ಹೇಮ ಪವಾರ್ ರವರ ಬ್ಲಾಗ್

ಹುಡುಗ, ಹುಡುಗಿ - ನಿರೂಪಕ

ಹುಡುಗಿ:
ಎಲ್ಲವೂ ನಾಟಕ! ನನಗೆ ನಿಜವಾಗಿ ನಿನ್ನ ಹತ್ತಿರ ತೋಡಿಕೊಳ್ಳುತ್ತಿದ್ದಷ್ಟು ತೀವ್ರವಾಗಿ ನೋವಾಗುತ್ತಿರಲಿಲ್ಲ, ನಿನ್ನ ಕನಿಕರ, ಕರುಣೆಯಿಂದ ತುಂಬಿದ ಪ್ರೀತಿಯಲ್ಲಿ ನನ್ನನ್ನು ನೀನು ಸಮಾಧಾನಿಸುತ್ತಿದ್ದ ರೀತಿ ನನಗೆ ಇನ್ನಷ್ಟು ಮತ್ತಷ್ಟು ಬೇಕೆನಿಸುತ್ತಿತ್ತು. ಅದಕ್ಕೆ ನನ್ನೆಲ್ಲಾ ಕಷ್ಟಗಳನ್ನು ನಿನ್ನ ಕಣ್ಣು ತುಂಬಿ ಬರುವಂತೆ ವರ್ಣಿಸುತ್ತಿದ್ದೆ. ಮತ್ತೆ ಮತ್ತೆ ನಿನ್ನ ಕನಿಕರದ ಎಂಜಲಿಗೆ ಆಸೆ ಪಡುತ್ತಿದ್ದೆ. ಇಷ್ಟು ಅಂದು ಸುಮ್ಮನಾದವಳು ಆಚೀಚೆ ಒಮ್ಮೆ ಕಣ್ಣಾಡಿಸಿ ಪರ್ಸಿನಿಂದ ಸಿಗರೇಟೊಂದನ್ನು ತೆಗೆದು ಹೊತ್ತಿಸಿ, ಬೆನ್ನನ್ನು ಕುರ್ಚಿಗಾನಿಸಿ ಮೈ ಸಡಿಲಿಸಿ ಆರಾಮಾಗಿ ಎಂಬಂತೆ ಕೂತಳು.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಮತ್ತೆ ಬೋಂಡಾ ಜಾಮೂನು...

"ನೀನು ಮದ್ವೆ ಮಾಡ್ಕೊಳಲ್ವೇನೆ!?" ತಮ್ಮೆಲ್ಲ ಪ್ರಯತ್ನ ವಿಫಲವಾಗುತ್ತಿರುವ ವ್ಯಥೆಯಲ್ಲಿ ಅಮ್ಮ ಕೇಳುತ್ತಿದ್ದರು. ಮದುವೆಯಷ್ಟು mysterious ಸಂಗತಿ ಮತ್ತೊಂದಿದೆ ಅನ್ನಿಸೋಲ್ಲ ರೀ, ಹೀಗಾಗಿ ನನ್ನ ಬರವಣಿಗೆ ಎಲ್ಲ ಮದುವೆಯ ಸುತ್ತಲೇ ಯಾಕೆ ಸುತ್ತುತ್ತದೆ ಎಂಬ ಜನರ ಕಂಪ್ಲೇಂಟನ್ನು ಕಾಂಪ್ಲಿಮೆಂಟೆಂದುಕೊಂಡು ಮತ್ತೆ ಅದರ ಬಗ್ಗೆಯೇ ಬರೆಯಬೇಕೆನ್ನಿಸಿ ಬರೆಯುತ್ತಿದ್ದೇನೆ. ಮೊನ್ನೆ ಒಂದು ಲಗ್ನ ಪತ್ರಿಕೆಯಲ್ಲಿ "ಮದುವೆಯಿಂದ, ಮದುವೆಗಾಗಿ, ಮದುವೆಗೋಸ್ಕರವೇ ಜೀವನವಲ್ಲವೆ" ಎಂದೊಬ್ಬ ಮಹರಾಯ ಬರೆದುಕೊಂಡಿದ್ದ, ನೋಡಿ ಹೆದರಿಕೆಯಾಗಿ ನಗು ಬಂದಿತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಹೆಸರಲ್ಲಿ ಏನಿದೆ?!

ಕಷ್ಟಗಳು ಹೇಗ್ಹೇಗೆ ಬರುತ್ತವೆ ಎಂದು ಅಂದಾಜಿಸುವುದು ತುಂಬಾ ಕಷ್ಟ! ಇಂತಹ ಕಂಪೆನಿಯ CEO ಎಂದು  ತನ್ನ ಹೆಸರು ಹೇಳಿ  ಪರಿಚಯಿಸಿಕೊಂಡ ಆ ಮನುಷ್ಯ ನನ್ನ ಕಿವಿಗಳು available mode ನಲ್ಲಿವೆ ಎಂದು ಪರಿಗಣಿಸಿದ ಹಾಗಿತ್ತು, ನಿಲ್ಲಿಸದೆ ಇಪ್ಪತ್ತು
ನಿಮಿಷಗಳವರೆಗೆ ಮಾತಾಡುತ್ತಿದ್ದ, ಕೇಳುತ್ತ ಕಣ್ಣು ತೆರೆದುಕೊಂಡೇ ನಿದ್ದೆ ಮಾಡುವುದು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (4 votes)
To prevent automated spam submissions leave this field empty.

ಮೈನಾ: ಚಿತ್ರ ವಿಮರ್ಶೆ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮರಳಿ ಗೂಡಿಗೆ...

 


ಸಂಪದಿಗರೆಲ್ಲರಿಗೂ ನಮಸ್ಕಾರ, ತುಂಬಾದಿನಗಳಿಂದ ಬರಹ ಬರವಣಿಗೆಗಳಿಂದ ದೂರವಾಗಿದ್ದು, ಇದು ಬಿಡಲಾರದ ಚಟ ಎನಿಸಿ ಮತ್ತೆ ಮರಳಿರುವೆ. ಸಂಪದದ ಹೊಸ ರೂಪ ಕಂಡು ಖುಷಿಯಾಯ್ತು. ಸಂಪದಿಗರ ಬುದ್ದಿವಂತ ಚರ್ಚೆಗಳು, ಚುರುಕು ಕಮೆಂಟುಗಳು, ತೀಕ್ಷ್ಣ ಬರಹಗಳು ಎಲ್ಲವೂ ಇನ್ನೂ ಮುಂದುವರೆಯುತ್ತಿರುವುದು ಸಂತಸದ ವಿಷಯ. ಇಷ್ಟು ದಿನ ಪಾಲ್ಗೊಳ್ಳದೇ ಇದ್ದದ್ದಕ್ಕೆ ನಿರಾಶೆಗೊಂಡು ಮತ್ತೆ ಮರಳಿರುವುದಕ್ಕೆ ಖುಷಿಯಾಗಿರುವೆ, ಇದಿಷ್ಟೂ ಇಲ್ಲಿವರೆಗಿನ ಅಪ್ ಡೇಟ್, ಮಿಕ್ಕಿದ್ದು ಮುಂದಿನ ಬರಹಗಳಲ್ಲಿ ಮುಂದುವರೆಸುವೆ...


 


ಪ್ರೀತಿಯಿಂದ ಹೇಮ ಪವಾರ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - ಹೇಮ ಪವಾರ್ ರವರ ಬ್ಲಾಗ್