ಕನ್ನಡವೇ ಜಾತಿ-ಧರ್ಮ-ದೇವರು ?

1

ಅನೇಕ ಕನ್ನಡಿಗರಿಗೆ ಕನ್ನಡವು ಕೇವಲ ಮನೆಯ ಭಾಷೆ, ಇದಕ್ಕಿಂತ ದೊಡ್ಡ ಭಾಷೆಗಳು ಇವೆ. ಅವು ಬಂದಾಗ ಕನ್ನಡಕ್ಕೆ ಮನ್ನಣೆ ಕೊಡಬಾರದು ಅಂತ ಭಾವನೆ. ಕನ್ನಡ ಒಂದು ರಾಷ್ಟ್ರಭಾಷೆ ಅಂತ ಅನೇಕ ಕನ್ನಡಿಗರಿಗೆ ತಿಳಿದಿಲ್ಲ.
ನಮಗೆ ಪರ ಊರಿನಿಂದ ಬಂದರೆ ಹೆಚ್ಚು,ಅದೇ ನಮ್ಮ ರಾಜ್ಯದಲ್ಲಿ ಅದು ಇದ್ದರು ನಾವು ಅದಕ್ಕೆ ಮರ್ಯಾದೆ ಕೊಡುವದಿಲ್ಲ, ಅದು ಸಿನೆಮಾ ಅಗಿರಬಹುದು,ನಟ-ನಟಿ, ಪುಸ್ತಕ,ಸಾಹಿತ್ಯ ಅಥಾವ ದೇವರುಗಳು. ನಮಗೆ ಎಲ್ಲಾ ಬೇರೆ ಕಡೆಯಿಂದ ಆಮದು ಆಗಬೇಕು. ಇದರಿಂದ ನಮ್ಮ ಸಂಸ್ಕ್ರುತಿ ಯಾವ ತರಹ ಮೇಲೆ ಧಾಳಿ ಆಗುತ್ತಿವೆ ಅಂತ ನಮಗೆ ಅರಿವಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.

ಇವುಗಳಲ್ಲಿ ನಮಗೆ ಕಂಡು ಬರುವುದು ಧಾರ್ಮಿಕ ಧಾಳಿ, ಬೇರೆ ರಾಜ್ಯಗಳಿಂದ ಜನ ವಲಸೆ ಬರುವದರ ಜೊತೆಗೆ ಅಲ್ಲಿಯ ದೇವರುಗಳನ್ನು ತಂದರು. ಕಾಲಕ್ರಮೇಣ ನಮ್ಮ ಜನರು ಆ ದೇವರುಗಳನ್ನು ಅಪ್ಪಿಕೊಂಡರು. ಗಲ್ಲಿ-ಗಲ್ಲಿಗಳಲ್ಲಿ ಆ ದೇವರಿಗೆ ಗುಡಿ-ಗೋಪುರುಗಳು, ನಮ್ಮ ಊರಿನ ದೇವರುಗಳಿಗೆ ಒಂದು ೨x3 ಜಾಗವಿಲ್ಲ. ಆ ದೇವಸ್ಥಾನಗಳಿಗೆ ಹೋದರೆ, ಎಲ್ಲಾ ಪರಭಾಷೆಯು ಎದ್ದು ಕಾಣುತ್ತದೆ, ಕೇಳಿದರೆ ಆ ದೇವರಿಗೆ ಆರ್ಥ ಆಗುವುದು ಆ ಭಾಷೆ ಮಾತ್ರ ಅಂತ ಹೇಳುತ್ತಾರೆ. ನಮ್ಮ ಮೂರ್ಖ ಜನ ಅದನ್ನು ನಂಬುತ್ತಾರೆ.

ಕನ್ನಡ ಬರದ ದೇವರುಗಳು ನಮಗೆ ಬೇಕೆ ??

ಕನ್ನಡ ಅನೇಕ ಚಳುವಳಿಗಳು ಮತ್ತು ಹೋರಾಟಗಳು ಜಾತಿ-ಧರ್ಮದಿಂದ ಸತ್ತಿವೆ ಅಂದರೆ ತಪ್ಪಾಗಲಾರದು. ಯಾಕೆ ನಾವು ನಮ್ಮ ಕನ್ನಡವನ್ನು ಧರ್ಮವನ್ನಾಗಿ ಸ್ವೀಕರಿಸಿಲ್ಲ ??

ಹಿಂದೆ "ಕನ್ನಡ ಯುವಜನ" ಸಂಪಾದಕರು ಆಗಿದ್ದ ಮಾ.ರಾಮಮುರ್ತಿಯವರು " ಕನ್ನಡಿಗರಿಗೆ ಕನ್ನಡವೇ ದೇವರು, ಬೇರೆ ದೇವರಿಗೆ ಶರಣಾಗಲು ಬೇರೆ ದೇವರು ಬೇಕಾಗಿಲ್ಲ" ಅಂತ ಹೇಳಿದ್ದು ಮತ್ತು ಅದನ್ನು ತಮ್ಮ ಪತ್ರಿಕೆಯಲ್ಲಿ ಮುದ್ರಿಸುತ್ತಿದ್ದರು.

ಕನ್ನಡ ಜನರು ಒಂದೇ ಎಂಬ ಭಾವನೆ ಬರಲು ನಾವು ಒಂದು ಜನಾಂಗಕ್ಕೆ ಸೇರಬೇಕು ಮತ್ತು ಕನ್ನಡ ನಮ್ಮ ಜಾತಿ ಅಂತ ಭಾವನೆ ಬೆಳಸಿಕೊಂಡರೆ ಮಾತ್ರ ನಾವು ಒಗ್ಗಾಟ್ಟಾಗಿ ಕೆಲ್ಸ ಮಾಡಲು ಸಾಧ್ಯ.

