’ಮೋಹನ ಮೃಷ್ಟಾನ್ನ’ !

5

'ಶ್ರೀವತ್ಸ ಜೋಶಿಯವರ ಇತ್ತೀಚಿನ ಲೇಖನ' ಕ್ಕೆ ನನ್ನ ಪ್ರತಿಕ್ರಿಯೆ :
 

http://sjoshi.podbean.com/2012/08/15/mohana-mrushtaanna/#comments

-ಚಿತ್ರ : (ಶ್ರೀವತ್ಸ ಜೋಶಿಯವರ ಕ್ಷಮೆ ಕೋರಿ)

ಗೆಳೆಯ ಜೋಶಿಯವರಿಗೆ,

(೨೦೧೨ ರ, ಆಗಸ್ಟ್ ೧೭ ರ,) ಕುರಿತ ನನ್ನಂತಹ ಅಲ್ಪಜ್ಞ ನೊಬ್ಬನ, ಕೆಲವು ಅನಿಸಿಕೆಗಳು :
 
-ಹೊರಂಲವೆಂ, ಕ್ಯಾಂಪ್ : ಟೊರಾಂಟೋ, ಕೆನಡಾ,
 
'ಭೂಪೆನ್ ಹಾಝಾರಿಕಾ,' ಹಾಡಿದ, 'ಓ ಗಂಗಾ ಬೆಹತಿ ಹೈ ಕ್ಯೊಂ ' ಗೀತೆ ಅತ್ಯಂತ ಪ್ರಿಯ ! ಹಾಗೆಯೇ 'ರುಡಾಲಿ ಚಿತ್ರ' ದ, ' ’ದಿಲ್ ಹೂಂ ಹೂಂ ಕರೆ’ ಗೀತೆ ಇವತ್ತಿಗೂ ನನಗೆ ಅತಿಪ್ರಿಯವಾದ ಗೀತೆಗಳಲ್ಲೊಂದು !
 
'ಭೂಪಾಲಿ' ಹಾಗೂ 'ಮೋಹನರಾಗ' ಗಳ ಜೊತೆಜೊತೆಯ ಮೃಷ್ಟಾನ್ನ ಸವಿದಮೇಲೆ, ನಿಮ್ಮ 'ವಿಚಿತ್ರಾನ್ನದ ಕೆಲವು ತುಣುಕು' ಗಳನ್ನೂ ಹೀಗೆಯೇ ರಾಗಮಯ-ಅನುರಾಗಮಯವಾಗಿ ಉಣ್ಣೀಸಿ ಮಾರಾಯ್ರೆ !
 
ಈಗ ನಿಮ್ಮ ಒಲವು ಸಂಗೀತದ ಕಡೆಗೆ ವಾಲಿದೆ. ಯಾವ ವಿಷಯವೂ ನಳನಕೈಗೆ ಸಿಕ್ಕರೆ, ಅದು 'ಜೋಶಿ-ನಳಪಾಕ'ವಾಗದೆ ಇರಲು ಸಾಧ್ಯವೇ ?!
 
ಅದೆಷ್ಟು ಉತ್ತಮವಾದ ರಚನೆಗಳನ್ನು ಹೆಕ್ಕಿ-ಹೆಕ್ಕಿ ಆರಿಸಿಕೊಂಡಿದ್ದೀರಿ-ಸಿನಿಮಾವಲಯ, ಕನ್ನಡ, ತೆಲುಗು, ಮರಾಠಿ, ಹಿಂದಿ, ಚಿತ್ರಗಳು. ಮಹಾನ್ ವಿದುಷಿ,  ಗಾನ ಕೋಕಿಲಾ, ಡಾ.ಎಮ್.ಎಸ್.ಎಸ್ ರಂತಹ ಮಹಾನ್ ಸಂಗೀತಗಾರರು,  ಮತ್ತೋರ್ವ ವಿದುಷಿ,  ಗಾನಕೋಗಿಲೆ, ಲತಾದೀದಿ, ಪಿ.ಬಿ, ಬಿಪೆನ್ ಹಝಾರಿಕಾ, ನಿಜಕ್ಕೂ ಕಿವಿಯಿದ್ದವರಿಗೆ ಇದು ಅಮೃತಪಾನ, ಸಂಗೀತ ರಸಿಕರಿಗೆ ಮಧುಪಾನ !
 
