ಯುರೇಕಾ, ನಾನ್ ಕಂಡು ಹಿಡಿದೆ(ಬುಡ ಕನ್ನಾಡ ಬಗ್ಗೆ)

0

ಗೋದಾವರಿ, ನರ್ಮದೆಗಳ ನಡುವಿನ ನಾಡು, ದಿಟವಾದ, ಬುಡ ಕರ್ನಾಟ ಅನ್ನುತ್ತಾರೆ ಶಂಬಾ ಜೋಶಿಯವರು. ಅದು ಸುಮ್ಮನೇ ಎದೆ ಉಬ್ಬಿಸಿ ಬೀಗಿ ಹೇಳುವದಕ್ಕಲ್ಲ. ಅವರ 'ಕಣ್ಮರೆಯಾದ ಕನ್ನಡ' ಹೊತ್ತಗೆಯಲ್ಲಿ ಈ ಬಗ್ಗೆ ಹಲವು ಪುರಾವೆಗಳನ್ನಿತ್ತಿದ್ದಾರೆ. 'ಶಂಬಾ ಕ್ರುತಿ ಸಂಪುಟ-೧' ರಲ್ಲಿ ಅವರ ಬಿಡಿ ಹೊತ್ತಗೆಗಳನ್ನು ಕೂಡಿಸಿ ಸಂಪುಟ ಮಾಡಿದ್ದಾರೆ. ಅವರು ಮಹಾರಸ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಬರುವ kurumvar ಜನಾಂಗದ ಬಗ್ಗೆ ಬರೆದಿದ್ದಾರೆ.

ನಾನು ಈ ಜನಾಂಗದ ಬಗ್ಗೆ ನೆಟ್ಟಿನಲ್ಲಿ ಏನಾದರೂ ಸಿಗುತ್ತಾ ಅಂತ ತಡಕಾಡಿದಾಗ ನನಗೆ ಸಿಕ್ಕಿದ್ದು ಮಹಾರಾಸ್ಟ್ರ ಗೋರ್ಮೇಂಟಿನ ಈ e-ಹಾಳೆ, http://www.maharashtra.gov.in/english/gazetteer/CHANDRAPUR/places_Keljha...

 

ಇಲ್ಲಿರುವ ಮಾಹಿತಿಯಂತೆ, ಚಂದ್ರಾಪುರ ಜಿಲ್ಲೆಗೆ ಸೇರುವ KELJHAR ಎಂಬೂರಲ್ಲಿ ಎರಡು ವೀರಗಲ್ಲುಗಳಿದ್ದವಂತೆ. ಅವುಗಳನ್ನು ಹೂಡಿದವರು ಕುರುಂವಾರ (ಇದು 'ಕುರುಂಬ'ದ ಬಹುವಚನ. ಕುರುಂಬ=ಕುರುಬ ಏಕೆಂದರೇ ಒಂದು ಕಾಲದಲ್ಲಿ ಕನ್ನಡದಲ್ಲಿ ಅನುನಾಸಿಕಗಳ ಮೇಲ್ಗೈ ಹೆಚ್ಚಿತ್ತು, ಬೆಡಂಗು, ತುರುಂಬ, ದಾಂಟು ಇಂತ ಹಲವಾರು ಒರೆಗಳಿವೆ) ಮಂದಿ. ಅವರು ಮಲ್ಲನದೇವ ಮತ್ತು ಮಲ್ಲಾನಿದೇವಿ ಎಂಬೀರ್ವರ ನೆನಪಲ್ಲಿ ಅವುಗಳಿಗೆ ಪೂಜೆ ಸಲ್ಲಿಸುತ್ತಿದ್ದರಂತೆ.

ಈ ಮಂದಿಯ ನುಡಿ ಕನ್ನಡ, ಮತ್ತು ತಾವು ಕರ್ನಾಟದಿಂದ ಬಂದವರೆಂದು ಅವರು ಹೇಳಿಕೊಳ್ಳುತ್ತಾರಾದರೂ ಅದೇ ತಮ್ಮ ಕರ್ನಾಟವೆಂಬುದನ್ನು ಅವರೇ ಮರೆತಿದ್ದಾರೆ.

ಚಂದ್ರಾಪುರ ಜಿಲ್ಲೆ, ಗೋದಾವರಿ ಹೊಳೆಯಿಂದ ಅತ್ತತ್ತ ಎಸ್ಟೊಂದು ಉತ್ತರಕ್ಕಿದೆ ಅಂಬುದನ್ನು ನೀವೇ ನೋಡಿ, http://maps.live.com/?v=2&sp=Point.m9m7q7qmhpnn_ChandraPur___&encType=1  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಹಳ ದಿನದ ಮೇಲೆ ನಿಮ್ಮ ಬರಹ ನೋಡಿ ಸಂತೋಷ ಆಯ್ತು .

