ಹೊಸ ನಗೆಹನಿ- ೫೧ ನೇ ಕಂತು

3.75

- ಅವಳ ಜತೆ ಮಾತಾಡ್ತಿರೋನು ಸ್ವತಂತ್ರ ವಿಚಾರಧಾರೆಯ ಯುವಕ
- ಅವನು ಅವಿವಾಹಿತನೋ , ವಿಧುರನೋ ?

******

( ತಾಯಿ ತನ್ನ ಐದು ವರುಷದ ಮಗನಿಗೆ) - ಹಾಗೆಲ್ಲ ಗುಸು ಗುಸು ಮಾತಾಡುವುದು ಕೆಟ್ಟದ್ದು. ನೀನು ಏನು ಹೇಳಬೇಕಂತೀಯೋ ಅದನ್ನು ಬಾಯಿ ಬಿಟ್ಟು ಜೋರಾಗಿ ಹೇಳು
ಮಗ - ಆದರೆ ಅದು ಇನ್ನೂ ಕೆಟ್ಟದ್ದಾಗಿರುತ್ತದೆ ಅಮ್ಮ !

******

ಅವಳು ಮನೆಗೆ ಬಂದ ಸೇಲ್ಸ್‌ಮನ್‌ಗೆ ಹೇಳಿದಳು - ಹಾಗೆಲ್ಲ ನಾವು ಮನೆಗೆ ಬರುವ ಮಾರಾಟಗಾರರಿಂದ ಏನೂ ಕೊಳ್ಳುವದಿಲ್ಲ

ಸೇಲ್ಸ್‌ಮನ್‌ - ಹಾಗಾದರೆ ನೀವು ನನ್ನಿಂದ "ಮಾರಾಟಗಾರರಿಗೆ ನಿಷೇಧ" ಬೋರ್ಡ್ ಕೊಳ್ಳಬಹುದು

******

ಅಧಿಕಾರಿ ತನ್ನ ಜೀವ ಉಳಿಸಿದ ಕೆಲಸಗಾರನಿಗೆ ಹೇಳಿದ - ನಾಳೆ ಎಲ್ಲರ ಮುಂದೆ ಈ ವಿಷಯ ಹೇಳಿ ನಿನ್ನ ಉಪಕಾರ ನೆನೆಯುವೆ

ಕೆಲಸಗಾರ ಹೇಳಿದ- ದಯವಿಟ್ಟು ಹಾಗೆ ಮಾಡಬೇಡಿ. ಅವರು ನನ್ನನ್ನು ಕೊಂದೇ ಬಿಡುತ್ತಾರೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.