ಸಂಪದಿಗರೆ ಹೊಡೆಯಿರಿ .. ಚಪ್ಪಾಳೆ..

3.5

 ಈದಿನ ಬಾನುವಾರ ಸಂಜೆ ಸುಮ್ಮನೆ ಕುಳಿತಿದ್ದೆ, ಪಕ್ಕದ ಮನೆಯ ಸೋಮಶೇಖರ್ ಎಂಬುವರು ಒಳಬಂದರು. ಅವರು ಸುಮ್ಮನೆ ಬಂದವರಲ್ಲ. ಕೈಯಲ್ಲಿ ಎರಡು ಪಾಸ್ ಹಿಡಿದಿದ್ದರು. ಸಂಜೆ ಐದುವರೆಗೆ ಸಂಗೀತ ಕಾರ್ಯಕ್ರಮವಿದೆ ತೆಲುಗು ಸ್ಮಾರ್ತ ಸಂಘದಿಂದ ಏರ್ಪಾಡಾಗಿದೆ, ವೃದ್ದಾಶ್ರಮಕ್ಕೆ ಸಹಾಯ ಅಂತ ಮಾಡುತ್ತಿದ್ದಾರೆ, ನಾನು ಐದು ಟಿಕೆಟ್ ತೆಗೆದುಕೊಂಡೆ ನಿಮಗೆ ಎರಡು ಕೊಡೋಣ ಅಂತ ಬಂದೆ, ಇಬ್ಬರು ಹೋಗಿಬನ್ನಿ ಅಂದರು. ನಾನು ಸರಿ ಅಂತ ಟಿಕೆಟ್ ಪಡೆದು ಹಣ ಎಷ್ಟು ಎಂದು ನೂರು ರೂ ಕೊಡಲು ಹೋದೆ. ಆದರೆ ಅವರು ಇಲ್ಲ ಹಣದೇನಲ್ಲ , ಅದಕ್ಕಾಗಿಯಲ್ಲ, ನಮ್ಮ ಮನೆಯಲ್ಲಿ ಮೂವರೆ ಇದ್ದೆವೆ ಹಾಗಾಗಿ ಎರಡು ಟೆಕೆಟ್ ನಿಮಗೆ ಕೊಟ್ಟೆ ಅಷ್ಟೆ. ಬನ್ನಿ ಅಂದರು. 

 
  ನಾನು ಈಗ ನೋಡಿದೆ ಐದುವರೆಗೆ ಹೋಗಬೇಕಲ್ಲ ಏನು ಮಾಡಿದರೆ ತಪ್ಪಿಸಿಕೊಳ್ಳಬಹುದು ಅನ್ನಿಸಿ 
"ನೋಡಿ ಇದು ತೆಲಗು ಸಂಘದ್ದು, ನನಗೆ ಒಂದಕ್ಷರವು ತೆಲುಗು ಬರಲ್ಲ ಅಲ್ಲಿ ಬಂದರು ಏನು ಆರ್ಥವಾಗಲ್ಲ " ಎಂದೆ.
ಅದಕ್ಕವರು ' ಸಂಗೀತ ಕಾರ್ಯಕ್ರಮ ತಾನೆ , ಬಾಷೆಯದೇನು ಬನ್ನಿ " ಎಂದರು (ಅವರಿಗೆ ಸರಿಯಾಗಿ ತಿಳಿಯದು ! )
ನಾನು 'ನನಗೆ ಸಂಗೀತವೇನು ಅಷ್ಟು ಗೊತ್ತಾಗಲ್ಲ" ಎಂದೆ
 ಅದಕ್ಕವರು ಇರಲಿ ಬನ್ನಿ ಅಂತ ಬಲವಂತ ಮಾಡಿದರು 
ಸರಿ ಹೇಗು ತಪ್ಪಿಸಿಕೊಳ್ಳುವ ಹಾಗಿಲ್ಲ ಎಂದು ಒಪ್ಪಿಬಿಟ್ಟೆ. 
...
ವಿವೇಕಾನಂದ ಶಾಲೆಯ ಆಡಿಟೋರಿಯಂ ಪ್ರವೇಶೀಸಿದಾಗ ಆಗಿನ್ನು ಕಾರ್ಯಕ್ರಮ ಪ್ರಾರಂಬವಾಗುವದಿತ್ತು. ಜೋಬಿನಲ್ಲಿದ ಪಾಸ್ ತೆಗೆದು ನೋಡಿದೆ. 'ತೆಲುಗು ಸ್ಮಾರ್ಥ ವೇದಿಕ'  ಯ ಅಡಿಯಲ್ಲಿ ನಡೆಯುತ್ತಿರುವ, 'A GALA MUSICAL EVENING'  ಎಂದಿದ್ದು ನಡೆಸುವವರು, ಶ್ರೀ ಲಕ್ಶ್ಮಣ ಶ್ರ್ರೀರಾಮ್  ( USA) ಮತ್ತು ರೋಹಿಣಿ ಪ್ರಭುನಂದನ ಎಂದಿತ್ತು. ಸರಿ ಎಂದು ತೆಲುಗು ಕಾರ್ಯಕ್ರಮಕ್ಕೆ ಸಿದ್ದನಾಗಿ ಕುಳಿತೆ
 
