ಸಾಲಕ್ಕೆ ಹೋಗವ್ನೆ ಮಳೆರಾಯ

0

 

 

 

 ಸಾಲಕ್ಕೆ ಹೋಗವ್ನೆ ಮಳೆರಾಯ

 
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.
ಬಾರಯ್ಯ ಮಳೆರಾಯ ನೀ ಬಂದ್ ಹುಯ್ಯೊ ದೇವೇಂದ್ರ
 
 
ಮಳೆಹೋಯ್ತು ಅಂತ ಮಳೆರಾಯ್ನ ಬೈಬೇಡ
ಒಕ್ಕಳ ಹೊನ್ನ ಸೆರಗೇಲಿ - ಕಟ್ಟಿಕೊಂಡು
ಸಾಲಕ್ಕೆ ಹೋಗವ್ನೆ ಮಳೆರಾಯ
 
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.
ಬಾರಯ್ಯ ಮಳೆರಾಯ ನೀ ಬಂದ್ ಹುಯ್ಯೊ ದೇವೇಂದ್ರ
 
ಅಂಬು ಕೊಡುವವನೆ ಗೊಂಬೆ ಹಚ್ಚಡದವನೆ
ರಂಬೆ ತೊಡೆಮ್ಯಾಲೆ ಮಲಗಿರುವ - ಮಳೆದೇವ
ಅಂಬಾರದಿಂದ ಕರುಣಿಸೋ
 
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ. 
ಬಾರಯ್ಯ ಮಳೆರಾಯ ನೀ ಬಂದ್ ಹುಯ್ಯೊ ದೇವೇಂದ್ರ
 
  
ಊರಿಗೆ ಮಳೆಊದೋ ಏರ್‌ಕಟ್ಟು ತಮ್ಮಯ್ಯ
ಊರು ಮುಂದಿರುವ ಬಸವಣ್ಣಗೆ - ಕೈಮುಗಿದು
ಏರ್‌ಕಟ್ಟೊ ಮುದ್ದುಮುಖದವನೆ
 
ಹುಯ್ಯೋ ಹೊಯ್ಯೋ ಮಳೆರಾಯ ಹೋವಿನ ತೋಟಕೆ ನೀರಿಲ್ಲ
ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ.
ಬಾರಯ್ಯ ಮಳೆರಾಯ ನೀ ಬಂದ್ ಹುಯ್ಯೊ ದೇವೇಂದ್ರ
 
----------------------------------------------------------------
 
ಚಿಕ್ಕ ವಯಸ್ಸಿನಲ್ಲಿ ಹಾಡುತ್ತಿದ್ದ , ಕೇಳುತ್ತಿದ್ದ ಈ ಹಾಡು ನೆನಪಿಗೆ ಬಂದು ಹುಡುಕಿದೆ. ಇದೊಂದು ಜನಪದ ಹಾಡು.
ಕಡೆಗು ಸಿಕ್ಕಿತು ಇಲ್ಲಿ
 
