗದಿ ಲಕ ಲಕ ಹೊಳೆಯುವಂತೆ ಮಾಡಿಕೊಂಡಿದ್ದಾರವರು. ಜಮಕಂಡಿಯಿಂದ ಅತ್ನಿ ಮೇಲೆ ಹಾಯ್ದು, ಮಿರಜಿಗೆ ಹೋಗುವ ರೋಡಿನ ಕತೆಯೂ ಅದೇ. ಮಹಾರಸ್ಟ್ರ ಸುರು ಆದಂತೆ ರೋಡು ಇದ್ದಕ್ಕಿದ್ದಂತೆ ಅಗಲಗೊಂಡು, ಒಳ್ಳೆ ತುಪ್ಪ ಬಿದ್ದರೂ ಬಳಿದುಕೊಳ್ಳಬಹುದು, ಆಟೊಂದು ಚೆಂದವಾಗುತ್ತದೆ. ಬೋರ್ಡುಗಳಂತೂ ಕಾಗವಾಡದಿಂದಲೇ ಮರಾಟಿ ಸುರು. ಅದನ್ನು ದಾಟಿದ ಮೇಲೆ ದುರ್ಬೀನ್ ಹಾಕಿ ಹುಡುಕಬೇಕು ಕನ್ನಡವನ್ನು. ಆದರೆ ಅಲ್ಲಿನ ದಿಟ್ಟ ಕನ್ನಡಿಗರು ಈ ಎಲ್ಲ ದಬಾಳಿಕೆಯ ನಡುವೆ ತಿಳಿಗನ್ನಡವನ್ನು ಉಳಿಸಿಕೊಂಡಿದ್ದಾರೆ. ಮಹಾರಸ್ಟ್ರದ ಜತ್‍ನಲ್ಲಿ ಪಿ.ಯು.ಸಿ ಕೂಡ ಕನ್ನಡ ಮೀಡಿಯಮ್‍ನಲ್ಲಿದೆ.

ಗಡಿಯಲ್ಲಿನ ರೋಡುಗಳನ್ನು ನಮ್ಮ ಸರಕಾರ ಚೆಂದಗೊಳಿಸಬೇಕು, ಕೇಳಿಸಿಕೊಳ್ಳಬೇಕಾದವರು, ಕೇಳುತ್ತಿದ್ದಾರೇನು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲ ತಿಂಗಳುಗಳ ಹಿಂದೆ ಮಹಾರಾಷ್ಟ್ರದ ರಾಜ್ಯಪಾಲ SMK ಸೊಲ್ಲಾಪುರಕ್ಕೆ ಬಂದಿದ್ದರು. ಇಂಗ್ಲೀಷನಲ್ಲಿ ಭಾಷಣ ಶುರು ಮಾಡಿದಾಗ ಅಲ್ಲಿಯ ಜನ ಕನ್ನಡದಲ್ಲೇ ಮಾತಾಡಲು ಒತ್ತಾಯಿಸಿದರು. ಇದಕ್ಕೆ ಮಣಿದ SMK ಕನ್ನಡದಲ್ಲೆ ಭಾಷಣ ಮುಗಿಸಿದರು!! ಅಲ್ಲಿಯ ಬೋರ್ಡಗಳಲ್ಲಿ ಕನ್ನಡ ಕಾಣದಿರಬಹುದು. ಆದರೆ ಅಲ್ಲಿಯ ಜನರಲ್ಲಿ ಇನ್ನೂ ಕನ್ನಡತನವಿದೆ.

ವಿಜಯನಗರದ ಪತನದ ನಂತರ ಉತ್ತರ ಕರ್ನಾಟಕದಲ್ಲಿ ರಾಜಾಶ್ರಾಯ ಕಳೆದುಕೊಂಡಿದ್ದ ಕನ್ನಡ ಏಕೀಕರಣದ ನಂತರ ಸ್ವಲ್ಪ ಚೇತರಿಸಿಕೊಂಡಿದೆ. ಗಡಿ ಭಾಗಗಳಲ್ಲಿ ಕನ್ನಡವನ್ನು ಬಲಪಡಿಸಿದರೆ ನಿಜಾಮ, ಪೇಶ್ವೆ ಮತ್ತು ಬ್ರಿಟಿಶರ ಕಾಲದಲ್ಲಾದ ನೋವು ಸ್ವಲ್ಪ ಕರಗಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನೆವರಿಯಲ್ಲಿ ಸೊಲ್ಲಾಪುರಕ್ಕೆ ಹೋಗಿದ್ದೆ.
ಅಲ್ಲಿ ನಮ್ಮ ದೊಡ್ಡಪ್ಪನವರು ಇರತಾರೆ. ಅಲ್ಲೇ ಮನೆ ಮಾಡಿದ್ದಾರೆ.