(ನಾನೂ ಸಂಗೀತ ರಸಿಕನೇ; ನನ್ನ ಕಾಲೇಜ್ ದಿನಗಳಲ್ಲಿ , 'ಬಡಗನಾಡು ಸಂಘ ಹಾಸ್ಟೆಲ್'  ನಲ್ಲಿದ್ದಾಗ, 'ರಾಮನವಮಿ ಸಂಗೀತೋತ್ಸವ' ದ ವೇಳೆ, ಅದೆಷ್ಟು ಬಾರಿ, ಸಮೀಪದ 'ಬೆಂಗಳೂರಿನ ಶೇಶಾದ್ರಿಪುರಂ ಹೈಸ್ಕೂಲಿನ ಹೊರಗಿನ ಹುಲ್ಲಿನಮೇಲೆ' ಕುಳಿತು/ಮಲಗಿ ! ಸಂಗೀತದ ಅಮೃತಪಾನಮಾಡಿದ್ದೇನೋ, ನೆನಪಿಲ್ಲ !
ಜಿ.ಎನ್.ಬಿ, ಆರ್.ಕೆ.ಶ್ರೀಕಂಠನ್,  ಬಾಲಮುರುಳಿಕೃಷ್ಣ, ಶೂಲಮಂಗಳಮ್ ಸೋದರಿಯರು, ರಾಧಾ ಜಯಲಕ್ಷ್ಮಿ, ಬಾಂಬೆ ಸೋದರಿಯರು, ಅನೇಕರು, ಭೀಮ್ ಸೇನ್ ಜೋಷಿ, ಮಹಾಲಿಂಗಮ್ ಮಾಸ್ಟರ್ ಸುರೇಶ್, ಕೊಳಲು, ಚೌಡಯ್ಯನವರ ಪಿಟೀಲ್ ವಾದನ, ವಿಚಿತ್ರವೀಣೆ, ದೊರೈಸ್ವಾಮಿಯವರ ವೀಣಾ ವಾದನ, ಇತ್ಯಾದಿ) 'ಸಿಟಿ ಇನ್ಸ್ಟಿಟ್ಯೂಟ್,'  'ಆರ್. ಏನ್.ಕಾಲೋನಿ', ಮೊದಲಾದಕಡೆ....
 
* ರಾಧಾ ಮಾಧವ ವಿನೋದ ಹಾಸ,
* ಜೇನಿನ ಹೊಳೆಯೋ,
* ಜ್ಯೋತಿ ಕಲಶ ಝಲಕೆ,
* ಕಾಂಚೀರೆ ಕಾಂಚೀರೆ,
* ಇಂನ್ ಆಂಖ್ ಕೆ ಮಸ್ತೀ ಮೆ,
* ಗಿರಿಧರ ಗೋಪಾಲ,
* ಘನ ಶ್ಯಾಮ ಸುಂದರಾ ಶ್ರೀಧರ,
* ಸ್ವಾಗತಂ ಕೃಷ್ಣ,
* ಜಯತು ಜಯ ವಿಠಲ, ಒಂದೇ ಎರಡೇ 
 
ಎಲ್ಲಕ್ಕಿಂತಾ ಮಿಗಿಲಾಗಿ, ಅತ್ಯಂತ ಉತ್ತಮವಾದ ಸ್ಪಷ್ಟ, ಹಾಗೂ 'ಕರ್ಣಮಧುರವಾದ ಆಡಿಯೋ', 'ಯು-ಟ್ಯೂಬ್' ಗಳ ಬಳಕೆಯಿಂದ ನಿಮ್ಮ 'ಪ್ರೆಸೆಂಟೇಶನ್ 'ತುಂಬಾ ’ಸಕತ್ತಾಗಿ’-ಬೊಂಬಾಟಾಗಿ ಬಂದಿದೆ (ಇದೇ ಸರಿಯಾದ ಪದ)
 
-'ಅತಿ ಉತ್ತಮ್, ಅತಿ ಉತ್ತಮ್' !!
 
ಬಹುಶಃ ಸಂಗೀತದಲ್ಲಿ ಒಳ್ಳೆಯ ಪ್ರಾವೀಣ್ಯತೆಯಿರುವ 'ಹಂಸನಂದಿ' ಅವರು ನಿಮ್ಮ ಈ ಲೇಖನ  ಬಹಳವಾಗಿ ಮೆಚ್ಚುತ್ತಾರೆ. 
 