 ಗಣಪತಿ ಹಾಗು ಶಿವಸ್ತುತಿಯೊಂದಿಗೆ ಅಚ್ಚಕನ್ನಡದಲ್ಲಿ ಕಾರ್ಯಕ್ರಮ ಪ್ರಾರಂಬವಾಯಿತು. ಕಾರ್ಯಕ್ರಮದ ಕಾರ್ಯಸೂಚಿ ಹೀಗಿತ್ತು,  ''RAMU REMEMBERS  SHIVARANJINI' , 
ಗಾಯಕರನ್ನು ಇತರರನ್ನು ಪರಿಚಯ ಮಾಡಿಸುವದರ ಜೊತೆಗೆ ಪ್ರಾರಂಬಾದ ಸಂಗೀತ ಸಂಜೆಯಲ್ಲಿ ವಿವಿದ ಬಾಷೆಗಳಲ್ಲಿ ಅಂದರೆ ಕನ್ನಡ ಹಿಂದಿ ತೆಲುಗು ತಮಿಳು ಹಾಗು ಸಂಸ್ಕೃತ ಐದು ಬಾಷೆಯಲ್ಲಿನ್ನ ಜನಪ್ರಿಯ ಚಿತ್ರಗೀತೆಗಳ ಗಾಯನ. ಆದರೆ ಎಲ್ಲ ಗೀತೆಗಳನ್ನು ಬಂದಿಸಿರುವ ಸೂತ್ರ ಒಂದೆ ಅದು 'ಶಿವರಂಜಿನಿ ರಾಗ' . ಅವರು ಹಾಡುವ ಎಲ್ಲ ಗೀತೆಗಳು ಅದೆ ರಾಗದ್ದು ಅನ್ನುವ ಘೋಷಣೆ. 
ಹಿಂದಿಯ ಏಕ್ ದುಜೆಕಿಲಿಯೆ- ಕನ್ನಡದ ವಿಷ್ಣುವರ್ದನ್ ಭವ್ಯ ನಟನೆಯ - ನೀ ಬರೆದ ಕಾದಂಬರಿ ಚಿತ್ರದ ಹಾಡು ಹಾಗು ತೆಲುಗು ತಮಿಳು ಮತ್ತೆ ಹಿಂದಿ ಚಿತ್ರದ ಹಲವು ಹಾಡುಗಳನ್ನು ಕೇಳುತ್ತ ಹೋದಂತೆ , ಹಳೆಯ ನೆನಪುಗಳೆಲ್ಲ ಮತ್ತೆ ಬಂದು ಮನವನ್ನು ತುಂಬಿದವು. ಇಂಪಾದ ಹಾಡುಗಳನ್ನು ಕೇಳುವಾಗ ಬರದಿದ್ದರೆ ಒಂದು ಸುಂದರ ಸಂಜೆ ತಪ್ಪುತ್ತಿತ್ತು ಅನ್ನಿಸಿತು.  
 
