ಸಂಪದ ‍ ಜನಮತ

5

ಸಂಪದದಲ್ಲಿ ಜನಮತ ಎನ್ನುವ ಹೊಸ ಅಂಕಣ ಪ್ರಾರಂಬವಾಗಿದೆ ಕೆಲದಿನದಿಂದ.

ಈಗ ಕೇಳಿರುವ ಪ್ರಶ್ನೆ ಅಂದ್ರಪ್ರದೇಶದ ವಿಭಜನೆ ಬಗ್ಗೆ  , ಇಲ್ಲಿಯವರೆಗೂ 78 ಜನ ನೋಡಿದ್ದಾರೆ 
90% ಅಧಿಕ ಮಂದಿ ರಾಜಕೀಯ ಎಂದರೆ, ಉಳಿದ ೧೦% ಗೊತ್ತಿಲ್ಲ ಅನ್ನುತ್ತಿದ್ದಾರೆ, 
ಆಶ್ಚರ್ಯ ಅಂದರೆ ಒಬ್ಬರಾದರು ಈ ವಿಭಜನೆಯನ್ನು ಅಗತ್ಯ ಎಂದು ಭಾವಿಸುತ್ತಿಲ್ಲ.  ನಾನು ಸಹ :-)
ಸರ್ಕಾರ ಇಂತಹ ಮತಗಣನೆ ನಡೆಸಿ ಏಕೆ ನಿರ್ಧಾರ ಕೈಗೊಳ್ಳಬಾರದು, 
ಚುನಾವಣೆಗಾಗಿ ಪ್ರತಿ ವರುಷ ಸಾವಿರಾರು ಕೋಟಿ ಸುರಿದು ಜನಪ್ರತಿನಿದಿಗಳನ್ನು ಆರಿಸುತ್ತಿದ್ದೇವೆ, 
ಇಂತಹ ಸೂಕ್ಷ್ಮ ವಿಷಯಗಳನ್ನು ಚುನಾವಣೆಯ ರೀತಿಯಲ್ಲಿ ಜನಮತ ಸಂಗ್ರಹಿಸಿ, 
ಅದರ ಅಧಾರದ ಮೇಲೆ ನಿರ್ಧಾರ ಕೈಗೊಂಡರೆ ಗಲಾಟೆಗಳೆಲ್ಲ ಕಡಿಮೆ ಆಗುತ್ತವೆ ಅಲ್ಲವೆ? 
ಇಂತಹ ಸೂಕ್ಷ್ಮ ವಿಷಯದಲ್ಲು ರಾಜಕೀಯ ನಿರ್ಧಾರವೆ ಆಗಬೇಕೆ?
 

ಜನಮತ 
ಆಂಧ್ರ ಪ್ರದೇಶದ ವಿಭಜನೆ
October 7, 2013 - 5:38pm
ರಾಜಕೀಯ
90% (9 ಮತಗಳು)
ಗೊತ್ತಿಲ್ಲ
10% (೧ ಮತ)
ಅವಶ್ಯಕತೆ
0% (0 ಮತಗಳು)
Total votes: 10
Thank you for voting 