 
ಹಾಗೆ ಚಿತ್ರದ ಮೂಲ ಇಲ್ಲಿದೆ
 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಾರ್ಥ ಸರ್, ಮಳೆಗಾಗಿ ಪರಿತಪಿಸುತ್ತಿರುವ ಈ ದಿನಗಳಲ್ಲಿ ಮಳೆಯ ಬಗೆಗಿನ ಈ ಕವನ ಮುದನೀಡಿತು. ನಾನೂ ಚಿಕ್ಕವನಿದ್ದಾಗ ಹಾಡೊಂದನ್ನು ಕೇಳಿದ್ದೆ. ಅದರ ಸರಿಯಾದ ಪಾಠ ನೆನಪಿಲ್ಲ; ಆದರೂ ಅಂದಾಜಿನ ಮೇಲೆ ಕೆಳಗೆ ಕೊಡುತ್ತಿದ್ದೇನೆ. ನಿಮಗೆಲ್ಲಿಯಾದರೂ ಈ ಪದ್ಯದ ಪೂರ್ಣ ಪಾಠ ಸಿಕ್ಕರೆ ಕೊಡಿ. ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದದ್ದು ನೋಡಿ, ಅಲ್ಲಲ್ಲಿ ಗರಿಕೆ ಚಿಗುರು ಹುಟ್ಟಿತಣ್ಣ. ಅಲ್ಲಲ್ಲಿ ಗರಿಕೆ ಚಿಗುರು ಹುಟ್ಟಿದ್ದು ನೋಡಿ ಬೀರಣ್ಣ ಕುರಿಯನ್ನು ಹೊಡೆದನಣ್ಣ, ಬೀರಣ್ಣ ಕುರಿಯನ್ನು ಮೇಯಲೆಂದು ಹೊಡೆದನಣ್ಣ. ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದದ್ದು ನೋಡಿ, ಅಲ್ಲಲ್ಲಿ ಗರಿಕೆ ಚಿಗುರು ಹುಟ್ಟಿತಣ್ಣ. ಬೀರಣ್ಣ ಕುರಿಯನ್ನು ಬಿಟ್ಟದ್ದು ನೋಡಿ, ಬೀರಣ್ಣ ಕುರಿಯನ್ನು ಬಿಟ್ಟದ್ದು ನೋಡಿ, ತೋಳಣ್ಣ ತಿನ್ನಲೆಂದು ಬಂದನಣ್ಣ, ತೋಳಣ್ಣ ಕುರಿಯನ್ನು ತಿನ್ನಲೆಂದು ಬಂದನಣ್ಣ. ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದದ್ದು ನೋಡಿ, ಅಲ್ಲಲ್ಲಿ ಗರಿಕೆ ಚಿಗುರು ಹುಟ್ಟಿತಣ್ಣ. ತೋಳಣ್ಣ ಕುರಿಯನ್ನು ತಿನ್ನಲೆಂದು ಬಂದದ್ದು ನೋಡಿ........ ಬೀರಣ್ಣ ದೊಣ್ಣೆಯನ್ನು ಬಿಸುಟನಣ್ಣ, ಬೀರಣ್ಣ ದೊಣ್ಣೆಯನ್ನು ಬಿಸುಟನಣ್ಣ, ಬೀರಣ್ಣ ದೊಣ್ಣೆಯನ್ನು ಬೀಸಿದ್ದು ನೋಡಿ, ಬೀರಣ್ಣ ದೊಣ್ಣೆಯನ್ನು ಬೀಸಿದ್ದು ನೋಡಿ, ತೋಳಣ್ಣ ಬಾಯ್ ಬಾಯ್ ಬಡುಕೊಂಡ್ನಣ್ಣ, ತೋಳಣ್ಣ ಬಾಯ್ ಬಾಯ್ ಬಡಕೊಂಡ್ನಣ್ಣ. ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದಿತಣ್ಣ, ಎಂದೂ ಬಾರದ ಮಳೆ ಬಂದದ್ದು ನೋಡಿ, ಅಲ್ಲಲ್ಲಿ ಗರಿಕೆ ಚಿಗುರು ಹುಟ್ಟಿತಣ್ಣ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀದರ್ ಭಂಡ್ರಿಯವ್ರೆ ಸಕ್ಕತ್ , ನಾನಿ ಪದ್ಯವನ್ನು ಎಂದು ಕೇಳಿರಲಿಲ್ಲ. ಚೆನ್ನಾಗಿದೆ. ಇದರ ಪೂರ್ಣ ಪಾಠ ಯಾರಾದರು ಕೊಡಬಹುದು ನೋಡೋಣ. ನಾನು ಬರೆದಿರುವ ಜಾನಪದ ಕವನ ಚಿಕ್ಕವಯಸಿನಲ್ಲಿ ಕೇಳಿದ್ದ ನೆನಪಿನಿಂದ ಹುಡುಕಿದೆ, ಅದನ್ನು ಹಾಡುವಾಗ ಮತ್ತು ಒಂದು ಸಾಲು ಸೇರಿಸುತ್ತಿದ್ದರು 'ಬಾರಯ್ಯೊ ಮಳೆರಾಯ ಬಂದುಯ್ಯೊ ದೇವೇಂದ್ರ" ಎಂದು , ಬಹುಶಃ ಅದನ್ನು ಕಡೆಗೆ ಸೇರಿಸಬೇಕು ಅನ್ನಿಸುತ್ತೆ, ಮಳೆ ಬರುವಾಗ ಈ ಹಾಡನ್ನು ಹೇಳುತ್ತ ಕುಣಿಯುತ್ತಿದ್ದರಂತೆ ಹಿಂದೆ ಹಳ್ಳಿಗಳಲ್ಲಿ , "ರೋಡಿಗಿಳಿ ರಾದಿಕ ಚಿಂದಿಮಾಡೆ ಚಂದ್ರಿಕ" ಎನ್ನುವ ಗಲಾಟೆ ಹಾಡುಗಳ ಮದ್ಯೆ ಮಳೆರಾಯನ ಹಾಡೆಲ್ಲ ಮೂಲೆ, ಇಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲು. ಮತ್ತೊಂದು ಆಶ್ಚರ್ಯ ಈ ಮಳೆ ಹಾಡನ್ನು ಸಂಪದದಲ್ಲಿ ಹಾಕಿದ ನಂತರ ಅರ್ದ ಗಂಟೆಯಲ್ಲಿ ನಮ್ಮ ಆಫೀಸಿನ ಹತ್ತಿರ ಒಂದೈದು ನಿಮಿಷ ಮಳೆ ಬಂದಿತು ! ಅದು ಸುಮಾರು ನಲವತ್ತೈದು ದಿನಗಳ ಮಳೆ ವಿರಾಮದ ನಂತರ! ನನಗಂತು ಖುಷಿಯಾಯಿತು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಳೆ ಬಗ್ಗೆ ದೊರೆತ ಮತ್ತಷ್ಟು ಸಾಲುಗಳು ಅಂತರ್ಜಾಲದಿಂದ‌ ಸುಮ್ಮನೆ ಹೀಗೆ ಹುಡುಕಿದಾಗ ದೊರೆತದ್ದು.. ಅಂತರ್ಜಾಲ ವಿವಿದ ಮೂಲಗಳಿಂದ ‍‍‍‍‍‍‍‍‍‍‍‍‍

ಬಾರೊ ಬಾರೊ ಮಳೆರಾಯ,
 
ಬಾರೊ ನಮ್ಮನೆ ತೋಟಕ್ಕೆ
 
ಈವತ್ತ್ ಬೇಡ ನಾಳೇಗ್ಬಾರೋ
 
ಈಗ್ ನಾನ್ ಹೋಗ್ಬೇಕ್ ಆಟಕ್ಕೆ.'
--------------------
ಮಳೆ ಬಂತು ಮಳೆ, ಕೊಡೆ ಹಿಡಿದು ನಡೆ
ಜಾರಿ ಬಿದ್ದು ಆಯಿತು ಬಟ್ಟೆಯೆಲ್ಲ ಕೊಳೆ!
-----------------------
ಎಮ್ಮೆಯ ತೊರಕೆ ಕೆಮ್ಮುಗಿಲು ಎದ್ದವೆ
ದಮ್ಮಯ್ಯ ಹುಯ್ಯೊ ಮಳೆರಾಯ- ನಮ್ಮೂರ
ಮುಮ್ಮೂಳಿಗೇಲಿ ತಳುಗಯ್ಯ.
ಹಸುವಿನ ತೊರ ಸೊಸೆಮುಗಿಲು ಬಿದ್ದಿವ
ಬಾಣಂತಿ ಕಪ್ಪ ಬಳದಂಗೆ ಮಳೆರಾಯ
ಬೋರಾಡುತವನೆ ಮುಗಿಲಲ್ಲಿ.
 
ಕಟ್ಟೇಯ ಹತ್ಯಾನೆ ಹೊತ್ತುಗಳ ನೊಡ್ಯಾನೆ
ಹತ್ಯಾನೆ ನೀಲ ಕುದುರೆಯ ನಮಕೋಮರ
ಕೈಬೀಸಿ ಮಳೆಯ ಕರೆದಾನೆ.
ಏರೀಯ ಹತ್ಯಾನೆ ಯೇಳ್ಯೇವ ನೋಡ್ಯಾನೆ
ಏರ್ಯಾನೆ ನೀಲಕುದುರೆಯ ನಮಕೋಮರ
ಶಲ್ಯೇವ ಬೀಸಿ ಕರೆದಾನೆ.
--------------------
ಆಕಾಶದೊಳಗೆ  ಆರ್ಭಟವೇನಿರೆ
ದೇವೇಂದ್ರರಾಯ ಹೊರ ಪಯಣ ಹೋಗ್ವಾಗ
ಸಿಡಿಲು ಮಿಂಚಿನ ಐಭೋಗ
ಕೆಂಧೂಳು ಎದ್ದೂ ಮುಗಿಲ ಮೋಡ ಕವಿದೂ
ಹಗಲ್ ಇರುಳಾದೂ ಜಗಕೆಲ್ಲ-ಮಳೆರಾಯ
ಮುಗಿಲಿಳಿದು ಬರುವೊ ಸಡಗರ.
------------------------
ಕಾರಮಳಿಯೇ ಕಪ್ಪತ ಮಳಿಯೇ
ಹಳ್ಳಾಕೊಳ್ಳಾ ತುಂಬಿಸು ಮಳೆಯೇ
ಸುಣ್ಣ ಕೊಡತಿನಿ ಸುರಿಯಲೆ ಮಳೆಯೇ
ಬಣ್ಣ ಕೊಡತೀನಿ ಬಾರಲೆ ಮಳೆಯೆ
ಸುರಿಮಳೆಯೆ ಸುರಿಮಳೆಯೆ
-----------------------
ಶಿವನೇ ಮಳೆರಾಯ ಓ ತಂದೆ
ಯಾವ ದೇವರಿಲ್ಲ ನಿನ್ನ ಮುಂದೆ
ಹಬ್ಬ ಹುಣಿಮೆ ಮದುವೆ ಮುಂಜಿ
ಎಲ್ಲ ನೀನು ಬಂದಂದೇ
----------------------
ಗೌರಿ ಹೊತ್ತಿಗೆ ಗಡುಗೆ ಮುಳುಗೆ ಮಳೆ
ಮಗೆ ಮಳೆ ಹುಯ್ದರೆ ಮಗೆ ಗಾತ್ರತೆನೆ
ಸಾತಿ ಮಳೆ ಹೇತೇನು ಆಂಧ್ರೂ ಬಿಡದು
ರೋಣಿ ಮಳಿಗೆ ಓಣೆಲ್ಲ ಕೆಸರು
ಉಬ್ಬೆ ಮಳೆಗೆ ಗುಬ್ಬಚ್ಚಿ ಪುಚ್ಚತೋಯಲ್ಲ
ಉಬ್ಬೆ ಮಳೆ ಉಬ್ಬುಬ್ಬಿ ಬಾರಿಸ್ತು
ಉಬ್ಬೆ ಮಳೆಗೆ ಉಬ್ಬು ತಗ್ಗು ಸಮ
------------------------
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
 