ನೀವು ಏನು ಹೇಳುತ್ತಿರಿ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

> ಕನ್ನಡ ಬರದ ದೇವರುಗಳು ನಮಗೆ ಬೇಕೆ ??

ದೇವರು ಸರ್ವಶಕ್ತ ಎನ್ನುವುದನ್ನು ನಂಬುವವರಾದರೆ "ಕನ್ನಡ ಬರದ ದೇವರು" ಎನ್ನುವುದರಲ್ಲಿ ಅರ್ಥವಿಲ್ಲ.

ದೇವರು ಸರ್ವಶಕ್ತನಲ್ಲ ಎಂದಾದರೆ ಆ ದೇವರು ನಮಗೆ ಇದ್ದೂ ಪ್ರಯೋಜನವಿಲ್ಲ.

ದೇವರ ಬಗೆಗಿನ ನಮ್ಮ ನಮ್ಮ ತಪ್ಪು ತಿಳಿವಳಿಕೆಯನ್ನು ದೇವರಿಗೆ ಆರೋಪಿಸಿವುದು ಸಾಮಾನ್ಯ; ಅರ್ಥಹೀನ, ಆದರೆ ಸಾಮಾನ್ಯ.

> ನಮ್ಮ ಮೂರ್ಖ ಜನ ಅದನ್ನು ನಂಬುತ್ತಾರೆ.

ಸಹಜ ತಾನೆ? "ನಮ್ಮ ದೇವರಿಗೆ ಇದೊಂದು ಭಾಷೆ ಮಾತ್ರ ತಿಳಿಯುವುದು" ಎನ್ನುವವರು ಬೇರೊಂದು ದೇವರಿಗೆ ಅವರ ಭಾಷೆ ತಿಳಿಯದು ಎಂದರೆ ನಂಬಲಾರರೆ? ಎಲ್ಲ ಜನರೂ ಮೂರ್ಖರೆ.

> ಕನ್ನಡ ಅನೇಕ ಚಳುವಳಿಗಳು ಮತ್ತು ಹೋರಾಟಗಳು ಜಾತಿ-ಧರ್ಮದಿಂದ ಸತ್ತಿವೆ ಅಂದರೆ ತಪ್ಪಾಗಲಾರದು.

ಯಾಕಾಗಲಾರದು? ಕನ್ನಡ ಸತ್ತಿದೆಯೆ? ಸತ್ತಿದ್ದರೆ ಸಾವಿಗೆ ಚಳಿವಳಿ, ಜಾತಿ ಧರ್ಮಗಳೇ ಕಾರಣವೆ? ಹೇಗೆ?

ಎಲ್ಲರೂ ಸಾಮಾನ್ಯವಾಗಿ ಮಾಡುವ ತಪ್ಪನ್ನು ನೀವೂ ಮಾಡುತ್ತಿದ್ದೀರಿ ಎಂದೆನಿಸುತ್ತೆ - ಭಾಷೆ, ಸಂಸ್ಕೃತಿಗಳಿಗೂ ಮತಕ್ಕೂ ಸಂಬಂಧವಿಲ್ಲ; ಮತಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಇವನ್ನು ಒಟ್ಟಾಗಿಯೋ ಬೇರೆಬೇರೆಯಾಗಿಯೋ ಗಂಟುಹಾಕುವುದು ಸರಿಯಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗಿ ಹೇಳಿದ್ರಿ... ಪರ ರಾಜ್ಯದವರು ತಮ್ಮ ತಮ್ಮ ಸಂಸ್ಕ್ರುತಿಯನ್ನ ಹಬ್ಬ್ಸಕ್ಕೊಸ್ಕಾರ "ಸಾಯಿಬಾಬ.. ಅಯ್ಯಪ್ಪ" ಈ ತರ ದೇವಸ್ತಾನ ತೆಗೆದು ತಮ್ಮ ತಮ್ಮ ಭಾಷೆ , ಸಂಸ್ಕ್ರುತಿ ಎಲ್ಲಾ ಹಬ್ಬಿಸ್ತ್ತಿದ್ದಾರೆ.. ಏಷ್ಟೊಂದು ಕ್ರೈಸ್ತ ದೇವಾಲಯದಲ್ಲೂ ಬರೀ ತಮಿಳನ್ನೆ ಶುರು ಹಚ್ಕೊಂಡಿದ್ದರೆ.. ಕನ್ನಡದೋರು ತಿರುಪತಿ ಗೆ, ಪುತ್ತಪರ್ತಿಗೆ ಹೊಗಿದ್ದೂ ಹೊಗಿದ್ದೆ, ಅಯ್ಯಪ್ಪನ ಮಾಲೆ ಹಾಕ್ಕೊಂಡಿದ್ದೂ ಹಾಕ್ಕೊಂಡಿದ್ದೆ... ನಮ್ಮ ಧರ್ಮಸ್ಠಳ ಮಂಜುನಾಥ, ಮಲೆ ಮಾದೇಶ್ವರ, ನಂಜುಂಡೇಶ್ವರ ಇವ್ರುನ್ನೆಲ್ಲಾ ಕೇಳೊವ್ರೇ ಇಲ್ಲ..

ದಡ್ದ ಬಡ್ಡೀಮಕ್ಳು ಕನ್ನಡಿಗ್ರು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.