ನೀವು "ಮತ್ತೆ"- ಕಂಡು ಹಿಡ್ದಿದ್ದೀರ - ರೀ-ಸರ್ಚ್ ಮಾಡಿ !

ನಿಮಗೆ ಗೊತ್ತ ? ಮಧ್ಯಪ್ರದೇಶದಲ್ಲಿ ಕನ್ನಡ ಮಾತನಾಡುವ ಅರಣ್ಯವಾಸಿ ಜನಾಂಗಗಳಿವೆ . ಹಿಂದೊಮ್ಮೆ ಡೆಕ್ಕನ್ಹೆರಾಲ್ಡ್ ನಲ್ಲಿ ಬಂದಿತ್ತು .

ನೀವು ಜ್ಯೂಹಿ ಚಾವ್ಲಾ , ಅರವಿಂದ್ ಸ್ವಾಮಿ, ಅನುಪಂ ಖೇರ್ ನಟಿಸಿದ ಹಿಂದಿ ಸಿನೇಮಾ - ಬಹುಶ: ’ಸಪ್ನೇ ಸಾಜನ ಕೆ ’ ನೋಡಿದ್ದೀರಾ ? ಟೀವೀನಲ್ಲೂ ಬರುತ್ತಾ ಇರುತ್ತದೆ . ಅದರಲ್ಲಿ ಜ್ಯೂಹಿ ಚಾವ್ಲಾ , ಅರವಿಂದ್ ಸ್ವಾಮಿ, ರಾಜಸ್ಥಾನದಲ್ಲೋ , ಮಧ್ಯಪ್ರದೇಶದಲ್ಲೋ ಒಂದು ಆದಿವಾಸಿ ಜನಾಂಗದ ಹಳ್ಳಿ ಮೂಲಕ ಹಾದು ಹೋಗುತ್ತಾರೆ . ಅಲ್ಲಿ ಕನ್ನಡಕ್ಕೆ ಸಮೀಪವಾದ ಭಾಷೆ ಇದೆ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನರ್ಮದೆ ಮತ್ತು ಗೋದಾವರಿ ನದಿಗಳ ನಡುವಿನ ಜಿಲ್ಲೆಗಳಲ್ಲಿ ಇರುವ ಗೌಳಿಗ, ಕುರುಂಬರು, ಮಾದಿಗರು ಇನ್ನೂ ಹಲವಾರು ಜನಾಂಗಗಳ ಹೆಸರುಗಳನ್ನು ಶಂಬಾ ನೀಡಿದ್ದಾರೆ. ಈ ಎಲ್ಲ ಜನಾಂಗಗಳ ಮನೆಮಾತು ಕನ್ನಡ. ಕ್ರಿ.ಶ ೧ನೆ ನೂರೇಡರ ಹೊತ್ತಿನಲ್ಲಿ ಮರ್ಹಾಟಿ ನುಡಿ ಹುಟ್ಟೇ ಇರಲಿಲ್ಲ.

ಆ ಹೊತ್ತಲ್ಲಿ ಅಲ್ಲಿ ಕನ್ನಡವೇ ಇದ್ದಿತು ಎಂಬುದನ್ನು ಹಲವಾರು ಪುರಾವೆಗಳೊಂದಿಗೆ ಸಾಬೀತು ಮಾಡಿದ್ದಾರೆ ಅವರು. ಆ ಮಹಾರಸ್ಟ್ರ ಗೋರ್ಮೇಂಟಿನ ಕೊಂಡಿಯನ್ನೇ ನೋಡಿ. ಮಲ್ಲನದೇವ ಇದು ಕನ್ನಡ ಹೆಸರಲ್ಲದೇ ಇನ್ನೇನು?

ಈ ಜನಾಂಗಗಳು ಈಗಲೂ ಇರುವದು ದಿಟವಾದರೂ ಕನ್ನಡ ಇವರ ಮನೆಮಾತಾಗಿ ಉಳಿದಿರಲಿಕ್ಕಿಲ್ಲ ಅಲ್ಲವೇ? ಅದಕ್ಕಾಗಿ ನಾವು ನಾಡಿನ ನೆರಳಿಲ್ಲದ ಕಾಡು ಜನರನ್ನು ಹುಡುಕಿಕೊಂಡು ಹೋಗಬೇಕು. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡದೊಡೆಯರು ಕೇವಲ ಕನ್ನಡದ ಗಡಿಯಲ್ಲಿ ಮಾತ್ರವಲ್ಲ.. ಗೋದಾವರಿ ಸೀಮೆ ಮೀರಿ ಎಡೆದೊಡೆದು ಕನ್ನಡದಲ್ಲೆ ಬೇರೆ ನಾಳ್ಕಗಳನ್ನಾಳಿ ಮೆರೆದಿದ್ದಾರೆ..

