ಸುನಂದ - ೨ (ಮುಕ್ತಾಯ)

3
ಇಲ್ಲಿಯವರೆಗು : ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಸುನಂದ ಮನೆಯಲ್ಲಿಯು ಇರಲಾಗದೆ , ಆಫೀಸಿಗು ಹೋಗಲಾಗದೆ, ಸುಮ್ಮನೆ ಹೊರಟು ಕಬ್ಬನ್ ಪಾರ್ಕಿನಲ್ಲಿ ಕುಳಿತಿದ್ದಳು ಅಲ್ಲಿಗೆ ಬಂದ ಬೆಗ್ಗರ್ಸ್ ರಿಹಬಿಲೇಟಶ್ ಸೆಂಟರಿಗೆ ಸೇರಿದ ವಾಹನದಲ್ಲಿ ಬಂದ ಸಿದ್ಬಂದಿ ಸುನಂದಳನ್ನು ಬಿಕ್ಷುಕಿ ಎಂದು ತಿಳಿದು ಕರೆತಂದರು ಮೊದಲಬಾಗ ಇಲ್ಲಿ ಓದಿ : http://www.sampada.n... ಮುಂದೆ ಓದಿ : ವಾಹನದಿಂದ ಎಲ್ಲರನ್ನು ಕೆಳಗಿಳಿಸಲಾಯಿತು. ಒಬ್ಬೊಬ್ಬರದೆ ಹೆಸರು ಊರು ಬರೆದುಕೊಂಡು, ಅಲ್ಲಿ ಸೇರಿಸಿಕೊಳ್ಳಲಾಗುತ್ತಿತ್ತು. ಇವರನ್ನೆಲ್ಲ ಒಳಗೆ ಕರೆದುಕೊಂಡು ಹೋದಾಗ ಅಲ್ಲಿ ದೊಡ್ಡ ನಾಟಕವೊಂದು ನಡೆಯುತ್ತಿತ್ತು. ಇಬ್ಬರು ತಮಿಳು ಬಿಕ್ಷುಕರು ಹಾಗು ಇಬ್ಬರು ಉತ್ತರಭಾರತದ ಬಿಕ್ಷುಕರು ತಮ್ಮನ್ನು ಅಲ್ಲಿ ಕರೆತಂದುದ್ದಕ್ಕಾಗಿ ಬಾರಿ ಗಲಾಟೆ ನಡೆಸಿದ್ದರು. ಅವರ ಗಲಾಟೆಗೆ ಅಲ್ಲಿದ್ದ ಸಿದ್ಬಂದಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಆ ಗಲಾಟೆಯ ನಡುವೆ ಸುನಂದ ಅವನಲ್ಲಿ ತಾನು ಬಿಕ್ಷುಕಿ ಅಲ್ಲವೆಂದು ಕುಳಿತಿದ್ದ ತನ್ನನ್ನು ಬಲವಂತವಾಗಿ ಕರೆದು ತಂದಿದ್ದಾರೆಂದು ಹೇಳಲು ಪ್ರಯತ್ನಿಸಿದಳು, ಆದರೆ ಅವನು "ಸುಮ್ಮನೆ ಹೋಗಮ್ಮ ನೀನು ಬೇರೆ ತಲೆ ತಿನ್ನ ಬೇಡ, ಇಲ್ಲಿ ಬರುವ ಎಲ್ಲರದು ಒಂದೆ ರಾಗ, ನಾವು ಬಿಕ್ಷುಕರಲ್ಲ ಎಂದು, ಹಾಗಿದ್ದಲ್ಲಿ, ಮನೆ ಬಿಟ್ಟು ರಸ್ತೆಯ ಪಕ್ಕ ಏಕೆ ಬಂದು ಕುಳಿತು ಕೊಳ್ಳುತ್ತಾರೆ , ನನಗೆ ನಾಟಕ ಹರಿಕಥೆ ಎಲ್ಲ ಬೇಡ, ನಾಳೆ ನಾಡಿದ್ದರಲ್ಲಿ , ಇಲ್ಲಿಯ ಸಾಹೇಬರು ಬರ್ತಾರೆ ಬೇಕಾದ್ರೆ ಅವರಲ್ಲಿ ಹೇಳು,ನೀನು ಬಿಕ್ಷುಕಿ ಅಲ್ಲ ಸಿನಿಮಾ ನಟಿ ಐಶ್ವರ್ಯ ರಾಯ್ ಅಂತ , ಕೇಳಬಹುದು" ಎಂದ ಸುತ್ತಲಿದ್ದವರು ಅವನ ಮಾತಿಗೆ ಜೋರಾಗಿ ನಗುತ್ತಿದ್ದರು. ಅವಳು ಅಸಹಾಯಕಳು ಏನು ಮಾಡಲು ಆಗದು. ಪೋನ್ ಮಾಡಲು ಪ್ರಯತ್ನಿಸಿದಳು, ಅದನ್ನು ಅವಳ ಕೈನಿಂದ ಕಿತ್ತು, ಅವಳನ್ನು ಹೊರಗೆ ಬಿಕ್ಷುಕರ ವಸತಿಯ ಕಡೆಗೆ ಕಳಿಸಿದರು. ಒಳಗಿನ ವಾತಾವರಣ ಬೀಕರವಾಗಿತ್ತು, ಸುನಂದ ಎಂದು ಕನಸಿನಲ್ಲು ನೆನೆಸದ ಚಿತ್ರಗಳು. ಹೆಂಗಸರಿಗೆಲ್ಲ ನೀಲಿ ಬಣ್ಣದ ಬಟ್ಟೆ ಇದ್ದರೆ, ಗಂಡಸರಿಗೆ ಕಾಕಿ ಬಣ್ಣದ ಬಟ್ಟೆಗಳು ಕೊಡಲ್ಪಟ್ಟಿದ್ದವು. ಇವಳಿಗೆ ಎಲ್ಲಿ ಇರಬೇಕು ಏನು ಮಾಡಬೇಕು ಎಂದು ತೋಚದು. ಇಬ್ಬರು ಇರುವ ಜಾಗಕ್ಕೆ ನಾಲ್ವರು ಎನ್ನುವ ರೀತಿಯಲ್ಲಿ ರೂಮುಗಳಲ್ಲಿ ತುಂಬಿದ್ದರು. ಕೆಲವರು ಮಧ್ಯದ ಹಾಲಿನಲ್ಲಿ ಕಾಲು ಚಾಚಿ ಕುಳಿತಿದ್ದರು. ವಯಸ್ಸಾದವರೆ ಜಾಸ್ತಿ. ವಿದವಿದವಾದ ಕಾಯಿಲೆಗಳಿಂದ ನರಳುತ್ತಿರುವವರು ಹಲವರು. ತನಗೆ ಮೊದಲೆ ಕ್ಯಾನ್ಸರ್ ಈ ಜಾಗದಲ್ಲಿ ಮತ್ತೆ ಉಲ್ಬಣವಾಗುವುದು ಗ್ಯಾರಂಟಿ ಎಂದು ಕೊಂಡಳು ಸುನಂದ. ಕೆಲವರ ಮುಖ ನೋಡುವಾಗಲೆ ಕರುಳಲ್ಲಿ ಕಿವುಚಿದಂತೆ ಅಷ್ಟು ವಿಕಾರ ಎನಿಸುವಾಗ ಮನ ನೆನೆಯಿತು, ಸದ್ಯಕ್ಕೆ ತನ್ನ ಮುಖವು ಅವರಿಗಿಂತ ಬಿನ್ನವಿಲ್ಲ. ಮಹಿಳೆಯರ ವಿಭಾಗದಲ್ಲಿ ಇವಳು ಸೇರಿಸಲ್ಪಟ್ಟಳು. ಅವಳಿಗೆ ಗಾಭರಿ ಪ್ರಾರಂಬವಾಯಿತು, ಏನು ಮಾಡುವುದು ಇಲ್ಲಿಂದ ಹೊರಹೋಗುವದಾದರು ಹೇಗೆ. ಸಹಾಯ ಮಾಡಲು ಸಹ ಯಾರು ಇಲ್ಲ. ತನ್ನ ಮನೆಯವರಿಗೆ ಆಗಲಿ, ಆಫೀಸಿಗೆ ಆಗಲಿ ಹೀಗೆ ತಾನು ಇಲ್ಲಿ ಸೇರಿರುವ ವಿಷಯ ತಿಳಿಯುವುದು ಸಾದ್ಯವೆ ಇಲ್ಲ. ಅವಳು ಕುಸಿದು ಕುಳಿತಳು,. ಸುತ್ತಲಿದ್ದವರೆಲ್ಲ ಅವರವರಲ್ಲಿ ತಮಿಳು , ಹಿಂದಿ ಮುಂತಾದ ಬಾಷೆಗಳಲ್ಲಿ ಜೋರಾಗಿ ಚರ್ಚಿಸುತ್ತಿದ್ದರು. ಸುಕ್ಕುಗಟ್ಟಿದ ವಯಸಾದ ಮುಖದ ಕೆಲವು ಮುದುಕಿಯರು ಮಾತ್ರ ಯಾರೊಡನೆ ಮಾತಿಗೆ ಹೋಗದೆ ತಮ್ಮ ಪಾಡಿಗೆ ತಾವು ಕುಳಿತ್ತಿದ್ದರು. ಮದ್ಯಾಹ್ನ ಊಟದ ಸಮಯಕ್ಕೆ ಎಲ್ಲರು ಹೊರಟರು, ಅವರ ಕೈಯಲ್ಲಿ ತಟ್ಟೆಗಳು. ಇವಳಿಗೆ ಏನು ಬೇಡವೆನಿಸಿತು, ತಾನು ಬಿಕ್ಷುಕರ ಜೊತೆ ಊಟ ಹಂಚಿಕೊಳ್ಳೂವುದೆ. ಅಲ್ಲಿಯ ನೀರು ಕುಡಿಯಲು ಸಹ ಬೇಡವೆಂದು ಸುಮ್ಮನೆ ಕುಳಿತಳು. ಸುತ್ತಲಿದ್ದವರು ಅವಳನ್ನು ನೋಡಿ ಹೋದರೆ ವಿನಃ ಯಾರು ಮಾತನಾಡಿಸಲಿಲ್ಲ. ಅಲ್ಲಿನ ವಾತವರಣ ಅವಳಿಗೆ ತನ್ನ ಪಾಡೇನು ತಾನು ಹೇಗೆ ಇಲ್ಲಿ ಇರಬಲ್ಲೆ ಎನ್ನುವ ದುಃಖ ತುಂಬಿತು. ಅವಳು ದೈವದ ಬಗ್ಗೆ ಹೆಚ್ಚು ಚಿಂತಿಸುವಳಲ್ಲ. ಎಲ್ಲರಂತೆ ಸಹಜವಾಗಿ ಪೂಜೆ ದೇವಸ್ಥಾನ ಅಂತ ಇರುವವಳು, ಈಗ ಅವಳಿಗೆ ದೇವರ ಮೇಲಿನ ಕೋಪ, ಅಸಹಾಯಕತೆ ಎಲ್ಲವು ಜಾಸ್ತಿಯಾದವು. ತಾನು ಆಗೊಮ್ಮೆ ಈಗೊಮ್ಮೆ ಗುರುವಾರ ಹೋಗುತ್ತಿದ್ದ ರಾಘವೇಂದ್ರ ಸ್ವಾಮಿಗಳು ನೆನಪಿಗೆ ಬಂದರು, ಅವಳು ಮನಸಿನಲ್ಲೆ ಪ್ರಶ್ನಿಸಿದಳು. 'ಸ್ವಾಮಿ ನಾನು ಯಾವ ತಪ್ಪು ಮಾಡಿದೆ ಎಂದು ನನಗೆ ಈ ರೀತಿ ಶಿಕ್ಷೆ ಎಲ್ಲ ಸಿಗುತ್ತಿದೆ. ಬದುಕಿನಲ್ಲಿ ನಾನು ಯಾರನ್ನು ನೋಯಿಸದೆ ಇರಲು ಪ್ರಯತ್ನಿಸಿದೆ. ತನ್ನಿಂದ ಆದಾಗ ಯಾರಿಗಾದರು ಸಹಾಯ ಮಾಡಿರುವೆನೆ ಹೊರತು, ತಿಳುವಳಿಕೆಯಿಂದ ಯಾರಿಗು ಅಪಕಾರ ಮಾಡಿದವಳಲ್ಲ. ಈಗ ಎರಡು ವರ್ಷಗಳಿಂದ ಈ ಕ್ಯಾನ್ಸರ್ ಎಂಬ ಮಹಾಮಾರಿಯ ಕೈಯಲ್ಲಿ ಸಿಕ್ಕು ನರಳಿದ್ದಾಯಿತು. ಈಗ ಈ ನರಕಕ್ಕೆ ತನ್ನನ್ನು ತಳ್ಳಿರುವೆ. ಯಾವ ಕಾರಣಕ್ಕೆ, ನೀಡು ನನಗೆ ನೀಡುವ ಎಲ್ಲ ಶಿಕ್ಷೆಯನ್ನು ನೀಡಿ ಮುಗಿಸಿಬಿಡು. ಹಾಗೆ ತನಗೆ ಸಾವೊಂದನ್ನು ದಯಪಾಲಿಸಿ ಈ ಜೀವನದಿಂದ ಮುಕ್ತಗೊಳಿಸು" ಎಂದೆಲ್ಲ ಮನದಲ್ಲಿ ಬೇಡುತ್ತ ಗೋಳಾಡಿದಳು. ಕಡೆಗೆ ಅಂದುಕೊಂಡಳು ಇನ್ನು ಯಾವ ಪರಿಸ್ಥಿಥಿಯಾದರು ಬರಲಿ ನಾನು ಎದುರಿಸಲ್ಲ, ಹಾಳಾಗಿ ಹೋಗಲಿ, ನನಗೆ ಯಾರ ಬಳಿಯು ಮಾತು ಬೇಡ. ಅಷ್ಟಕ್ಕು ಇಲ್ಲಿಂದ ಹೊರಹೋಗಿ ಮಾಡಬೇಕಿರುವದಾದರು ಏನು. ಮನೆಯಲ್ಲಿ ಇರುವುದು ಮನೆಯವರಿಗೆ ಅಸಹನೆ. ಆಪೀಸಿಗೆ ಬರುವುದು ಬೇಡ ಎಂದು ಅವರಂದಾಯ್ತು. ದೇವರು ತನಗೆ ಅದಕ್ಕಾಗಿಯೆ ಈ ಜಾಗ ತೋರಿದ್ದಾನೆ ಎಂದು ಸಮಾದಾನ ಮಾಡಿಕೊಂಡಳು. ರಾತ್ರಿಯು ಅವಳು ಊಟದ ಹಾಲಿನ ಕಡೆ ಹೋಗಲಿಲ್ಲ. ಗೋಡೆಗೆ ಒರಗಿ ಸುಮ್ಮನೆ ಕುಳಿತಿದ್ದಳು. ರಾತ್ರಿ ಅಲ್ಲಿಯ ಸೊಳ್ಳೆ ತಿಗಣೆಗಳ ಕಾಟ. ರೋಗಿಷ್ಟ ಬಿಕ್ಷುಕರ ನರಳಾಟ, ಎಲ್ಲವು ಅವಳಿಗೆ ನರಕದ ದರ್ಶನ ಮಾಡಿಸಿದವು. ಮರುದಿನ ಬೆಳಗಾಯಿತು. ಮತ್ತೆ ಅದೆ ನೋಟ. ಇರುವ ಎಲ್ಲ ಬಿಕ್ಷುಕರು , ಒಂದೆ ಕಡೆ ಲೆಟ್ರಿನ್ , ಮುಖ ತೊಳೆಯುವುದು ಎಲ್ಲ ಮುಗಿಸಬೇಕಿತ್ತು, ಅವಳ ಬಳಿ ಬ್ರಶ್ ಆಗಲಿ, ಟವೆಲ್ ಸೋಪಾಗಲಿ ಏನು ಇಲ್ಲ. ಅದನ್ನೆಲ್ಲ ಯಾರಾದರು ಒದಗಿಸುತ್ತಾರೆಂಬ ನಂಬಿಕೆಯು ಅವಳಿಗಿಲ್ಲ. ಒಂದು ಕಡೆ ಕುಳಿತೆ ಇದ್ದಳು. ಆದಿನವು ಅವಳು ತಿಂಡಿಗಾಗಳಿ, ಊಟಕ್ಕಾಗಲಿ ಹೋಗಲಿಲ್ಲ. ಹಸಿವು ಅನ್ನುವುದು ಇಂಗಿ ಹೋಗಿತ್ತು. ಸುಸ್ತು ತುಂಬಿ ಬಂದು ನಿಲ್ಲಲ್ಲು ಕಷ್ಟ ಎನ್ನುವ ಸ್ಥಿಥಿ. ತಾನಿರುವ ರೂಪಕ್ಕು ತನ್ನ ಪರಿಸ್ಥಿಥಿಗು , ಯಾರು ನೋಡಿದರು ಬಿಕ್ಷುಕಿ ಅಲ್ಲ ಎಂದರೆ ನಂಬುವದಿಲ್ಲ ಎಂದು ನೆನೆದಾಗ ಅವಳಿಗೆ ನಗು ಬಂತು. ಮನಸನ್ನು ನಿರ್ಲಿಪ್ತತೆ ಆವರಿಸಿತು, ಅಲ್ಲಿಂದ ಬಿಡುಗಡೆಗೊಂಡು ಹೊರಗೆ ಹೋಗಬೇಕೆಂಬ ಆಸೆಯು ಏಕೊ ಸತ್ತುಹೋಯಿತು. ರಾತ್ರಿ ಒಬ್ಬ ಮುದುಕಿ ಪಕ್ಕ ಬಂದು ಕುಳಿತಳು. "ಏಕೆ ನೀನು ಊಟಕ್ಕೆ ಬರುತ್ತಿಲ್ಲ, ಮೈ ಸರಿ ಇಲ್ಲವ ?" ಎಂದು ಕೇಳಿದಳು. ಸುನಂದ ಯಾವ ಉತ್ತರವನ್ನು ಕೊಡಲಿಲ್ಲ, ಅವಳತ್ತ ತಿರುಗಿ ಸಹ ನೋಡಲಿಲ್ಲ. ಮುದುಕಿ ಇವಳಿಂದ ಸ್ವಲ್ಪ ದೂರದಲ್ಲಿಯೆ ಮಲಗಿ ನಿದ್ದೆ ಹೋದಳು. ಮರುದಿನ ಬೆಳಗ್ಗೆ ಮುದುಕಿಯೆ "ಏಕೆ ಒಂದೆ ಕಡೆ ಹೀಗೆ ಕುಳಿತಿದ್ದಿ. ಏಳು, ನೀರಿದೆ ಸ್ವಲ್ಪ ಮುಖ ತೊಳೆದು ಬಾ" ಎಂದಳು. ಅವಳಿಗೆ ಯಾವ ಉತ್ಸಾಹವು ಇಲ್ಲ. ಅವಳ ಬಲವಂತಕ್ಕೆ ಎದ್ದು ಅವಳ ಜೊತೆ ಹೋದಳು. ಮುದುಕಿಯೆ ಇವಳಿಗೆ ಎಲ್ಲ ಜಾಗ ತೋರಿಸಿ. ನೀರಿರುವ ಜಾಗ ತೋರಿಸಿ ಜೊತೆಗೆ ನಿಂತಿದ್ದಳು. ಅಲ್ಲಿ ಎಲ್ಲ ಮುಗಿಸಿ ಮತ್ತೆ ತಾನು ಮೊದಲಿನ ಜಾಗಕ್ಕೆ ಬಂದು ಕುಳಿತಳು ಸುನಂದ. ಮುದುಕಿ ಪಕ್ಕದಲ್ಲಿ ಬಂದು ಕುಳಿತು ಕೊಂಡಿತು "ನಿನ್ನನ್ನು ನೋಡಿದರೆ ಬಿಕ್ಷುಕಿಯ ತರ ಅನ್ನಿಸುವದಿಲ್ಲ, ಏನು ಕಾಯಿಲೆ, ಇಲ್ಲಿ ಹೇಗೆ ಬಂದೆ" ಎಂದಳು. ಸುನಂದಳಿಗೆ ಏಕೊ ಮಾತನಾಡಲು ಯಾವ ಉತ್ಸಾಹವು ಇಲ್ಲ, ಮಾತನಾಡಲು ಹೋದರೆ ಗಂಟಲು ಒಣಗುತ್ತಿತ್ತು. ಮುದುಕಿ ಪುನಃ 'ಎರಡು ದಿನದಿಂದ ನೀನು ಏನು ತಿಂದಿಲ್ಲ ಕುಡಿದಿಲ್ಲ, ಹೀಗಾದರೆ ಎಲ್ಲಿ ಶಕ್ತಿ ಇರುತ್ತದೆ ಹೇಳು, ಇಲ್ಲಿಯ ಅಹಾರ ಎಂದು ಅಸಹ್ಯಪಡಬೇಡ, ಜೀವ ಉಳಿಸಲು ಏನಾದರು ತಿನ್ನಲೆ ಬೇಕು ಏಳು" ಎಂದು ಬಲವಂತ ಪಡಿಸಿದಳು. ಕಡೆಗೆ ಅವಳ ಜೊತೆ ಹೊರಟಳು ಸುನಂದ. ಆಕೆ ಇವಳಿಗೆ ಒಂದು ತಟ್ಟೆ ಕೊಡಿಸಿದಳು. ಸಾಲಿನಲ್ಲಿ ನಿಂತು ತಾನೆ ಇವಳಿಗೆ ಅಹಾರ ತಂದು ಕೊಟ್ಟು , ಅದನ್ನು ತಿನ್ನು ಅಂದಳು. ಎರಡು ತುತ್ತು ತಿನ್ನುವದರಲ್ಲಿ ಸುನಂದಳಿಗೆ ಅಳು ಉಕ್ಕಿ ಬಂದಿತು. ಅವಳಿಗೆ ನೆನಪಿಗೆ ಬಂದಿತು. ತಾನು ಮನೆಯಲ್ಲಿದ್ದಾಗ ಬಿಕ್ಷುಕರಿಗೆ ಹಾಕುವಾಗ ಸಹ ಉತ್ತಮವಾದ ಸ್ಥಿಥಿಯಲ್ಲಿ ಇರುವ ಅಹಾರವನ್ನೆ ಹಾಕುತ್ತಿದ್ದಳು. ಅವಳ ಅತ್ತೆ ಒಮ್ಮೆ ಕೆಟ್ಟಿದ್ದ ಅಹಾರವನ್ನು ಹಾಕಲು ಹೋದಾಗ ಕೇಳುತ್ತಿದ್ದಳು "ಅತ್ತೆ ಅವರು ಮನುಷ್ಯರೆ ಅಲ್ಲವ ಪಾಪ ಹೇಗೆ ಅಂತ ಅಹಾರ ತಿಂತಾರೆ, ಅದನ್ನು ಬಿಸಾಕಿಬಿಡಿ, ಹಾಕಬೇಡಿ" ಎಂದು. ಸುನಂದ ನೆನೆದಳು, ತಾನೆ ಈಗ ಇಂತಹ ಅಹಾರ ತಿನ್ನ ಬೇಕಿದೆ. ಒಂದೆರಡು ತುತ್ತು ತಿಂದು ನೀರು ಕುಡಿದು ಅಲ್ಲಿಂದ ಎದ್ದು ಹೊರಟಳು. ನಾಲ್ಕೈದು ದಿನ ಕಳೆಯುವದರಲ್ಲಿ, ಆ ಮುದುಕಿ ಸುನಂದಳಿಗೆ ಹೊಂದಿಕೊಂಡು ಬಿಟ್ಟಳು. ಅವಳು ಅನ್ನುತ್ತಿದ್ದಳು "ಇಲ್ಲಿರುವ ಬಿಕ್ಷುಕರೆಲ್ಲ ಇಲ್ಲ ತಮಿಳಿನವರು ಇಲ್ಲ ಹಿಂದಿಯವರು, ದರಿದ್ರ ಮುಂಡೇವು ಯಾರಿಗು ಕನ್ನಡ ಬರಲ್ಲ, ಸದ್ಯ ನಿನಗಾದರು ಕನ್ನಡ ಅರ್ಥವಾಗುತ್ತಲ್ಲ" ಎಂದು. ಏನೆ ಮಾಡಿದರು ಸುನಂದ ಸದಾ ಸಪ್ಪಗೆ ಇರುತ್ತಿದ್ದಳು. ಮುದುಕಿ ಅಂದಳು ನೀನು ಸದಾ ಕೊರಗುವದರಲ್ಲಿ ಅರ್ಥವಿಲ್ಲ. ನಿನ್ನ ಮನಸಿನಲ್ಲಿ ಬರಿ ದುಃಖವೆ ತುಂಬಿಕೊಂಡಿದೆ. ಎಲ್ಲವನ್ನು ಮರೆತುಬಿಡು, ನಾವು ಹುಟ್ಟಿದಾರಿಬ್ಬ ಇಲ್ಲಿಯೆ ಇರೋದು ಅಂದುಕೊಳ್ಳುವದಪ್ಪ, ಅಷ್ಟಕ್ಕು ನಿನ್ನ ದುಃಖ ಏನು ಅದನ್ನಾದರು ಹೇಳು" ಎಂದು ಬಿಡಿಸಿ ಕೇಳಿದಳು. ಸುನಂದಳಿಗೆ ಇಷ್ಟು ದಿನದವರೆಗು ಯಾರು ಅವಳನ್ನು ನಿನ್ನ ಮನಸೇನು ಎಂದು ಕೇಳಿರಲಿಲ್ಲ. ತನ್ನನ್ನು ತನ್ನ ಮಗಳಂತೆ ನೋಡಿಕೊಳ್ಳುವ ಈ ಮುದುಕಿಯನ್ನು ಕಾಣುವಾಗ ಅವಳಿಗೆ ಎಂದೊ ತೀರಿಹೋದ ತನ್ನ ತಾಯಿ ನೆನಪಿಗೆ ಬಂದಳು. ನಿದಾನಕ್ಕೆ ಕುಳಿತು ತನಗೆ ಕ್ಯಾನ್ಸರ್ ಎಂಬ ಕಾಯಿಲೆ ಆಕ್ರಮಿಸಿದ ದಿನದಿಂದ ತಾನು ಅನುಭವಿಸಿದ ಮಾನಸಿಕ ದುಗುಡವನ್ನೆಲ್ಲ ತೋಡಿಕೊಂಡಳು. ತನ್ನ ಸುತ್ತಲಿನ ಜನರ ಸ್ನೇಹಿತರ , ಮನೆಯವರ , ತಾನು ಕೆಲಸಮಾಡುವಲ್ಲಿನ ಜನರ ನಡತೆಗಳನ್ನು ಹೇಳುತ್ತ ಹೇಳುತ್ತ ಅವಳಿಗೆ ದುಃಖ ಉಮ್ಮಳಿಸಿ ಬಂತು, ಮುದುಕಿಯ ತೊಡೆಯ ಮೇಲೆ ತಲೆಯಿಟ್ಟು ಜೋರಾಗಿ ಅತ್ತುಬಿಟ್ಟಳು. ಅವಳ ಎಲ್ಲ ಕಥೆ ಕೇಳಿದ ಮುದುಕಿ. "ಆಯ್ತಲ್ಲ ನಿನ್ನ ನೆನಪಿನಿಂದ ಇನ್ನು ಎಲ್ಲವು ಹೊರಹೋಗಲಿ, ಹಿಂದಿನದೆಲ್ಲ ಮರೆತುಬಿಡು. ಇಲ್ಲಿ ನಿನಗಾವ ತೊಂದರೆಯು ಇಲ್ಲದಂತೆ ನಾನು ಸದಾ ನಿನ್ನ ಜೊತೆ ಇರುತ್ತೇನೆ , ದೇವರಿದ್ದಾನೆ ಸುಮ್ಮನಿರು " ಎಂದು, ತುಂಬಾ ಹೊತ್ತಿನವರೆಗು ತೊಡೆಯ ಮೇಲೆ ಮುಖವಿಟ್ಟು ಮಲಗಿದ್ದ ಸುನಂದಳ ತಲೆ ಸವರುತ್ತಲೆ ಇದ್ದಳು. ಮರುದಿನ ಬೆಳಗ್ಗೆಯೆ ಮುದುಕಿ ಎದ್ದು, ವಸತಿಗಳ ಹಿಂದೆ ಇದ್ದ ಪ್ರದೇಶದಲ್ಲಿ ಸುತ್ತುತ್ತಿದಳು, ಅಲ್ಲೆಲ್ಲ ಮುಳ್ಳೂ ಕಂಟಿಗಳು ಬರಿ ಕಾಡುಗಿಡಗಳು ಬೆಳೆದು, ಪೊದೆಗಳಿಂದ ತುಂಬಿತ್ತು. ಅವಳು ಸುತ್ತುತ್ತಿರುವುದು ಕಂಡ ಅಲ್ಲಿನ ಕೆಲಸಗಾರರು, ನಗುತ್ತ "ಏನು ಮುದುಕಿ , ಹಿಂದೆ ಸುತ್ತುತ್ತ ಇದ್ದೀಯ, ಗೋಡೆ ಹಾರಿ ಓಡಿ ಹೋಗಲು , ನೋಡ್ತಿದ್ದೀಯ" ಎನ್ನುತ ರೇಗಿಸಿದರು, ಆಕೆಯು ನಗುತ್ತ, "ಬಿಡಪ್ಪ ನಾನು ಹೊರಗೆ ಹೋದರೆ ತಾನೆ ಎಲ್ಲಿ ಹೋದೇನು, ಯಾವುದೊ ಲಾರಿ ಬಸ್ಸಿನ ಕೆಳಗೆ ಸಿಕ್ಕಿ ಸಾಯಬೇಕಷ್ಟೆ" ಎನ್ನುತ್ತ ಉತ್ತರಿಸಿದಳು. ಅವಳು ತುಂಬಾ ಹೊತ್ತು ಹುಡುಕಿದ್ದು ಸಾರ್ಥಕವಾಗಿತ್ತು. ಅವಳು ಅದ್ಯಾವುದೊ ಗಿಡದ ಎಲೆಗಳನ್ನು ಹಿಡಿದು ಉತ್ಸಾಹದಿಂದ ಅಲ್ಲಿಂದ ಹೊರಟಳು. ಅದೊಂದು ಕಾಡು ಗಿಡ. ಚಿಕ್ಕ ಚಿಕ್ಕ ಎಲೆ, ಹಾಗು ಬರಿ ಮುಳ್ಳಿನಿಂದ ತುಂಬಿದ ಚಿಕ್ಕ ಗಿಡವದು. ಅದರ ಎಲೆಗಳು, ಮುದುಕಿ ಅದನ್ನು ಒಳಗೆ ತೆಗೆದುಕೊಂಡು ಹೋದವಳು, ಎಲೆಗಳನ್ನು ಸ್ವಚ್ಚಗೊಳಿಸಿ, ಕಲ್ಲಿನ ಮೇಲಿಟ್ಟು ಸಣ್ಣದೊಂದು ಕಲ್ಲಿನಿಂದ ಅದನ್ನು ಚೆನ್ನಾಗಿ ಅರೆದಳು ನಂತರ ಅದರಿಂದ ಬಂದ ರಸವನ್ನು ಅವಳ ಹತ್ತಿರವಿದ್ದ ಲೋಟಕ್ಕೆ ಹಿಂಡಿದಳು, ಅದಕ್ಕೆ ಸ್ವಲ್ಪ ನೀರು ಬೆರೆಸಿದಳು, ಸುತ್ತಲಿದ್ದವರು ಈ ಮುದುಕಿ ಏನು ನಡೆಸಿದ್ದಾಳೆ ಎಂದು ನೋಡುತ್ತಿರುವಂತೆ, ಸುನಂದಳ ಬಳಿ ಬಂದ ಮುದುಕಿ ಅವಳಿಗೆ ಆ ಲೋಟವನ್ನು ಕೊಡುತ್ತ "ತಗೋ ಸ್ವಲ್ಪವು ಉಳಿಸದೆ ಕುಡಿದುಬಿಡು, ಸ್ವಲ್ಪ ಕಹಿ ಇರುತ್ತೆ ಉಗುಳ ಬೇಡ" ಎಂದಳು, ಸುನಂದ ಆಶ್ಛರ್ಯದಿಂದ "ಇದೇನಜ್ಜಿ" ಎಂದರೆ, "ಅದೊಂದು ಸೊಪ್ಪಿನ ರಸ , ಔಷದಿ ಸೊಪ್ಪಿನ ರಸ, ನಿನಗೆ ಎಲ್ಲ ಸರಿ ಹೋಗುತ್ತೆ" ಎಂದಳು, ಸುನಂದ "ಅಜ್ಜಿ , ದೊಡ್ಡ ದೊಡ್ಡ ಡಾಕ್ಟರ್ ಗಳೆ ನನಗೆ ಬದುಕುವ , ಕಾಯಿಲೆ ವಾಸಿ ಆಗುವ ಬರವಸೆ ಕೊಡಲಿಲ್ಲ ನೀನು ವಾಸಿ ಮಾಡ್ತೀಯ" ಎಂದದ್ದಕ್ಕೆ "ನೋಡಮ್ಮ , ನಂಬು ಇದನ್ನು ಕುಡಿ, ಇದರಿಂದ ನಿನಗೇನು ನಷ್ಟವಂತು ಇಲ್ಲ, ನನ್ನ ಪ್ರಯತ್ನ ಮಾಡುತ್ತಿರುವೆ, ಸಾಯಲು ಸಿದ್ದವಾಗಿರುವ ನಿನಗೆ ನನ್ನ ಔಷದದ ಭಯ ಯಾಕೆ" ಎಂದಳು, ಸುನಂದ ಏನು ಉತ್ತರಿಸದೆ , ಲೋಟದಲ್ಲಿದ್ದ ರಸವನ್ನೆಲ್ಲ ಕುಡಿದು , ಮುದುಕಿಯ ಕೈಗೆ ಲೋಟವನ್ನು ಕೊಟ್ಟಳು. ಅಂದಿನಿಂದ ಮುದುಕಿಯ ಡಾಕ್ಟರಿಕೆ ಪ್ರಾರಂಬವಾಯಿತು. ಸುನಂದ ಒಮ್ಮೆ ಕೇಳಿದಳು "ಅಜ್ಜಿ ನಿನಗೆ ನಾಟಿ ವೈದ್ಯ ಗೊತ್ತಿದೆಯ? ಆ ಎಲೆಯ ಹೆಸರೇನು" ಅದಕ್ಕೆ ಮುದುಕಿಯು "ನೋಡು ಮಗು , ಎಲೆಯ ಹೆಸರು ಹೇಳಬಾರದು, ಹೇಳಿದರೆ ಅದು ಕೆಲಸ ಮಾಡಲ್ಲ ಅಂತಾರೆ, ಹಳ್ಳಿಯಲ್ಲಿ ನನ್ನ ತಂದೆ ನಾಟಿ ವೈದ್ಯ ಮಾಡುತ್ತ ಇದ್ದದ್ದು ನೆನಪಿದೆ , ನಾನಾಗ ಚಿಕ್ಕವಯಸಿನವಳು, ಸಾಕಷ್ಟು ಸಾರಿ ಅವರ ಜೊತೆ ಮೂಲಿಕೆ ಹುಡುಕುತ್ತ ಗುಡ್ಡ ಕಾಡುಗಳನ್ನು ಸುತ್ತಿರುವೆ, ನನಗೆ ಮದುವೆಯಾದ ನಂತರ ಅದೆಲ್ಲ ಮರೆತು ಹೋಗಿತ್ತು. ಸುಮಾರು ಐವತ್ತು ವರ್ಷಗಳ ನಂತರ ನಿನಗೆ ನನ್ನ ಕೈನಿಂದ ಔಷದಿ ಮಾಡಿ ಕೊಡುತ್ತಿದ್ದೇನೆ ನೋಡೋಣ" ಎಂದಳು. ಮುದುಕಿಯು ಅಲ್ಲಿಯ ಕೆಲಸಗಾರ ಒಬ್ಬಳನ್ನು ಹಿಡಿದಳು, ಅವಳನ್ನು ಹೇಗೊ ಕಾಡಿಸಿ, ಹೊರಗಿನಿಂದ ಶುದ್ದ ಹರಿಸಿಣ ತರಿಸಿದಳು, ಅವಳು ಅದನ್ನು ಕಾಗದದ ಪೊಟ್ಟಣದಲ್ಲಿ ತಂದು ಕೊಟ್ಟಳು. ಮುದುಕಿ ಆ ಎಲೆಯನ್ನು ರಸ ತೆಗೆದು ಹರಿಸಿನ ವನ್ನು ಅದರಲ್ಲಿ ಕಲಸಿ, ಹಿಂದೆ ಇದ್ದ ನಿಂಬೆಹಣ್ಣಿನ ಗಿಡದಿಂದ ಎಳೆ ನಿಂಬೆ ಹಣ್ಣು ತಂದು ಅದಕ್ಕೆ ಸೇರಿಸಿ ಮಿಶ್ರಣವನ್ನು ಸುನಂದಳ ಕೈ, ಬೆನ್ನು, ಮುಖದ ಮೇಲೆಲ್ಲೆ ಚೆನ್ನಾಗಿ ಹಚ್ಚಿ, ದಿನಾ ಬಿಸಲಿನಲ್ಲಿ ಒಂದೆರಡು ಗಂಟೆ ನಿಲ್ಲಿಸುತ್ತಿದ್ದಳು. ಸುನಂದಳನ್ನು ಕಂಡು ಎಲ್ಲರಿಗು ನಗು, ಆಕೆ , ಅರಳು ಮರಳು ಮುದುಕಿಯ ಮಾತು ನಂಬಿ ಅವಳು ಹೇಳಿದಂತೆ ಕೇಳುತ್ತಾಳೆ ಎಂದು,. ಆದರೆ ಯಾರು ತಲೆ ಕೆಡಸಿಕೊಳ್ಳಲಿಲ್ಲ, ಏನಾದರು ಮಾಡಿಕೊಳ್ಳಲಿ ಎಂದು ಸುಮ್ಮನಿದ್ದರು. ಸುನಂದ ಅಲ್ಲಿಗೆ ಬಂದು ಮೂರು ಅಥವ ನಾಲಕ್ಕು ವಾರಗಳೆ ಕಳೆಯಿತೇನೊ, ಅವಳಿಗು ಲೆಕ್ಕ ತಪ್ಪಿತು. ಅಲ್ಲಿಯ ವಾತವರಣಕ್ಕೆ ಮನ ಒಗ್ಗಿ ಕೊಂಡಿತು. ಯಾರಲ್ಲಿಯು ಮಾತಿಗೆ ಹೋಗುತ್ತಿರಲಿಲ್ಲ. ಅಲ್ಲಿಯ ಮಾತು, ಕದನ, ಜಗಳಗಳು , ಹೊಡೆದಾಟ, ಕಾಯಿಲೆ, ರೋಗಗಳು, ಎಲ್ಲವನ್ನು ನೋಡುತ್ತ ಅವಳು ಬೇರೆಯದೆ ಪ್ರಪಂಚದಲ್ಲಿ ಇದ್ದುಬಿಟ್ಟಳು. ಕೆಲ ಬಿಕ್ಷುಕರು ಮನೋರೋಗಿಗಳಾಗಿದ್ದರು, ಅವರಿಗೆಲ್ಲ ಆರೈಕೆಗಳಿಲ್ಲದೆ ಸೊರಗುತ್ತಿದ್ದರು. ಹೀಗೆ ಎಷ್ಟು ದಿನ ಕಳೆಯಿತು, ತಿಳಿಯದು, ಸುನಂದಳಿಗೆ ಅಷ್ಟು ದಿನದ ದುಗುಡದಿಂದ ಬಿಡುಗಡೆ ದೊರಕಿತ್ತು. ಹೊರಗಿನ ಎಲ್ಲ ಸಂಬಂದಗಳು ಅವಳ ಮನದಿಂದ ದೂರವಾಗಿದ್ದ್ವು ಮನ ಪ್ರಶಾಂತವಾಗಿತ್ತು. ಮುದುಕಿ ಕೊಡುತ್ತಿದ್ದ ನಾಟಿ ಔಷದದ ಪರಿಣಾಮವೊ ಏನೊ ಹೊಟ್ಟೆ ಬೆನ್ನಿನಲ್ಲಿಯ ನೋವು ಹಿಂಸೆಗಳು ತಹಬದ್ದಿಗೆ ಬಂದಿದ್ದು, ರಾತ್ರಿ ನಿದ್ದೆ ಬರುತ್ತಿದ್ದು. ಅತಿ ಕಡಿಮೆ ಅಹಾರ ಸೇವಿಸುತ್ತಿದ್ದಳು. ಅವಳೆಂದು ಊಟಕ್ಕೆ ಹೋಗುತ್ತಿರಲೆ ಇಲ್ಲ ಮುದುಕಿ ತರುತ್ತಿದ್ದ ಅಹಾರವನ್ನು ಇಬ್ಬರು ಸ್ವಲ್ಪ ತೆಗೆದುಕೊಳ್ಳುತ್ತಿದ್ದರು. ಸುತ್ತಲ ಬಿಕ್ಷುಕರು ಸುನಂದಳ ಮಾತಿಗೆ ಬರದಂತೆ ಅಜ್ಜಿ ಕಾವಲಿದ್ದಳು. ಅಜ್ಜಿಗೆ ಸುನಂದಳನ್ನು