ಅದೇಕೆ, 'ಸಂಗೀತ ಕಲಿಯುವ ಮಕ್ಕಳಿಗೆ ವರ್ಕ್ ಶಾಪ್,'  ನಡೆಸಿದಾಗ ಖಂಡಿತ ಈ ನಿಮ್ಮ ರಸಕಾವ್ಯ-ಸಂಗೀತದ ತುಣುಕುಗಳು , 'ಅತಿಸಹಾಯಕವಾದ ಕಲಿಕಾಸಾಮಗ್ರಿಗಳಾಗುವುವು' ಯೆನ್ನುವುದರಲ್ಲಿ ಸಂದೇಹವಿಲ್ಲ !
 
** ಸಾಮಾನ್ಯವಾಗಿ 'ಯೂ ಟ್ಯೂಬ್,' ಬಹಳ ತೊಡಕಿನದು. ಮಧ್ಯೆ 'ಕಟ್' ಆಗುತ್ತೆ.  ನಿಮ್ಮ ಕೈಗೆ ಅವು ಸಿಕ್ಕಮೇಲೇ ಮೈಕೊಡವಿಕೊಂಡು ಓಡಿರಬಹುದೇ ??!
 
* http://youtu.be/XjlTBTOJBPo,  'ಸೌಮ್ಯರವರ',  'ಸ್ವಾಗತಂ ಕೃಷ್ಣ'
 
 
 
 
 
 
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಲಕ್ಷ್ಮಿವೆಂಕಟೇಶ ಅವರಿಗೆ ನಮಸ್ಕಾರಗಳು. ’ಮೋಹನ ಮೃಷ್ಟಾನ್ನ’ (http://sjoshi.podbea... ) ನಿಮಗೆ ಇಷ್ಟವಾಯ್ತೆಂದು ತಿಳಿಸಿದ್ದಕ್ಕೆ ಧನ್ಯವಾದಗಳು. ಹೌದು, ಇದನ್ನು "ಸಂಗೀತದಲ್ಲಿ ಆಸಕ್ತಿ ಅರಳಿಸುವ, ಕುತೂಹಲ ಕೆರಳಿಸುವ" ಸಾಧನವಾಗಿ ಪ್ರಸ್ತುತಪಡಿಸುತ್ತಿದ್ದೆನೆಯೇ ಹೊರತು, ನನಗೆ ಸಂಗೀತದ ಜ್ಞಾನವಿಲ್ಲ. ಆದ್ದರಿಂದ ಇದು "ಸಹಕಲಿಕೆ"- ಬನ್ನಿ ಒಟ್ಟಾಗಿ ಕಲಿಯೋಣ ಎಂಬ ಧಾಟಿಯದು. ರಾಗ ಆಧಾರಿತ ಚಿತ್ರಗೀತೆಗಳನ್ನು ಉಲ್ಲೇಖಿಸಿದಾಗೆಲ್ಲ ’ಶುದ್ಧಸಂಗೀತ’ಪ್ರಿಯರಿಗೆ ಇರುಸುಮುರುಸಾಗುವುದೂ ಇದೆ, ಏಕೆಂದರೆ ಚಿತ್ರಗೀತೆಗಳು ಮತ್ತು ಜನಪ್ರಿಯ ಸಂಗೀತವು ಬಹುತೇಕವಾಗಿ ರಾಗ ‘ಆಧಾರಿತ’ವಾಗಿಯಷ್ಟೇ ಇರುತ್ತದೆ, ಸಂಪೂರ್ಣವಾಗಿ ಒಂದೇ ರಾಗದಲ್ಲಿ ಇರುವುದಿಲ್ಲ. ಇರುತ್ತದೆಂದು ಅಪೇಕ್ಷಿಸುವುದೂ ಸರಿಯಲ್ಲ. ಅದನ್ನು ‘ಕಲಬೆರಕೆ’ ಅಂತ ತುಚ್ಛೀಕರಿಸಬೇಕಂತಲೂ ಇಲ್ಲ. ಅರಿವು ಇದ್ದರೆ ಆಯ್ತು ಅಷ್ಟೇ. ಮತ್ತೊಮ್ಮೆ, ನಿಮ್ಮ ವಿಸ್ತೃತ ಪ್ರತಿಕ್ರಿಯೆಗಾಗಿ ಧನ್ಯವಾದಗಳೊಂದಿಗೆ, ಶ್ರೀವತ್ಸ ಜೋಶಿ, ವಾಷಿಂಗ್ಟನ್ ಡಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.