11 ನೆ ನೂರೇಡರ ಸೇನರು ಬೆಂಗಾಳದ ಪಾಲರನ್ನು ಸೋಲಿಸಿ.. ಸುಮಾರು ಎರಡು ನೂರೇಡುಗಳವರೆಗೆ ಬೆಂಗಾಲ ಹಾಗೂ ಬಿಹಾರವನ್ನಾಳಿದರು..ಈ ಸೇನರು ತಮ್ಮನ್ನು ಕರ್ನಾಟಕದೇಶದವರೆಂದು ಕರೆದುಕೊಂಡಿದ್ದಾರೆ..
ಅದರಂತೆಯೇ ಬಂಗಾಲದ ಮಿತಿಲರೂ ಕೂಡ ಕನ್ನಡಿಗರಂತೆ..

(ಇವರ ಬಗ್ಗೆ ನಾನು ಒಂದು ಚಿಕ್ಕ ಹೊತ್ತಿಗೆಯಲ್ಲಿ ಓದಿದ್ದೆ.. ಅದನ್ನ ಬರೆದವರು ಒಬ್ಬ ಬ್ಯಾಂಕ ನೌಕರರು.. ಅವರಿಗೆ ಕನ್ನಡದ ಇತಿಹಾಸ ಅದರ ಹರವಿನ ಬಗ್ಗೆ ಬಲು ಕುತೂಹಲ ಹಾಗೂ ಅಲ್ಲೆಲ್ಲಾ ತಮ್ಮ ಗೆಳೆಯರನ್ನ ಕರೆದುಕೊಂಡು ಇಲ್ಲವೆ ಒಬ್ಬರೆ ಹೋಗಿ ವಿಚಾರಿಸಿ.. ಹೆಮ್ಮೆಯಿಂದ ಈ ಹೊತ್ತಿಗೆಯನ್ನ ಬರೆದಿದ್ದಾರೆ.. ಅವರು ಬೆಂಗಳೂರಿನ ವಿಜಯನಗರದಲ್ಲಿರ್ತಾರೆ ಅಂತ ನೆನಪು.. ಆ ಹೊತ್ತಿಗೆ ಮನೆಯಲ್ಲಿದೆ. ಯಾರಾದರೂ ಕೇಳಿದರೆ ಕೊಡಬಲ್ಲೆ.. )

ಹೆಚ್ಚಿನ ತಿಳಿವು ಬೇಕಿದ್ದರೆ ಇಲ್ಲಿ ಎಡತಾಗಬಹುದು..

http://en.wikipedia.org/wiki/History_of_Karnataka
http://www.ourkarnataka.com/states/history/karnatakahistory7_eng.htm

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಯವಿಟ್ಟು ಆ ಪುಸ್ತಕದ ಹೆಸರು , ಬರೆದವರ ಹೆಸರು ತಿಳಿಸಿ.

"ಕಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇ ನನಗ ನೆನಪಿಲ್ಲರಿ.. ಅದು ಮನೆಯೊಳಗ ಅದ..
ಜರ್ಮನಿಯಿಂದ ಈ ವಾರ ಹಿಂತಿರುಗಿ ಬರ್ತಿನಿ... ಬಂದ ಮೇಲೆ ಅದರ ಬಗ್ಗೆ ತಿಳಿಸ್ತಿನಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣಾ ,
ವಿಕಿಪಿಡಿಯಾ ಲಿ೦ಕ್ ಕೊಡಬೇಡಾ ! ಅದೂ ಗಟ್ಟಿ ಯಾದ ಸಾಕ್ಷಿ ಅಲ್ಲಾ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣಾ ,
ವಿಕಿಪಿಡಿಯಾ ಲಿ೦ಕ್ ಕೊಡಬೇಡಾ ! ಅದೂ ಗಟ್ಟಿ ಯಾದ ಸಾಕ್ಷಿ ಅಲ್ಲಾ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಅದು ಒಳ್ಳೆ ಸಾಕ್ಸಿ ಅಲ್ಲ..
ಆದರೆ ಅಲ್ಲಿ ಕೊಟ್ಟಿರೊದು ನಮಗೆ ಮುಂದೆ ಸಾಗಲಿಕ್ಕೆ ಒಂದು ದಾರಿ ಆಗಬಹುದು ಅಂತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.