http://www.thehindu.com/multimedia/dynamic/00027/ARV_TELANGANA_27109f.jpg
 

ಬ್ಲಾಗ್ ವರ್ಗಗಳು: 
Taxonomy upgrade extras: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು, ಇಂಥಹ ಬದಲಾವಣೆ ಬೇಕಿದೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನಮತದಿಂದ ತೆಲಂಗಾಣ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಜನಮತಗಣನೆ ನಡೆಸಿದರೆ ಸೀಮಾಂಧ್ರ ಭಾಗದಲ್ಲಿ ಹೆಚ್ಚು ಜನಸಂಖ್ಯೆ ಇರುವ ಕಾರಣ (13 ಜಿಲ್ಲೆಗಳು ಹಾಗೂ ಆಂಧ್ರಪ್ರದೇಶ ರಾಜ್ಯದ 49% ಜನಸಂಖ್ಯೆ) ನಿರ್ಣಯ ಆಂಧ್ರಪ್ರದೇಶದ ವಿಭಜನೆ ಬೇಡ ಎಂದು ಬರುವುದರಲ್ಲಿ ಸಂಶಯವಿಲ್ಲ. ತೆಲಂಗಾಣ ಭಾಗದ ಜನರು ಪ್ರತ್ಯೇಕ ರಾಜ್ಯದ ರಚನೆಗಾಗಿ ಭಾರೀ ಹೋರಾಟ ಮಾಡುತ್ತಿದ್ದರು. ಎರಡೂ ಪ್ರದೇಶಗಳ ಜನರು ಒಪ್ಪಿದರೆ ಮಾತ್ರ ವಿಭಜನೆ ಸುಲಲಿತವಾಗಿ ನಡೆಯಬಹುದು ಆದರೆ ಆಂಧ್ರಪ್ರದೇಶದ ಎರಡು ಭಾಗಗಳ ಸ್ಥಿತಿ ಪರಸ್ಪರ ವಿರೋಧದಿಂದ ಕೂಡಿದೆ. ಒಬ್ಬರು ವಿಭಜನೆ ಬೇಕು ಎಂದರೆ ಮತ್ತೊಬ್ಬರು ಬೇಡ ಎನ್ನುತ್ತಾರೆ ಹೀಗಿರುವಾಗ ಮಾಡುವುದೇನು? ಆಂಧ್ರದ ಈ ಸಮಸ್ಯೆಗೆ ಸೀಮಾಂಧ್ರ ಭಾಗದ ಜನರ ಸಂಕುಚಿತ ಮನೋಭಾವ, ಸ್ವಾರ್ಥವೇ ಮೂಲಭೂತ ಕಾರಣವಾಗಿದೆ. ಸೀಮಾಂಧ್ರ ಭಾಗದ ಜನರು ಎಲ್ಲಾ ವಿಷಯಗಳಲ್ಲಿಯೂ ತೆಲಂಗಾಣ ಭಾಗದ ಜನರಿಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಇದುವೇ ಪ್ರತ್ಯೇಕ ರಾಜ್ಯದ ಹೋರಾಟ ಉಗ್ರವಾಗಲು ಪ್ರಧಾನ ಕಾರಣ. ಸೀಮಾಂಧ್ರ ಭಾಗದ ಜನರು ತೆಲಂಗಾಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದ್ದಿದ್ದರೆ ಇಂದು ಇಂಥ ಭೀಕರ ಪರಿಸ್ಥಿತಿ ಬರುತ್ತಿರಲಿಲ್ಲ. ಇಂಥ ಕಿತ್ತಾಟದಿಂದ ಆಂಧ್ರಪ್ರದೇಶ ಅಪಾರ ಹಾನಿಯನ್ನು ಅನುಭವಿಸಲಿದೆ, ಆದರೂ ಅವರಿಗೆ ಬುದ್ಧಿ ಬರುವುದು ಯಾವಾಗಲೋ.

ಇನ್ನೊಂದು ವಿಷಯ. ಜನಮತದಿಂದ ಸಮಸ್ಯೆ ಬಗೆಹರಿಸುವುದು ಸಾಧ್ಯವಾದರೆ ಕಾಶ್ಮೀರದಲ್ಲಿ ಜನಮತಗಣನೆ ನಡೆಸಿ ಸಮಸ್ಯೆ ಬಗೆಹರಿಸಬಹುದಲ್ಲ? ಸ್ವಾತಂತ್ರ್ಯ ಸಿಕ್ಕಿದ ಲಾಗಾಯ್ತು ಕಾಶ್ಮೀರ ಸಮಸ್ಯೆ ಬಗೆಹರಿಯದೆ ಭಾರತ-ಪಾಕಿಸ್ತಾನದ ನಡುವೆ ನಿರಂತರ ಕಚ್ಚಾಟಕ್ಕೆ ಕಾರಣವಾಗಿದೆ. ಅಲ್ಲಿ ಜನಮತಗಣನೆ ನಡೆಸಲು ಭಾರತ ಏಕೆ ಒಪ್ಪುವುದಿಲ್ಲ ಎಂಬ ಪ್ರಶ್ನೆಯೂ ಏಳುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥರೆ,
ತಮಗೆ ಬೇಕಾದ ನಾಯಕನನ್ನ ಸರಿಯಾಗಿ ಆರಿಸುತ್ತಿಲ್ಲ, ಇನ್ನು ಇಂತಹ ನಿರ್ಧಾರಗಳನ್ನು ಜನಮತಕ್ಕೆ ಬಿಟ್ಟರೆ ದೇವರೇಗತಿ. ನೋಟು, ಬಾಟ್ಲು ಸಿಗುವುದಾದರೆ ಆಂದ್ರವನ್ನೇನು ಕರ್ನಾಟಕವನ್ನು ೧೨ ಭಾಗ ಮಾಡುವುದಕ್ಕೂ ಸೈ ಅನ್ನುತ್ತೆ ಜನಮತ. ಭಾಗ ಮಾಡಬಾರದಿತ್ತು. ಮಾಡಿಯಾಯಿತು. ಇನ್ನು ಹಿಂದೆ ಹೋಗಲು ರಾಹುಲ್ಲನ ಗುಟುರಿನಿಂದ ಮಾತ್ರ ಸಾಧ್ಯ.:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.