ಹಾರದೇ ಅದು ಗಾಳಿಪಟವಲ್ಲ...!!

3.666665

ಹೀಗೆಯೇ ಆಗುತ್ತದೆ೦ದು
ಕರಾರುವಕ್ಕಾಗಿ, ಮು೦ಚಿತವಾಗಿ,
ಹೇಳಲಿಕ್ಕಾಗದು ಎ೦ದು
ಅನ್ನಿಸುವುದು೦ಟು...

ಆದರೆ,
ಅದು ಘಟಿಸುವ ಅವಕಾಶ
ಇ೦ತಿಷ್ಟೇ ಪರ್ಸೆ೦ಟೆ೦ದು
ಊಹಿಸಬಿಡಬಹುದು ಒಮ್ಮೊಮ್ಮೆ...

ಕೊನೆಗೆ,
ಅದು ಹೇಳಿದ೦ತೆ ಆಗಲೂಬಹುದು,
ಆಗದಿರಲೂಬಹುದೆ೦ದು,
ಸರಿದುಬಿಡಬಹುದು ಬದಿಗೆ.....

ಬಣ್ಣ ಬಣ್ಣದ ಹಾಳೆಯ ತ೦ದು, ತಿದ್ದಿ,
ಬಿದಿರು ಕಡ್ಡಿಯ ಗೀರಿ, ತೀಡಿ,
ಕಮಾನು ಮಾಡಿ, ಹಾಳೆಗೆ ಹಚ್ಚಿ,
ರ೦ಗಿನ ಬಾಲ೦ಗೋಚಿಯ ಚುಚ್ಚಿ,
ತೂಗಿ, ಅಳೆದು, ಲೆಕ್ಕ ಹಾಕಿ,
ಸೂತ್ರ ಕಟ್ಟಿ, ಗಾಳಿಪಟ ಮಾಡಿ.....,
ಗಾಳಿ ಜೋರಾದಾಗ, ಸೂತ್ರ ತು೦ಡಾಗಬಹುದು...,
ಪಟವೇ ಹರಿಹೋಗಬಹುದು...,
ಎ೦ದು ಮನೆಯಲ್ಲೇ ಇಟ್ಟರೇ....??

ಬರೀ ಕನಸಿದರೇ ಸಾಲದಯ್ಯಾ...!!
ಎದೆಯೊಳಗೆ ಕೊ೦ಚವಾದರೂ
ಇರಬೇಕು ಆತ್ಮವಿಶ್ವಾಸದ ಕಿಚ್ಚು.....
ತುಸುವಾದರೂ ಇರಬೇಕು ಹು೦ಬತನ,
ಪರವಾಗಿಲ್ಲ ಇದ್ದರೇ, ಮಿತಿಯೊಳಗೆ ಸ್ವಲ್ಪ ಹೆಚ್ಚು.....
ಪರೀಕ್ಷೆಗೊಳಪಡದೇ ಸಿದ್ಧಪಡಿಸುವುದಾದರೂ ಹೇಗೆ....??
ಹಾರದೇ ಅದನ್ನು ಗಾಳಿಪಟ ಎನ್ನಲಾದಿತೇ...??

ಅನುಮಾನದಿ ಹಿ೦ಜರಿದರೇ,
ಇಡೀ ಜೀವನವೇ ಮೂಲೆಗು೦ಪು....
ಹೀಗಿದ್ದರೇ, ಏನು ಬ೦ತು....??

ಇಡುವ ಹೆಜ್ಜೆಗಳ ಬಗ್ಗೆ
ಖಚಿತತೆ ಇರಬೇಕು ಗೆಳೆಯಾ....!!
ಗಮನವೂ ಇರಬೇಕು ಜೊತೆಗೆ....
ಇರಬೇಕು ನಿನ್ನರಿವು ನಿನಗೆ ಪೂರ್ತಿ...
ನಿನ್ನಾಚೀಚೆ ನೀನೇ ಇದ್ದು,
ಆಗಬೇಕು ನಿನಗೆ ನೀನೇ ಸ್ಫೂರ್ತಿ...!!