ಅಲ್ಲಿ ನಮ್ಮ 12ನೆಯ ಶತಮಾನದ ಸಿದ್ಧರಾಮೇಶ್ವರರು ಇದ್ದರು ಅಂತ ಕೇಳಿದ್ದೆ. (ಇದರ ಬಗ್ಗೆ ಪ್ರಭುಲಿಂಗ ಲೀಲೆ ಯಲ್ಲಿ ಬಂದಿದೆ. ರಾಜರತ್ನಂ ಬರೆದ ಹೊತ್ತಿಗೆ ಓದಿ), ಅವರಿಗಾಗಿ ಕಟ್ಟಿದ ದೊಡ್ಡದಾದ ಮಂದಿರ ಕೂಡ ಇದೆ. ಅದು ತುಂಬಾ ಚೆನ್ನಾಗಿದೆ, ವಾರದ ಕೊನೆಯಲ್ಲಿ ತುಂಬಾ ಜನರಿರ್ತಾರೆ. ಆ ಮಂದಿರದಲ್ಲಿ ಅಲ್ಲಿ ಕನ್ನಡ ಮತ್ತು ಮರಾಟಿಯಲ್ಲಿ ಬೋರ್ಡುಗಳು ಕಾಣಸಿಗುತ್ತವೆ.
ಕನ್ನಡ ಹೊತ್ತಿಗೆಗಳೂ ಸಿಗುತ್ತವೆ. ನಾನೂ ಒಂದು ಸಿಧ್ಧರಾಮೇಶ್ವರರ ಹೊತ್ತಿಗೆ ಕೊಂಡುಕೊಂಡೆ.
ಅಲ್ಲಿ ನಿಮಗೆ ಮರಾಟಿ ಬರದಿದ್ದರೆ, ಕನ್ನಡಲ್ಲಿ ಕೇಳಿ ಎಲ್ಲ ಮಾತಾಡ್ತಾರೆ (ಹೆಚ್ಚು ಕಡಿಮೆ ಆಗುತ್ತ ಆದರೂ ಪರವಾಗಿಲ್ಲ). ಅದರಂತೆ ಹೊರ್ತಿ, ಕರ್ಜಗಿ ಬೇರೆ ಬೇರೆ ಕಡೆ ಹೋದರೆ ಕನ್ನಡದಲ್ಲೇ ಮಾತಾಡೋದು.. ಆದರೆ ಬೋರ್ಡು ಮಾತ್ರ ಮರಾಟಿಯಲ್ಲೇ ಇರುತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಊರು (ಶೋಲಾಪುರ )ನಮ್ಮ ಸಿದ್ಧರಾಮನ ಊರು , ಅವನೇ ಅದನ್ನು ಎರಡನೇ ಕೈಲಾಸ ಅ೦ತಾ ಹೇಳಿ ಕಟ್ಟಿಸುದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಲ್ಲಾಪುರದ ಹಳೆಯ ಹೆಸರು ಸೊನ್ನಲಿಗೆ - ಸಿದ್ಧರಾಮನ ಊರು. ಇಂದಿನ ಸೊಲ್ಲಾಪುರ ನಮ್ಮ ಕೈಯಲ್ಲಿಲ್ಲ. ಕಲ್ಯಾಣವನ್ನಾದರು ಉಳಿಸಿಕೊಳ್ಳೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಜಿ.ಸಿ, ಕನ್ನಡ ಹುಡುಗರು humanities ಕಲಿಯಬೇಕು, ಆದರೆ ಗಣಿತ, ಬಿನ್ನಣ(ವಿಜ್ಞಾನ)ದಲ್ಲಿ ಹಿಂದೆ ಉಳಿಯಬಾರದು. ಇಂದು ಇವುಗಳಿಂದಲೇ ಅನ್ನ ದೊರಕುತ್ತಿದೆ ಅಂದರೂ ತಪ್ಪಿಲ್ಲ. ನಾವು ಆರ್ತಿಕವಾಗಿ ಉಳ್ಳವರಾಗಿದ್ದಾಗಲೇ ನಮ್ಮ ನಾಡನ್ನು ಒಳ್ಳೆ infrastructure ಹೊಂದಿದ ನಾಡಾಗಿಸಬಹುದು, ಮಂದಿ ಒಳ್ಳೆ ತರದಲ್ಲಿ ಬದುಕುವ ಅನುಕೂಲತೆ ತರಬಹುದು ಅಲ್ಲವೇ.

