ದಿಬ್ಬಣ - ಜೀ ಕನ್ನಡದ ಧಾರಾವಾಹಿ

0

"ನಿನ್ನ ಮನೆಯಲ್ಲೇ ಹಾಸಿ ಹೊದೆಯೋ ಅಷ್ಟು ಸಮಸ್ಯೆಗಳಿವೆ. ಮಗ ಅಮೇರಿಕಾಕ್ಕೆ ಹಾರಿದ್ದಾನೆ, ಸೊಸೆ ಹೇಳಿದ ಮಾತು ಕೇಳೋಲ್ಲ, ಆದರು ಈ ಮನೆ ವಿಷಯ ರುಚಿ, ಇಷ್ಟು ವಯಸ್ಸಾದ್ರು ಚಪಲ"

ಮೊದಲ ಸಾಲು ಮುಗಿದು ಎರಡನೇ ಡೈಲಾಗಿಗೆ ಬರೋ ಅಷ್ಟ್ರಲ್ಲಿ ಖುಷಿಯಾಗಿ ಅಮ್ಮನಿಗೆ ಹೇಳಿದ್ದೆ, ’ಇದು ಸೇತುರಾಂ ಧಾರವಾಹಿನಮ್ಮ, ಮಂಥನ ಮಾಡಿದ್ರಲ್ಲ ಅವ್ರದ್ದೇ!’ ಅಂತ. ನನ್ನ ಗೆಸ್ ಸುಳ್ಳಾಗಿರಲಿಲ್ಲ, ಅದರಲ್ಲೂ ಮಂಥನದ ಪಾತ್ರಧಾರಿಗಳೇ, ಪಾತ್ರಗಳೂ ಹೆಚ್ಚು ಕಡಿಮೆ ಅವೇ, ಸಂಭಾಷಣೆಯಲ್ಲಿ ಅವರ ಎಂದಿನ ಖದರ್. ಸಣ್ಣ ಹುಡುಗನ ಪಾತ್ರದಲ್ಲೂ ತತ್ವಜ್ಞಾನ ಹೇಳಿಸುವ ಅವರ ಶೈಲಿ. ಪಾತ್ರಗಳಲ್ಲಿ ಹೊರಹೊಮ್ಮೋ ಫ್ರಸ್ಟ್ರೇಶನ್ನು, ತೀಕ್ಷ್ಣ ಮಾತುಗಳು ಎಲ್ಲವೂ ಸೂಪರ್.

ಧಾರಾವಾಹಿಗಳೆಲ್ಲ ಹನುಮಂತನ ಬಾಲದಂತೆ ನಿಲ್ಲದೇ ಬೆಳೆಯುತ್ತಲೇ ಇರುವ ಪ್ರಸ್ತುತ ಪರಿಸ್ಥಿತಿಯಲ್ಲಿ, ’ಮಂಥನ’ ದಂತಹ ಧಾರವಾಹಿಯನ್ನು ಎರಡೇ ವರ್ಷಕ್ಕೆ ಅದರ ಟಿ.ಆರ್.ಪಿ. ರೇಟಿಂಗ್ ಉತ್ತುಂಗದಲ್ಲಿದಾಗಲೇ, ಯಶಸ್ವಿಯಾಗಿ ಮುಗಿಸಿ ಕೊಟ್ಟಿದ್ದು ಸೇತುರಾಂ ರವರ ಅಚ್ಚುಕಟ್ಟುತನಕ್ಕೆ ಸಾಕ್ಷಿ.

’ದಿಬ್ಬಣ’ ಅವರ ಹೊಸ ಧಾರವಾಹಿ, ಇತ್ತೀಚೆಗಷ್ಟೇ ಶುರುವಾಗಿದೆ ಸುಮಾರು ನಲವತ್ತು ಎಪಿಸೋಡುಗಳು ಮುಗಿದಿದಾವಷ್ಟೇ. ಜೀ ಕನ್ನಡದಲ್ಲಿ ರಾತ್ರಿ ಒಂಭತ್ತು ಗಂಟೆಗೆ ಪ್ರಸಾರವಾಗುತ್ತದೆ. ನೀವು ಇದಕ್ಕೂ ಮುಂಚೆ ಈಟೀವಿಯ ಮಂಥನ ನೋಡಿದ್ದೀರಿ ಎಂದಾದರೆ, ಖಂಡಿತ ದಿಬ್ಬಣವನ್ನು ಮಿಸ್ ಮಾಡುವುದಿಲ್ಲ! ನೋಡಿಲ್ಲವಾದರೆ ಈ ಧಾರಾವಾಹಿಯನ್ನು ಒಮ್ಮೆ ನೋಡಿ, ಇದು ಹತ್ತರಲ್ಲಿ ಹನ್ನೊಂದನೆಯದಲ್ಲ. ನಿಜಕ್ಕೂ ವಿಶಿಷ್ಟವಾಗಿದೆ!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೇಮಾರವರೆ ,

ಏನ್ ಧಾರವಾಹಿ ನೋಡ್ತಿರಿ , ಕಥೆನಾ ದಾರ ಎಳೆದಾಗೆ ಎಳೆಯುತ್ತಾ ಹೊಗ್ತಾರೆ ಸುಮ್ಮನೆ ,ಇದರಿಂದ ನಮ್ಗೆ ಮನೆಲಿ ಟಿವಿ ನೊಡೊಕೆ ಆಗೊಲ್ಲ ಯಾವುದಾದರೂ ಕಾರ್ಯಕ್ರಮ ನೋಡೊಣ ಅಂದ್ರೆ ಮನೆಯಲ್ಲಿ ಇರೊರೆಲ್ಲ ಬಿಡೊಲ್ಲ ...