ಕಂಡರೆ ಅದೇನೊ ವ್ಯಾಮೋಹ. ಒಂದು ದಿನ ಬೆಳಗ್ಗೆ ಮುದುಕಿ ಅಂದಳು "ಮಗು , ನಿನ್ನ ಮುಖ ನೋಡಿಕೊಂಡಿದ್ದೀಯ, ಈಗ ಅಲ್ಲಿ ಯಾವ ಗಾಯವಾಗಲಿ, ಕಲೆಯಾಗಲಿ ಇಲ್ಲ, ನಿನ್ನ ಮುಖದಲ್ಲಿ ಈಗ ಯಜಮಾನಗಿತ್ತಿಯ ಗಾಂಭೀರ್ಯವಿದೆ" ಸುನಂದ ತನ್ನ ಕೈ, ಕಾಲುಗಳನ್ನೆಲ್ಲ ಗಮನಿಸಿದಳು, ಮುದುಕಿಯ ಮಾತು ನಿಜ, ತನ್ನ ಕೈಕಾಲುಗಳೀಗ ಅತ್ಯಂತ ಸ್ವಚ್ಚವಾಗಿದ್ದವು, ಚರ್ಮವಂತು ಆರೋಗ್ಯವಾಗಿ ಹೊಳೆಯುತ್ತಿತ್ತು, ಅಲ್ಲದೆ ವಿಸ್ಮಯ ಎಂಬಂತೆ, ಪೂರ್ತಿ ಬೋಳಾಗಿದ್ದ ಅವಳ ತಲೆಯಲ್ಲಿ ಕೂದಲುಗಳು ಸೊಂಪಾಗಿ , ಸುಮಾರು ಮೂರು ಸೆಂಟಿ ಮೀಟರಿನಷ್ಟೆ ಬೆಳೆದು ಕಿವಿಯವರೆಗು ಇಳಿಬಿದ್ದಿದ್ದವು. ಅವಳಿಗೆ ವಿಸ್ಮಯ ಅದು ಹೇಗೊ ಮುದುಕಿಯ ಔಷದಿ ಕೆಲಸ ಮಾಡುತ್ತಿದೆ ಎಂದು. ಅವಳು ಅಂದಳು "ಅಜ್ಜಿ ನೀನು ಸಾಮಾನ್ಯಳಲ್ಲ, ನೋಡು, ನನ್ನನ್ನೆ ಬದಲಾಯಿಸಿಬಿಟ್ಟೆ, ನನ್ನ ಸುಸ್ತು ಕಡಿಮೆಯಾಗುತ್ತಿದೆ, ದೇಹ ಪೂರ್ತಿ ಆರೋಗ್ಯವಾಗಿದೆ ಅನ್ನಿಸುತ್ತಿದೆ, ಇದೆಲ್ಲ ಹೇಗೆ ಸಾದ್ಯವಾಯಿತು, ಇಷ್ಟಾದರು ನಾನು ನೋಡು ಒಂದು ದಿನವಾದರು ನಿನ್ನ ಹೆಸರೇನು ಎಂದು ಕೇಳಲಿಲ್ಲ, ಅಜ್ಜಿ ನಿನ್ನ ಹೆಸರೇನು, ಎಲ್ಲಿಯವಳು ನನಗೆ ಹೇಳುವೆಯ" ಎಂದಳು. ಅದಕ್ಕೆ ಮುದುಕಿ "ಅಯ್ಯೊ ನನ್ನದೇನು ಮಗು, ಏನು ಇಂದಿರಾಗಾಂದಿ ಕತೆಯೆ ಎಲ್ಲ ಕುಳಿತು ಕೇಳಲು, ಹೀಗೆ ನನಗೆ ಇಬ್ಬರು ಗಂಡು ಮಕ್ಕಳಿದ್ದರು, ಈಗಲು ಇದ್ದಾರೆ ಎಂದೆ ಇಟ್ಟುಕೋ, ನಾನು ನನ್ನ ಗಂಡ ಎಲ್ಲ ಆಸೆ ಅವರ ಮೇಲಿಟ್ಟು ಬೆಳೆಸಿದೆವು, ಅವರುಗಳ ಮದುವೆಯು ಆಯಿತು, ಸಣ್ಣ ಬುದ್ದಿ ತೋರಿ ಅವರು ಬೇರೆ ಬೇರೆ ಮನೆ ಮಾಡಿ ಕೊಂಡು ಬೆಂಗಳೂರಿಗೆ ಹೋದರು, ನನ್ನ ಗ್ರಹಚಾರ ನನ್ನ ಗಂಡನು ನನ್ನ ಒಬ್ಬಳನ್ನೆ ಬಿಟ್ಟು ಸತ್ತು ಹೋದ, ಹೇಗೊ ಕಾಲ ಕಳೆಯುತ್ತಿದ್ದೆ, ಆದರೆ ಮಕ್ಕಳು ಬಿಡಲಿಲ್ಲ, ನಾವು ನೋಡಿಕೊಳ್ತೀವಿ ಎಂದು, ತುಮಕೂರಿನಲ್ಲಿದ್ದ ಮನೆಯನ್ನು ಮಾರಿದರು, ಹಣ ಇಬ್ಬರು ಹಂಚಿಕೊಂಡರು, ನನ್ನನ್ನು ಇಲ್ಲಿಗೆ ಕರೆ ತಂದರು, ಸೊಸೆಯರದೆ ದರ್ಬಾರು, ನನ್ನ ಇಬ್ಬರು ಮಕ್ಕಳು ಪರಸ್ಪರ ಮಾತನಾಡುತ್ತಿರಲಿಲ್ಲ ಎಂತದೊ ಜಗಳ ಇಬ್ಬರಿಗು. ನನ್ನನ್ನು ಒಬ್ಬರೆ ಇಟ್ಟುಕೊಳ್ಳಲು ಸಿದ್ದವಿರಲಿಲ್ಲ, ಮೂರುತಿಂಗಳು ದೊಡ್ಡವನ ಮನೆ, ಮೂರು ತಿಂಗಳಾದ ಮರುದಿನವೆ ನನ್ನ ಹಿರಿ ಸೊಸೆ ಆಟೋದಲ್ಲಿ ತಂದು ನನ್ನನ್ನು ಕಿರಿಸೊಸೆಯ ಮನೆ ಬಾಗಿಲಲ್ಲಿ ಇಳಿಸಿ ಹೋಗುತ್ತಿದ್ದಳು, ಒಳಗು ಬರುತ್ತಿರಲಿಲ್ಲ. ಇಲ್ಲಿ ಮೂರುತಿಂಗಳಾದರೆ ಮತ್ತೆ ಅದೇ ಕತೆ, ಕಿರಿಯಳು ನನ್ನನ್ನು ದೊಡ್ಡ ಸೊಸೆಯ ಮನೆಯ ಬಾಗಿಲಲ್ಲಿ ಇಳಿಸಿ ಹೋಗುವಳು. ಸೊಸೆಯರಿಬ್ಬರು ಕೆಲಸಕ್ಕೆ ಹೋಗುವರು, ಹೀಗೆ ನನ್ನನ್ನು ಕಿರಿಸೊಸೆ ಮನೆಮುಂದು ಇಳಿಸಿ ಹೋದ ದಿನ ಇವಳೇನಾದರು ಬೀಗ ಹಾಕಿ ಕೆಲಸಕ್ಕೆ ಹೋಗಿದ್ದಲ್ಲಿ ನಾನು ರಾತ್ರಿ ಏಳರ ವರೆಗು ಬೀಗ ಹಾಕಿದ ಅವಳ ಮನೆಮುಂದೆ ಕಾಯಬೇಕು. ಇದೆ ಪದ್ದತಿ. ಒಮ್ಮೆ ಹಿರಿ ಸೊಸೆ ನನ್ನನ್ನು ಕಿರಿಸೊಸೆಯ ಮನೆಮುಂದೆ ಇಳಿಸಿಹೋದಳು, ಮನೆ ಬೀಗಹಾಕಿತ್ತು, ನಾನು ಇಬ್ಬರು ಕೆಲಸಕ್ಕೆ ಹೋಗಿದ್ದಾರೆ ಎಂದು ಕಾಯುತ್ತಿದೆ, ರಾತ್ರಿಯಾದರು ಯಾರು ಬರಲಿಲ್ಲ, ಏತಕ್ಕೊ ಹೊರಬಂದ ಪಕ್ಕದಮನೆಯಾಕೆ 'ಮನೆಯಲ್ಲಿ ಯಾರು ಇಲ್ಲ, ಎಲ್ಲೊ ಟೂರ್ ಹೋಗಿದ್ದಾರೆ, ಬರುವುದು ವಾರ ಆಗುತ್ತೆ ' ಅಂದಳು ಕೀ ಕೇಳಿದರೆ ಕೊಟ್ಟಿಲ್ಲ ಅಂದಳು, ನನಗೆ ಸುಸ್ತಾಗಿತ್ತು, ದೊಡ್ಡ ಮಗನ ಮನೆಗೆ ಹೋಗಲು ನನಗೆ ದಾರಿ ತಿಳಿಯದು, ಬೆಂಗಳೂರಿನಲ್ಲಿ ಓಡಾಟ ನನಗೆ ಗೊತ್ತಿಲ್ಲ, ಅಲ್ಲದೆ ನನ್ನ ಹತ್ತಿರ ಬಿಡಿಕಾಸಿಲ್ಲ ಏನು ಮಾಡಲಿ. ರಾತ್ರಿ ಎಲ್ಲ ಗೇಟಿನ ಮುಂದೆ ಮಲಗಿದ್ದೆ. ಬೆಳಗ್ಗೆ ಏಳುವಾಗಲೆ , ಮುಂದೆ ವ್ಯಾನ್ ನಿಂತಿತ್ತು, ಯಾರೊ ಅವರಿಗೆ ಫೋನ್ ಮಾಡಿದ್ದರಂತೆ, ರಸ್ತೆಯಲ್ಲಿ ಬಿಕ್ಷುಕಿ ಮಲಗಿದ್ದಾಳೆ, ಅಂತ , ಇಲ್ಲಿಗೆ ಕರೆತಂದರು, ನನಗು ಎರಡು ದಿನ ದುಃಖವಾಯಿತು, ಹಾಗೆ ಇಲ್ಲಿಯೆ ಅಭ್ಯಾಸವಾಯಿತು. ಈಗ ಅನ್ನಿಸುತ್ತೆದೆ ನನ್ನ ಮಕ್ಕಳ ಮನೆಗಿಂತ ಇಲ್ಲಿಯೆ ಸುಖವಾಗಿದ್ದೇನೆ ಎಂದು" ಎನ್ನುತ್ತ ನಿಲ್ಲಿಸಿದಳು. ಸ್ವಲ್ಪ ಕಾಲ ಸುಮ್ಮನಿದ್ದ ಸುನಂದ "ಅಜ್ಜಿ ನಿನಗೆ ಇಲ್ಲಿ ಯಾವ ಬೇಸರವು ಇಲ್ಲವ? ನಿನ್ನ ಮಕ್ಕಳನ್ನು ಪುನಃ ನೋಡಲು ಹೋಗಲ್ಲವೆ? " ಎಂದಳು. ಅದಕ್ಕೆ ಆಕೆ "ಇಲ್ಲಮ್ಮ , ಇಲ್ಲಿ ನನಗೆಂತ ಬೇಸರ. ನಾನು ಎಲ್ಲಿದ್ದರು ಇಷ್ಟೆ, ಒಂದು ಹೊತ್ತಿನ ಊಟ, ನಂತರ ಹೇಗೊ ಕಾಲ ಕಳೆಯುವುದು ಅಲ್ಲವೆ, ಅಷ್ಟಕ್ಕು ನನ್ನ ಕರೆದುಕೊಂಡು ಹೋಗಿ ಸೇವೆಮಾಡಲು ನನ್ನ ಮಕ್ಕಳೇನು ಕಾಯುತ್ತಿಲ್ಲ. ಅವರಿಗೆ ನಾನು ಅಲ್ಲಿ ಇರದೆ ಇರುವದರಿಂದ ಆನಂದವಾಗಿಯೆ ಇರುತ್ತಾರೆ, ನಾನೀಗ ಬದುಕಿದ್ದೀನಿ ಅಂತ ತಿಳಿದರೆ , ಅವರಿಗೆ ಪೀಕಲಾಟ, ಪಾಪ ಅದೆಷ್ಟು ಸಂಕಟ ಪಡ್ತಾರೊ. ನನ್ನ ಮನಸೀಗ ನೆಮ್ಮದಿಯಾಗಿದೆ, ನಾನು ಇಲ್ಲಿ ಎಷ್ಟು ದಿನ ಇರಬೇಕೊ ಗೊತ್ತಿಲ್ಲ. ನನ್ನ ಆಯಸ್ಸು ಇರುವಷ್ಟು ದಿನ ಇರುವುದು. ಇಂದೊ ನಾಳೆಯೊ ಅಂದು ಕೊಳ್ಳುವುದು, ಮತ್ತೆ ವರ್ಷಗಟ್ಟಲೆ ಬದುಕಿದರು ಬದುಕಿದನೆ, ಆ ದೈವಕ್ಕೆ ಲೆಕ್ಕ ತಪ್ಪಿ, ನನ್ನನ್ನು ಭೂಮಿ ಇರುವವರೆಗು ಬದುಕಿರು ಅಂದು ಬಿಟ್ಟರೊ ಆಗಲು ಚಿಂತೆ ಇಲ್ಲ ಬಿಡು, ನಾನೇನು ವರ್ಷಗಳನ್ನು ದಿನಗಳನ್ನು ಎಣಿಸುತ್ತಿಲ್ಲ. ನನ್ನಲ್ಲಿ ಎಲ್ಲ ಎಣಿಕೆಗಳು ನಿಂತು ಹೋಗಿದೆ. " ಎಂದಳು ಕಡೆಗೆ ಸುನಂದ ಕೇಳಿದಳು " ಅಜ್ಜಿ ನಿನ್ನ ಹೆಸರು ಏನು?" ಅಜ್ಜಿ ಈಗ ಬೊಚ್ಚು ಬಾಯಿ ತೆರೆದು ನಕ್ಕಿತು, "ಸರಿ ಆಯ್ತು ನೋಡೀಗ, ನನ್ನ ಹೆಸರು ಕೇಳ್ತಿದ್ದಿ ಅದನ್ನ ಕೇಳಿ ಎಷ್ಟು ವರ್ಷಗಳು ಆದವೊ ನನಗೆ ಮರೆತಿದೆ, ನನ್ನ ಹೆಸರು ಸುಂದರಮ್ಮ" ಎನ್ನುತ್ತ ನಕ್ಕಳು. ಸುತ್ತಲಿದ್ದ ಎಲ್ಲರು, ಸುನಂದಳು ನಕ್ಕರು. ಅಜ್ಜಿ ಅಂದಳು " ನೋಡು ಮಗು ನನಗೆ ಅನ್ನಿಸ್ತ ಇದೆ, ನಿನಗಿದ್ದ ಕೆಟ್ಟದಿನಗಳೆಲ್ಲ ಮುಗಿದವು ಎಂದು, ನೀನು ಸಿದ್ದಳಾಗು, ಇಲ್ಲಿಂದ ಹೊರಗೆ ಹೋಗುವ ದಿನ ಬೇಗನೆ ಬರುತ್ತೆ, ಶನಿರಾಯ ನಿನ್ನ ಹೆಗಲೇರಿ ಕುಳಿರುವನು ಇಳಿತ್ತಿದ್ದಾನೆ, ಅದಕ್ಕೆ ನೋಡು ಕಾಯಿಲೆ ಕಡಿಮೆ ಆಗ್ತಿದೆ. ಎಲ್ಲ ಒಳ್ಳೆಯದಾಗುತ್ತೆ ಮಗು " ಅಂದಳು, ಸುನಂದ ಏನು ಮಾತನಾಡಲಿಲ್ಲ ಸುಮ್ಮನಿದ್ದಳು. ಅಜ್ಜಿಯ ಮಾತು ಸುಳ್ಳಾಗಲಿಲ್ಲ. ಮತ್ತೆ ಸುಮಾರು ಹದಿನೈದು ದಿನ ಕಳೆದಿರಬಹುದು. ಯುಗಾದಿ ಹಬ್ಬದ ಪ್ರಯುಕ್ತ , ಅಲ್ಲಿ ಸಣ್ಣ ಸಮಾರಂಭ ಏರ್ಪಟಿತು. ಸಮಾಜಕಲ್ಯಾಣ ಇಲಾಖೆಯ ವತಿಯಿಂದ ನಡೆದ ಸಮಾರಂಭವದು. ಅಲ್ಲಿಗೆ ಅತಿಥಿಯಾಗಿ , ಮಾಗಡಿ ರಸ್ತೆ ವಿಭಾಗದ ಕಾರ್ಪೋರೇಟರ್ ಮುಂಜುಳ ಎಂಬ ಮಹಿಳೆ ಬಂದಿದ್ದರು. ಸಮಾಜಸೇವಕಿ ಆಕೆ. ಸಮಾರಂಭ ನಡೆಯುತ್ತಿದ್ದಂತೆ, ಬಿಕ್ಷುಕರ ನಡುವೆ ಕುಳಿತಿದ್ದ ಸುನಂದ ಪಕ್ಕದಲ್ಲಿದ್ದ ಅಜ್ಜಿಗೆ ಹೇಳಿದಳು, "ಅಜ್ಜಿ ಅಲ್ಲಿ ಕುಳಿತಿರುವಾಕೆ ನನಗೆ ಗೊತ್ತು, ಒಮ್ಮೆ ಬೇಟಿ ಮಾಡಿದ್ದೆ, ಈಗ ನೋಡು ನಾನು ಇಲ್ಲಿ ಅವರು ಅಲ್ಲಿ" ಎಂದು. ತಕ್ಷಣ ಅಜ್ಜಿ ಸೂಚನೆ ಕೊಟ್ಟಳು "ಮಗು ನಿನಗೆ ಇದು ಸರಿಯಾದ ಸಮಯ, ಅವರ ಹತ್ತಿರ ಹೋಗಿ ನಿನ್ನ ಪರಿಸ್ಥಿಥಿ ತಿಳಿಸು, ನಿನಗೆ ಸಹಾಯ ದೊರಕುತ್ತದೆ, ನೀನು ಇಲ್ಲಿಂದ ಹೊರಹೋಗಿ, ನಿನ್ನ ಗಂಡ ಮಕ್ಕಳ ಜೊತೆ ಸುಖವಾಗಿ ಬದುಕು " ತಕ್ಷಣ ಸುನಂದಳಿಗೆ ಗೊತ್ತಾಯಿತು ಇದು ಸರಿಯಾದ ಸಂದರ್ಭ. ಸಮಾರಂಭದ ನಡುವೆ ಬಿಕ್ಷುಕರ ಗುಂಪಿನ ನಡುವಿನಿಂದ ಎದ್ದು ಗಂಭೀರವಾಗಿ ನಡೆಯುತ್ತ ತನ್ನತ್ತ ಬರುತ್ತಿರುವ, ಸುನಂದಳನ್ನು ಗಮನಿಸಿದರು ಮಂಜುಳ. ಅವರಿಗೆ ಅನ್ನಿಸಿತು , ಈಕೆ ಅದೇಕೊ ಬಿಕ್ಷುಕಳಂತೆ ತೋರುತ್ತಿಲ್ಲ. ಹತ್ತಿರ ಬಂದ ಸುನಂದ, ಮಂಜಳರವರತ್ತ ನೋಡುತ್ತ "ಮೇಡಮ್ ನಾನು ನಿಮ್ಮ ಜೊತೆ ಒಂದೈದು ನಿಮಿಷ ಮಾತನಾಡಬೇಕಿದೆ, ಅವಕಾಶ ಕೊಡುತ್ತೀರ" ಸ್ವಚ್ಚವಾದ ಅಂಗ್ಲಬಾಷೆಯಲ್ಲಿ ಸುನಂದ ನುಡಿದಾಗ, ಮಂಜುಳ ಬೆಪ್ಪಾದರು, ಈಕೆ ಬಿಕ್ಷುಕಿಯಲ್ಲ ಎಂದು ಆಕೆಗೆ ಮತ್ತೊಮ್ಮೆ ಅನ್ನಿಸಿತು. ಸ್ಟೇಜಿನಿಂದ ಕೆಳಗೆ ಇಳಿಯುತ್ತ "ಇಲ್ಲಿ ಬೇಡ ಅಲ್ಲಿ ಮರದ ಕೆಳಗೆ ಹೋಗೋಣ " ಎನ್ನುತ್ತ ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಮರದ ಹತ್ತಿರ ನಡೆದರು. ಸುನಂದ ನಿದಾನವಾಗಿ ತನ್ನೆಲ್ಲ ಪರಿಸ್ಥಿಥಿ ವಿವರಿಸಿ ಹೇಳಿ, ಮಂಜುಳರನ್ನು ಕುರಿತು "ಮೇಡಮ್ ನಾನು ಮೊದಲೆ ನಿಮ್ಮನ್ನು ನೋಡಿರುವೆ ನಿಮಗೆ ನೆನಪಿಲ್ಲವೆ, ನೀವು ಸಮಾಜ ಕಲ್ಯಾಣ ಇಲಾಖೆ ಕೆಲಸಕ್ಕೆ ಸಂಬಂದಪಟ್ಟಂತೆ ಒಮ್ಮೆ ನಮ್ಮ ಆಫೀಸಿಗೆ ಬಂದಿದ್ದೀರಿ, ನೀವು ಆಗ ವಿದೇಶಕ್ಕೆ ಹೋಗುವದಕ್ಕಾಗಿ ಕೆಲವು ಇಲ್ಲಿಯ ವಿಷಯ ಸಂಗ್ರಹಿಸಲು ನಮ್ಮಲಿಗೆ ಬಂದಿರಿ, ನಮ್ಮ ಬಾಸ್ ಮಹೇಶ್ ಹೇಳಿದಂತೆ ನಾನು ನಿಮಗೆ ಸಹಾಯ ಮಾಡಿದ್ದೆ" ಎಂದಳು ಮಂಜುಳರವರು ಎಲ್ಲರಂತೆ ಸಾಮಾನ್ಯ ಸಮಾಜಸೇವಕಿಯಲ್ಲ ನಿಜ್ಜಕ್ಕು ತನ್ನನ್ನೆ ಸಮರ್ಪಿಸಿಕೊಂಡಿದ್ದವರು. ಹಿಂದೊಮ್ಮೆ ಸರ್ಕಾರದ ಪರವಾಗಿ ವಿದೇಶಕ್ಕೆ ಹೋಗುವ ಸಂದರ್ಭದಲ್ಲಿಯು ಆಕೆ ವಿವಿದ ಇಲಾಖೆಗಳಿಗೆ ಸುತ್ತಿ ತನಗೆ ಬೇಕಾದ ಮಾಹಿತಿಯನ್ನೆಲ್ಲ ಪಡೆದು ಹೋಗಿದ್ದರು. ಅಲ್ಲಿಯ ಸಮಾಜದ ಅಧ್ಯಯನ ನಡೆಸುವದಕ್ಕಾಗಿ ಆಕೆ ತೆರಳಿದ್ದರು. ಆಗ ಮಂಜುಳರವರು ಸುನಂದಳನ್ನು ಸಂಪರ್ಕಿಸಿದ್ದರು. ಮಂಜುಳರಿಗೆ ತಕ್ಷಣ ಎಲ್ಲ ನೆನಪಿಗೆ ಬಂದಿತು, ಅಲ್ಲದೆ ಅವರು ಸುನಂದಳನ್ನು ಗುರುತಿಸಿದ್ದರು. ಅವರಿಗೆ ತುಂಬಾ ನೋವಾಗಿತ್ತು, ಇಲ್ಲಿಯವರು ಬಿಕ್ಷುಕಿ ಎಂದು ಸುನಂದಳನ್ನು ಇಲ್ಲಿ ತಂದಿಟ್ಟಿರುವುದು. ತಕ್ಷಣ ಆಕೆ ಬಿಕ್ಷುಕರ ಪುನರ್ವಸತಿ ಕೇಂದ್ರದ ಮುಖ್ಯಸ್ಥರನ್ನು ಕರೆದು ಮಾತನಾಡಿದರು. ಆಗಿರುವ ತಪ್ಪಿಗಾಗಿ ಪಾಪ ಆತನು ಪಶ್ಚಾತಾಪ ಪಟ್ಟರು. ಮುಂದಿನದೆಲ್ಲ ಸುನಂದಳಿಗೆ ಸುಲುಭವಾಯಿತು. ಮಂಜುಳರವರ ರೆಕಮಂಡೇಶನ್ ಮೇಲೆ ಸುನಂದಳನ್ನು ಹೊರಕಳಿಸಲು ಸುಲುಭವಾಗಿ ಅಲ್ಲಿಯವರು ಒಪ್ಪಿದರು, ಆಗ ಸುನಂದ ಮತ್ತೆ ಮಂಜುಳರವರ ಹತ್ತಿರ ಮಾತನಾಡಿ ಅಜ್ಜಿಯ ವಿಷಯ ತಿಳಿಸಿ, ಅವರನ್ನು ತನ್ನ ಜೊತೆ ಕರೆದೊಯ್ಯುವುದಾಗಿ ತಿಳಿಸಿದಳು. ಎಲ್ಲವು ಅಲ್ಲಿಯ ನಿಯಮಗಳಿಗೆ ಅನುಸಾರವಾಗಿಯೆ ನಿರ್ದಾರವಾಗಿ ಅವರಿಬ್ಬರು ಅಲ್ಲಿಂದ ಸ್ವತಂತ್ರರಾದರು, ಅಜ್ಜಿಗಂತು ಆಶ್ಚರ್ಯ, ಸುನಂದ ತನ್ನನ್ನು ಹೊರತಂದಿದ್ದು. ಈಗವಳು ಸ್ವಲ್ಪ ಚಿಂತಿತಳಾದಳು, ಇವಳು ಮತ್ತೆ ತನ್ನನ್ನು ಮಕ್ಕಳ ಮನೆಗೆ ಕಳಿಸಿದರೆ ಅಲ್ಲಿ ಹೋಗಿ ಏಗಬೇಕಲ್ಲ ಎಂದು. ***************** *********************** ಸುಮಾರು ಮೂರು ತಿಂಗಳು ಕಳೆದಿತ್ತೇನೊ. ಬಿಕ್ಷುಕರ ಪುನರ್ವಸತಿ ನಿಲಯದಿಂದ ಹೊರಬಂದ ಸುನಂದ, ಹೊಸ ವ್ಯಕ್ತಿತ್ವ ಪಡೆದವಳಾದಳು..