ಎಲ್ಲಕ್ಕಿಂತ ಮೊದಲು ಗಡಿಗಳಲ್ಲಿ ಮಂದಿ ಕನ್ನಡ ಮಾತಾಡುವಂತೆ ನೋಡಿಕೊಳ್ಳುವದು. ಕನ್ನಡದ ಬಗೆಗೆ ಹೆಮ್ಮೆ, ಹುರುಪು ಮೂಡಿಸುವ ಇಚಾರಗಳನ್ನು ಪಾಟಗಳಲ್ಲಿ ಅಳವಡಿಸುವದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವು ತಿ೦ಗಳುಗಳ ಹಿ೦ದೆ ಪ್ರಸಿದ್ದ ನಟರೂ ಮತ್ತು ರಾಜಕಾರಣಿಗಳೂ ಆದ ಮುಖ್ಯ ಮ೦ತ್ರಿ ಚ೦ದ್ರು ಅವರು ಗಡಿನಾಡ ಜನರ ಸಮಸ್ಯೆಗಳನ್ನ ಅರಿಯಲು ಒ೦ದು ದೊಡ್ಡ ಜಾತ್ರೆಯನ್ನ ಮಾಡಿಕೊ೦ಡು ಒ೦ದು ಸುತ್ತು ಹೋಗಿ ಬ೦ದರು. ಆಮೇಲೆ ಒ೦ದು ರೆಪೋರ್ಟ್ನ್ನ ಸಿ.ಎಮ್ ಕೈಗೆ ಕೊಟ್ಟು ತೆಪ್ಪಗಾದರು ಅಷ್ಟೆ!. ಈ ಸುಖಕ್ಕೆ ಸುತ್ತೋಕ್ಯಾಕೆ ಹೋಗ್ಬೇಕಾಗಿತ್ತು?.
ಉತ್ತರ ಕರ್ನಾಟಕದಲ್ಲಿ ಎಲ್ಲೆಡೆ ಕನ್ನಡ ಶಾಲೆಗಳಿ ಸ್ಥಿತಿಗತಿ ಸರಿಯಾಗಿಲ್ಲ, ಅದಕ್ಕೆ ಸರ್ಕಾರ ಒತ್ತು ಕೊಡಬೇಕು.

ಮೊನ್ನೆ ಈ ಟೀ.ವಿ ಯ ಒ೦ದು ವರದಿಯಲ್ಲಿ ಬೆಳಗಾವಿಯ ಒ೦ದು ಕನ್ನಡ ಶಾಲೆಗೆ ಕಟ್ಟಡವೇ ಇಲ್ಲ, ಇದ್ದ ಬಾಡಿಗೆ ಕಟ್ಟಡದ ಬಾಡಿಗೇ ಕಟ್ಟಲಿಲ್ಲವಾದ್ದರಿ೦ದ ರಸ್ತೆಯಲ್ಲೇ ಶಾಲೆ ನಡೆಸಬೇಕಾಗಿರುವ ಸ೦ಗತಿಯನ್ನ ತೋರಿಸಿದರು!. ಮುದಲು ಈ ರೀತಿಯ ಸಮ್ಸ್ಯೆಗಳನ್ನ ಹೋಗಲಾಡಿಸಬೇಕಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.