>>ಇದು ಹತ್ತರಲ್ಲಿ ಹನ್ನೊಂದನೆಯದಲ್ಲ. ನಿಜಕ್ಕೂ ವಿಶಿಷ್ಟವಾಗಿದೆ!!

ಸರಿಹೊಯ್ತು ...

--ಗೌಡ್ರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಿಸೆಷನ್ ಇರೋವಾಗ ಯಾವ್ ಕೆಲ್ಸ ಸಿಗದೇ ಇದ್ರೂ ಈ ಸೀರಿಯಲ್ಸ್ ನಲ್ಲಿ ಕೆಲ್ಸ ಮಾಡಿದ್ರೆ ಬಚಾವಾಗ್ಬಹುದು ಅಂತ ಈ ಲೇಖನ ಓದಿದ್ ಮೇಲೆ ನಂಬಿಕೆ ಹುಟ್ಟಿತು.

" ದಿಬ್ಬಣ" "ಒಡವೆ" "ರೇಷ್ಮೆ ಸೀರೆ" "ವಾಲಗ" "ಬೀಗರ ಔತಣ" ಅಂತೆಲ್ಲಾ ಹೆಸರಿಟ್ಟು ಬರೆಯಲು ಶುರು ಮಾಡಿದ್ರೆ ಕೊನೆ ಪಕ್ಷ ಐದಾರು ವರ್ಷ ಕೆಲಸದ ಕೊರತೆ ಇರೋಲ್ಲ..:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>" ದಿಬ್ಬಣ" "ಒಡವೆ" "ರೇಷ್ಮೆ ಸೀರೆ" "ವಾಲಗ" "ಬೀಗರ ಔತಣ"
ಹೀ ಹೀ ಹಾ ಹಾ !!!
:D
:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ನಾನು ದಿಬ್ಬಣದ ಬಗ್ಗೆ ಮಾತ್ರ ಬರ್ದಿರೋದು. ನೀವು ಮದ್ವೆ ಮುಗಿಸಿ, ಬೀಗರ ಔತಣದವರೆಗೂ ಧಾರಾವಾಹಿ ಮಾಡಿದ್ರೆ, ನೀವೊಬ್ರೆ ಕೂತ್ಕೊಂಡು ನೋಡ್ಬೇಕಷ್ಟೇ, ಹೇಗಿದ್ರು ರಿಸೆಶನ್ನು ಆಫೀಸ್ನಲ್ಲಿ ಕೆಲ್ಸ ಮಾಡೋದು ಅಷ್ಟ್ರಲ್ಲೇ ಇದೆ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಹೇಮಾರವರೇ...

ನಿಮ್ ಮಾತನ ಕೇಳಿ ಈ ಧಾರಾ(Thread)ವಾಹಿಗಳನ್ನೆನ್ನಾದರು ನೋಡ್ಕೊಂಡು ಕುತ್ಕೋಂಡ್ ಬಿಟ್ರೆ
ಮೈಯೆಲ್ಲ ಪರ್ಚ್ಕೋಂಡ್ ಬಿಡ್ಬೆಕಷ್ಟೆ...... ಅದೆನ್ ಧಾರಾವಾಹಿನೋ.... ಅದೆನ್ ಕಥೆನೋ.....ಅದನ್ನ ನೋಡೊ ನಿಮ್ಗೆ ಗೊತ್ತು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೇದು ಎಲ್ಲಿದ್ರೂ ಮೆಚ್ಬೇಕ್ರಿ. ಆ ಧಾರಾವಾಹಿಯ ಪಾತ್ರಗಳಲ್ಲಿ, ಕತೆಯಲ್ಲಿ ಅದನ್ನು ಪ್ರಸ್ತುತ ಪಡಿಸೋ ರೀತೀಲಿ, ಜೀವಂತಿಕೆ ಇದೆ, ವೈಶಿಷ್ಟ್ಯತೆ ಇದೆ ಅನ್ನಿಸ್ತು ಅದಕ್ಕೆ ಹೇಳಿದೆ. ಧಾರಾವಾಹಿಗಳಿರಲಿ ಮೇಲ್ಗಳನ್ನು ರೆಗ್ಯುಲರ್ ಆಗಿ ಚೆಕ್ ಮಾಡೋಕೆ ಟೈಮಿಲ್ಲ ನನಗೆ! ಇದೊಂದೇ ನೋಡಿದ್ದು, ಇಷ್ಟವಾಯ್ತು, ಅದಕ್ಕೆ ನಿಮಗೆಲ್ಲ ಹೇಳಿದ್ದು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://dibbana.blogspot.com/ ಕೆಲವೊಂದು ಎಪಿಸೋಡ್ ಆನ್ ಲೈನ್ ನೋಡಿದ್ದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.