ಹಾಲಿವುಡ್ ನ ಎಂಜಲಿನಾ ಜೋಲಿ

2.5

 

ಹಾಲಿವುಡ್ ಯಶಸ್ವೀ ತಾರೆ, ಬೆಡಗಿ ಎಂಜಲಿನಾ ಜೋಲಿ ತನ್ನ 'ಸ್ತನ ದ್ವಯ' ಗಳ ನಿರ್ಮೂಲನದ ಚಿಕಿತ್ಸೆಗೆ ಒಪ್ಪಿಗೆ ನೀಡಿದ್ದಾಳೆ. ಸ್ತನ ಕ್ಯಾನ್ಸರ್ ತನಗೆ ತಗಲುವ ಸಂಭವ ತೀರಾ ಹೆಚ್ಚಿರುವುದರಿಂದ ಅದರಿಂದ ಪಾರಾಗಲು ಆಕೆ mastectomy ಮಾಡಿಸಿ ಕೊಳ್ಳಲು ತಯಾರಾದಳು. ಸಾಮಾನ್ಯವಾಗಿ ಇಂಥ ಗಂಭೀರ ಖಾಯಿಲೆ ಮತ್ತು ಚಿಕಿತ್ಸೆಗಳನ್ನು ಖ್ಯಾತ ವ್ಯಕ್ತಿಗಳು ಬಹಿರಂಗ ಗೊಳಿಸುವುದಿಲ್ಲ. ಆದರೆ ಎಂಜಲಿನಾ ಜೋಲಿ ಮಾತ್ರ ಸಾಮಾನ್ಯ ಜನರನ್ನು ಸ್ತನ ಕ್ಯಾನ್ಸರ್ ರೋಗದ ಬಗ್ಗೆ ಎಚ್ಚರಿಸಲು ಸುದ್ದಿಯನ್ನ ಬಹಿರಂಗ ಮಾಡಿದರು. ಹೆಣ್ಣಿನ ಸೌಂದರ್ಯಕ್ಕೆ ಮಾದಕತೆ ಮತ್ತು ಮೆರುಗನ್ನು ನೀಡುವ ಸ್ತನಗಳನ್ನು ಯಾವ ಮಹಿಳೆಯೂ ಕಳೆದು ಕೊಳ್ಳಲು ಇಚ್ಚಿಸಲಾರಳು. ಸ್ತನಗಳನ್ನು ಕಳೆದುಕೊಳ್ಳುವ ಚಿಕಿತ್ಸೆಗೆ ಮಹಿಳೆ ಅತ್ಯಂತ ದುಃಖ ದಿಂದ ಒಪ್ಪಿಗೆ ನೀಡುತ್ತಾಳೆ, ಮತ್ತು ಚಿಕಿತ್ಸೆಯ ನಂತರ ತನ್ನ ಶರೀರದ ಬಗ್ಗೆ ಕೀಳರಿಮೆ ಸಹ ಬೆಳೆಸಿ ಕೊಳ್ಳುತ್ತಾಳೆ. ಹಾಗಾಗಿ ಚಿಕಿತ್ಸೆಗೆ ಒಪ್ಪಿಗೆ ನೀಡುವ ಮಹಿಳೆ ತನ್ನ ನಿರ್ಧಾರಕ್ಕೆ ಅತ್ಯಂತ ಧೈರ್ಯಶಾಲೀ ಮನೋಭಾವ ಪ್ರದರ್ಶಿಸ ಬೇಕಾಗುತ್ತದೆ. ಎಂಜಲಿನಾಳಿಗೆ ಇದರ ಸಂಪೂರ್ಣ ಅರಿವು ಇದ್ದ ಕಾರಣ ಹಾಗೂ, ನಟನೆಯೊಂದಿಗೆ ಸಮಾಜ ಮುಖಿ ಕೆಲಸಗಳಲ್ಲಿ ತನ್ನ ನ್ನು ತಾನು ತೊಡಗಿಸಿ ಕೊಳ್ಳುವ ತಾರೆಗೆ ತನ್ನನ್ನು ಉದಾಹರಣೆ ಯನ್ನಾಗಿಸಿಕೊಂಡು ಇಂಥ ಚಿಕಿತ್ಸೆಗೆ ಮಹಿಳೆಯರು ಹಿಂದೇಟು ಹಾಕದಿರಲಿ ಎನ್ನುವ ಸದುದ್ದೇಶ ಸುದ್ದಿ ಬಹಿರಂಗಗೊಳಿಸಲು ಕಾರಣ ಎಂದು ತೋರುತ್ತದೆ. ಎಂಜಲಿನಾಳ ಬದುಕಿನಲ್ಲಿ ತಲೆದೋರಿರುವ ಸಂಕಟಕರ ಪರಿಸ್ಥಿತಿ ನಿಭಾಯಿಸಲು ಆಕೆಗೂ, ಮತ್ತು ಸ್ತನ ಕ್ಯಾನ್ಸರ್ ಗಳಂಥ ರೋಗಗಳಿಂದ ಬಳಲುವ ಸಮಸ್ತ ಮಹಿಳೆಯರಿಗೆ ದೇವರು ಶಕ್ತಿ ದಯಪಾಲಿಸಲಿ ಎಂದು ಹಾರೈಕೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.