... ಮತ್ತೆ ಮರೆತೆ ಈ ಬ್ಲಾಗ್ ಬರೆಯಲು   ಮುಖ್ಯವಾದದೊಂದು ಕಾರಣವಿದೆ
 
ತೆಲುಗು ಸಂಘವಾದರು ಕಾರ್ಯಕ್ರಮ ಅಚ್ಚ ಕನ್ನಡದಲ್ಲಿ ಪ್ರಾರಂಬವಾಯಿತು. ಅಲ್ಲದೆ ಕಾರ್ಯಕ್ರಮ ನಿರೂಪಿಸಿ , ಗಾಯಕರನ್ನು ಪರಿಚಯಿಸುತ್ತಿದ್ದ ಸಂಘದ ಸಂಚಾಲಕರು ಹೇಳಿದರು
"ಇದು ತೆಲುಗು ಸಂಘವಾದರು, ಕರ್ನಾಟಕವಾದ್ದರಿಂದ ಕನ್ನಡಕ್ಕೆ ಮೊದಲ ಪ್ರಾಶಸ್ತ"  
 
 ಕನ್ನಡವನ್ನು ಎಲ್ಲಡೆ ಅಲಕ್ಷವಾಗಿ ಕಾಣುವ ಕೇಳುವ ಈ ದಿನದಲ್ಲಿ ಅಂತದೊಂದು ಮಾತು ಕೇಳಿ ಸಂತೋಷವಾಯಿತು. 
 
ಹಾಡುಗಾರ ಮತ್ತು ಇತರರು ಸಹಿತ ಸುಶ್ರಾವ್ಯ ಕನ್ನಡದಲ್ಲಿಯೆ ಮಾತನಾಡಿದರು. 
 
 
"ಇದು ತೆಲುಗು ಸಂಘವಾದರು, ಕರ್ನಾಟಕವಾದ್ದರಿಂದ ಕನ್ನಡಕ್ಕೆ ಮೊದಲ ಪ್ರಾಶಸ್ತ"  
 
 
ಸಂಪದಿಗರೆ... ಈ ಒಂದು ಮಾತಿಗೆ ನೀವೆಲ್ಲ ಚಪ್ಪಾಳೆ ಹೊಡೆಯಲಿ ಎಂದು ಈ ಬರಹ.... 
 
ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>>>"ಇದು ತೆಲುಗು ಸಂಘವಾದರು, ಕರ್ನಾಟಕವಾದ್ದರಿಂದ ಕನ್ನಡಕ್ಕೆ ಮೊದಲ ಪ್ರಾಶಸ್ತ<<<<<<<<<< >>>> ನಾ ಚಪ್ಪಾಳೆ ತಟ್ಟಿದ್ದೇನೆ...ಕೇಳಿಸಿತೆ:)) ಪಾರ್ಥ ಸಾರಥಿ ಅವ್ರೆ ಕನ್ನಡ ನಾಡು-ನುಡಿ-ಸಾಹಿತ್ಯ-ಸಂಸ್ಕೃತಿ ಬಗ್ಗೆ ಕಾಳಜಿ ಇರ್ವ 'ನಮಗೆಲ್ಲ' ನಿಮ್ಮ ಈ ಬರಹ ಓದಿ ಹೃದಯ ತುಂಬಿ ಬಂದಿದೆ ... >>>>>>>>ಆಂಧ್ರದವರಾದರೂ ಅವರ 'ಈ ನಮ್ಮ ನಾಡು ನುಡಿ ಬಗ್ಗೆ ಪ್ರೀತಿ ಕಳಕಳಿ-ಕಾಳಜಿ'- ಅಭಿನಂದನೀಯ... ಈ ಬಗ್ಗೆ ಬರಹ ಬರೆದು 'ಅವರ' ಬಗ್ಗೆ ನನ್ನ 'ಪೂರ್ವಾಗ್ರಹಪೀಡಿತವನವನ್ನ' ಹೋಗಲಾಡಿಸಿದ್ದೀರ .. ಧನ್ಯವಾದಗಳು... >>>> ಅಂದ್ ಹಾಗೆ ನಿಮಗೆ ತೆಲುಗು ಓದಲು-ಬರೆಯಲು-ಮಾತಾಡಲು ಬರೋಲ್ಲವೇ? ಅರ್ಥವಾಗೊಲವೇ? ಕನ್ನಡ ಮತ್ತು ತೆಲುಗು ಲಿಪಿಗೆ ಅಸ್ಟೆನೂ ವ್ಯತ್ಯಾಸವಿಲ್ಲ 'ನನ್ನ ಅನುಭವದಂತೆ' ಕನ್ನಡ ಓದಲು ಬಲ್ಲವರು ತೆಲುಗನ್ನು ಓದಬಹುದು ನಿಮಗೇನನ್ನಿಸುತ್ತೆ? >>>>ಪಕ್ಸ್ಚಿ ನೋಟ ತಪ್ಪಿಸಿ -ದೆವ್ವಗಳನನ 'ಕೇರೇ' ಮಾಡದೆ (ಅವುಗಳು ನೀವು ಹಿಂದೆ ಬಿದ್ದಿದ್ದೀರಿ ಅವುಗಳ ಕಥೆ ಬರೆಯಲು ಅಂತ ಗೊತ್ತಾಗ್ 'ದಿಕ್ಕಾಪಾಲಾಗಿ' ಓಡುತಿದ್ದವು-ಅಂದಿನ ವಿಕ್ರಮಾದಿತ್ಯನೈಗೂ ಅಂಜಿರಲಿಲ್ಲ ಆದರೆ ಇಂದಿನ 'ಪಾರ್ಥರೀ ಗೆ' ಶರಣಾದವು.. :)) ಮರೆತಿದ್ದೀರಿ:() >>>>> ಇನ್ನು ಒಂದೆರಡು ದಿನಗಳಲ್ಲಿ 'ನನ್ನ ಕಡೆಯಿಂದ 'ನಿಮಗೂ' ಸೇರಿ ಸಕಲ ಸಂಪದಿಗರಿಗೆ 'ಸರ್ಫ್ರಾಯ್ಸ್' ಇದೆ ನೋಡಿ : )) >>>> ಮತ್ತೆ ಸಿಗ್ವೆ..........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆಂಧ್ರದವರಾದರೂ ಅವರ 'ಈ ನಮ್ಮ ನಾಡು ನುಡಿ ಬಗ್ಗೆ ಪ್ರೀತಿ ಕಳಕಳಿ-ಕಾಳಜಿ'- ಅಭಿನಂದನೀಯ... ಈ ಬಗ್ಗೆ ಬರಹ ಬರೆದು 'ಅವರ' ಬಗ್ಗೆ ನನ್ನ 'ಪೂರ್ವಾಗ್ರಹಪೀಡಿತವನವನ್ನ' ಹೋಗಲಾಡಿಸಿದ್ದೀರ ..>> +1.. ಒಳ್ಳೆಯ‌ ಬ‌ರಹ ಪಾರ್ಥಸಾರಥಿಗಳೇ.. ಷಪ್ತಗಿರಿವಾಸಿಗಳೇ... <<ಇನ್ನು ಒಂದೆರಡು ದಿನಗಳಲ್ಲಿ 'ನನ್ನ ಕಡೆಯಿಂದ 'ನಿಮಗೂ' ಸೇರಿ ಸಕಲ ಸಂಪದಿಗರಿಗೆ 'ಸರ್ಫ್ರಾಯ್ಸ್' ಇದೆ ನೋಡಿ : ))>> ಭಾರೀ ಯೋಜನೆ ಹಾಕಿದ0ತಿದೆ...!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿ ಯವರಿಗೆ ನಮನಗಳು ನಿಮ್ಮ ಲೇಖನ ಓದಿದೆ. ಪರಭಾಷಿಗರು ನಮ್ಮ ರಾಜ್ಯಕ್ಕೆ ಬಂದು ಮತ್ತು ಇಲ್ಲಿಯವರೆ ಆದ ' ಝಾಲಾ ಚ ಪಾಹೀಜೆ ' ಯವರು ತಮ್ಮ ಭಾಷಾ ದುರಭಿಮಾನ ಮೆರೆಯುತ್ತಿರುವ ಈ ದಿನಗಳಲ್ಲಿ ತೆಲುಗು ಸಂಘದವರ ಕನ್ನಡ ಪ್ರೇಮ ಮೆಚ್ಚುವಂತಹುದು. ಎಲ್ಲ ಪರಭಾಷಿಗರು ಈ ರೀತಿ ಕನ್ನಡದ ಅಭಿಮಾನ ತೋರಿದರೆ ಯಾವುದೆ ಚಕಾರವನ್ನು ನಾವು ಕನ್ನಡಿಗರು ಎತ್ತುವವರಲ್ಲ. ಎಲ್ಲರೂ ನಮ್ಮವರಾಗಿ ಅವರನ್ನೂ ಅವರ ಸಂಸ್ಕೃತಿ ಮತ್ತು ಭಾಷೆಗಳನ್ನು ನಾವೂ ಸಹ ಗೌರವಿಸುತ್ತೇವೆ. ಕನ್ನಡಾಭಿಮಾನ ಮೆರೆದ ಆ ತೆಲುಗು ಸಂಘಕ್ಕೆ ಮತ್ತು ಆ ಬಗ್ಗೆ ವಿವರ ನೀಡಿದ ನಿಮಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಇದು ತೆಲುಗು ಸಂಘವಾದರೂ, ಕರ್ನಾಟಕವಾದ್ದರಿಂದ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ<< ಈ ಮಾತುಗಳಿಗೆ ನನ್ನ ಹೃತ್ಪುರ್ವಕ ಚಪ್ಪಾಳೆ ...ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]"ಇದು ತೆಲುಗು ಸಂಘವಾದರು, ಕರ್ನಾಟಕವಾದ್ದರಿಂದ ಕನ್ನಡಕ್ಕೆ ಮೊದಲ ಪ್ರಾಶಸ್ತ"[/quote]

ಚಪ್ಪಾಳೆ!

 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಅನಿಸಿಕೆ, ಪಾರ್ಥರೇ. ನಿನ್ನೆ ಅರಮನೆ ಮೈದಾನದಲ್ಲಿ ಚಿಕ್ಕ ಮಕ್ಕಳಿಗಾಗಿ ಡ್ಯಾನ್ಸ್ ಸ್ಪರ್ಧೆ ಇತ್ತು. ನನ್ನ ಮೊಮ್ಮಗಳೂ ಸೇರಿ ಸುಮಾರು 50-60 ಮಕ್ಕಳು ಭಾಗವಹಿಸಿದ್ದರು. ಕನ್ನಡದ ಹಾಡಿಗೆ ಕುಣಿದವರು ನನ್ನ ಮೊಮ್ಮಗಳೂ ಸೇರಿ ಕೇವಲ ಇಬ್ಬರು!ಜಡ್ಜ್ ಗಳಾಗಿ ಬಂದವರಿಗೆ ಕನ್ನಡ ಬರುತ್ತಿರಲಿಲ್ಲವೋ, ಮಾತನಾಡುತ್ತಿರಲಿಲ್ಲವೋ ಗೊತ್ತಿಲ್ಲ. ಇಂತಹದುರಲ್ಲಿ ನೀವು ಉಲ್ಲೇಖಿಸಿದ ಕಾರ್ಯಕ್ರಮ ಮೆಚ್ಚುವಂತಹುದು. ನನ್ನದೂ ಒಂದು ಚಪ್ಪಾಳೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಪ್ರತಿಕ್ರಿಯೆಗಳ ಮೂಲಕ ಚಪ್ಪಾಳೆ ಮತ್ತು ’ಹಿಟ್ಸ್’ ಚಪ್ಪಾಳೆ ಹೊಡೆದ ಎಲ್ಲ ಕನ್ನಡ ಪ್ರೇಮಿ ಸಂಪದಿಗರಿಗು ನನ್ನ ವಂದನೆಗಳು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲೇಖನವನ್ನು ಮೊದಲು ಓದಲು ಪ್ರಾರಂಭಿಸಿದಾಗ ಇದ್ಯಾವುದೋ ಕತೆಯ ಪೀಠಿಕೆಯೆಂದುಕೊಂಡು ಓದುತ್ತಾ ಮುಂದೆ ಸಾಗಿದೆ. ಆಮೇಲೆ ಅದರ ವಿವರಣೆಯನ್ನು ಸಂಪೂರ್ಣವಾಗಿ ಓದಿದ ಮೇಲೆ ಆನಂದ ಮತ್ತು ಆಶ್ಚರ್ಯ ಎರಡೂ ಆದದ್ದು ನಿಜ. ಸಂಪದಿಗರಷ್ಟೇ ಏಕೆ ಇಡೀ ಬೆಂಗಳೂರಿಗರು ಮತ್ತು ಕನ್ನಡಿಗರು ಇದಕ್ಕೆ ಚಪ್ಪಾಳೆ ತಟ್ಟಬೇಕು. ಇಂಥಹವರನ್ನು ಪ್ರೋತ್ಸಾಹಿಸೋಣ ಕೂಡ. ಕಡೆಗೊಂದು ಅನುಮಾನ ಇದೊಂದು ಸುಂದರ ಕನಸಲ್ಲವಲ್ಲ ಪಾರ್ಥ ಸರ್?!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.