ಒಮ್ಮೆ ಕೂಡ ತನ್ನ ಮನೆಗೆ ಹೋಗಲಿಲ್ಲ ತನ್ನ ಹಳೆಯ ಆಫೀಸಿಗು ಹೋಗಲಿಲ್ಲ. ಮಂಜುಳ ಅವಳಿಗೆ ಪೂರ್ಣ ನೆರವಾದರು. ಒಮ್ಮೆ ಇರಲಿ ಎಂದು ತಾನು ಪರೀಕ್ಷೆ ಮಾಡಿಸುತ್ತಿದ್ದ ಡಾಕ್ಟರ್ ಬಳಿ ಪರೀಕ್ಷೆ ಮಾಡಿಸಿದಳು. ಈಗ ಆಶ್ಚರ್ಯ ಪಡುವ ಸರದಿ ಡಾಕ್ಟರ್ ಅವರದಾಯಿತು. ಕಾಯಿಲೆ ಇತ್ತು ಎಂಬ ಚಿನ್ಹೆ ಸಹ ಇರದಂತೆ ಕ್ಯಾನ್ಸರ್ ವಾಸಿಯಾಗಿತ್ತು. ಅವರು ನುಡಿದರು, "ನಿಮಗೆ ಬೇಕಿದ್ದಲ್ಲಿ ಬೆಂಗಳೂರಿನಲ್ಲಿ ಇರುವ ಎಲ್ಲ ಡಾಕ್ಟರ್ ಗಳ ಬಳಿ ಬೇಕಾದರು ಮರು ಪರೀಕ್ಷೆ ಮಾಡಿಸಿ, ಖಂಡೀತ ಗುಣವಾಗಿದೆ ಇದೆಲ್ಲ ಇಷ್ಟು ಬೇಗ ಹೇಗಾಯ್ತು ಅನ್ನೋದೆ ಆಶ್ಚರ್ಯ' ಆಗ ಸುನಂದ ಅಜ್ಜಿಯ ನಾಟಿ ವೈದ್ಯದ ವಿಧಾನವನ್ನು ತಿಳಿಸಿದಳು. ಅದಕ್ಕೆ ಡಾಕ್ಟರ್ “ಹೇಗೊ ನಿಮಗೆ ಗುಣವಾಗಿದ್ದೆ ಮುಖ್ಯ, ಆದರು ನಿರ್ಲಕ್ಷ್ಯ ಬೇಡ, ಮೂರು ತಿಂಗಳಿಗೊಮ್ಮೆ ಸಂಪೂರ್ಣ ಪರೀಕ್ಷೆ ಮಾಡಿಸಿ, ಕ್ಯಾನ್ಸರ್ ಕಣಗಳ ಹರಡುವಿಕೆ ಪೂರ್ಣ ನಿಂತಿದೆಯೆ ಎಂದು ಖಚಿತಪಡಿಸಿಕೊಳ್ಳಿ, ಹಾಗೆ ನಾನು ಕೊಡುವ ಕೆಲವು ಔಷದಿಗಳನ್ನು ತೆಗೆದುಕೊಳ್ಳುತ್ತಿರಿ, ವಿಶ್ ಯೂ ಆಲ್ ದ ಬೆಷ್ಟ್ “ ಎಂದರು. ಸುನಂದಳ ವಿಷಯವೆಲ್ಲ ಒಮ್ಮೆ ಟೀವಿ ಚಾನಲ್ ನಲ್ಲಿ ವರದಿಯಾಗಿ ಬಂದಿತು. ಸುನಂದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವರ್ಗಾವಣೆ ಪಡೆದಳು . ಅಲ್ಲಿ ದುರ್ಗಿಗುಡಿ ಬಾಗದ ಒಂದು ಮನೆಯಲ್ಲಿ ಅವಳು ಹಾಗು ಅವಳ ಅಜ್ಜಿ ಸುಂದರಮ್ಮ ಇಬ್ಬರದೆ ವಾಸ. ಕೆಲವು ದಿನಗಳಾಗಿದ್ದವು. ರಾತ್ರಿ ಗಂಟೆ ಏಳಾಗಿತ್ತೇನೊ , ಬಾಗಿಲಲ್ಲಿ ಯಾರೊ ನಿಂತಂತೆ ಆಯಿತು. ತಲೆ ಎತ್ತಿ ನೋಡಿದಳು, ಮನೆಯ ಬಾಗಿಲಲ್ಲಿ ಅವಳ ಗಂಡ ನಟರಾಜ. ನಗುತ್ತ ನಿಂತಿದ್ದ. ಅವಳು ಅವನತ್ತ ನೋಡಿದಳು. "ಇದೇನು, ಸುನಂದ, ಹೀಗೆ ಮಾಡಿದೆ, ಮನೆಗೆ ಏಕೆ ಬರಲಿಲ್ಲ, ನಾವೆಲ್ಲ ಟೀವಿ ಮೂಲಕ ಸುದ್ದಿ ತಿಳಿಯಬೇಕಾಯಿತು. ನಾನಂತು ಎಷ್ಟು ಹುಡುಕಿದೆ ಗೊತ್ತಾ?. ಅದೇನು ಶಿವಮೊಗ್ಗಕ್ಕೆ ಬಂದು ಬಿಟ್ಟೆ ನನಗೆ ಅರ್ಥವಾಗಲಿಲ್ಲ. ಕಳೆದ ತಿಂಗಳು ಅನುರಾದಳ ಮದುವೆ ಸಹ ಆಯಿತು, ಎಲ್ಲರು ನಿನ್ನ ಎಷ್ಟು ಕೇಳಿದರು ಗೊತ್ತ. ನೀನು ಮಾಯವಾಗಿದ್ದು ಅಪ್ಪ ಅಮ್ಮನಿಗು ಬೇಸರವಾಯಿತು, ಅಲ್ಲದೆ ಮದುವೆ ನೀನು ಐದು ಲಕ್ಷ ಕೊಡುವೆನೆಂದಿದ್ದೆಯಲ್ಲ, ನೀನೂ ಹಾಗೆಮಾಯವಾಗಿದ್ದು ಚಿಂತೆಯಾಯಿತು, ಅಪ್ಪನು ಹೇಗೊ ಮನೆಯನ್ನು ಅಡಮಾನ ಮಾಡಿ ಹಣ ಹೊಂದಿಸಿದರು. ಈಗವರು ಸಂತಸದಿಂದ್ದಿದಾರೆ ಸೊಸೆ ಬಂದರೆ ಎಲ್ಲ ಸಾಲ ಅವಳು ತೀರಿಸಿ ಬಿಡುತ್ತಾಳೆ ಎಂದು. ನಿನ್ನ ಮಗಳು ಶಿಲ್ಪ ಕೂಡ ಅಷ್ಟೆ ಅಪ್ಪ ಟೆಸ್ಟ್ ಇಲ್ಲದಿದ್ದರೆ ನಾನೆ ಜೊತೆಗೆ ಬರುತ್ತಿದ್ದೆ, ಈಗ ಎಸ್ ಎಸ್ ಎಲ್ ಸಿ ಅಲ್ಲವ , ಇಲ್ಲಿಗೆ ಬೇಗ ಕರೆತನ್ನಿ ಎಂದಳು" ನಟರಾಜ ಮಾತನಾಡುತ್ತಲೆ ಇದ್ದ ಉತ್ಸಾಹದಿಂದ , ಸುನಂದ ಅವನ ಕಡೆ ನೋಡುತ್ತಿದ್ದಳೆ ವಿನಃ ಯಾವುದೆ ಉತ್ತರ ಕೊಡಲಿಲ್ಲ. ಕಡೆಗೆ ನುಡಿದಳು "ನೋಡಿ , ನಾನೆಂದು ಇನ್ನು ಎಲ್ಲಿಗು ಬರಲಾರೆ, ನಿಮ್ಮ ಮನೆಗು ಬರಲಾರೆ, ಸುಮ್ಮನೆ ಏಕೆ ಮಾತು" ಎಂದಳು ತಣ್ಣಗೆ. ಅವಳ ಪಕ್ಕದಲ್ಲಿ ಅಜ್ಜಿ ಸ್ವಲ್ಪ ಗಾಭರಿಯಿಂದ ನಿಂತು ನೋಡುತ್ತಿದ್ದಳು. "ಅದೆಂತದು ಬರಲ್ಲ ಅನ್ನಲು ನಾವು ಅಂತದು ಏನು ಮಾಡಿದ್ದೇವೆ, ನಾವೇನು ಡೈವರ್ಸ್ ಪಡೆದಿರುವ ಗಂಡ ಹೆಂಡತಿಯೆ ಬೇರೆ ಬೇರೆ ಇರಲು, ಈಕೆ ಯಾರು ಇವಳ ಜೊತೆ ಏಕಿದ್ದೀಯ. ಮನೆಗೆ ನಡೆ" ಎಂದ. ಸ್ವಲ ಕೋಪದಲ್ಲಿ. ಅದಕ್ಕವಳು "ನಿಮಗೆ ಬೇಕಾದಲ್ಲಿ ಡೈವರ್ಸ್ ಪೇಪರ್ ಕಳಿಸಿ ಸಹಿ ಮಾಡಿಕೊಡುತ್ತೇನೆ, ಆದರೆ ನನಗೆ ಯಾವ ಅಗತ್ಯವು ಇಲ್ಲ, ನನಗೆ ಯಾವ ಸಂಭಂದವು ಬೇಡ. ನಾನು ಹೀಗೆ ಇರುವವಳೆ. ಈಕೆ ಬಿಕ್ಷುಕರ ಕಾಲನಿಯಲ್ಲಿ ನನ್ನ ಜೊತೆಗಿದ್ದ ಅಜ್ಜಿ, ಮುಂದೆ ನನ್ನ ಜೊತೆಗೆ ಇರುತ್ತಾಳೆ. ಈಗ ಸಮಯವಾಯಿತು ಹೊರಡಿ" ಎಂದಳು. ನಟರಾಜ ಏನೇನೊ ಮಾತನಾಡಿದ ಆದರೆ ಅವಳು ಮೌನವಾಗಿ ನಿಂತಳೆ ಹೊರತು ಯಾವ ಮಾತು ಆಡಲಿಲ್ಲ. ಕಡೆಗೆ ನಟರಾಜನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವನು ಕೂಗಾಡುತ್ತಲೆ ಇದ್ದ. ಸುನಂದ ಮಾತ್ರ ಯಾವ ಮಾತು ಕೇಳದವಳಂತೆ, ಟೀವಿಯ ಕಡೆ ನೋಡುತ್ತಿದ್ದವಳು "ಅಜ್ಜಿ ಊಟಕ್ಕೆ ಸಮಯವಾಯಿತು, ನನಗಂತು ಹಸಿವು, ಬೇಗ ಏಳು ಊಟಮಾಡೋಣ" ಎಂದಳು, ನಟರಾಜ ಅಲ್ಲಿರುವದನ್ನು ಉಪೇಕ್ಷಿಸಿ. ಅವನಿಗೆ ಏನು ತೋಚದಂತೆ ಆಗಿ ಅಲ್ಲಿಂದ ಹೊರಟು ಹೋದ. ಆಗ ಅಜ್ಜಿಯು "ಸುನಂದ ಏನಮ್ಮ ಇದೆಲ್ಲ, ನಾನು ಎಷ್ಟು ದಿನ ನಿನ್ನ ಜೊತೆಗಿರ್ತೀನಿ, ವಯಸ್ಸಾದ ಕಾಲಕ್ಕೆ ಗಂಡ ಮಕ್ಕಳು ಎಲ್ಲ ಇರಬೇಕಮ್ಮ, ನೀನು ತಪ್ಪು ಮಾಡ್ತೀದ್ದೀಯ ಅನ್ಸುತ್ತೆ ಅಂದಳು" ಸುನಂದ ಜೋರಾಗಿ ನಗುತ್ತಿದ್ದಳು "ಅಜ್ಜಿ , ನಿನಗೆ ನಿನ್ನ ಮಕ್ಕಳಿಂದ ಇಷ್ಟು ಅನುಭವವಾದ ಮೇಲು, ನನ್ನ ಪಾಡು ನೋಡಿದ ಮೇಲು ಈ ಮಾತು ಆಡ್ತಿದ್ದೀಯಲ್ಲ, ನಿನಗೆ ಗೊತ್ತಾಗಲ್ಲ ಸುಮ್ಮನಿರು. ನೀನೆನು ಚಿಂತಿಸಬೇಡ, ತಿಳಿದುಕೊ, ಒಮ್ಮೆ ನಾನೆ ಏನಾದರು ಮೊದಲು ಸತ್ತರೆ ನಿನಗೆ ಮುಂದೆ ಏನು ತೊಂದರೆ ಯಾಗದಂತೆ ಎಲ್ಲ ಏರ್ಪಾಡು ಮಾಡಿ ಸಾಯುತ್ತೇನೆ, ನೀನೆ ಮೊದಲು ಸತ್ತರೆ ಆಗ ನಿನ್ನಂತದೆ ಮತ್ತೊಂದು ಅಜ್ಜಿಯನ್ನು ಎಲ್ಲಿಯಾದರು ಹುಡುಕಿ ತಂದಿಟ್ಟು ಕೊಳ್ಳುತ್ತೇನೆ ಅಷ್ಟೆ. ಮತ್ತೆ ನನಗೆ ಯಾವ ಸಂಭಂದವು ಬೇಡ , ನಾನು ಹೀಗೆ ಇರುವವಳೆ" ಎಂದಳು ನಗುತ್ತ, ಅಜ್ಜಿಗೆ ಅವಳ ಮಾತು ಎಷ್ಟು ಅರ್ಥವಾಯಿತೊ , ಸುಮ್ಮನಾದಳು. ಸುನಂದ ತನ್ನ ಗಂಡ ಹೋದ ನಂತರ ಹೊರಗಿನ ಬಾಗಿಲು ಭದ್ರ ಪಡಿಸಲು ಬಂದವಳು ನಿಂತು ನೋಡಿದಳು , ಅದು ಕಾರ್ತೀಕದ ರಾತ್ರಿ , ಬಾಗಿಲಿನ ಎರಡು ಪಕ್ಕದಲ್ಲಿ ಅಜ್ಜಿ ಹಚ್ಚಿಟ್ಟ ಸೊಡರಿನ ದೀಪ , ಸಣ್ಣಗೆ ಮಿನುಗುತ್ತಿತ್ತು.