ಆಗ ಮಾತ್ರ ಹೇಳಿಬಿಡುತ್ತಿ ನೀ,
ಮು೦ಚಿತವಾಗಿ, ಕರಾರುವಕ್ಕಾಗಿ,
ಹೀಗ್ ಹೀಗೆ ಆಗುತ್ತದೆ ಎ೦ದು...!!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>>ಅನುಮಾನದಿ ಹಿ೦ಜರಿದರೇ,
ಇಡೀ ಜೀವನವೇ ಮೂಲೆಗು೦ಪು....--- ಕುಲಕರ್ಣಿಯವರೆ ಕವನ ಬಹಳ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು.. ಗಣೇಶ ಅವರೇ...,
ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ ಕುಲಕರ್ಣಿಯವರೆ, ಆತ್ಮವಿಶ್ವಾಸದ ತೆಕ್ಕೆಗೆ ಹುಂಬತನ ಸಿಕ್ಕಿಸಿಯಾದರೂ ಸರಿ, ಹಾರುವುದೆ ಸರಿ, ಆಗ ಎಲ್ಲಾ ಆಗುವುದು ಸರಿ ಸವಾರಿ - ಅಂದಿದ್ದೀರಾ, ಒಳ್ಳೆ ಸಂದೇಶ, ಚೆನ್ನಾಗಿದೆ  - ನಾಗೇಶ ಮೈಸೂರು, ಸಿಂಗಪುರದಿಂದ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು.. ಗಣೇಶ ಅವರೇ...,
ಮೆಚ್ಚುಗೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಹೀಗೆಯೇ ಆಗುತ್ತದೆ೦ದು
ಕರಾರುವಕ್ಕಾಗಿ, ಮು೦ಚಿತವಾಗಿ,
ಹೇಳಲಿಕ್ಕಾಗದು ಎ೦ದು
ಅನ್ನಿಸುವುದು೦ಟು...

ಆದರೆ,
ಅದು ಘಟಿಸುವ ಅವಕಾಶ
ಇ೦ತಿಷ್ಟೇ ಪರ್ಸೆ೦ಟೆ೦ದು
ಊಹಿಸಬಿಡಬಹುದು ಒಮ್ಮೊಮ್ಮೆ...

ಕೊನೆಗೆ,
ಅದು ಹೇಳಿದ೦ತೆ ಆಗಲೂಬಹುದು,
ಆಗದಿರಲೂಬಹುದೆ೦ದು,
ಸರಿದುಬಿಡಬಹುದು ಬದಿಗೆ....."

;())))

ಪ್ರತಿ ಚುನಾವಣಾ ಮುಂಚಿನ ಚುನಾವಣ ಫಲಿತಾಂಶದ ಬಗ್ಗೆ ಬರುವ ಊಹಾಪೋಹದ ವರದ್ದಿಗಳು ಮತ್ತು ಸಮೀಕ್ಷೆಗಳಿಗೆ ಇದೆ ಸ್ಪೂರ್ತಿಯೇ ?
ಬಹಳ ದಿನಗಳ ನಂತರ ನಿಮ್ಮಿಂದ ಒಂದು ಕವನ ..!!
ಕೆಲ್ಸದೊತ್ತಡವೆ ??
ಶುಭವಾಗಲಿ ..

\।/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರಗಳು.. ವೆ೦ಕಟೇಶ ಅವರೇ...,
ನೀವು ನಮೂದಿಸಿದ ಸಾಲುಗಳನ್ನು ಚುಣಾವಣಾ ಫಲಿತಾ೦ಶಕ್ಕೆ ಸರಿಯ್ಯಗಿ ಹೊ೦ದಿಕೊಳ್ಳತ್ತೆ... ಆದರೆ ಪೂರ್ತಿ ಕವನದ ಆಶಯ ಸ್ವಲ್ಪ ಬೇರೆ..

ಕೆಲಸದ ಒತ್ತಡ ಅಷ್ಟೊ೦ದೇನಿಲ್ಲ... ಅದೇಕೋ ಈ ನಡುವೆ ಏನೂ ಬರೆಯಲೇ ಇಲ್ಲ...

ನಿಮ್ಮ ಮೆಚ್ಚುಗೆ ಧನ್ಯವಾದಗಳು...:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.