ಏರಿ ಮ್ಯಾಗಳ ಬೆಳ್ಳಾನು ರಾಯ ಬೆಳ್ಳಾನು ರಾಯ ಬೆಳ್ಳಾನು ರಾಯ
ಕೇರಿಯ ಒಳಗಡ ಬೆಸ್ತರ ಹುಡುಗ ಬೆಸ್ತರ ಹುಡುಗ ಬೆಸ್ತರ ಹುಡುಗ
ಏರಿ ಮ್ಯಾಗಳ ಬೆಳ್ಳಾನು ರಾಯ
ಕೇರಿಯ ಒಳಗಡ ಬೆಸ್ತರ ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವಳಲ್ಲ
 
ಆರು ಸಾವಿರ ಒಡ್ಡರ ಕರೆಸಿ ಮೂರು ಸಾವಿರ ಗುದ್ದಲಿ ತರಿಸಿ
ಸೋಲು ಸೋಲಿಗೆ ಮಣ್ಣನ್ ಹಾಕಿಸಯ್ಯೊ ನಾ ನಿಲ್ಲುವಳಲ್ಲ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
 
ಆರು ಸಾವಿರ ಕುರಿಗಳ ತರ್ಸಿ ಕುರಿಗಳ ತರ್ಸಿ ಕುರಿಗಳ ತರ್ಸಿ
ಮೂರು ಸಾವಿರ ಕುಡುಗೋಲು ತರ್ಸಿ ಕುಡುಗೋಲು ತರ್ಸಿ ಕುಡುಗೋಲು ತರ್ಸಿ
ಆರು ಸಾವಿರ ಕುರಿಗಳ ತರ್ಸಿ
ಮೂರು ಸಾವಿರ ಕುಡುಗೋಲು ತರ್ಸಿ
ಕಲ್ಲು ಕಲ್ಲಿಗೆ ರೈತವ ಬಿಡಿಸಯ್ಯೊ ನಾ ನಿಲ್ಲುವಳಲ್ಲ
 
ಒಂದು ಬಂಡಿಲಿ ವೀಳ್ಯದ್ ಅಡಿಕೆ
ಒಂದು ಬಂಡಿಲಿ ಚಿಗಳಿ ತಂಟ
ಮೂಲೆ ಮೂಲೆಗೆ ಗಂಗಮ್ಮ್ನ ಮಾಡ್ಸೈಯ್ಯೊ ನಾ ನಿಲ್ಲುವಳಲ್ಲ
 
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಅಂಗೈಯಗಲ ಮೋಡ ನಾಡಿ ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಗುಡುಗಿ ಗೂಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ
ಮಾಯದಂತ ಮಳೆ ಬಂತಣ್ಣ ಮದಗಾದ ಕೆರೆಗೆ
----------------------------------------------------------
 
ಇವೆಲ್ಲ ಮಳೆಯ ಬಗ್ಗೆ ಸಿಕ್ಕಿದ ವಿವಿದ ಸಾಲುಗಳು , ಅಂತರ್ಜಾಲದಲ್ಲಿ. 
 
