ಹೇಳು ನನ್ನೊಲುಮೆಯ ಗೆಳೆಯ,

5

ಹೇಳು ನನ್ನೊಲುಮೆಯ ಗೆಳೆಯ,

ಬರುವೆಯ ಬಾಳಿನ ಹಾದಿಯಲ್ಲಿ ಕೈಹಿಡಿದು,ನಿನಗಾಗಿ ನಾ ಇರುವೆ ಕೊನೆಯ ಕ್ಷಣದವರೆಗೆ.ಒಪ್ಪಿಕೊಳ್ಳುವೆಯ ನನ್ನನು, ಅಪ್ಪಿಕೊಳ್ಳುವೆಯ ನಿನ್ನ ಎದೆಗೆ,ತನು ಮನವೆಲ್ಲ ಧಾರೆಯೆರುಯುವಾಸೆ, ನಿನಗೆ ನಾ ಚಿರಋಣಿ,  ನನ್ನೆಲ್ಲ ಕನಸುಗಳಿವೆ ಮರು ಜೀವ ಕೊಟ್ಟವನು ನೀನು.ನಿನ್ನ ಆ ಮುದ್ದಾದ ಮಗುವಿಂತ ಮಾತುಗಳು, ಮಗುವಿನಂತೆ ನೀ ಪೀಡಿಸುವ ಪರಿ ಎಲ್ಲವು ಚಂದ.... ಪ್ರೀತಿಗಾಗಿ ಹಂಬಲವಿತ್ತು ನಿನ್ನ ಕಣ್ಗಳಲ್ಲಿ...ಅದಕಾಗಿ ಕಾಯುತಿದ್ದೆ ನಿನ್ನ ಮುದ್ದಾದ ಕಣ್ಗಳ ನೋಡಲು..ನಿಜಕ್ಕು ನಿನ್ನ ಮಗುವಿನಂತೆ ಮುದ್ದಾಡುವಾಸೆ, ಹೇಳು ಹುಡುಗ ಮಗುವಾಗುವೆಯ ನನ್ನ ಮಡಿಲಲ್ಲಿ.ಪ್ರತಿ ಕ್ಷಣ ನಿನ್ನ ಪ್ರೀತಿಸುವೆ..ನೀ ನಡೆವ ಬಾಳಾ  ಹಾದಿಯಲ್ಲಿ ನಿನ್ನ ನೆರಳ ಪಕ್ಕದಲ್ಲಿ ನನ್ನ ನೆರಳಿರ ಬೇಕು..ಸಮುದ್ರದ ತಟದ ಮರಳಲ್ಲಿ ನಿನ್ನ ಹೆಜ್ಜೆಗಳ ಪಕ್ಕದಲ್ಲಿ ನನ್ನ ಹೆಜ್ಜೆಗಳ ಗುರುತಿರ ಬೇಕು..ಅಳಿಯಬಹುದೇನೊ ಆ ಹೆಜ್ಜೆಗಳು ಅಲೆಗಳಿಂದ, ಅಳಿಯದೆಂದು ನೀ ಇಟ್ಟ ಮೊದಲ ಹೆಜ್ಜೆ ನನ್ನ ಮನದಲ್ಲಿ, ಹೇಳು ಬರುವೆಯ..ಹೇಳು ಕರೆದೊಯ್ಯುವೆ ನಿನ್ನ ನಾ ಸಮುದ್ರದೊಡೆಗೆ...ಪ್ರತಿ ರಾತ್ರಿ ಇಬ್ಬರ  ಹೃದಯ ಬಡಿತ ಒಂದಾಗಬೇಕೆಂಬ ಆಸೆ...ನಿನ್ನ ಕರಗಳಲ್ಲಿ ಕರಗಬೇಕು..ನಿನ್ನಲ್ಲಿ ಒಂದಾಗಬೇಕು..ಪ್ರತಿ ರಾತ್ರಿ ಪ್ರತಿ ಬೆಳಗು ನಿನ್ನಿಂದಾಗ ಬೇಕು..ಆ ಸೂರ್ಯ ನನ್ನನ್ನು ಬಡಿದೆಬ್ಬಿಸುವ ಮುನ್ನ ನಿನ್ನ ಬಿಸಿಯುಸಿರು ನನ್ನ ಕೊರಳ ತಾಗಬೇಕು....ನಿನ್ನ ಅಧರಗಳ ಸ್ಪರ್ಷದ ಗುರುತು ನನ್ನ ಕೆನ್ನಯ ಮೇಲಿರಬೇಕು..ನಿನ್ನ ಕಣ ಕಣದಲ್ಲು ನಾ ಸೇರಬೇಕು....
ಬರುವೆಯ ಕೈ ಹಿಡಿದು ಬಾಳ ಹಾದಿಯಲ್ಲಿ....
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.