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (8 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಂಪದಿಗರಿಗೆ ಸುನಂದ ಕತೆಯನ್ನು ಎರಡನೆ ಬಾಗದಲ್ಲಿ ಮುಗಿಸಿದ್ದೇನೆ. ಮೊದಲ ಬಾಗಕ್ಕೆ ಹೋಲಿಸಿದರೆ ಎರಡನೆ ಬಾಗ ಸ್ವಲ್ಪ ಸಿನಿಮೀಯ ಅನಿಸಬಹುದು ಆದರೆ ಅದು ಉತ್ತಮ ಅಂತ್ಯ ಎಂದು ನನಗೆ ಅನ್ನಿಸಿತು. ಮೊದಲ ಬಾಗ ಓದುವಾಗ ಕೆಲವರಾದರು ಸುನಂದಳಲ್ಲಿ ತಮಗೆ ಬೇಕಾದ ಯಾರನ್ನೊ ಕಂಡು ಮರುಗಿದರು. ಈ ಕತೆಯನ್ನು ಓದಿದ ನಂತರ ಕ್ಯಾನ್ಸರ್ ನಂತ ಬೀಕರವಾದ ಕಾಯಿಲೆಯಿಂದ ನರಳುತ್ತಿರುವವರಿಗೆ ದೈರ್ಯ ತುಂಬಬೇಕೆನಿಸಿದರೆ, ಅಷ್ಟರ ಮಟ್ಟಿಗೆ ನನ್ನ ಕತೆ ಯಶಸ್ವಿ ಎಂದೆ ತಿಳಿಯುತ್ತೇನೆ. ಈ ಕತೆಯಲ್ಲಿ ಬರುವ ಮುದುಕಿಯ ಪಾತ್ರವನ್ನು ಒಮ್ಮೆ ನಿಜವಾಗಿ ಕಂಡಿದ್ದೆ, ಎರಡ್ನೆ ಮಗ ಸೊಸೆ ಕೆಲಸಕ್ಕೆ ಹೋದನಂತರ ಮೊದಲನೆ ಮಗನ ಮನೆಯಿಂದ ಬರುತ್ತಿದ್ದ ಆಕೆ ಬಾಗಿಲಲ್ಲಿ ರಾತ್ರಿಯವರೆಗು ಕುಳಿತಿರುತ್ತಿದ್ದರು, ಸಂಜೆ ಮನೆಗೆ ಬಂದ ಆಕೆಯ ಸೊಸೆ ಆಕೆಯನ್ನು ಶಾಪ ಹಾಕುತ್ತಲೆ ಬೀಗ ತೆಗೆಯುತ್ತಿದ್ದರು. ನಮ್ಮ ತಾಯಿ ಎಷ್ಟೊ ಬಾರಿ ಆಕೆಯನ್ನು ಕರೆದು ಕಾಫಿ ತಿಂಡಿ ಕೊಟ್ಟಿದ್ದು ಇದೆ. ಆಕೆಗೆ ಎರಡು ಕಣ್ಣುಗಳ ಮಂಜಾಗಿದ್ದವು.ಈಗ ಆಕೆ ಎಲ್ಲಿದ್ದಾರೆ ಬದುಕಿದ್ದಾರೊ ಇಲ್ಲವೊ ತಿಳಿದಿಲ್ಲ. ಇಂದಿನಿಂದ ಮೂರು ದಿನ ಸಂಪದದ ಕಡೆ ತಲೆಹಾಕುವಂತಿಲ್ಲ ಊರಿಗೆ ಹೊರಟಿದ್ದೇನೆ ! ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ- ಜೀ ಅವರು ಹೇಳಿದ ಹಾಗೆ- ಸಿನಿಮೀಯ ಆದರೂ ಅಂತ್ಯ ಸುಖಾಂತ್ಯವೇ ಸೈ... ೨ ಭಾಗಗಳಲ್ಲಿ ಬಂದರೂ ಬಹು ದಿನಗಳವರೆಗೆ ಕಾಡುವ ಬರಹ... ನೀವು ನನ್ನ ಮೊದಲ ಭಾಗದ ಪ್ರತಿಕ್ರಿಯೆಗೆ ಫೆಸ್ಬುಕ್‌ಲ್ಲಿ ಮರು ಪ್ರತಿಕ್ರಿಯಿಸಿದ್ದು ನೋಡಿದೆ.. ಆದ್ಕಾಗಿ ಈಗ ಮೊದಲ ಮತ್ತು ಕೊನೆಯ ಭಾಗವನ್ನು ಕಲ್ಪಿಸಿಕೊಂಡು ಓದಿದೆ ಕೊಂಚ ಕಸ್ಟ ಆಯ್ತು.... ಒಳ್ಳೆಯದ್ದು ಚೆನ್ನಾಗಿರುವುದು ಒಪ್ಪಿಕೊಳ್ಳುವ ,ಕಲ್ಪ್ಸಿಕೊಳ್ಳುವ ಮನಸ್ಸು ಈ ತರಹದ್ದನ್ನು ಕಲ್ಪ್ಸಿಕೊಳ್ಳಲು ಹಿಂದೇಟು ಹಾಕುವುದು... ಕೊನೆಯಲ್ಲಿ ನೀವ್ ೩ ದಿನಗಳವೆರೆಗೆ ಸಂಪದದಲ್ಲಿ ಕಾಣಿಸುವುದು ಇಲ್ಲ, ಊರಿಗೆ ಹೊರಟಿರುವುದಾಗಿ ಹೇಳಿರುವಿರಿ... ************ಶುಭ ಮತ್ತು ಸುರಕ್ಸ್ಚಿತ ಪ್ರಯಾಣ ನಿಮ್ಮದಾಗಲಿ*************** ಶುಭವಾಗಲಿ... \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಮೆಚ್ಚುಗೆಗೆ ವಂದನೆಗಳು ವೆಂಕಟೇಶ್ ಬರಹಗಳನ್ನು ಪೇಸ್ ಬುಕ್ ನಲ್ಲಿ ಲಿಂಕ್ ಕೊಡಲು ಬರಹದ ಕೊನೆಯಲ್ಲಿ ತಳದಲ್ಲಿ ಎಡಬಾಗದಲ್ಲಿರುವ f ಅಕ್ಷರವನ್ನು ಪ್ರೆಸ್ ಮಾಡಿ, ಇಲ್ಲ ಬರಹದ URL ಕಾಪಿ ಮಾಡಿ ಫೇಸ್ ಬುಕ್ ನಲ್ಲಿ ಸ್ಟೇಟಸ್ ನಲ್ಲಿ ಪೇಸ್ಟ್ ಮಾಡಿ ಅಷ್ಟೆ :)) ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೆ- ಸಂಪದದಲ್ಲಿ ಬರಹಗಳ ಕೆಳಗೆ ನಾ ನೀವ್ ಹೇಳಿದ ಆ ಎಲ್ಲವನ್ನು ಗಮನಿಸಿದ್ದೆ ಆದರೆ ಆ ಬಗ್ಗೆ ಆಸ್ಟಾಗಿ ಯೋಚಿಸಿರಲಿಲ್ಲ... ನಿಮ್ಮ ಫೆಸ್ಬುಕ್‌ಣಲ್ಲಿ ನಿಮ್ಮ ಬರಹಗಳನ್ನು ನೋಡಿ ನನಗೆ ಆ ಬಗ್ಗೆ ವಿಚಾರಿಸಬೇಕು ಅನ್ನಿಸಿತು... ತಿಳಿಸಿದ್ದಕ್ಕಾಗಿ ಅನಂತ ಧನ್ಯವಾದಗಳು.... ಈಗ ನನ್ನ ಗೆಳೆಯರು ನನ್ನೆಲ್ಲ ಬರಹಗಳನ್ನು ಓದಬಹುದು... ಆದರೆ ಕೆಲವನ್ನು ಮಾತ್ರ ಹಾಕುವೆ.... ಶುಭವಾಗಲಿ... \|/'
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿ ಯವರಿಗೆ ವಂದನೆಗಳು ' ಸುನಂದ ' ಕಥೆಯ ಕೊನೆಯ ಭಾಗ ಮತ್ತು ನೀವು ಅದಕ್ಕೆ ಬರೆದ ಟಿಪ್ಪಣೆಯನ್ನು ಓದಿದೆ, ಕಥೆಯ ಅಂತ್ಯ ಪರಿಣಾಮಕಾರಿಯಾಗಿ ಬಂದಿದೆ, ಸುನಂದಳ ಧೈರ್ಯ ಮೆಚ್ಚ ಬೇಕಾದ್ದೆ, ಏನೇ ಆದರೂ ಅವಳ ವೈಯಕ್ತಿಕ ಅಭಿಪ್ರಾಯಗಳು ಏನೇ ಇದ್ದರೂ ಅವಳು ಅಜ್ಜಿಯನ್ನು ಕರೆದುಕೊಂಡು ನಟರಾಜನ ಜೊತೆ ಹೋಗ ಬೇಕಿತ್ತು ಎನಿಸುತ್ತೆ ( ನನ್ನದು ಸಾಂಪ್ರದಾಯಿಕ ವಿಚಾರಧಾರೆ ಎನಿಸಿದರೂ ) ಬಹಳ ಕಾಲ ನೆನಪಿನಲ್ಲುಳಿಯುವ ಕಥಾನಕ. ಉತ್ತಮ ಕಥಾನಕ ನೀಡಿದ್ದೀರಿ ನಿಮಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಟಿಲರೆ ಕತೆಯ ಕೊನೆಯಲ್ಲಿ ಇಂತ ದ್ವಂದ್ವ ನನ್ನನ್ನು ಕಾಡಿತು, ಅದಕ್ಕಾಗಿಯೆ ಅಜ್ಜಿಯ ಕೈಲಿ ನಿಮ್ಮ ಮಾತನ್ನು ಹೇಳಿಸಿದೆ. ಆದರೆ ಸುನಂದಳಿಗೆ ಇಲ್ಲಿ ಇರುವುದು ಗಂಡನ ಮೇಲಿನ ಕೋಪ ಮಾತ್ರವಲ್ಲಿ, ತನ್ನ ಕಷ್ಟದ ಪರಿಸ್ಥಿಥಿಯಲ್ಲಿ ಸಮಾಜ ತನ್ನೊಂದಿಗೆ ವ್ಯವಹರಿಸಿದ ರೀತಿಯ ಬಗ್ಗೆ ಜಿಗುಪ್ಸೆ, ಗಂಡನು ಅವಳ ಸಮಾಜದ ಒಂದು ಬಾಗ ಅಷ್ಟೆ. ಹಾಗಾಗಿ ಅವಳು ತನ್ನ ಎಲ್ಲ ಸಂಬಂದಗಳನ್ನು ಸ್ನೇಹಗಳನ್ನು ತೊರೆದು ಹೋಗುತ್ತಿದ್ದಾಳೆ. ಪ್ರೀತಿಗೆ ವಿಶ್ವಾಸಕ್ಕೆ ಶರಣು ಎನ್ನುತ್ತ , ಸಮಾಜದಿಂದ ತ್ಯಜಿಸಲ್ಪಟ್ತ ಅಜ್ಜಿಯ ಜೊತೆ ಇರಲು ನಿರ್ದರಿಸಿದ್ದಾಳೆ. ಅವಳು ಸಂಪ್ರದಾಯಗಳನ್ನು ದಿಕ್ಕರಿಸುತ್ತಿಲ್ಲ, ಎಲ್ಲ ಸಂಬಂದಗಳನ್ನು ನಿರಾಕರಿಸಿದ್ದಾಳೆ. ಅದು ಅವಳ ಮನಸಿನ ಸ್ಥಿಥಿ ಅಷ್ಟೆ. ಆಕೆ ಸಂತಸದಿಂದಲೆ ಇದ್ದಾಳೆ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಅವರೇ ಕಥೆ ಚೆನ್ನಾಗಿ ಮೂಡಿ ಬಂದಿದೆ, ಪಾತ್ರ ಪರಿಚಯ ನಿರೂಪಣೆ ಎಲ್ಲವು ಅದ್ಭುತ. ಇನ್ನೊಂದು ನೆನಪಿನಲ್ಲಿ ಉಳಿಯುವ ಕಥೆ ಕೊಟ್ಟ ನಿಮಗೆ ವಂದನೆಗಳು. ನಿಮ್ಮಿಂದ ಇನ್ನು ಉತ್ತಮ ಕಥೆ ಕಾದಂಬರಿಗಳು ಬರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮೆಚ್ಚುಗೆವೆ ವಂದನೆಗಳು ಕಾಮತ್ ಕುಂಬ್ಳೆಯವರೆ . ನಿಮ್ಮೆಲ್ಲರ ಪ್ರೋತ್ಸಾಹವಿದ್ದರೆ ಮತ್ತಷ್ಟು ಬರೆದೇನು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸರ್, ಕತೆ ಸಿನಿಮೀಯವನಿಸಿದರೂ ಪರವಾಗಿಲ್ಲ ಅದಕ್ಕೊಂದು ಸುಖಾಂತ್ಯವನ್ನು ಒದಗಿಸಿದ್ದೀರ. (ಕ್ಯಾನ್ಸರಿಗೆ ನಾಟಿ ಔಷಧಿ ಇದೆ. ಅದು ಎಲ್ಲರಿಗೂ ಕೆಲಸ ಮಾಡಬೇಕಷ್ಟೇ. ನೀವು ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರಿನ ಬಗ್ಗೆ ಬರೆದ ಬರಹದ ಪ್ರತಿಕ್ರಿಯೆಯಲ್ಲಿ ಕ್ಯಾನ್ಸರಿಗೆ ಚಿಕಿತ್ಸೆ ನೀಡುವ ಶಿವಮೊಗ್ಗದ ವೈದ್ಯ ನಾರಾಯಣ ಮೂರ್ತಿಯವರ ಬಗೆಗಿನ ಕೊಂಡಿ ಕೊಟ್ಟಿದ್ದೇನೆ ನೋಡಿ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಧರ್ ಸರ್ ನಿಮ್ಮ ಮೆಚ್ಚುಗೆಗೆ ವಂದನೆಗಳು, ಮೊದಲ ಬಾಗದ ನಿಮ್ಮ ಲಿಂಕ್ ಓದಿದ್ದೆ. ನನ್ನ ಕತೆಯಲ್ಲಿ ಅದರ ಪ್ರಭಾವವು ಇದೆ :)) ಕೊನೆಯಲ್ಲಿ ಕಾಮತ್ ರವರು ಶ್ರೀ ನಾರಯಣ ಮೂರ್ತಿಯವರ ವಿಳಾಸ ಸಹ ಕೊಟ್ಟಿದ್ದಾರೆ ನೋಡಿ. ಯಾರಿಗಾದರು ಉಪಯೋಗವಾದರು ಆದೀತು ನಿಮ್ಮ ಮೆಚ್ಚುಗೆಗೆ ವಂದನೆಗಳನ್ನು ಅರ್ಪಿಸುತ್ತ ನಿಮ್ಮ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ, ಕತೆ ಸುಖಾಂತ್ಯವಾಗುವುದು ಎಂದು ನಿಮ್ಮ ಮೊದಲಿನ ಭಾಗದ ಪ್ರತಿಕ್ರಿಯೆಗಳಿಂದ ಗೊತ್ತಾಗಿತ್ತು. ಏನಿರಬಹುದೆಂದು ಆಲೋಚಿಸುತ್ತಿದ್ದೆ. ಜೈಲಲ್ಲಿ ಮುದುಕಿ ಎಂಟ್ರಿ-ನಾಟಿ ಔಷಧಿ-ಖಾಯಿಲೆ ಗುಣ...ಕತೆ ಸೂಪರ್. ಕೊನೆಯಲ್ಲಿ ಗಂಡನೊಂದಿಗೆ ಹೋಗದಿದ್ದದ್ದು ನನ್ನ ಪ್ರಕಾರ ಸರಿ ನಿರ್ಧಾರ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ > ಕೊನೆಯಲ್ಲಿ ಗಂಡನೊಂದಿಗೆ ಹೋಗದಿದ್ದದ್ದು ನನ್ನ ಪ್ರಕಾರ ಸರಿ ನಿರ್ಧಾರ ಸುನಂದಳ ನಿರ್ದಾರವನ್ನು ನೀವು ಸಹ ಅನುಮೋದಿಸಿದ್ದಕ್ಕೆ ನನ್ನ ವಂದನೆಗಳು ಇಲ್ಲಿ ಆಕೆ ಗಂಡನನ್ನು ನಿರಾಕರಿಸುತ್ತ ಎಲ್ಲ ಸಂಬಂದಗಳಿಂದ ದೂರಹೋಗುತ್ತಿದ್ದಾಳೆ, ಅದು ಅವಳ ಮನಸಿನಿ ಸ್ಥಿಥಿ. ವಂದನೆಗಳೊಡನೆ ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೈಲಲ್ಲಿ ಮುದುಕಿ ಎಂಟ್ರಿ-ನಾಟಿ ಔಷಧಿ-ಖಾಯಿಲೆ ಗುಣ ಗಣೇಶರೆ ನನ್ನ ಕನ್ ಫ್ಯೂಸ್ ಮಾಡಿಬಿಟ್ರಿ, ಜೈಲು ಎಲ್ಲಿಯದು ಎಂದು ನಾನು ಯೋಚಿಸುತ್ತಿದೆ. ಸುನಂದಳಿಗೆ ಅಜ್ಜಿ ಸಿಕ್ಕಿದ್ದು ಜೈಲಿನಲ್ಲಿ ಅಲ್ಲ ಬಿಕ್ಷುಕರ ಪುನರ್ ವಸತಿ ಕೇಂದ್ರದಲ್ಲಿ .. ಒಂದು ರೀತಿ ಜೈಲೆ ಬಿಡಿ ನಿಮ್ಮ ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆ ಚೆನ್ನಾಗಿ ಮೂಡಿಬಂದಿದೆ ಪಾರ್ಥವ್ರೆ. ತುಂಬಾ ಸಿನಿಮೀಯ ಏನೂ ಅನ್ಸಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಚಿಕ್ಕು, ಎರಡು ದಿನ ನಿಮ್ಮ ಮಲೆನಾಡಿನ ಸೊಭಗನ್ನುನೋಡುವ ಲಾಭವಿತ್ತು, ಹಾಗೆ ಬೆಂಗಳೂರಿನಲ್ಲಿ ಇಲ್ಲದ ಮಳೆಯನ್ನು ಅಲ್ಲಿ ಕಂಡೆ ‍ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾರಣಾಂತಕ ಕ್ಯಾನ್ಸರ್ ನಿಂದ ಬದುಕುಳಿಯುವ ಆಸೆ ಕಡಿಮೆ ಇದ್ದರೂ ಕಡೆಯ ಪ್ರಯತ್ನ ವಾಗಿ ಆಯುರ್ವೇದ ಔಷದ ಹುಡುಕಿ ಕೊಂಡು ಹೋಗುವುದು ,ಮುಳುಗವನಿಗೆ ಹುಲ್ಲುಕಡ್ಡಿಯ ಆಸರೆ ಸಿಕ್ಕಹಾಗೆ. ಶ್ರೀಧರ ಬಂಡ್ರಿ ಯವರು ತಿಳಿಸಿದ ನಾರಾಯಣಮೂರ್ತಿ ಯವರು ಸುಮಾರು ನಲವತ್ತು ವರುಷಗಳಿಂದ ವಿವಿದ ಕಾಯಿಲೆಗಳಿಗೆ ಆಯುರ್ವೇದ ಔಷದವನ್ನು ಯಾವ ಪ್ರತಿಫಲಾಪೆಕ್ಷೆ ಪಡೆಯದೆ ನಿರಂತರವಾಗಿ ಪ್ರತಿ ಗುರುವಾರ ಮತ್ತು ಪ್ರತಿ ಭಾನುವಾರ ನೀಡುತ್ತಾ ಬಂದಿದ್ದಾರೆ. ಪಾನ್ ಕ್ರಿಯಾಟಿಕ್ ಕ್ಯಾನ್ಸರ್ ಗಾಗಿ ನನ್ನ ಹತ್ತಿರದ ಸಂಬಂಧಿ ಮಹಿಳೆಗೆ ನಾನು ಶ್ರೀ ನಾರಾಯಣಮೂರ್ತಿ ಯವರಿಂದ ಸೂಮಾರು ಒಂದು ವರ್ಷದ ವರೆಗೆ ಔಷದವನ್ನು ತಂದು ಕೊಟ್ಟಿದ್ದೇನೆ. ತೀರ ಪ್ರಾರಂಭ ಹಂತ ದಿಂದ ಔಷದ ನಿಡುತ್ತಾ ಬಂದಿದ್ದರೆ ಗುಣಮುಖರಾಗುತ್ತಿದ್ದರೊ ಎನೋ. ವಿಧಿ ಬರಹ,ಉಳಿಸಿ ಕೊಳ್ಳಲಾಗಲಿಲ್ಲಾ. ನಾರಯಣಮೂರ್ತಿ ಅವರ ವಿಳಾಸ: ಎನ್. ಎಸ್. ನಾರಾಯಣಮೂರ್ತಿ, ನರಸೀಪುರ, ಗೌತಮಪುರ ಅಂಚೆ ಸಾಗರ ತಾ|, ಶಿವಮೊಗ್ಗ ಜಿಲ್ಲೆ ಫೊನ್:08183 258033 ವಂದನೆಗಳು ಪಾರ್ಥ ಸಾರಥಿ ಅವರೆ,ಒಳ್ಳಯ ಮಾಹಿತಿಪೂರ್ಣ ಲೇಖನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಕಾಮತ್ ರವರೆ ನೀವು ಅದಂತೆ, ಸಾಕಷ್ಟು ಬಾರಿ ಅಲೋಪಥಿಯಲಿ ಗುಣಕಾಣದ ಕಾಯಿಲೆಗಳು ಹೋಮಿಯೋಪಥಿ, ಹಾಗು ಸಾಂಪ್ರದಾಯಿಕ ರೀತಿಯ ನಾಟಿ ಔಷದಿಗಳಿಂದ ವಾಸಿಯಾಗುತ್ತವೆ ನೀವು ನಾರಯಣಮೂರ್ತಿಯವರ ವಿಳಾಸ ಕೊಟ್ಟು ಎಲ್ಲರಿಗು ಸಹಾಯ ಮಾಡಿರುವಿರಿ, ಅಗತ್ಯವಿರುವರಿಗೆ ನೆರವಾದೀತು, ನಿಮಗೆ ಸಾದ್ಯವಾದಗ ಅಲ್ಲಿಯ ಅನುಭವ ಹಾಗು ವಿಚಾರಗಳ ಬಗ್ಗೆ ಒಂದು ಲೇಖನ ಬರೆಯಿರಿ, ಹಲವು ಗುಣಕಾಣದ ಕಾಯಿಲೆಗಳಿಗೆ ಅಲ್ಲಿ ಪರಿಹಾರ ದೊರೆತೀತು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಥೆಯ ಅಂತ್ಯ ತುಂಬಾ ಚೆನ್ನಾಗಿದೆ ಪಾರ್ಥಸಾರಥಿ ಅವ್ರೆ....:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಹರೀಶ್ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುನಂದ ತನ್ನ ಗಂಡ ಹೋದ ನಂತರ ಹೊರಗಿನ ಬಾಗಿಲು ಭದ್ರ ಪಡಿಸಲು ಬಂದವಳು ನಿಂತು ನೋಡಿದಳು , ಅದು ಕಾರ್ತೀಕದ ರಾತ್ರಿ , ಬಾಗಿಲಿನ ಎರಡು ಪಕ್ಕದಲ್ಲಿ ಅಜ್ಜಿ ಹಚ್ಚಿಟ್ಟ ಸೊಡರಿನ ದೀಪ , ಸಣ್ಣಗೆ ಮಿನುಗುತ್ತಿತ್ತು.ನಿಜವಾಗಿಯೂ ಸುನಂದಳಿಗೆ ಪುನರ್ಜನ್ಮವೇ. ಅವಳ ಬದುಕಿನ ಕತ್ತಲೆ ಕಳೆದು ಬೆಳಕು ಮೂಡಿದ ರಾತ್ರಿ . ಸುಂದರ ಕಥೆ.ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಮಲ ಬೆಳಗೂರು ತಮ್ಮ ಪ್ರತಿಕ್ರಿಯೆ ಹಾಗು ಮೆಚ್ಚುಗೆಗೆ ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.