ಕಡೆಗೊಂದು ಲಿಂಕ್ ಕೊಡುವೆ ಕೇಳಿ ನೋಡಿ ಶ್ರೀ೪೨೦ ಸಿನಿಮಾದ್ದು ಮಳೆಯಲ್ಲಿ ಹಾಡಿದ ಹಾಡು
 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆಲ್ಲ ದೈನ್ಯತೆಯಿಂದ್ ಕರೆದರೆ ಬರಲೊಲ್ಲ.... ಅದ್ಕೆ.. ಹೀಗೆನು ಬರ್ತೀಯ... ಇಲ್ಲ.....??? ಅಂತ ಒಂದ್ಸಲ ಬೆದರಿಸಿ ಕೇಳೋಣವೇ...? :())) ಗುರುಗಳೇ ನಿಮ್ಮ ಮತ್ತು ಶ್ರೀಧರ್ ಜೀ ಅವರ ಕವನಗಳು ಚೆನ್ನಾಗಿವೆ.. ಮತ್ತು ಅರ್ಥಪೂರ್ಣವಾಗಿವೆ... ಮಳೆರಾಯನಿಗೆ ಈ ಮೊರೆ ಕೇಳಿಸಿತೆ?.... ಉತ್ತರ ಇನ್ನು ಬಂದಿಲ್ಲ.. ಬಹ್ಸುಷ ರಾತ್ರಿ ಸುರಿದರೆ ಮಳೆ..... ಗೊತ್ತಾಗುವುದು....!! ಶುಭವಾಗಲಿ.. \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುಂಗಾರಿನ ಮಳೆಯಂತೆ ಮರೆಯಾಗಿದ್ದ ಸಪ್ತಗಿರಿಯವರು ಮೊನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಯಂತೆ ಮತ್ತೆ ಸಂಪದದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡೂ ಸಂತಸದ ವಿಷಯಗಳು. ಅಂದಹಾಗೆ ನಿನ್ನೆ 'ಟಿ.ವಿ. 9'ನಲ್ಲಿ ಬಿಜಾಪುರ ಜಿಲ್ಲೆಯ ಬಬಲೇಶ್ವರ ಗ್ರಾಮದ ಜನರೆಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಊರಿನ ಎಲ್ಲಾ ದೇವರುಗಳ ಗುಡಿಯಲ್ಲಿ ಪೂಜೆ ಸಲ್ಲಿಸಿ ಅಲ್ಲಿನ ಅಂಬಲಿ ನೈವೇದ್ಯವನ್ನೇ ಸ್ವೀಕರಿಸಿದ್ದು ವಿಶೇಷವೆನಿಸಿತ್ತು. ಅವರೆಲ್ಲರ ಪ್ರಾರ್ಥನೆಗೆ ಮನ್ನಣೆಯಿತ್ತು ವರುಣದೇವ ಕ್ರುಪೆದೋರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:()) ಜಿ ಕೆಲಸದ ಬದಲಾವಣೆ ಕಾರಣ ಹಾಗಾಯ್ತು... ಇನ್ನು ಮೆಲೆ ಸಕ್ರಿಯನಾಗಿರಲು ಪ್ರಯತ್ನಿಸುವೆ... ಮಳೇ ರಾಯನಿಗೆ ನಮ್ಮೊರೆ ಕೇಳಿಸುತ್ತಿದೆಯ?!! \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಸಣ್ಣವರಿದ್ದಾಗ ಮುಂಗಾರಿನ ಟೈಮಲ್ಲಿ ಮೋಡ ಕಂಡ್ರೆ ಈ ಹಾಡು ಹಾಡ್ತಿದ್ವಿ. ಆದ್ರೆ ಮೊದಲ ಎರಡು ಸಾಲುಗಳು ಮಾತ್ರ!! ನೆನಪಿಸಿದ್ದಕ್ಕೆ ಧನ್ಯವಾದ ಪಾರ್ಥವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ ಸಾರಥಿಯವರಿಗೆ ವಂದನೆಗಳು ' ಸಾಲಕ್ಕೆ ಹೋಗವ್ನೆ ಮಳೆರಾಯ ' ಬಹಳ ಮಾರ್ಮಿಕವಾದ ವಾಸ್ತವವನ್ನು ಬಿಂಬಿಸುವ ಕವನ, ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.